Viral Video: ತೋಟಕ್ಕೆ ನುಗ್ಗಿದ ಕಾಡಾನೆಗಳು; ಮರವೇರಿ ವಿಡಿಯೋ ಮಾಡಿದ ರೈತ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Viral Video: ತೋಟಕ್ಕೆ ನುಗ್ಗಿದ ಕಾಡಾನೆಗಳು; ಮರವೇರಿ ವಿಡಿಯೋ ಮಾಡಿದ ರೈತ

Viral Video: ತೋಟಕ್ಕೆ ನುಗ್ಗಿದ ಕಾಡಾನೆಗಳು; ಮರವೇರಿ ವಿಡಿಯೋ ಮಾಡಿದ ರೈತ

Published Aug 19, 2023 08:00 AM IST HT Kannada Desk
twitter
Published Aug 19, 2023 08:00 AM IST

  • ಹಾಸನ ಜಿಲ್ಲೆಯಲ್ಲಿ ಗಜಪಡೆ ದಾಳಿ ಮುಂದುವರಿದಿದೆ. ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಬೇಲೂರು ತಾಲ್ಲೂಕಿನ, ಮಲಸಾವರ ಗ್ರಾಮದಲ್ಲಿ ನಡೆದಿದೆ. 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿದ ಪರಿಣಾಮ ಕಾಫಿ, ಮೆಣಸು, ಏಲಕ್ಕಿ, ಅಡಿಕೆ ಗಿಡಗಳು ಹಾಗೂ ನಾಟಿ ಮಾಡಿದ್ದ ಭತ್ತದ ಗದ್ದೆ ನಾಶವಾಗಿದೆ. ಗ್ರಾಮದ ತೀರ್ಥಕುಮಾರ್, ಕಲ್ಲೇಶ್, ವಿಜಯ್, ಮಲ್ಲೇಶ್ ಹಾಗೂ ಇನ್ನಿತರ ರೈತರಿಗೆ ಸೇರಿದ ಜಮೀನಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕಾಡಾನೆಗಳ ಹಿಂಡು ಮನಬಂದಂತೆ ಓಡಾಡಿ ಬೆಳೆ ಹಾಳು ಮಾಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಎತ್ತರದ ಮರದ ಮೇಲೆ ಕುಳಿತು ಕಾಡಾನೆಗಳ ಓಡಾಟದ ವಿಡಿಯೋವನ್ನು ರೈತನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

More