ಕಂದಾಯ ಸಚಿವರನ್ನೇ ಯಾಮಾರಿಸೋಕೆ ಮುಂದಾದ್ರಾ ಅಧಿಕಾರಿಗಳು; ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧ ಸಚಿವ ಕೃಷ್ಣಬೈರೇಗೌಡ ಗರಂ
- ಚನ್ನಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ವರ್ಷ ಕಳೆದರೂ ಇ-ಆಫೀಸ್ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ಕಂದಾಯ ಸಚಿವ ಕೃಷ್ಣಬೈರೇಗೌಡ ಗರಂ ಆಗಿರುವ ಘಟನೆ ನಡೆದಿದೆ. ಲೆಡ್ಜರ್ ಪುಸ್ತಕದಲ್ಲೇ ಉಳಿದುಹೋದ ಜನರ ಸಮಸ್ಯೆಗಳಿಗೆ ನೀವು ಮುಕ್ತಿಕೊಡೋದು ಯಾವಾಗ ಎಂದು ಪ್ರಶ್ನಿಸಿದ ಸಚಿವರು, ನನ್ನ ಯಾಮಾರಿಸುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ. ಇ-ಆಫೀಸ್ ಮೂಲಕ ಜನರ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ಸಚಿವರಿಗೆ ಸುಳ್ಳು ಮಾಹಿತಿ ನೀಡಿದ ತಹಶೀಲ್ದಾರ್ ವಿರುದ್ಧ ಸಿಟ್ಟಾದ ಕೃಷ್ಣಾಬೈರೇಗೌಡ, ಸ್ಥಳದಲ್ಲೇ ತಹಶೀಲ್ದಾರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.