Latest afghanistan Photos

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 15ರಂದು ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ರಶೀದ್ ಖಾನ್ 14 ವರ್ಷಗಳ ಹಳೆಯ ದಾಖಲೆ ಮುರಿದರು. ಅವರು 4 ಓವರ್‌ ಬೌಲಿಂಗ್‌ ಮಾಡಿದ ಅವರು 19 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಪಡೆದರು. ಟಿ20 ಯಲ್ಲಿ ಅಫ್ಘಾನಿಸ್ತಾನ ನಾಯಕನ ಅತ್ಯುತ್ತಮ ಅಂಕಿ-ಅಂಶವಾಗಿದೆ.

ಟಿ20 ಕ್ರಿಕೆಟ್‌ನಲ್ಲಿ 14 ವರ್ಷ ಹಳೆಯ ದಾಖಲೆ ಮುರಿದ ರಶೀದ್ ಖಾನ್; ಅಫ್ಘಾನಿಸ್ತಾನ ನಾಯಕನಾಗಿ ವಿಶೇಷ ಮೈಲಿಗಲ್ಲು

Sunday, March 17, 2024

ರೋಹಿತ್ ಇದೇ ವೇಳೆ ಕೊಹ್ಲಿಯ ಮತ್ತೊಂದು ದಾಖಲೆ ಮುರಿದಿದ್ದಾರೆ. ಕೊಹ್ಲಿ 50 ಟಿ20 ಪಂದ್ಯಗಳಲ್ಲಿ ನಾಯಕನಾಗಿ 1570 ರನ್‌ ಗಳಿಸಿದ್ದಾರೆ. ಬುಧವಾರದ ಇನ್ನಿಂಗ್ಸ್ ನಂತರ, ಹಿಟ್‌ಮ್ಯಾನ್‌ ನಾಯಕನಾಗಿ 54 ಪಂದ್ಯಗಳಲ್ಲಿ 1648 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 72 ಪಂದ್ಯಗಳಲ್ಲಿ ನಾಯಕನಾಗಿ 1112 ರನ್ ಗಳಿಸಿದ್ದಾರೆ.

36 ವರ್ಷ 272 ದಿನ; ಸೆಂಚುರಿ ಬಾರಿಸಿ ಕೊಹ್ಲಿ ದಾಖಲೆ ಮುರಿದ ರೋಹಿತ್; ಈ ಸಾಧನೆ ಮಾಡಿದ ಹಿರಿಯ ಕ್ರಿಕೆಟಗ

Thursday, January 18, 2024

ಫರೀದ್ ಅಹ್ಮದ್ ಕೊಹ್ಲಿ ಮಾತ್ರವಲ್ಲ, ಭಾರತ ಕಳೆದುಕೊಂಡ 4 ವಿಕೆಟ್‌ಗಳಲ್ಲಿ 3 ವಿಕೆಟ್‌ ಪಡೆದರು. ಕೊಹ್ಲಿ ಹೊರತಾಗಿ ಯಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್​​​ರನ್ನು ಔಟ್ ಮಾಡಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ 22 ರನ್‌ಗಳಿಗೆ 4 ವಿಕೆಟ್‌ಗೆ 212 ರನ್ ಗಳಿಸಿತು.

Virat Kohli: ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿಯನ್ನು ಗೋಲ್ಡನ್​ ಡಕ್​ಗೆ ಔಟ್ ಮಾಡಿದ ಮೊದಲ ಬೌಲರ್ ಈತ

Thursday, January 18, 2024

ಎರಡನೇ ಸೂಪರ್ ಓವರ್‌ನಲ್ಲಿ ಅಫ್ಘನ್‌ ಗಳಿಸಿದ್ದು ಕೇವಲ ಒಂದು ರನ್  ಮಾತ್ರ. ಅಷ್ಟರಲ್ಲೇ ಎರಡು ವಿಕೆಟ್‌ ಕಳೆದುಕೊಂಡು ತಂಡ ಸೋಲೊಪ್ಪಿತು. ಅಫ್ಘಾನಿಸ್ತಾನವು ಮೊಹಮ್ಮದ್ ನಬಿ ಮತ್ತು ಗುರ್ಬಾಜ್ ಇಬ್ಬರನ್ನೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್‌ ಔಟ್‌ ಮಾಡಿ ಪಂದ್ಯದ ಹೀರೋ ಆಗಿ ಮಿಂಚಿದರು.

IND vs AFG 3rd T20: ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯದ ಹೀರೋ ಆದ ರವಿ ಬಿಷ್ಣೋಯ್; ಶಿವಂ ದುಬೆ ಸರಣಿ ಶ್ರೇಷ್ಠ

Thursday, January 18, 2024

ಅಫ್ಘನ್ ವಿರುದ್ಧದ 2ನೇ ಟಿ20ಯಲ್ಲಿ ಯಶಸ್ವಿ ಜೈಸ್ವಾಲ್, 200ರ ಸ್ಟ್ರೈಕ್​ರೇಟ್​ನಲ್ಲಿ ಅರ್ಧಶತಕ ಸಿಡಿಸಿದ ಬಳಿಕ ರೋಹಿತ್ ಶರ್ಮಾ ಅವರ ಕ್ಲಬ್ ಸೇರಿದ್ದಾರೆ. ಇಬ್ಬರೂ ತಲಾ 3 ಬಾರಿ 200+ ಸ್ಟ್ರೈಕ್​ರೇಟ್​ನಲ್ಲಿ ಫಿಫ್ಟಿ ಚಚ್ಚಿದ್ದಾರೆ.

ಜೈಸ್ವಾಲ್ ಹೊಸ ಸೇರ್ಪಡೆ; 200ರ ಸ್ಟ್ರೈಕ್‌ರೇಟ್‌​ನಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯರಿವರು

Wednesday, January 17, 2024

ಪಂದ್ಯದಲ್ಲಿ ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಗುಲ್ಬದಿನ್ ನೈಬ್ ವಿಕೆಟ್‌ ಪಡೆದ ಅಕ್ಷರ್ ವಿಶೇಷ ಸಾಧನೆ ಮಾಡಿದರು. ಅದಕ್ಕೂ ಮುನ್ನ ಅಫ್ಘಾನ್ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.

ಜಡೇಜಾ ಬಳಿಕ ಅಪರೂಪದ ದಾಖಲೆ ಮಾಡಿದ ಅಕ್ಷರ್ ಪಟೇಲ್; ಟಿ20 ವಿಶ್ವಕಪ್‌ ಸ್ಥಾನಕ್ಕೆ ಭಾರಿ ಪೈಪೋಟಿ

Tuesday, January 16, 2024

ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್.

ಕೊಹ್ಲಿ ಅಲಭ್ಯ-ಸಂಜುಗಿಲ್ಲ ಅವಕಾಶ, 3ನೇ ಸ್ಥಾನಕ್ಕೆ ಗಿಲ್; ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI

Thursday, January 11, 2024

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ನಾಯಕನಾಗಿ ರೋಹಿತ್​ ಶರ್ಮಾ ಸಹ ಐತಿಹಾಸಿಕ ದಾಖಲೆ ಬರೆದರು. ಆದರೆ ಈ ಪಂದ್ಯದಲ್ಲಿ ಪಿಚ್ ಕಂಡಿಷನ್ ಕುರಿತು ಐಸಿಸಿ ಮತ್ತು ಮ್ಯಾಚ್ ರೆಫ್ರಿಗಳ ದ್ವಂದ್ವ ಮಾನದಂಡಗಳ ಬಗ್ಗೆ ರೋಹಿತ್​ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು.

Rohit Sharma: ನಿಷೇಧದ ಭೀತಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ; ಕಾರಣ ಹೀಗಿದೆ

Monday, January 8, 2024

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಉದಯ್ ಸಹರನ್ ನೇತೃತ್ವದ ಭಾರತ ತಂಡವು, ಅಫ್ಘಾನಿಸ್ತಾನವನ್ನು 173 ರನ್‌ಗಳಿಗೆ ನಿರ್ಬಂಧಿಸಿತು. ಸುಲಭ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಭಾರತ, ಕೇವಲ 37.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿತು.

ಅಂಡರ್‌ 19 ಏಷ್ಯಾಕಪ್‌; ಅರ್ಶಿನ್ ಕುಲಕರ್ಣಿ ಆಲ್‌ರೌಂಡ್ ಆಟ, ಅಫ್ಘಾನ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

Friday, December 8, 2023

ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ.

ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

Wednesday, November 15, 2023

ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್​ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್​​ನಲ್ಲಿ ನ್ಯೂಜಿಲೆಂಡ್​​ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್​ ರನ್-ರೇಟ್ +2.570.

ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್​ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ

Monday, November 13, 2023

ವಿಶ್ವಕಪ್​​ ಲೀಗ್‌ನ ತಮ್ಮ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ಆದರೆ, ಆಸೀಸ್ ತನ್ನ ಮುಂದಿನ ಪಂದ್ಯದಲ್ಲಿ ಭಾರಿ ಅಂತರದಿಂದ ಗೆದ್ದರೆ 2ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ. ಆಗ ಟೆಂಬಾ ಬವುಮಾ ಪಡೆ ಮೂರನೇ ಸ್ಥಾನಕ್ಕಿಳಿದರೂ ಅಚ್ಚರಿ ಇಲ್ಲ. 9 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಕಲೆ ಹಾಕಿದೆ. ದಕ್ಷಿಣ ಆಫ್ರಿಕಾ ನೆಟ್​ ರನ್-ರೇಟ್ +1.261. ಅಂಕಪಟ್ಟಿಯಲ್ಲಿ 2 ಅಥವಾ 3ನೇ ಸ್ಥಾನದಲ್ಲಿರುವ ಈ ತಂಡಗಳೇ ಸೆಮಿಫೈನಲ್​​ನಲ್ಲಿ ಸೆಣಸಾಟ ನಡೆಸಲಿವೆ.

ಅಫ್ಘನ್ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

Saturday, November 11, 2023

ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನ್‌ ಬರೋಬ್ಬರಿ 438 ರನ್‌ಗಳಿಂದ ಗೆಲ್ಲಬೇಕು. ಆಗ ಅಫ್ಘಾನಿಸ್ತಾನ ವಿಶ್ವಕಪ್‌ನ ಸೆಮಿಫೈನಲ್‌ಗೆ ಟಿಕೆಟ್ ಪಡೆಯಬಹುದು. ಇದು ಸಾಧ್ಯವಾಗಲು ದಾಖಲೆಯಾಟದ ಜೊತೆಗೆ ಪವಾಡವೇ ನಡೆಯಬೇಕು.

ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲು ದಕ್ಷಿಣ ಆಫ್ರಿಕಾವನ್ನು 438 ರನ್‌ಗಳಿಂದ ಸೋಲಿಸಬೇಕು ಅಫ್ಘಾನಿಸ್ತಾನ

Friday, November 10, 2023

ಆದರೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ತಂಡದೊಂದಿಗೆ ನವೆಂಬರ್​ 15ರಂದು ಕಾದಾಟ ನಡೆಸಲಿದೆ. ಆದರೆ 4ನೇ ಸ್ಥಾನಕ್ಕೆ ಆಸೀಸ್ ಎದುರು ಸೋತ ಅಫ್ಘನ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ 3 ತಂಡಗಳು ತಲಾ 8 ಅಂಕಗಳಿಸಿವೆ.

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್ ಫಿಕ್ಸ್; ಭಾರತದ ಎದುರಿನ ನಾಕೌಟ್ ಪಂದ್ಯಕ್ಕೆ 3 ತಂಡಗಳ ನಡುವೆ ಬಿಗ್ ಫೈಟ್

Wednesday, November 8, 2023

ಒಂದು ವೇಳೆ ಭಾರತ - ಪಾಕಿಸ್ತಾನ ನಡುವೆ ಸೆಮಿಫೈನಲ್ ನಡೆದರೆ 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಂತರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಪ್ರಸ್ತುತ ವಿಶ್ವಕಪ್​​ನ ಲೀಗ್​​ ಪಂದ್ಯದಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು.

Ind vs Pak: ಭಾರತ-ಪಾಕಿಸ್ತಾನ ಮಧ್ಯೆ ಸೆಮಿಫೈನಲ್ ಪಂದ್ಯ ಈಗಲೂ ಸಾಧ್ಯ; ಹೀಗಿದೆ ಸೆಮೀಸ್ ಲೆಕ್ಕಾಚಾರ

Tuesday, November 7, 2023

ಭಾರತ ವಿರುದ್ಧದ ಸೋಲಿನ ಹೊರತಾಗಿಯೂ ದಕ್ಷಿಣ ಆಫ್ರಿಕಾ ಪ್ರಸ್ತುತ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ, ಅವರು 2ನೇ ಸ್ಥಾನದಲ್ಲೇ ಉಳಿಯುತ್ತಾರೆ ಎಂಬುದು ಅನಿಶ್ಚಿತ. ಇದೀಗ ಆಸ್ಟ್ರೇಲಿಯಾ ತಂಡಕ್ಕೂ ಅವಕಾಶ ಇದೆ. ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ 12 ಅಂಕ ಕಲೆಹಾಕಿದೆ. ಅವರ ನೆಟ್​​ ರನ್-ರೇಟ್ +1.376.

ಗೆದ್ದ ಭಾರತ ಟೇಬಲ್ ಟಾಪರ್, ಸೋತ ಸೌತ್​ ಆಫ್ರಿಕಾ 2ನೇ ಸ್ಥಾನಕ್ಕೆ ಕುತ್ತು; ರೇಸ್​​ನಲ್ಲಿ ಆಸೀಸ್, ಹೀಗಿದೆ ಅಂಕಪಟ್ಟಿ

Monday, November 6, 2023

ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳನ್ನು ಸೋಲಿಸಿರುವ ಅಫ್ಘಾನಸ್ತಾನ ಶುಕ್ರವಾರ (ನವೆಂಬರ್ 3) ನೆದರ್ಲೆಂಡ್ಸ್ ತಂಡವನ್ನು ಮಣಿಸಿದ್ದು, 7 ಪಂದ್ಯಗಳ ಪೈಕಿ 3ರಲ್ಲಿ ಸೋತು, 4 ರಲ್ಲಿ ಅಮೋಘ ಗೆಲುವುಗಳೊಂದಿಗೆ 8 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಪಾಕಿಸ್ತಾನ 5 ರಿಂದ 6ನೇ ಸ್ಥಾನಕ್ಕೆ ಕುಸಿದಿದೆ.

CWC 2023 Points Table: ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಸೋಲಿಸಿ ಅಂಕಪಟ್ಟಿಯಲ್ಲಿ ಟಾಪ್ 5ಕ್ಕೆ ಬಂದ ಆಫ್ಘಾನ್; 6ಕ್ಕೆ ಕುಸಿದ ಪಾಕಿಸ್ತಾನ

Saturday, November 4, 2023

ವಿಶ್ವಕಪ್ ಅಂಕಗಳ ಪಟ್ಟಿಯಲ್ಲಿ ಭಾರತ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ಮಣಿಸಿರುವ ಟೀಮ್ ಇಂಡಿಯಾ ಏಳರಲ್ಲಿ ಏಳು ಪಂದ್ಯಗಳನ್ನು ಗೆದ್ದು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆದರೆ, ನೆಟ್ ರನ್ ರೇಟ್​ನಲ್ಲಿ ಭಾರತ (2.102) ದಕ್ಷಿಣ ಆಫ್ರಿಕಾಕ್ಕಿಂತ ಸ್ವಲ್ಪ ಹಿಂದಿದೆ.

ಶ್ರೀಲಂಕಾ ವಿರುದ್ಧ ಗೆದ್ದು ಪಾಕ್ ಸೆಮೀಸ್ ಆಸೆ ಹೆಚ್ಚಿಸಿದ ಭಾರತ; ಹೇಗೆಂಬುದಕ್ಕೆ ಇಲ್ಲಿದೆ ಉತ್ತರ

Friday, November 3, 2023

ಅಫ್ಘಾನಿಸ್ತಾನ ತಂಡದ ಪರ ಫಜಲ್ಹಕ್ ಫಾರೂಕಿ 10 ಓವರ್‌ಗಳಿಗೆ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮುಜೀಬ್ ಉರ್ ರಹಮಾನ್ ಇಬ್ಬರನ್ನು ಔಟ್ ಮಾಡಿದ್ರು.

AFG vs SL: ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಮತ್ತೊಂದು ದಾಖಲೆ; ಶ್ರೀಲಂಕಾ ಮೇಲೆ ಹಶ್ಮತುಲ್ಲಾ ಪಡೆ ಸೂಪರ್ ಸವಾರಿ; ಫೋಟೊಸ್

Tuesday, October 31, 2023

ಇಂಗ್ಲೆಂಡ್-ಪಾಕಿಸ್ತಾನ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು ಮಣಿಸಿತು. ಇದರೊಂದಿಗೆ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. 2019ರ ವಿಶ್ವಕಪ್​​​ನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಅಫ್ಘನ್ ಪ್ರಸಕ್ತ ಟೂರ್ನಿಯಲ್ಲಿ 3ನೇ ಜಯ ಸಾಧಿಸಿದೆ. ಆ ಮೂಲ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಗೆದ್ದದ್ದು ಅಫ್ಘಾನಿಸ್ತಾನ-ಸೋತದ್ದು ಶ್ರೀಲಂಕಾ; ಆದರೆ ಕುಸಿದಿದ್ದು ಪಾಕಿಸ್ತಾನ; ಹೀಗಿದೆ ಅಂಕಪಟ್ಟಿ

Tuesday, October 31, 2023