ಬಳ್ಳಾರಿ ಜೈಲಿನಿಂದ ಹೊರ ಬರ್ತಿದ್ದಂತೆ ದರ್ಶನ್‌ ತೂಗುದೀಪ್‌ಗೆ ಇಳಿ ತೆಗೆದು ತೆಂಗಿನಕಾಯಿ ಒಡೆದ ಅಭಿಮಾನಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಳ್ಳಾರಿ ಜೈಲಿನಿಂದ ಹೊರ ಬರ್ತಿದ್ದಂತೆ ದರ್ಶನ್‌ ತೂಗುದೀಪ್‌ಗೆ ಇಳಿ ತೆಗೆದು ತೆಂಗಿನಕಾಯಿ ಒಡೆದ ಅಭಿಮಾನಿ

ಬಳ್ಳಾರಿ ಜೈಲಿನಿಂದ ಹೊರ ಬರ್ತಿದ್ದಂತೆ ದರ್ಶನ್‌ ತೂಗುದೀಪ್‌ಗೆ ಇಳಿ ತೆಗೆದು ತೆಂಗಿನಕಾಯಿ ಒಡೆದ ಅಭಿಮಾನಿ

Published Oct 31, 2024 02:46 PM IST Rakshitha Sowmya
twitter
Published Oct 31, 2024 02:46 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 131 ದಿನಗಳಿಂದ ಜೈಲಿನಲ್ಲಿದ್ದ ನಟ ದರ್ಶನ್‌ ತೂಗುದೀಪ್‌ಗೆ ಮಧ್ಯಂತರ ಜಾಮೀನು ದೊರೆತಿದೆ. ಹೈಕೋರ್ಟ್‌ ಕೆಲವೊಂದು ಷರತ್ತುಗಳನ್ನು ವಿಧಿಸಿ ದರ್ಶನ್‌ಗೆ ಜಾಮೀನು ನೀಡಿದೆ. ದರ್ಶನ್‌ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರಿಂದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ ನಿನ್ನೆ ಸಂಜೆ ರಿಲೀಸ್‌ ಆಗಿದ್ದಾರೆ. ಅವರು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್‌ ಎಂದು ಜೈಕಾರ ಹಾಕಿದ್ದಾರೆ. ಅಭಿಮಾನಿಯೊಬ್ಬರು ಇಳಿ ತೆಗೆದು ತೆಂಗಿನಕಾಯಿ ಒಡೆದಿದ್ದಾರೆ. ದರ್ಶನ್‌ ಅಭಿಮಾನಿಗಳತ್ತ ತಿರುಗಿ ಒಂದು ಸ್ಮೈಲ್‌ ಕೊಟ್ಟು ಕಾರು ಹತ್ತಿ ಕುಳಿತಿದ್ದಾರೆ. ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

More