ಕನ್ನಡ ಸುದ್ದಿ  /  ಕ್ರೀಡೆ  /  Kapil Dev: ಪಾಕ್ ವಿರುದ್ಧದ ಆ ಸೋಲನ್ನ ನೆನಪಿಸಿಕೊಂಡ್ರೆ ಇವತ್ತಿಗೂ ನಿದ್ದೆ ಬರಲ್ಲ - ಕಪಿಲ್ ದೇವ್

Kapil Dev: ಪಾಕ್ ವಿರುದ್ಧದ ಆ ಸೋಲನ್ನ ನೆನಪಿಸಿಕೊಂಡ್ರೆ ಇವತ್ತಿಗೂ ನಿದ್ದೆ ಬರಲ್ಲ - ಕಪಿಲ್ ದೇವ್

1986 ರಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದ್ದ ಪಂದ್ಯವನ್ನು ನೆನಪಿಸಿಕೊಂಡರೆ ಇಂದಿಗೂ ನಿದ್ರೆ ಬರೋದಿಲ್ಲ. ಅಂದಿನ ಘಟನೆ ಹಾಗೂ ಸ್ವಾರಸ್ಯಕರ ಸಂಗತಿಗಳನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ನೆನಪಿಸಿಕೊಂಡಿದ್ದಾರೆ.

ಭಾರತ ಕ್ರಿಕೆಡ್ ತಂಡದ ಮಾಜಿ ನಾಯಕ ಕಪಿಲ್ ದೇವ್ (ಫೋಟೋ-HT)
ಭಾರತ ಕ್ರಿಕೆಡ್ ತಂಡದ ಮಾಜಿ ನಾಯಕ ಕಪಿಲ್ ದೇವ್ (ಫೋಟೋ-HT)

ಮುಂಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಸಾಕು ಇಡೀ ಜಗತ್ತೇ ಕಾತುರದಿಂದ ಕಾಯುತ್ತೆ. ಆದರೆ ಎರಡೂ ದೇಶಗಳ ರಾಜಕೀಯ ಕಾರಣಗಳಿಂದಾಗಿ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ, ಆದರೆ ಒಮ್ಮೆ ಎರಡು ತಂಡಗಳ ನಡುವೆ ಅನೇಕ ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆದಿವೆ.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ಐಸಿಸಿ ಟೂರ್ನಿಯಾಗಿರುವ ಏಷ್ಯಾ ಕಪ್ ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳ ಮುಖಾಮುಖಿ ಗೆಲುವನ್ನು ನೋಡಿದರೆ ಪಾಕಿಸ್ತಾನ ಮುನ್ನಡೆಯಲ್ಲಿದೆ. ಪಾಕಿಸ್ತಾನದ ವಿರುದ್ಧ ಭಾರತದ ಸೋಲುಗಳಲ್ಲಿ ಪ್ರಮುಖವಾದದ್ದು1986 ರಲ್ಲಿ ನಡೆದಿದ್ದ ಪಂದ್ಯ. ಆ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ 4 ರನ್‌ಗಳ ಅಗತ್ಯವಿತ್ತು. ಮಿಯಾಂದಾದ್ ಸಿಕ್ಸರ್‌ನೊಂದಿಗೆ

ತಮ್ಮ ತಂಡವನ್ನು ಗೆಲ್ಲಿಸುತ್ತಾರೆ. ಇದರಿಂದಾಗಿ ಭಾರತೀಯ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ದರು. ಆ ಪಂದ್ಯವನ್ನು ಅಂದಿನ ಟೀಂ ಇಂಡಿಯಾದ ನಾಯಕರಾಗಿದ್ದ ಕಪಿಲ್ ದೇವ್ ನೆನಪಿಸಿಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ವಾಸಿಂ ಅಕ್ರಮ್ ಅವರೊಂದಿಗಿನ ಮುಖಾಮುಖಿ ಯಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಸೋಲು ಮುಂದಿನ ನಾಲ್ಕು ವರ್ಷಗಳ ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು ಎಂದು ಹೇಳಿದ್ದಾರೆ.

ಅಂತಿಮ ಓವರ್‌ನಲ್ಲಿ ಪಾಕ್ ಗೆಲುವಿಗೆ 12 ಅಥವಾ 13 ರನ್‌ಗಳ ಅಗತ್ಯವಿತ್ತು. ಆ ದಿನಗಳಲ್ಲಿ ಆ ಗುರಿಯನ್ನು ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು. ಕೆಲವೊಮ್ಮೆ ಅದು ಅಸಾಧ್ಯವೆಂದು ತೋರುತ್ತಿತ್ತು. ನಾವು ಚೇತನ್ ಶರ್ಮಾಗೆ ಬೌಲ್ ಮಾಡುವಂತೆ ಬಾಲ್ ಅನ್ನು ಕೊಟ್ಟೆವು. ಪಂದ್ಯ ಸೋತ್ತಿದ್ದಕ್ಕೆ ಈತನ ತಪ್ಪು ಅಲ್ಲ ಎಂದು ನಾನು ಇನ್ನೂ ಭಾವಿಸುತ್ತೇನೆ. ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು.

ನಾವು ಅದನ್ನು ತಪ್ಪಿಸಿಕೊಂಡರೆ, ಇನ್ನೊಂದು ಪರ್ಯಾಯ ಮಾರ್ಗವನ್ನು ಕೊಂಡುಕೊಂಡಿದ್ದೆವು. ಆದರೆ ಚೆಂಡು ಫುಲ್ ಟಾಸ್ ಆಗಿತ್ತು. ಮಿಯಾಂದಾದ್ ಚೆಂಡನ್ನು ಸಿಕ್ಸರ್ ಎತ್ತಿದರು. ಇಂದು ಆ ಘಟನೆಯನ್ನು ನೆನಪಿಸಿಕೊಂಡರೆ ನಮಗೆ ಸುಖ ನಿದ್ರೆ ಬರುವುದಿಲ್ಲ. ಆ ವೈಫಲ್ಯ ನಮ್ಮನ್ನು ನಾಲ್ಕು ವರ್ಷಗಳ ಕಾಲ ಕಾಡುತ್ತಿತ್ತು.

ನಾಲ್ಕು ವರ್ಷಗಳ ಕಾಲ ನಮ್ಮ ಆತ್ಮವಿಶ್ವಾಸವೇ ಕುಸಿದಿತ್ತು ಎಂದು ಕಪಿಲ್ ದೇವ್ ಹಿಂದಿನ ವಿರೋಚಿತ ಸೋಲಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಇದೇ ತಿಂಗಳ 28ರಂದು ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಸರಣಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. 15ನೇ ಆವೃತ್ತಿಯ ಟೂರ್ನಿ ಯುಎಇಯಲ್ಲಿ ಆರು ತಂಡಗಳೊಂದಿಗೆ ನಡೆಯಲಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಇದುವರೆಗೆ ಅತಿ ಹೆಚ್ಚು ಏಷ್ಯಾಕಪ್ ಗೆದ್ದ ತಂಡ ಎಂಬ ದಾಖಲೆ ಬರೆದಿದೆ. ಏಳು ಬಾರಿ ಏಷ್ಯಾಕಪ್ ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ನಡೆದಿದ್ದರೆ, ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.

ಕ್ರಿಕೆಟ್ ತಾರೆ ಕಪಿಲ್​ ದೇವ್​ ಹಾಗೂ ಬಾಲಿವುಡ್​ ಬೆಡಗಿ ಸಾರಿಕಾ ಕೂಡ ಲವ್​ನಲ್ಲಿದ್ದರು. ಹಿರಿಯ ನಟ ಮನೋಜ್​ ಕುಮಾರ್ ಅವರ ಪತ್ನಿಯೇ ಇವರಿಬ್ಬರನ್ನೂ ಭೇಟಿಯಾಗುವಂತೆ ಮಾಡಿದ್ದರು. ಪಾರ್ಟಿಯೊಂದರಲ್ಲಿ ಕಪಿಲ್​ದವ್​ಗೆ ಸಾರಿಕಾ ಪರಿಚಯವಾಗಿತ್ತು. ಹೀಗೆ ಇಬ್ಬರ ನಡುವೆ ಸ್ನೇಹ ಶುರುವಾಯಿತು.

ನಂತರ ಇಬ್ಬರು ವಿರಾಮದ ಸಮಯದಲ್ಲಿ ಭೇಟಿಯಾಗಲು ಪ್ರಾರಂಭಿಸಿದರು. ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಆ ವೇಳೆ ಇವರಿಬ್ಬರ ಲವ್ ಸ್ಟೋರಿ ಕೂಡ ಭಾರೀ ಸದ್ದು ಮಾಡಿತ್ತು. 1980ರ ದಶಕದಲ್ಲಿ ಭಾರತ ತಂಡದ ನಾಯಕ ಕಪಿಲ್ ದೇವ್ ಮತ್ತು ಬಾಲಿವುಡ್ ನಾಯಕಿ ಸಾರಿಕಾ ಸಂಬಂಧದ ಬಗ್ಗೆ ಪತ್ರಿಕೆಗಳಲ್ಲಿ ಬಂದಿತ್ತು. ಆದರೆ ಇವರ ನಡುವೆ ಅಂತಹ ಯಾವುದೇ ಸಂಬಂಧ ಇರಲಿಲ್ಲ ಎಂದು ಕಪಿಲ್ ದೇವ್ ಸ್ನೇಹಿತರು ಹೇಳುತ್ತಾರೆ.

ವಿಭಾಗ