ಕನ್ನಡ ಸುದ್ದಿ  /  ಕ್ರೀಡೆ  /  Asia Cup 2022: ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕರೊನಾ ಹಿನ್ನೆಲೆ‌ ಟೀಮ್‌ ಇಂಡಿಯಾಗೆ ವಿವಿಎಸ್‌ ಲಕ್ಷ್ಮಣ್‌ ಸಾರಥ್ಯ..‌

Asia Cup 2022: ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕರೊನಾ ಹಿನ್ನೆಲೆ‌ ಟೀಮ್‌ ಇಂಡಿಯಾಗೆ ವಿವಿಎಸ್‌ ಲಕ್ಷ್ಮಣ್‌ ಸಾರಥ್ಯ..‌

ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ಬದಲು ಮತ್ತೋರ್ವ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಅವರನ್ನು ಭಾರತ ತಂಡದ ಹಂಗಾಮಿ ಕೋಚ್‌ ಆಗಿ ಬಿಸಿಸಿಐ ನೇಮಿಸಿದೆ.

ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕರೊನಾ ಹಿನ್ನೆಲೆ‌ ಟೀಮ್‌ ಇಂಡಿಯಾಗೆ ವಿವಿಎಸ್‌ ಲಕ್ಷ್ಮಣ್‌ ಸಾರಥ್ಯ..
ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕರೊನಾ ಹಿನ್ನೆಲೆ‌ ಟೀಮ್‌ ಇಂಡಿಯಾಗೆ ವಿವಿಎಸ್‌ ಲಕ್ಷ್ಮಣ್‌ ಸಾರಥ್ಯ..

ದುಬೈ: ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ಬದಲು ಮತ್ತೋರ್ವ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಅವರನ್ನು ಭಾರತ ತಂಡದ ಹಂಗಾಮಿ ಕೋಚ್‌ ಆಗಿ ಬಿಸಿಸಿಐ ನೇಮಿಸಿದೆ.

ಟ್ರೆಂಡಿಂಗ್​ ಸುದ್ದಿ

ಎಲ್ಲ ಅಂದುಕೊಂಡಂತೆ ಆಗದ್ದರೆ, ಈ ಸಲದ ಏಷ್ಯಾ ಕಪ್‌ಗೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ತೆರಳಲಿದ್ದರು. ಆದರೆ, ಕೋವಿಡ್‌ ಪಾಸಿಟಿವ್‌ ಕಂಡು ಬಂದಿದ್ದರಿಂದ, ಸದ್ಯ ಭಾರತದಲ್ಲಿಯೇ ಉಳಿದಿದ್ದಾರೆ. ಇತ್ತ ರಾಹುಲ್‌ ಅನುಪಸ್ಥಿತಿಯಲ್ಲಿ ವಿವಿಎಸ್‌ ಲಕ್ಷ್ಮಣ್‌ ಅವರು ಟೀಮ್‌ ಇಂಡಿಯಾದ ಹಂಗಾಮಿ ಹೆಡ್‌ ಕೋಚ್‌ ಆಗಿ ಸಾರಥ್ಯವಹಿಸಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಭಾರತ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಏಷ್ಯಾ ಕಪ್‌ ಟೂರ್ನಿಗಾಗಿ ದುಬೈ ತಲುಪಿದ್ದು, ಆಟಗಾರರ ಜತೆಗೆ ಅಭ್ಯಾಸವನ್ನೂ ಮುಂದುವರಿಸಿದ್ದಾರೆ.

ಹಾಗಂತ ರಾಹುಲ್‌ ದ್ರಾವಿಡ್‌ ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿಲ್ಲ. ಅವರ ಕರೊನಾ ವರದಿ ನೆಗೆಟಿವ್‌ ಬರುತ್ತಿದ್ದಂತೆ, ದುಬೈಗೆ ತೆರಳಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇತ್ತ ಹರಾರೆಯಿಂದ ಜಿಂಬಾಬ್ವೆ ಸರಣಿ ಮುಗಿಸಿ ಬಂದ ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಅವೇಶ್ ಖಾನ್ ಅವರೊಂದಿಗೆ ವಿವಿಎಸ್ ಲಕ್ಷ್ಮಣ್ ದುಬೈಗೆ ಆಗಮಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಎಲ್ಲ ತಂಡಗಳ ಬಲಾಬಲ ಹೇಗಿದೆ? ಯಾರೆಲ್ಲ ಕಣಕ್ಕಿಳಿಯಲಿದ್ದಾರೆ?

ಯುಎಇಯಲ್ಲಿ ಆಗಸ್ಟ್ 27 ರಿಂದ ಈ ಸಲದ ಏಷ್ಯಾ ಕಪ್ 2022 ಶುರುವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಆಗಸ್ಟ್ 28 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಪಂದ್ಯ ದುಬೈನಲ್ಲಿ ನಡೆಯಲಿದೆ. ಇದರ ನಂತರ ಆಗಸ್ಟ್‌ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಎಂದಿನಂತೆ ಈ ಪಂದ್ಯ ವಿಶ್ವದ ಗಮನಸೆಳೆಯಲಿದ್ದು, ಬದ್ಧವೈರಿಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕಳೆದ ಬಾರಿ ನಡೆದ ವಿಶ್ವಕಪ್‌ ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತ ಸೋತಿದ್ದು, ಇದಕ್ಕೆ ಸೇಡು ತೀರಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.

ಒಟ್ಟು ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬಿ ಗುಂಪಿನಲ್ಲಿದೆ. ಪ್ರತಿ ತಂಡವು ತನ್ನ ಗುಂಪಿನ ತಂಡದೊಂದಿಗೆ ತಲಾ ಒಂದು ಪಂದ್ಯಗಳಲ್ಲಿ ಆಡಲಿದೆ. ಯುಎಇ, ಕುವೈತ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ದೇಶಗಳು ಅರ್ಹತಾ ಸುತ್ತನ್ನು ಆಡಲಿದೆ. ಇದರಲ್ಲಿ ಅಗ್ರಸ್ಥಾನಿಯಾದ ಎರಡು ತಂಡಗಳು, ಭಾರತ ಇರುವ ಮೊದಲ ಗುಂಪನ್ನು ಸೇರಿಕೊಳ್ಳಲಿವೆ.

ಎಲ್ಲ ತಂಡಗಳು ಆಟಗಾರರ ಮಾಹಿತಿ ಇಲ್ಲಿದೆ...

ಭಾರತ - ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್.

ಪಾಕಿಸ್ತಾನ - ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಹನವಾಜ್ ದಹನ್ ಉಸ್ಮಾನ್ ಖಾದಿರ್.

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್ (ಉಪನಾಯಕ), ಅಫ್ಸರ್ ಝಜೈ (WK), ಅಜ್ಮತುಲ್ಲಾ ಒಮರ್ಜೈ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಮುಜೀಬ್ ನಜೀಬ್ ಝದ್ರಾನ್, ಇಬ್ರಾಹಿಂ ಜನಾಹ್ ಝದ್ರಾನ್, ಜದ್ ನೂರ್ ಅಹ್ಮದ್, ನಜೀಬುಲ್ಲಾ ಜದ್ರಾನ್, ನೂರ್ ಅಹ್ಮದ್ ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹುಸೇನ್, ಮೊಸದ್ದೆಕ್ ಹೊಸೈನ್, ಮಹ್ಮದುಲ್ಲಾ ರಿಯಾದ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ನಸುಮ್ ಹುಸಾ ಪರ್ಸಾನ್, ಮಿರಾಜ್ ಮೊಹಮ್ಮದ್, ಮಿರಾಜ್ ಮೊಹಮ್ಮದ್, ಶಬ್ಬೀರ್ ಹಸ್ಮದ್. ಎಮಾನ್, ನೂರುಲ್ ಹಸನ್ ಸೋಹನ್, ತಸ್ಕಿನ್ ಅಹ್ಮದ್.

ಶ್ರೀಲಂಕಾ: ದಸುನ್ ಶನಕ (ನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸಂಕ, ಕುಸಲ್ ಮೆಂಡಿಸ್, ಚರಿತ್ ಅಸ್ಲಂಕಾ, ಬಾನುಕಾ ರಾಜಪಕ್ಸೆ, ಅಶೆನ್ ಬಂಡಾರ, ಧನಂಜಯ ಡಿ ಸಿಲ್ವಾ, ವನಿದು ಹಸರಂಗ, ಮಹೇಶ್ ಥಿಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಬಿಮಂತೂರ ಚಮಿರನ್, ಬಿಮಂತೂರ ಚಮಿನನ್, ಬಿ. ಫೆರ್ನಾಂಡೋ, , ಮಧುಶಂಕ, ಮತಿಶ ಪತಿರಾನ, ದಿನೇಶ್ ಚಂಡಿಮಲ್, ನುವಾನಿಂದು ಫೆರ್ನಾಂಡೋ ಮತ್ತು ಕಸುನ್ ರಜಿತಾ.