ಪ್ಯಾರಿಸ್ ಒಲಿಂಪಿಕ್ಸ್: ಇಂದು ಎರಡು ಪದಕ ನಿರೀಕ್ಷೆ, ಆಗಸ್ಟ್​ 4ರ ಭಾರತದ ಸ್ಪರ್ಧೆಗಳ ವೇಳಾಪಟ್ಟಿ-paris 2024 olympics india schedule today august 4 lakshya sen lovlina borgohain hockey quarter finals in focus prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್: ಇಂದು ಎರಡು ಪದಕ ನಿರೀಕ್ಷೆ, ಆಗಸ್ಟ್​ 4ರ ಭಾರತದ ಸ್ಪರ್ಧೆಗಳ ವೇಳಾಪಟ್ಟಿ

ಪ್ಯಾರಿಸ್ ಒಲಿಂಪಿಕ್ಸ್: ಇಂದು ಎರಡು ಪದಕ ನಿರೀಕ್ಷೆ, ಆಗಸ್ಟ್​ 4ರ ಭಾರತದ ಸ್ಪರ್ಧೆಗಳ ವೇಳಾಪಟ್ಟಿ

Paris Olympics 2024: ಲಕ್ಷ್ಯ ಸೇನ್, ಲವ್ಲಿನಾ ಬೊರ್ಗೊಹೈನ್ ಅವರು ಆಗಸ್ಟ್ 4ರಂದು ಭಾರತಕ್ಕೆ ಪದಕ ಖಚಿತಪಡಿಸುವ ನಿರೀಕ್ಷೆಯಲ್ಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ 2024 ಕ್ರೀಡಾಕೂಟದಲ್ಲಿ ಆಗಸ್ಟ್ 4ರ ಭಾನುವಾರ ಭಾರತದ ವೇಳಾಪಟ್ಟಿ ಹೀಗಿದೆ.

ಪ್ಯಾರಿಸ್ ಒಲಿಂಪಿಕ್ಸ್: ಇಂದು ಎರಡು ಪದಕ ನಿರೀಕ್ಷೆ, ಆಗಸ್ಟ್​ 4ರ ಭಾರತದ ಸ್ಪರ್ಧೆಗಳ ವೇಳಾಪಟ್ಟಿ
ಪ್ಯಾರಿಸ್ ಒಲಿಂಪಿಕ್ಸ್: ಇಂದು ಎರಡು ಪದಕ ನಿರೀಕ್ಷೆ, ಆಗಸ್ಟ್​ 4ರ ಭಾರತದ ಸ್ಪರ್ಧೆಗಳ ವೇಳಾಪಟ್ಟಿ

ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಕ್ರೀಡಾಕೂಟದಲ್ಲಿ ಆಗಸ್ಟ್​ 3ರ ಶನಿವಾರ ಸಹ ಭಾರತ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಮನು ಭಾಕರ್ ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದರೂ ಅದು ಪುನರಾವರ್ತಿಸಲು ಸಾಧ್ಯವಾಗಿಲ್ಲ. ಮೆಗಾ ಈವೆಂಟ್​ ಆರಂಭಗೊಂಡು 8ನೇ ದಿನ ಮುಗಿದು 9ನೇ ದಿನಕ್ಕೆ ಕಾಲಿಟ್ಟಿದ್ದರೂ ಭಾರತೀಯರು ಇನ್ನೂ ಒಂದು ಚಿನ್ನದ ಪದಕಕ್ಕೂ ಮುತ್ತಿಕ್ಕಿಲ್ಲ. ಈವರೆಗೂ ಮೂರು ಕಂಚು ಗೆದ್ದಿರುವುದೇ ಸಮಾಧಾನಕರ ಸಂಗತಿಯಾಗಿದೆ. ಹೀಗಾಗಿ ಪದಕ ಪಟ್ಟಿಯಲ್ಲಿ 54ನೇ ಸ್ಥಾನದಲ್ಲಿದೆ (ಇದು ಆಗಸ್ಟ್​ 3ರ ಅಂತ್ಯಕ್ಕೆ).

ಒಲಿಂಪಿಕ್ಸ್​ನ 9ನೇ ದಿನವಾದ ಆಗಸ್ಟ್​ 4ರ ಭಾನುವಾರವೂ ಭಾರತೀಯ ಕ್ರೀಡಾಪಟುಗಳ ಪಾಲಿಗೆ ಪದಕಗಳನ್ನು ಖಚಿತಪಡಿಸುವ ಮತ್ತೊಂದು ದೊಡ್ಡ ದಿನವಾಗಿದೆ. ಟೊಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದರೆ ಭಾನುವಾರ ಮತ್ತೊಂದು ಪದಕವನ್ನು ಖಚಿತಪಡಿಸಿಕೊಳ್ಳಲು ಅವಕಾಶ ಇದೆ. ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್​ ತಲುಪಿ ಪದಕ ಖಚಿತಪಡಿಸಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಆ ಮೂಲಕ ಐತಿಹಾಸಿಕ ದಾಖಲೆಯನ್ನೂ ನಿರ್ಮಿಸಲು ಮುಂದಾಗಿದ್ದಾರೆ.

ಅವರಷ್ಟೇ ಅಲ್ಲದೆ, ಮಹಿಳೆಯರ ಶೂಟಿಂಗ್ ಸ್ಕೀಟ್ ಫೈನಲ್‌ನಲ್ಲಿ ಭಾರತದ ಮಹೇಶ್ವರಿ ಚೌಹಾಣ್ ಕಣಕ್ಕಿಳಿಯಲಿದ್ದಾರೆ. ಮಹೇಶ್ವರಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದರೆ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಗೊಳ್ಳಲಿದೆ. ಹಾಕಿ ತಂಡಕ್ಕೂ ಇಂದು ಮಹತ್ವದ ಪಂದ್ಯವಾಗಿದೆ. ಏರ್ ಪಿಸ್ತೂಲ್ ಸೇರಿದಂತೆ ಯಾವೆಲ್ಲಾ ಪಂದ್ಯಗಳು ಆಗಸ್ಟ್ 4ರಂದು ನಡೆಯಲಿವೆ ಎಂಬುದರ ನೋಟ ಇಲ್ಲಿದೆ.

ಆಗಸ್ಟ್ 4, ಭಾನುವಾರ - ಭಾರತದ ಸಂಪೂರ್ಣ ವೇಳಾಪಟ್ಟಿ

ಮಧ್ಯಾಹ್ನ 12:30 – ಶೂಟಿಂಗ್: 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 1 (ವಿಜಯ್​ವೀರ್ ಸಿಧು, ಅನೀಶ್)

ಮಧ್ಯಾಹ್ನ 12:30 – ಗಾಲ್ಫ್: ಪುರುಷರ ಗಾಲ್ಫ್ ರೌಂಡ್ 4 (ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್)

ಮಧ್ಯಾಹ್ನ 1:00 – ಶೂಟಿಂಗ್: ಮಹಿಳೆಯರ ಸ್ಕೀಟ್ ಅರ್ಹತೆ ದಿನ 2 (ಮಹೇಶ್ವರಿ ಚೌಹಾನ್, ರೈಜಾ ಧಿಲ್ಲೋನ್)

ಮಧ್ಯಾಹ್ನ 1:30 – ಹಾಕಿ: ಪುರುಷರ ಕ್ವಾರ್ಟರ್‌ಫೈನಲ್ (ಭಾರತ vs ಗ್ರೇಟ್ ಬ್ರಿಟನ್)

ಮಧ್ಯಾಹ್ನ 1:35 – ಅಥ್ಲೆಟಿಕ್ಸ್: ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಸುತ್ತು 1 (ಪಾರುಲ್ ಚೌಧರಿ)

ಮಧ್ಯಾಹ್ನ 2:30 - ಅಥ್ಲೆಟಿಕ್ಸ್: ಪುರುಷರ ಲಾಂಗ್ ಜಂಪ್ ಅರ್ಹತೆ (ಜೆಸ್ವಿನ್ ಆಲ್ಡ್ರಿನ್)

ಮಧ್ಯಾಹ್ನ 3:02 - ಬಾಕ್ಸಿಂಗ್: ಮಹಿಳೆಯರ 75 ಕೆಜಿ ಕ್ವಾರ್ಟರ್‌ಫೈನಲ್ (ಲವ್ಲಿನಾ ಬೊರ್ಗೊಹೈನ್ vs ಕಿಯಾನ್)

ಮಧ್ಯಾಹ್ನ 3:30 – ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್ (ಲಕ್ಷ್ಯ ಸೇನ್ vs ವಿಕ್ಟರ್ ಅಕ್ಸೆಲ್ಸೆನ್)

ಮಧ್ಯಾಹ್ನ 3:35 – ಸೈಲಿಂಗ್: ಪುರುಷರ ಡಿಂಗಿ ರೇಸ್-7 ಮತ್ತು ರೇಸ್-8 (ವಿಷ್ಣು ಸರವಣನ್)

ಸಂಜೆ 6:05 – ಸೈಲಿಂಗ್: ಮಹಿಳೆಯರ ಡಿಂಗಿ ರೇಸ್-7 ಮತ್ತು ರೇಸ್-8 (ನೇತ್ರಾ ಕುಮನನ್)

ಸಂಜೆ 7:00 – ಶೂಟಿಂಗ್: ಮಹಿಳೆಯರ ಸ್ಕೀಟ್ ಫೈನಲ್ (ಅರ್ಹತೆ ಪಡೆದರೆ)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.