ಗುಜರಾತ್‌ನಲ್ಲಿ ಭಾರಿ ಮಳೆ; ವಡೋದರಲ್ಲಿ ಮುಳುಗಿದ ಹಲವು ಕಾರುಗಳು, ಜೀವನ ಅಸ್ತವ್ಯಸ್ತ
- ಗುಜರಾತ್‌ನಲ್ಲಿ ಸುರಿದ ಭಾರಿ ಮಳೆ ಜನಜೀವನವನ್ನ ಕಂಗಾಲಾಗಿಸಿದೆ. ಅಹಮದಾಬಾದ್, ಕಚ್, ವಡೋದರಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು ಅಪಾರ ಹಾನಿ ಸಂಭವಿಸಿದೆ. ವಡೋದರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಮಳೆ ನೀರಿನಲ್ಲಿ ಹಲವು ವಾಹನಗಳು ಮುಳುಗಿವೆ. ಅಪಾರ್ಟ್ ಮೆಂಟ್ ಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರ ಪಾಡು ಹೇಳತೀರದಾಗಿದೆ.