mohammed-shami News, mohammed-shami News in kannada, mohammed-shami ಕನ್ನಡದಲ್ಲಿ ಸುದ್ದಿ, mohammed-shami Kannada News – HT Kannada

Latest mohammed shami Photos

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ ವೇಳೆ ಭಾರತದ ವೇಗಿ ಮೊಹಮ್ಮದ್ ಶಮಿ ಆಟದ ಮಧ್ಯೆ ಎನರ್ಜಿ ಡ್ರಿಂಕ್ಸ್ ಕುಡಿದಿದ್ದಕ್ಕೆ ರಂಜಾನ್ ಉಪವಾಸ ಆಚರಿಸುತ್ತಿಲ್ಲ ಎಂದು ಧರ್ಮಗುರುವೊಬ್ಬರು ಕ್ರಿಮಿನಲ್ ಎಂದು ಟೀಕಿಸಿದ್ದರು. ಇದಕ್ಕಾಗಿ ಕೆಲವರು ಧರ್ಮಗುರು ವಿರುದ್ಧವೇ ತಿರುಗಿ ಬಿದ್ದರು. ಇದೀಗ ತಮ್ಮ ಪತ್ನಿ ಹಸೀನ್ ಜಹಾನ್ ಅವರು ಶಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಮೊದಲ ಬಾರಿಗೆ ರಂಜಾನ್ ಉಪವಾಸ ಆಚರಿಸಿದ ಮಗಳ ಫೋಟೋಸ್ ಹಂಚಿಕೊಂಡು ಮೊಹಮ್ಮದ್ ಶಮಿಗೆ ಟಾಂಗ್ ಕೊಟ್ಟ ಪತ್ನಿ

Friday, March 7, 2025

200 ವಿಕೆಟ್‌ ಕಬಳಿಸುವುದರೊಂದಿಗೆ ಶಮಿ ಹಲವು ದಾಖಲೆ ನಿರ್ಮಿಸಿದರು. ಅತಿ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದರು. 5126 ಎಸೆತಗಳನ್ನು ಎಸೆಯುವ ಮೂಲಕ ಶಮಿ 200 ವಿಕೆಟ್‌ ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ 5240 ಎಸೆತಗಳಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ಏಕದಿನ ಸ್ವರೂಪದಲ್ಲಿ ಅತಿ ವೇಗವಾಗಿ 200 ವಿಕೆಟ್ ಸಾಧನೆ; ಮಿಚೆಲ್ ಸ್ಟಾರ್ಕ್ ವಿಶ್ವದಾಖಲೆ ಮುರಿದ ಮೊಹಮ್ಮದ್ ಶಮಿ

Thursday, February 20, 2025

ಜನವರಿ 18ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಪ್ರಮುಖ ಬೌಲರ್​ನನ್ನೇ ಕೈಬಿಡಲಾಗಿದೆ. 2022ರ ಜನವರಿ 1ರಿಂದ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಟಾಪ್​-5 ಬೌಲರ್​ಗಳು ಯಾರೆಂಬುದನ್ನು ಈ ಮುಂದೆ ನೋಡೋಣ. ಆದರೆ ಅವಕಾಶ ಪಡೆಯದ ಆ ಬೌಲರ್​ ಅಗ್ರಸ್ಥಾನದಲ್ಲಿರುವುದು ವಿಶೇಷ.

2022ರಿಂದ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ ಇವರೇ; ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ವೇಗಿಗೆ ಅಗ್ರಸ್ಥಾನ

Sunday, January 19, 2025

ಏಕದಿನ ಸರಣಿಗೆ ಪ್ರಕಟವಾಗುವ ತಂಡವೇ ಬಹುತೇಕ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಇರಲಿದೆ. ಆದರೆ ಕೆಲವರಿಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗುತ್ತಿದೆ. ಅದರಂತೆ ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಈ ಸರಣಿಗೆ ಅಲಭ್ಯರಾಗಬಹುದು. ಆದರೆ ಮೊಹಮ್ಮದ್ ಶಮಿ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಔಟ್, ಮೊಹಮ್ಮದ್ ಶಮಿ ರಿಟರ್ನ್; ಇಂಗ್ಲೆಂಡ್ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ

Friday, January 10, 2025

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಜುಲೈ 18ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು. ಆ ಮೂಲಕ 4 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು. ಆದರೆ, ಹಾರ್ದಿಕ್​​​-ನತಾಶಾಗೂ ಮುನ್ನ ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಮುಖ ಕ್ರಿಕೆಟರ್ಸ್ ತಮ್ಮ ಪತ್ನಿಯರಿಂದ ವಿಚ್ಛೇದನ ಪಡೆದಿದ್ದಾರೆ. ಯಾರೆಲ್ಲಾ ಡಿವೋರ್ಸ್ ಪಡೆದಿದ್ದರು ಎಂಬುದರ ಪಟ್ಟಿಯನ್ನೊಮ್ಮೆ ನೋಡೋಣ.

Cricketers Divorce: ಹಾರ್ದಿಕ್​ ಪಾಂಡ್ಯಗೂ ಮುನ್ನ ವಿವಾಹ ವಿಚ್ಛೇದನ ಪಡೆದಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ

Sunday, July 21, 2024

ಬಲಗೈ ವೇಗಿ ಐಪಿಎಲ್‌ನಲ್ಲಿ 2019ರಿಂದ 2021ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆಡಿದ್ದರು. ಐದು ಪಂದ್ಯಗಳಲ್ಲಿ ಆಡಿ 7.88ರ ಎಕಾನಮಿಯಲ್ಲಿ ಎರಡು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಸಂದೀಪ್ ವಾರಿಯರ್: ಶಮಿ ಬದಲಿಗೆ ಭಾರತ ಪರ 1 ಟಿ20 ಪಂದ್ಯ ಆಡಿದ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಿದ ಗುಜರಾತ್ ಟೈಟಾನ್ಸ್‌

Thursday, March 21, 2024

2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈಸ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಇದೀಗ 449 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಹಾಗಾದರೆ ಪಂತ್​ರಂತೆ ಅಪಘಾತಕ್ಕೆ ಒಳಗಾಗಿದ್ದ ಕ್ರಿಕೆಟರ್ಸ್ ಯಾರು ಎಂಬುದನ್ನು ಈ ಮುಂದೆ ನೋಡೋಣ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ

Tuesday, March 12, 2024

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

Friday, March 8, 2024

ಕಬಡ್ಡಿ ಆಟಗಾರ ಪವನ್ ಕುಮಾರ್.

Photos: ಕಬಡ್ಡಿ ಆಟಗಾರ ಪವನ್ ಕುಮಾರ್ ಸೇರಿದಂತೆ 26 ಆಟಗಾರರಿಗೆ ಅರ್ಜುನ ಪ್ರಶಸ್ತಿ ಪ್ರದಾನ

Tuesday, January 9, 2024

ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಭಾರತದ ಸ್ಟಾರ್​ ವೇಗಿ ಮೊಹಮ್ಮದ್ ಶಮಿ, ಈ ಪ್ರಶಸ್ತಿ ಪಡೆಯುವುದು ನನ್ನ ಜೀವನದ ಕನಸು ಎಂದು ಹೇಳಿದ್ದಾರೆ. ಅರ್ಜುನ ಪ್ರಶಸ್ತಿಯನ್ನು ಭಾರತದ 2ನೇ ಅತ್ಯುನ್ನತ ಅಥ್ಲೆಟಿಕ್ ಗೌರವ.

ಅರ್ಜುನ ಪ್ರಶಸ್ತಿ ಪಡೆಯುವುದು ನನ್ನ ಕನನಸಾಗಿತ್ತು; ವೇಗಿ ಮೊಹಮ್ಮದ್ ಶಮಿ ಮನದಾಳದ ಮಾತು

Tuesday, January 9, 2024

ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯಲ್ಲಿ ಭಾರತದ ಮೂವರು.

ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ನಾಲ್ವರು ನಾಮನಿರ್ದೇಶನ; ಭಾರತದವರೇ ಮೂವರು

Thursday, January 4, 2024

2023ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿಯೂ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2023ರಲ್ಲಿ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಮೂರು ಬ್ಯಾಟರ್‌ಗಳಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ವರ್ಷವಿಡೀ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.

2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್‌ಗಳು; ಅಗ್ರ ಮೂವರು ಭಾರತೀಯರು

Wednesday, December 27, 2023

ವಿಶ್ವಕಪ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಇಬ್ಬರು ಆಸೀಸ್ ಆಟಗಾರರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಮಾತ್ರವಲ್ಲದೆ, ಭಾರತ ವಿರುದ್ಧದ ಟಿ20 ಸರಣಿಯಲ್ಲಿಯೂ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರು ಮಿಂಚಿದ್ದರು. ಹೀಗಾಗಿ ತಿಂಗಳ ಅತ್ಯುತ್ತಮ ಕ್ರಿಕೆಟಿಗರ ರೇಸ್‌ನಲ್ಲಿ ಇವರಿಬ್ಬರನ್ನು ಪರಿಗಣಿಸಲಾಗಿದೆ.

ಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಮೂವರು ಕ್ರಿಕೆಟಿಗರು; ಭಾರತದ ವೇಗಿಗೆ ಸ್ಥಾನ

Thursday, December 7, 2023

"ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತಾರೆ, ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಬಯಸುತ್ತಾರೆ. ಆದರೆ ಅದೇ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಶಮಿ ಹೇಳಿದ್ದಾರೆ.

'ನನಗೆ ನೋವಾಗಿದೆ, ತಲೆ ಮೇಲೆ ಹೊತ್ತು ತಿರುಗುವ ಟ್ರೋಫಿ ಮೇಲೆ ಕಾಲಿಡುವುದು ಸರಿಯಲ್ಲ'; ಶಮಿ ಬೇಸರ

Saturday, November 25, 2023

ಎಕ್ಸ್​ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ನಿನ್ನೆಯ ದಿನ ನಮ್ಮದಾಗಿರಲಿಲ್ಲ; ಮೋದಿ ಸಂತೈಸಿದ ಚಿತ್ರದೊಂದಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಮಿ

Monday, November 20, 2023

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿಶ್ವದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದಿದ್ದರು. 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 6 ಪಂದ್ಯಗಳಿಂದ 5.01 ಎಕಾನಮಿಯಲ್ಲಿ 23 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಯನ್ನ ಮೀರಿಸಿದವರಿಲ್ಲ; ಅತಿ ಹೆಚ್ಚು ವಿಕೆಟ್‌ಗಳಲ್ಲಿ ವೇಗಿಯೇ ನಂಬರ್ 1

Friday, November 17, 2023

ಆ ಮೂಲಕ ರೋಹಿತ್ ಶರ್ಮಾ (550 ರನ್), ವಿರಾಟ್ ಕೊಹ್ಲಿ (711 ರನ್) ಹಾಗೂ ಮೊಹಮ್ಮದ್ ಶಮಿ (23 ವಿಕೆಟ್) ಅವರ ಹೆಸರನ್ನು ನಿರ್ಲಕ್ಷಿಸಿದ್ದಾರೆ.

ರೋಹಿತ್, ಕೊಹ್ಲಿ, ಶಮಿ ಅಲ್ಲವೇ ಅಲ್ಲ; ಈತ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಎಂದ ಗಂಭೀರ್

Friday, November 17, 2023

ಪಂದ್ಯದಲ್ಲಿ ಭಾರತದಿಂದ ಹಲವು ತಪ್ಪುಗಳಾದವು, ಹೆಚ್ಚುವರಿ ರನ್‌ಗಳು ಸೋರಿಕೆಯಾದವು. ಆದರೂ, ತಂಡದ ಸಂಘಟಿತ ಹೋರಾಟಕ್ಕೆ ಯಶಸ್ಸು ಸಿಕ್ಕಿತು.

ಶಮಿ ಬೌಲಿಂಗ್‌ ಮಾತ್ರವಲ್ಲ; ಭಾರತದ ಸೆಮಿಫೈನಲ್‌ ಗೆಲುವಿಗೆ ಈ 5 ಅಂಶಗಳು ಪ್ರಮುಖ ಕಾರಣ

Thursday, November 16, 2023

ಈ ಹಿಂದೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈ ದಾಖಲೆ ಹೊಂದಿದ್ದರು. ಅವರು 19 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರು. ಶಮಿ ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ‌ ವಿಶ್ವದ ಏಳನೇ ಬೌಲರ್ ಎನಿಸಿಕೊಂಡರು. ಗ್ಲೆನ್ ಮೆಕ್‌ಗ್ರಾತ್, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ವಾಸಿಂ ಅಕ್ರಮ್, ಟ್ರೆಂಟ್ ಬೌಲ್ಟ್ ಮತ್ತು ಸ್ಟಾರ್ಕ್ ಅವರನ್ನು ಮೊದಲು ಈ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿ ಶಮಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಶಮಿ ವಿಕೆಟ್‌ಗಳ ಸಂಖ್ಯೆ 54 ಆಗಿದೆ.

Photos: ಕಿವೀಸ್‌ ವಿರುದ್ಧ ಭಾರತಕ್ಕೆ ವಿಜಯದ ಶಮಿ; ವಿಶ್ವಕಪ್‌ ದಾಖಲೆಗಳು ಒಂದೆರಡಲ್ಲ

Thursday, November 16, 2023

ಪ್ರಸಕ್ತ ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ಕೂಡಾ 15.2 ಓವರ್‌ಗಳಲ್ಲಿ. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಇದೇ ವೇಳೆ ಏಳು ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟ ಮೊಹಮ್ಮದ್‌ ಸಿರಾಜ್‌ ಆರು ವಿಕೆಟ್ ಕಬಳಿಸಿದ್ದರು. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.

105 ರನ್‌ಗೆ 20 ವಿಕೆಟ್; ಕೊನೆಯ 2 ಪಂದ್ಯಗಳಲ್ಲಿ ಲಂಕಾಗೆ ಲಗಾಮು ಹಾಕಿದ ಭಾರತ ವೇಗಿಗಳು

Friday, November 3, 2023