ಕನ್ನಡ ಸುದ್ದಿ  /  Sports  /  Ravi Shastri Says Two India Stars Whose Workload Needs To Be Managed

Ravi Shastri: ಇಬ್ಬರು ಆಟಗಾರರ ವರ್ಕ್ ಲೋಡ್‌ ಜಾಸ್ತಿ; ಇವರ ಮೇಲೆ ಗಮನ ಹರಿಸಿ - ರವಿ ಶಾಸ್ತ್ರಿ

ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಇಬ್ಬರು ಆಟಗಾರರ ಮೇಲೆ ಕೆಲಸದ ಹೊರೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾರು ಆ ಇಬ್ಬರು ಆಟಗಾರರು?

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (ಫೋಟೋ-ಸಂಗ್ರಹ)
ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (ಫೋಟೋ-ಸಂಗ್ರಹ)

ಮುಂಬೈ: ಜಗತ್ತಿನ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗ ಚಿತ್ತ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನತ್ತ ನೆಟ್ಟಿದೆ. ಹೊಡಿ ಬಡಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಬಲಿಷ್ಠ ಟೀಂ ಇಂಡಿಯಾವನ್ನು ಕಟ್ಟಬೇಕಿದೆ.

ಟ್ರೆಂಡಿಂಗ್​ ಸುದ್ದಿ

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2022ರ ಐಸಿಸಿ ವಿಶ್ವಕಪ್ ಮೇಲೆ ಗಮನ ಹರಿಸಿದೆ. ಇದರ ಭಾಗವಾಗಿ ಕೆಲ ದಿನಗಳಿಂದ ಹೆಚ್ಚು ಟಿ20 ಪಂದ್ಯಗಳನ್ನು ಆಡುತ್ತಿದೆ. 2013ರಿಂದ ಭಾರತ ಐಸಿಸಿ ಟೂರ್ನಿ ಗೆದ್ದಿಲ್ಲ. ಈ ಬಾರಿಯಾದ್ರೂ ಪ್ರಶಸ್ತಿ ಗೆಲ್ಲುತ್ತಾರೋ ಇಲ್ಲವೋ ಎಂದು ಕಾತರದಿಂದ ಎಲ್ಲರೂ ಕಾಯುತ್ತಿದ್ದಾರೆ. ಆಟಗಾರರು ಕೂಡ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದಾರೆ. ಆದರೆ ಕೆಲಸದ ಹೊರೆ ಇಬ್ಬರು ಆಟಗಾರರ ಮೇಲಿ ಹೆಚ್ಚಾಗುತ್ತಿದೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರೂ ತಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ರವಿಶಾಸ್ತ್ರಿ ಆಯ್ಕೆ ಮಾಡಿದ ಇಬ್ಬರಲ್ಲಿ ಒಬ್ಬರು ಹಾರ್ದಿಕ್ ಪಾಂಡ್ಯ. ಇನ್ನೊಬ್ಬರು ಜಸ್ಪ್ರೀತ್ ಬುಮ್ರಾ. ಹಾರ್ದಿಕ್ ಭಾರತ ತಂಡದ ಪ್ರಮುಖ ಆಟಗಾರ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಅವರು ಸರಿಯಾದ ಬೌಲರ್ ಆಗಿದ್ದರು. ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್ ನಲ್ಲೂ ಮಿಂಚುವ ಸಾಮರ್ಥ್ಯದ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಪಾಂಡ್ಯ ಕೆಲವು ದಿನಗಳ ಕಾಲ ಬೌಲಿಂಗ್ ಮಾಡಿರಲಿಲ್ಲ. ಮತ್ತೊಬ್ಬ ಆಟಗಾರ ವೇಗಿ ಜಸ್ಪ್ರೀತ್ ಬುಮ್ರಾ. ಈತನನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಬುಮ್ರಾ ಆಗಾಗೆ ಗಾಯಗೊಳ್ಳುತ್ತಾನೆ. ಹಾಗಾಗಿ ಬುಮ್ರಾ ಮತ್ತು ಹಾರ್ದಿಕ್ ತುಂಬಾ ಜಾಗರೂಕರಾಗಿರಬೇಕು. ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಿ. ಏಕೆಂದರೆ ಅವರಿಬ್ಬರೂ ಅತ್ಯಂತ ಪ್ರಮುಖ ಆಟಗಾರರು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕಾರಣಾಂತರಗಳಿಂದ ತಂಡದಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬಗ್ಗೆಯೂ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಕಿರಿಯ ಆಟಗಾರರಷ್ಟೇ ಇವರೇ ಆಕ್ರಮಣಕಾರಿ ಆಟ ಪ್ರದರ್ಶಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ರವಿಶಾಸ್ತ್ರಿ ಉತ್ತರಿಸಿದ್ದಾರೆ.

ಯಾಕೆ ಇಲ್ಲ? ಈ ಇಬ್ಬರೂ ಅನುಭವಿ ಆಟಗಾರರು. ಐಪಿಎಲ್ ಮತ್ತು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ಹೊಂದಿಸುವುದು ಕಷ್ಟ, ಟಾಪ್ ಆರ್ಡರ್ ವಿಫಲವಾದರೆ, ರಿಷಬ್, ಹಾರ್ದಿಕ್, ಜಡೇಜಾ ಮುಂತಾದವರು ಇದ್ದಾರೆ. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ರವಿಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ಟೀಂ ಇಂಡಿಯಾ ಏಷ್ಯಾಕಪ್‌ಗೆ ತಯಾರಿ ನಡೆಸುತ್ತಿದೆ. ಈ ಟೂರ್ನಿ ಇದೇ 27ರಿಂದ ಆರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಇದೇ ತಿಂಗಳ 28 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಏಷ್ಯಾಕಪ್‌ಗೆ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅದೇ ವೇಳೆ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಕೂಡ ಆಡಲಿದ್ದಾರೆ.

ಇದೇ ತಿಂಗಳ 27ರಿಂದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿಗೆ ಯುಎಇ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಏಷ್ಯಾಕಪ್ ಮಹತ್ವ ಪಡೆದಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಎಲ್ಲರ ಕಣ್ಣು ಕೆಲ ಆಟಗಾರರ ಮೇಲೆ ನೆಟ್ಟಿದೆ. ಏಕೆಂದರೆ ಈ ಕ್ರಿಕೆಟಿಗರಿಗೆ ತಮ್ಮ ಅಮೋಘ ಪ್ರದರ್ಶನದಿಂದ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಬಿಸಿಸಿಐ ಮೊದಲು ಏಷ್ಯಾ ಕಪ್ ಮೇಲೆ ಹೆಚ್ಚಿನ ಗಮನ ವಹಿಸಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡುವವರನ್ನು ಐಸಿಸಿ ವಿಶ್ವಕಪ್ ಟಿ-20ಗೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ವಿಭಾಗ