ಯಮ ನಾಳೆ ಯಾರ ಮನೆ ಬಾಗಿಲು ಬೇಕಾದ್ರೂ ತಟ್ಟಬಹುದು; ನಿರ್ದೇಶಕ ಗುರುಪ್ರಸಾದ್‌ ಸಾವಿನ ಬಗ್ಗೆ ಜಗ್ಗೇಶ್‌ ಕಾಮೆಂಟ್, ಲಾಯರ್‌ ಜಗದೀಶ್‌ ಗರಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯಮ ನಾಳೆ ಯಾರ ಮನೆ ಬಾಗಿಲು ಬೇಕಾದ್ರೂ ತಟ್ಟಬಹುದು; ನಿರ್ದೇಶಕ ಗುರುಪ್ರಸಾದ್‌ ಸಾವಿನ ಬಗ್ಗೆ ಜಗ್ಗೇಶ್‌ ಕಾಮೆಂಟ್, ಲಾಯರ್‌ ಜಗದೀಶ್‌ ಗರಂ

ಯಮ ನಾಳೆ ಯಾರ ಮನೆ ಬಾಗಿಲು ಬೇಕಾದ್ರೂ ತಟ್ಟಬಹುದು; ನಿರ್ದೇಶಕ ಗುರುಪ್ರಸಾದ್‌ ಸಾವಿನ ಬಗ್ಗೆ ಜಗ್ಗೇಶ್‌ ಕಾಮೆಂಟ್, ಲಾಯರ್‌ ಜಗದೀಶ್‌ ಗರಂ

Published Nov 04, 2024 01:09 PM IST Rakshitha Sowmya
twitter
Published Nov 04, 2024 01:09 PM IST

ಮಠ, ಡೈರೆಕ್ಟರ್‌ ಸ್ಪೆಷಲ್‌ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಒಂದೆಡೆ ಗುರುಪ್ರಸಾದ್‌ ಸಾವಿಗೆ ಕನ್ನಡ ಚಿತ್ರರಂಗ, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ನಟ ಜಗ್ಗೇಶ್‌, ಗುರುಪ್ರಸಾದ್‌ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಜಗ್ಗೇಶ್‌ ವಿರುದ್ದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ‌ಬಿಗ್‌ಬಾಸ್‌ ಖ್ಯಾತಿಯ ಲಾಯರ್‌ ಜಗದೀಶ್‌ ಕೂಡಾ ಮತ್ತೊಬ್ಬರ ಸಾವಿನಲ್ಲಿ ವಿಕೃತಿ ಮೆರೆಯಬೇಡ ಜಗ್ಗೇಶ್, ಕಾಲಾಯ ತಸ್ಮೈ ನಮಃ. ಯಮ ಇಂದು ಗುರುಪ್ರಸಾದ್‌ ಮನೆ ಬಾಗಿಲು ತಟ್ಟಿದ್ದಾನೆ. ನಾಳೆ ಯಾರ ಮನೆಗಾದರೂ ಬರಬಹುದು. ಕರ್ನಾಟಕದ ಜನರು ನಿನ್ನನ್ನು ನಟ ಎಂದು ಒಪ್ಪಿಕೊಂಡಿರುವುದು ಕಂಡು ನನಗೆ ನಾಚಿಕೆಯಾಗುತ್ತಿದೆ. ಇನ್ನೆಂದಿಗೂ ಯಾರ ಬಗ್ಗೆ ಕೂಡಾ ಈ ರೀತಿ ಮಾತನಾಡಬೇಡ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

More