PKL 11: ಪಾಯಿಂಟ್ಸ್ ಟೇಬಲ್ನಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ?
ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಟ್ನಾ ಪೈರೇಟ್ಸ್ ಟಾಪ್-5ರಲ್ಲಿ ಸ್ಥಾನ ಗಳಿಸಿದೆ. ಅತ್ತ ಯುಪಿ ಯೋಧ ಸೋತರೂ ಮೊದಲಿನಂತೆಯೇ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಬೆಂಗಳೂರು ಬುಲ್ಸ್ ಪಿಕೆಎಲ್ 11ರಲ್ಲಿ ಐದನೇ ಸೋಲನ್ನು ಎದುರಿಸಬೇಕಾಯಿತು.
ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ, ನವೆಂಬರ್ 2ರಂದು ಎರಡು ಪ್ರಮುಖ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಈ ಋತುವಿನಲ್ಲಿ ಅದ್ಭುತವಾಗಿ ಆಡುತ್ತಿರುವ ಯುಪಿ ಯೋಧಾಸ್ ತಂಡವನ್ನು ಸೋಲಿಸಿತು. ಎರಡನೇ ಪಂದ್ಯದಲ್ಲಿ ಪವನ್ ಸೆಹ್ರಾವತ್ ನೇತೃತ್ವದ ತೆಲುಗು ಟೈಟಾನ್ಸ್ ತಂಡ ಪರ್ದೀಪ್ ನರ್ವಾಲ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡವನ್ನು ಸೀಸನ್‌ನಲ್ಲಿ ಎರಡನೇ ಬಾರಿ ಸೋಲಿಸಿತು.
ಈ ಪಂದ್ಯಗಳ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಟ್ನಾ ಪೈರೇಟ್ಸ್ ದೊಡ್ಡ ಮುನ್ನಡೆ ಸಾಧಿಸಿ ಟಾಪ್-5ರಲ್ಲಿ ಸ್ಥಾನ ಗಳಿಸಿದೆ. ತಂಡ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಯುಪಿ ಯೋಧಾಸ್ ಸೋತರೂ ಮೊದಲಿನಂತೆಯೇ ಮೂರನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಬೆಂಗಳೂರು ಬುಲ್ಸ್ ತನ್ನ ಐದನೇ ಸೋಲನ್ನು ಎದುರಿಸಬೇಕಾಯಿತು. ಈ ಕಾರಣದಿಂದಾಗಿ ತಂಡ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಈ ಗೆಲುವಿನ ನಂತರ ತೆಲುಗು ಟೈಟಾನ್ಸ್ ದೊಡ್ಡ ಜಿಗಿತವನ್ನು ಸಾಧಿಸಿ ಐದನೇ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್
1) ತಮಿಳ್ ತಲೈವಾಸ್ - 5 ಪಂದ್ಯಗಳ ನಂತರ 19 ಅಂಕಗಳು
2) ಪುಣೇರಿ ಪಲ್ಟನ್ - 5 ಪಂದ್ಯಗಳ ನಂತರ 19 ಅಂಕಗಳು
3) ಯುಪಿ ಯೋಧಾಸ್ - 6 ಪಂದ್ಯಗಳ ನಂತರ 18 ಅಂಕಗಳು
4) ಪಾಟ್ನಾ ಪೈರೇಟ್ಸ್ - 5 ಪಂದ್ಯಗಳ ನಂತರ 16 ಅಂಕಗಳು
5) ತೆಲುಗು ಟೈಟಾನ್ಸ್ - 6 ಪಂದ್ಯಗಳ ನಂತರ 16 ಅಂಕಗಳು
6) ಹರಿಯಾಣ ಸ್ಟೀಲರ್ಸ್ - 4 ಪಂದ್ಯಗಳ ನಂತರ 15 ಅಂಕಗಳು
7) ಜೈಪುರ ಪಿಂಕ್ ಪ್ಯಾಂಥರ್ಸ್ - 5 ಪಂದ್ಯಗಳ ನಂತರ 14 ಅಂಕಗಳು
8) ಯು ಮುಂಬಾ - 4 ಪಂದ್ಯಗಳ ನಂತರ 13 ಅಂಕಗಳು
9) ದಬಾಂಗ್ ದೆಹಲಿ ಕೆಸಿ - 6 ಪಂದ್ಯಗಳ ನಂತರ 13 ಅಂಕಗಳು
10) ಬೆಂಗಾಲ್ ವಾರಿಯರ್ಸ್ - 4 ಪಂದ್ಯಗಳ ನಂತರ 12 ಅಂಕಗಳು
11) ಗುಜರಾತ್ ಜೈಂಟ್ಸ್ - 4 ಪಂದ್ಯಗಳ ನಂತರ 7 ಅಂಕಗಳು
12) ಬೆಂಗಳೂರು ಬುಲ್ಸ್ - 6 ಪಂದ್ಯಗಳ ನಂತರ 7 ಅಂಕಗಳು
ಪ್ರೊ ಕಬಡ್ಡಿ ಲೀಗ್ 2024 ರ ಟಾಪ್ 5 ರೈಡರ್‌ಗಳು
1) ಪವನ್ ಕುಮಾರ್ ಸೆಹ್ರಾವತ್ (ತೆಲುಗು ಟೈಟಾನ್ಸ್) - 65 ರೇಡ್ ಪಾಯಿಂಟ್‌ಗಳು
2) ಆಶು ಮಲಿಕ್ (ದಬಾಂಗ್ ದೆಹಲಿ ಕೆಸಿ) - 64 ರೇಡ್ ಪಾಯಿಂಟ್‌ಗಳು
3) ದೇವಾಂಕ್ (ಪಾಟ್ನಾ ಪೈರೇಟ್ಸ್) - 61 ರೇಡ್ ಪಾಯಿಂಟ್‌ಗಳು
4) ನರೇಂದ್ರ ಕಾಂಡೋಲಾ (ತಮಿಳು ತಲೈವಾಸ್) - 50 ರೇಡ್ ಪಾಯಿಂಟ್‌ಗಳು
5) ಭರತ್ ಹೂಡಾ (ಯುಪಿ ಯೋಧಾಸ್) - 49 ರೇಡ್ ಪಾಯಿಂಟ್‌ಗಳು
ಪ್ರೊ ಕಬಡ್ಡಿ ಲೀಗ್ 2024 ರ ಟಾಪ್ 5 ಡಿಫೆಂಡರ್‌ಗಳು:
1) ನಿತಿನ್ ರಾವಲ್ (ಬೆಂಗಳೂರು ಬುಲ್ಸ್) - 22 ಟ್ಯಾಕಲ್ ಪಾಯಿಂಟ್‌ಗಳು
2) ಸುಮಿತ್ ಸಾಂಗ್ವಾನ್ (ಯುಪಿ ಯೋಧಾಸ್) - 22 ಟ್ಯಾಕಲ್ ಪಾಯಿಂಟ್‌ಗಳು
3 ) ಗೌರವ್ ಖತ್ರಿ (ಪುನೇರಿ ಪಲ್ಟನ್) - 21 ಟ್ಯಾಕಲ್ ಪಾಯಿಂಟ್‌ಗಳು
4) ಅಂಕಿತ್ ಜಗ್ಲಾನ್ (ಪಾಟ್ನಾ ಪೈರೇಟ್ಸ್) - 18 ಟ್ಯಾಕಲ್ ಪಾಯಿಂಟ್‌ಗಳು
5) ನಿತೀಶ್ ಕುಮಾರ್ (ತಮಿಳು ತಲೈವಾಸ್) - 17 ಟ್ಯಾಕಲ್ ಪಾಯಿಂಟ್‌ಗಳು