bantwal News, bantwal News in kannada, bantwal ಕನ್ನಡದಲ್ಲಿ ಸುದ್ದಿ, bantwal Kannada News – HT Kannada

Latest bantwal Photos

ದಕ್ಷಿಣ ಕನ್ನಡ ಸಹಿತ ಕರ್ನಾಟಕ ಕರಾವಳಿಯಲ್ಲಿ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಜೀವನದಿ ಎನ್ನಲಾಗುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅತ್ತ ಕುಮಾರಧಾರಾ ನದಿಯೂ ಮೈದುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಘಟ್ಟ ಹತ್ತುವ ಮಾರ್ಗಗಳಾದ ಆಗುಂಬೆ, ಸಂಪಾಜೆ, ಶಿರಾಡಿಗಳಲ್ಲಿ ಭೂಕುಸಿತದ ಆತಂಕವಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೆ, ಚಾರ್ಮಾಡಿ ರಸ್ತೆಯೂ ಅಪಾಯದ ಭೀತಿಯಲ್ಲಿದೆ. ಇಡೀ ದಿನದ ಮಳೆಯ ಚಿತ್ರನೋಟ ಇಲ್ಲಿದೆ.

ಕರ್ನಾಟಕದ ಮುಂಗಾರು ಮಳೆ; ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ, ಭೂಮಾರ್ಗಕ್ಕೆ ಕಂಟಕ, ಉಕ್ಕಿ ಹರಿದ ನದಿಗಳು, ನಾಳೆಯೂ ರೆಡ್ ಅಲರ್ಟ್, ಫೋಟೋಸ್‌

Friday, July 19, 2024

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ ಇಲ್ಲಿದೆ ನೋಡಿ.

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ

Saturday, June 15, 2024

ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡದಲ್ಲಾದರೂ ಅವರ ಕಾರ್ಯಕ್ಷೇತ್ರ ಇದ್ದುದು ಹೊರಗಡೆಯೇ. ಮೈಸೂರಿನ ರಂಗಾಯಣ ಕಟ್ಟಿದವರು ಅವರೇ. ಮಧ್ಯಪ್ರದೇಶದಲ್ಲಿದ್ದು ರಂಗಭೂಮಿ ಚಟುವಟಿಕೆಗೆ ಹೊಸ ಆಯಾಮ ತಂದವರು ಕಾರಂತರು.

Mangalore News: ಹುಟ್ಟೂರಲ್ಲಿ ರಂಗಕರ್ಮಿ ಬಿ.ವಿ.ಕಾರಂತ ನೆನಪು: ಮಂಚಿಯಲ್ಲಿ 3 ದಿನಗಳ ನಾಟಕೋತ್ಸವ PHOTOS

Tuesday, May 21, 2024

ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

ಬಂಟ್ವಾಳದ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ ಸಹಿತ ಉತ್ಸವಾದಿ ಕಾರ್ಯಕ್ರಮಗಳು ಮಾರ್ಚ್ 12ರಿಂದ 17ರವರೆಗೆ ನಡೆಯಿತು. ಇದು ಬಂಟ್ವಾಳ ಬ್ರಹ್ಮರಥದ 200ನೇ ವರ್ಷಾಚರಣೆಯೂ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಬಂಟ್ವಾಳದ ಬ್ರಹ್ಮರಥೋತ್ಸವಕ್ಕೆ 200ನೇ ವರ್ಷದ ಸಂಭ್ರಮ; ಮಲ್ಲಿಗೆಪ್ರಿಯ ವೆಂಕಟರಮಣನಿಗೆ ಕೆಜಿಗಟ್ಟಲೆ ಹೂವು ಸಮರ್ಪಣೆ; Photos

Monday, March 18, 2024

ಮಾಜಿ ಸಚಿವ ಬಿ.ರಮಾನಾಥ ರೈ ಸಾರಥ್ಯದಲ್ಲಿ ಬಂಟ್ವಾಳ ಕಂಬಳ ಎಂದೇ ಪ್ರಸಿದ್ಧವಾಗಿರುವ ಮುಡೂರು-ಪಡೂರು ಜೋಡುಕರೆ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಕುಡಿಬೈಲಿನಲ್ಲಿ ನಡೆಯಿತು. ಈ ಸಂದರ್ಭ ಸಚಿವ ದಿನೇಶ್ ಗುಂಡೂರಾವ್, ಚಿತ್ರನಟ ಪ್ರಜ್ವಲ್ ದೇವರಾಜ್ ಸಹಿತ ಪ್ರಮುಖ ಗಣ್ಯರು ಹಾಜರಿದ್ದರು. ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ ಮುಂದಾಳತ್ವದಲ್ಲಿ ಕಂಬಳ ಹೊನಲು ಬೆಳಕಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಇದರ ಫಲಿತಾಂಶದ ವಿವರ ಹೀಗಿದೆ.

ಬಂಟ್ವಾಳ ಮುಡೂರು-ಪಡೂರು ಜೋಡುಕರೆ ಕಂಬಳ, ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿದ್ಯಾರು; ಇಲ್ಲಿದೆ ಸಚಿತ್ರ ವರದಿ

Monday, March 4, 2024

ಭಂಡಾರ ಬಂದ ಬಳಿಕ ಬಯ್ಯದ ಬಲಿ‌ಉತ್ಸವ ಜರಗುತ್ತದೆ. ಮರುದಿನ ನಡುತೇರು ಉತ್ಸವ, ಏಳನೇ ದಿನ ಹೂವಿನ ತೇರು, ಎಂಟನೇ ದಿನ ಮಹಾರಥೋತ್ಸವ ನಡೆಯುತ್ತದೆ.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಸಂಭ್ರಮ; ವಿಟ್ಲ ಜಾತ್ರೆ ಫೋಟೋಗಳು ಇಲ್ಲಿವೆ

Tuesday, January 23, 2024

ಬಂಟ್ವಾಳದ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವ ಶ್ರೀವಿಶ್ವರೂಪದರ್ಶನ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಮಾಡಿದ್ದ ದೀಪಾಲಂಕಾರದ ಪೈಕಿ ಟೀಂ ಇಂಡಿಯಾಕ್ಕೆ ಶುಭ ಕೋರಿದ ಆಲ್ ದಿ ಬೆಸ್ಟ್ ಇಂಡಿಯಾ ಗಮನಸೆಳೆಯಿತು.

ವಿಶೇಷವಾಗಿ ಹೂಗಳಿಂದ ತ್ರಿವರ್ಣ ರಚಿಸಿ,  ಕಪ್ ರೀತಿಯಲ್ಲಿ ಚಿತ್ರಿಸಿ, ಸುತ್ತಲೂ ದೀಪವಿಟ್ಟು, ಅದರ ಪಕ್ಕ ಆಲ್ ದಿ ಬೆಸ್ಟ್ ಇಂಡಿಯಾ ಎಂಬ ಹೂಗಳ ಅಲಂಕಾರ ಮಾಡಿ, ಸುತ್ತಲೂ ದೀಪಾಲಂಕಾರ ಮಾಡಿರುವುದು ಗಮನ ಸೆಳೆಯಿತು. ಕ್ರಿಕೆಟ್ ಫೈನಲ್ ಪಂದ್ಯಾಟ ಭಾನುವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಅಲಂಕಾರವನ್ನು ಮಾಡಲಾಗಿತ್ತು.

IND vs AUS Final: ಬಂಟ್ವಾಳದ ದೇವಸ್ಥಾನದಲ್ಲಿ ‘ಆಲ್ ದಿ ಬೆಸ್ಟ್ ಇಂಡಿಯಾ’ ಎಂದು ಹೂವಿನಲ್ಲಿ ಬರೆದು ಹಣತೆ ಬೆಳಗಿದರು..

Sunday, November 19, 2023

ರಾಜ್ಯ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ದೃಶ್ಯಗಳು

Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು

Wednesday, May 10, 2023

ಯೋಗಿ ರೋಡ್​ ಶೋ ವೇಳೆ ಕೇಸರಿಮಯವಾದ ಬಂಟ್ವಾಳ, ಬಿ.ಸಿ ರೋಡ್​

UP CM Yogi in Bantwal: ಮಂಗಳೂರಲ್ಲಿ ಯುಪಿ ಸಿಎಂ ಯೋಗಿ ರೋಡ್​ ಶೋ ; ಕೇಸರಿಮಯವಾದ ಬಂಟ್ವಾಳ PHOTOS

Sunday, May 7, 2023