women-s-cricket News, women-s-cricket News in kannada, women-s-cricket ಕನ್ನಡದಲ್ಲಿ ಸುದ್ದಿ, women-s-cricket Kannada News – HT Kannada

Latest women s cricket Photos

ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದೆ. 8 ವರ್ಷಗಳ ನಂತರ ಮಹಿಳಾ ಟಿ20 ಕ್ರಿಕೆಟ್‌ಗೆ ಹೊಸ ಚಾಂಪಿಯನ್‌ ದೊರಕಿದೆ. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 32 ರನ್​ಗಳ ಅಂತರದಿಂದ ಗೆದ್ದು ಟ್ರೋಫಿಗೆ ಮುತ್ತಿಕ್ಕಿತು. 18 ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರು ಯಾರು? ಈ ಪಟ್ಟಿಯಲ್ಲಿ ಭಾರತೀಯರು ಯಾವ ಸ್ಥಾನ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

ಮಹಿಳಾ ವಿಶ್ವಕಪ್ 2024ರಲ್ಲಿ 'ಸಿಕ್ಸರ್ ಕ್ವೀನ್' ಯಾರು? ಮಂಧಾನ, ಶಫಾಲಿ, ಹರ್ಮನ್ ಸಿಕ್ಸರ್ ಸಂಖ್ಯೆ ಕೇಳಿದ್ರೆ ಅಚ್ಚರಿ ಖಚಿತ

Monday, October 21, 2024

ಮಹಿಳಾ ವಿಶ್ವಕಪ್ 1973ರಿಂದ ನಡೆಯುತ್ತಿದೆ. ಅಂದಿನಿಂದ 12 ವಿಶ್ವಕಪ್‌ಗಳು ನಡೆದಿವೆ. ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ತಂಡಗಳಲ್ಲಿ ಕನಿಷ್ಠ ಒಂದು ತಂಡ ಪ್ರತಿ ವಿಶ್ವಕಪ್ ಫೈನಲ್‌ನಲ್ಲೂ ಆಡಿವೆ. ಕೆಲವು ವಿಶ್ವಕಪ್ ಫೈನಲ್‌ಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ. 2009ರಿಂದ ಟಿ20 ವಿಶ್ವಕಪ್ ನಡೆಯುತ್ತಿದೆ. ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ 2023ರವರೆಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿವೆ. ಇದೀಗ ಐವತ್ತೊಂದು ವರ್ಷಗಳ ನಂತರ, ಆ ಪ್ರವೃತ್ತಿ ಮುರಿದುಬಿದ್ದಿದೆ.

ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು; ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಇಲ್ಲದೆ ನಡೆಯಲಿದೆ ಫೈನಲ್ ಪಂದ್ಯ

Friday, October 18, 2024

ಎ ಗುಂಪಿನಲ್ಲಿ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಲೀಗ್ ಟೇಬಲ್​​ನಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಸೆಮೀಸ್​ಗೆ ಲಗ್ಗೆ ಇಟ್ಟಿತು. ಆದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳು ಲೀಗ್​ ಹಂತದಲ್ಲೇ ಹೊರಬಿದ್ದವು.

ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ; ಎಲ್ಲಿ, ಯಾವಾಗ, ಯಾವ ತಂಡಗಳ ನಡುವೆ ಫೈನಲ್​ ಟಿಕೆಟ್​ಗೆ ಹೋರಾಟ?

Wednesday, October 16, 2024

ನ್ಯೂಜಿಲೆಂಡ್ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್​ಗೆ ಪ್ರವೇಶಿಸುವುದು ಖಚಿತ. ಆದರೆ, ನ್ಯೂಜಿಲೆಂಡ್ ಒಂದು ಪಂದ್ಯ ಸೋತು, ಒಂದು ಪಂದ್ಯ ಗೆದ್ದರೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೆ ಅವಕಾಶ ಇರಲಿದೆ. ಆದರೆ ನೆಟ್​ರನ್​ ರೇಟ್ ಕಿವೀಸ್​ಗಿಂತ ಮುಂದಿರಬೇಕಾಗುತ್ತದೆ. ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಸೋತರೆ, ಸೆಮೀಸ್ ಕನಸು ಭಗ್ನಗೊಳ್ಳಲಿದೆ. ಆದರೆ ಕಿವೀಸ್ ತನ್ನ ಮುಂದಿನ ಎರಡು ಪಂದ್ಯಗಳನ್ನು ಸೋಲುವುದು ಬಹುತೇಕ ಕಷ್ಟ ಎಂದೇ ಹೇಳಲಾಗುತ್ತಿದೆ. ಭಾರತ ತಂಡದ ಸೆಮಿಫೈನಲ್ ಭವಿಷ್ಯ ನ್ಯೂಜಿಲೆಂಡ್ ಫಲಿತಾಂಶಗಳ ಮೇಲೆ ನಿಂತಿದೆ,

ಸೆಮಿಫೈನಲ್ ಸನಿಹಕ್ಕೆ ಆಸ್ಟ್ರೇಲಿಯಾ, ಸಂಕಷ್ಟಕ್ಕೆ ಸಿಲುಕಿದ ಭಾರತ; ನ್ಯೂಜಿಲೆಂಡ್​ಗೆ ಸುವರ್ಣಾವಕಾಶ, ಸೆಮೀಸ್ ಲೆಕ್ಕಾಚಾರ ಹೀಗಿದೆ

Saturday, October 12, 2024

ನ್ಯೂಜಿಲೆಂಡ್ ವಿರುದ್ಧ ಸೋತು, ಪಾಕಿಸ್ತಾನ ಎದುರು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರಷ್ಟೇ ತನ್ನ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ. 2 ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಉತ್ತಮ ನೆಟ್ ರನ್​ ರೇಟ್ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, ನೆಟ್ ರನ್ ರೇಟ್ ಪ್ರಸ್ತುತ -1.217.

Points Table: ಮಹಿಳಾ ಟಿ20 ವಿಶ್ವಕಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ದರ್ಬಾರ್; ಭಾರತಕ್ಕೆ ಯಾವ ಸ್ಥಾನ?

Wednesday, October 9, 2024

ಎ ಗುಂಪಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 58 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಹೀಗಾಗಿ ಹರ್ಮನ್ ಪ್ರೀತ್ ಕೌರ್‌ ಪಡೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಭಾರತದ ನೆಟ್ ರನ್ ರೇಟ್ ಕೂಡ ತೀರಾ ಕೆಟ್ಟದಾಗಿತ್ತು. ಪರಿಣಾಮವಾಗಿ, ಭಾರತವು 5 ತಂಡಗಳ ಗುಂಪಿನ ಕೊನೆಯಲ್ಲಿ ಸ್ಥಾನ ಪಡೆಯಿತು. ಆದರೆ, ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಟೀಮ್ ಇಂಡಿಯಾ ಖಾತೆ ತೆರೆದಿದೆ. ಅಲ್ಲದೆ ತಂಡದ ನೆಟ್ ರನ್ ರೇಟ್ ಕೂಡ ಸ್ವಲ್ಪ ಸುಧಾರಿಸಿದೆ.

ಗೆದ್ದರೂ ಪಾಕಿಸ್ತಾನಕ್ಕಿಂತ ಹಿಂದೆಬಿದ್ದ ಭಾರತ ತಂಡ; ವನಿತೆಯರ ಟಿ20 ವಿಶ್ವಕಪ್ ಅಂಕಪಟ್ಟಿ ಹೀಗಿದೆ

Sunday, October 6, 2024

ಸೋಲಿನ ಆರಂಭ ಕಂಡಿರುವ ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ (ಅ.6), ಶ್ರೀಲಂಕಾ (ಅ.9), ಆಸ್ಟ್ರೇಲಿಯಾ (13) ವಿರುದ್ಧ ಸೆಣಸಾಟ ನಡೆಸಲಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ.

ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಭಾರತ; ಉಳಿದ ಮೂರು ಪಂದ್ಯ ಗೆದ್ದರಷ್ಟೇ ಸೆಮಿಫೈನಲ್ ಆಸೆ ಜೀವಂತ

Saturday, October 5, 2024

ಈ ಬಾರಿ ನಡೆದ ವನಿತೆಯರ ಏಷ್ಯಾಕಪ್‌ಗೆ ಆಯ್ಕೆಯಾಗಿದ್ದ ಶ್ರೇಯಾಂಕಾ, ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದರು. ಇದೀಗ ಅವರ ಗುರಿ ಮುಂದಿನ ವಿಶ್ವಕಪ್.‌ ವನಿತೆಯರ ವಿಶ್ವಕಪ್‌ನಲ್ಲಿ ಸ್ಥಾನ ಪಡೆದು, ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಶ್ರೇಯಾಂಕಾ ಇದ್ದಾರೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹುಟ್ಟುಹಬ್ಬ; ಆರ್‌ಸಿಬಿ ಲಕ್ಕೀ ಚಾರ್ಮ್‌, ಭಾರತದ ಉದಯೋನ್ಮುಖ ಪ್ರತಿಭೆಯ ದಾಖಲೆಗಳ ಚಿತ್ರನೋಟ

Wednesday, July 31, 2024

ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ನಲ್ಲಿ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಜೂಲನ್ ಗೋಸ್ವಾಮಿಯನ್ನು ಹಿಂದಿಕ್ಕಿದ್ದಾರೆ. ಜೂಲನ್ ಭಾರತ ಪರ 68 ಪಂದ್ಯಗಳಲ್ಲಿ 67 ಇನ್ನಿಂಗ್ಸ್‌ಗಳಲ್ಲಿ 56 ವಿಕೆಟ್‌ ಪಡೆದಿದ್ದಾರೆ. ಇದೇ ವೇಳೆ ಪೂಜಾ 69 ಪಂದ್ಯಗಳ 63 ಇನ್ನಿಂಗ್ಸ್‌ಳಲ್ಲಿ ಬೌಲಿಂಗ್ ಮಾಡಿ 57 ವಿಕೆಟ್‌ ಪಡೆದಿದ್ದಾರೆ.

ಜೂಲನ್ ಗೋಸ್ವಾಮಿ ದಾಖಲೆ ಮುರಿದ ಪೂಜಾ ವಸ್ತ್ರಾಕರ್; ಬಾಂಗ್ಲಾದೇಶ ವಿರುದ್ಧ ರಿಚಾ-ರೇಣುಕಾ ರೆಕಾರ್ಡ್

Friday, July 26, 2024

2018ರಲ್ಲಿ ನಡೆದ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತವನ್ನು ಅಚ್ಚರಿಯ ರೀತಿಯಲ್ಲಿ ಮಣಿಸಿ ಏಷ್ಯಾಕಪ್‌ ಗೆದ್ದಿತ್ತು. ಅದು ಬಾಂಗ್ಲಾದೇಶ ಚೊಚ್ಚಲ ಹಾಗೂ ಏಕೈಕ ಏಷ್ಯಾಕಪ್‌. ಟೂರ್ನಿಯ ಇತಿಹಾಸದಲ್ಲಿ ಭಾರತವನ್ನು ಹೊರತುಪಡಿಸಿ ಕಪ್‌ ಗೆದ್ದಿರುವ ಮತ್ತೊಂದು ತಂಡವಿದ್ದರೆ ಅದು ಬಾಂಗ್ಲಾದೇಶ ಮಾತ್ರ.

ಭಾರತ vs ಬಾಂಗ್ಲಾದೇಶ ಮುಖಾಮುಖಿ ದಾಖಲೆ; ಏಷ್ಯಾಕಪ್ ಸೆಮಿಫೈನಲ್ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ

Thursday, July 25, 2024

ಮಹಿಳಾ ಏಷ್ಯಾಕಪ್​ 2024 ಟೂರ್ನಿಯಲ್ಲಿ ಜುಲೈ 21ರಂದು ಭಾನುವಾರ ನಡೆದ ಭಾರತದ ವನಿತೆಯರ ಎರಡನೇ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ರಿಚಾ ಘೋಷ್​ ಮಹತ್ವದ ದಾಖಲೆ ನಿರ್ಮಿಸಿದ್ದಾರೆ.

ಯುಎಇ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ರಿಚಾ ಘೋಷ್; ರಿಷಭ್ ಪಂತ್ ದಾಖಲೆಯೂ ಪುಡಿಪುಡಿ

Sunday, July 21, 2024

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಂಧಾನ ಸರಾಸರಿ 149, ಏಕದಿನ ಸರಣಿಯಲ್ಲಿ ಸರಾಸರಿ 114.3. ಮತ್ತು ಟಿ20ಐ ಸರಣಿಯಲ್ಲಿ 100ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಪ್ರವಾಸದ ಎಲ್ಲಾ 3 ಸ್ವರೂಪಗಳಲ್ಲಿ ಸರಾಸರಿ 100+ ರನ್ ಗಳಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರು ಫಾರ್ಮಾಟ್ ಸರಣಿಗಳಲ್ಲೂ 100ಕ್ಕೂ ಸರಾಸರಿ; ಮಹಿಳಾ ಕ್ರಿಕೆಟ್​ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ

Wednesday, July 10, 2024

ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ಶಫಾಲಿ ವರ್ಮಾ ಅದನ್ನು ದ್ವಿಶತಕವಾಗಿ ಪರಿವರ್ತಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚೆನ್ನೈನಲ್ಲಿ ಜೂನ್ 28ರಂದು ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿ 194 ಎಸೆತಗಳಲ್ಲಿ ದ್ವಿಶತಕ ಪೂರೈಸಿ ದಾಖಲೆ ಬರೆದಿದ್ದಾರೆ. ಅವರ ಇನ್ನಿಂಗ್ಸ್​​ನಲ್ಲಿ 23 ಬೌಂಡರಿ, 8 ಸಿಕ್ಸರ್​​​ಗಳಿವೆ.

ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗದ ಶತಕ, ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

Friday, June 28, 2024

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮಂಧನಾ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 343 ರನ್ ಗಳಿಸಿದರು. ಆ ಮೂಲಕ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ.

ಏಕದಿನ ಬ್ಯಾಟಿಂಗ್ ಶ್ರೇಯಾಂಕ; ಅಗ್ರ 10ರೊಳಗೆ ಸ್ಥಾನ ಪಡೆದ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್

Tuesday, June 25, 2024

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತೀಯ ಮಹಿಳಾ ತಂಡ ಭರ್ಜರಿ 6 ವಿಕೆಟ್​​​ಗಳ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ವೈಟ್​ವಾಶ್ ಮಾಡಿಕೊಂಡಿತು.

ಶತಕ ವಂಚಿತರಾದರೂ ಹರ್ಮನ್​ಪ್ರೀತ್​ ಕೌರ್​ ದಾಖಲೆಯನ್ನು ಪುಡಿಗಟ್ಟಿದ ಸ್ಮೃತಿ ಮಂಧಾನ

Monday, June 24, 2024

ಸೌತ್ ಆಫ್ರಿಕಾ ಬೌಲರ್​​ಗಳಿಗೆ ಬೆಂಡೆತ್ತಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ. ಮಿಥಾಲಿ ಕೂಡ ಅಷ್ಟೇ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಸ್ಮೃತಿ ಮಂಧಾನ ಸತತ 2ನೇ ಸೆಂಚುರಿ; ಮಿಥಾಲಿ ರಾಜ್ ಶತಕಗಳ ದಾಖಲೆ ಸರಿಗಟ್ಟಿದ ಆರ್​ಸಿಬಿ ಕ್ಯಾಪ್ಟನ್

Wednesday, June 19, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

Tuesday, April 16, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಾಂಕಾ ಪಾಟೀಲ್ ಅವರಿಗೆ ತನ್ನ ಹುಟ್ಟೂರು ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.

ಸ್ವಗ್ರಾಮ ಕಲಬುರಗಿಯ ಕೋಳಕೂರಿನಲ್ಲಿ ಶ್ರೇಯಾಂಕಾ ಪಾಟೀಲ್​ಗೆ ಗ್ರ್ಯಾಂಡ್ ವೆಲ್​ಕಮ್​; ಟಗರು ಪುಟ್ಟಿ ನೋಡಲು ಜನವೋ ಜನ

Thursday, April 4, 2024

ಆರ್‌ಸಿಬಿ ಕ್ವೀನ್‌ 9 ಪಂದ್ಯಗಳಲ್ಲಿ 347 ರನ್‌ ಗಳಿಸುವ ಮೂಲಕ, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ.

ಎಲಿಸ್‌ ಪೆರ್ರಿ ಪಾಲಾದ ಆರೆಂಜ್‌ ಕ್ಯಾಪ್; ಡಬ್ಲ್ಯುಪಿಎಲ್‌ 2024ರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರು

Monday, March 18, 2024

ಟ್ರೋಫಿ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡಾ ಆರ್‌ಸಿಬಿ ಪಾಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದರು.

WPL 2024 Photos: ನಾವೇ ರಾಣಿಯರು; ಚೊಚ್ಚಲ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ ವನಿತೆಯರ ಸಂಭ್ರಮ ಹೀಗಿತ್ತು

Monday, March 18, 2024