ಪಂಕ್ತಿ ಊಟಕ್ಕೆ ಕುಳಿತವರಿಗೆ ನೀರು ಹಾಕುವ ಹೊಸ ವಿಧಾನದ ವಿಡಿಯೋ ವೈರಲ್; ಚರ್ಚೆಗೆ ಗ್ರಾಸವಾಯಿತು ನವೋನ್ವೇಷಣೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಂಕ್ತಿ ಊಟಕ್ಕೆ ಕುಳಿತವರಿಗೆ ನೀರು ಹಾಕುವ ಹೊಸ ವಿಧಾನದ ವಿಡಿಯೋ ವೈರಲ್; ಚರ್ಚೆಗೆ ಗ್ರಾಸವಾಯಿತು ನವೋನ್ವೇಷಣೆ

ಪಂಕ್ತಿ ಊಟಕ್ಕೆ ಕುಳಿತವರಿಗೆ ನೀರು ಹಾಕುವ ಹೊಸ ವಿಧಾನದ ವಿಡಿಯೋ ವೈರಲ್; ಚರ್ಚೆಗೆ ಗ್ರಾಸವಾಯಿತು ನವೋನ್ವೇಷಣೆ

Published Sep 20, 2024 11:44 AM IST Umesh Kumar S
twitter
Published Sep 20, 2024 11:44 AM IST

ಬೆಂಗಳೂರು: ಖಾಸಗಿ ಅಥವಾ ಸಮುದಾಯದ ಕಾರ್ಯಕ್ರಮಗಳಲ್ಲಿ ಊಟ, ಉಪಾಹಾರಕ್ಕೆ ಪ್ಲಾಸ್ಟಿಕ್‌ ಗ್ಲಾಸ್‌, ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆಯಾಗುತ್ತಿರುವುದು ಪದೇಪದೆ ಚರ್ಚೆಗೆ ಒಳಗಾಗುತ್ತಿದೆ. ಇನ್ನು ಗ್ಲಾಸ್‌ಗಳಿಗೆ ನೀರು ಹಾಕುವ ವಿಚಾರ ಬಂದಾಗ ಸ್ವಚ್ಛತೆ ಗಮನಸೆಳೆಯುತ್ತದೆ. ಇಂತಹ ಸನ್ನಿವೇಶದಲ್ಲಿ ಪಂಕ್ತಿ ಊಟಕ್ಕೆ ಕುಳಿತವರಿಗೆ ನೀರು ಹಾಕುವ ಹೊಸ ವಿಧಾನದ ವಿಡಿಯೋ ವೈರಲ್ ಆಗಿದೆ. 10 ಲೀಟರ್ ನೀರಿನ ಕ್ಯಾನ್‌ಗೆ ಪೈಪ್ ಅಳವಡಿಸಿಕೊಂಡು ಪಂಕ್ತಿ ಊಟಕ್ಕೆ ಕುಳಿತವರ ಗ್ಲಾಸ್‌ಗೆ ನೀರು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇದು ಯಾವ ಊರಿನದ್ದು ಎಂಬುದು ಗೊತ್ತಾಗಿಲ್ಲ. ಎಕ್ಸ್ ಖಾತೆಯಲ್ಲಿ ದುರ್ಗಾ ಪ್ರಸಾದ್ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದಾರೆ.

More