Guru Bala: ಪ್ರಸ್ತುತ ಯಾವ ರಾಶಿಯವರಿಗೆ ಗುರು ಬಲ ಇದೆ; ಬೃಹಸ್ಪತಿಯನ್ನು ಒಲಿಸಿಕೊಳ್ಳುವ ಮಾರ್ಗ ಏನು, ಗುರುವಿನಿಂದ ಶುಭ ಫಲ ಪಡೆಯುವುದು ಹೇಗೆ?
Jun 28, 2023 06:00 AM IST
ಗುರುಬಲ
ಗುರುವಿಗೆ ಮೇಷ, ಕಟಕ, ಸಿಂಹ, ವೃಶ್ಚಿಕ ಮಿತ್ರ ಕ್ಷೇತ್ರಗಳಾಗುತ್ತವೆ. ಧನಸ್ಸು ರಾಶಿ ಮತ್ತು ಮೀನ ರಾಶಿಗಳು ಸ್ವಕ್ಷೇತ್ರಗಳಾಗುತ್ತವೆ. ವೃಷಭ, ಮಿಥುನ, ಕನ್ಯಾ, ತುಲಾ ರಾಶಿಗಳು ಶತ್ರು ಕ್ಷೇತ್ರಗಳಾಗಿವೆ. ಉಳಿದಂತೆ ಮಕರ ಮತ್ತು ಕುಂಭ ರಾಶಿಗಳು ಸಮಕ್ಷೇತ್ರವಾಗುತ್ತದೆ.
''ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಈ ಮಾತನ್ನು ದಾಸವರೇಣ್ಯರು ಬಲು ಸೊಗಸಾಗಿ ವಿವರಿಸಿದ್ದಾರೆ. ನವಗ್ರಹಗಳು ತಮ್ಮದೇ ಆದ ಪ್ರತ್ಯೇಕ ಗುಣ ಧರ್ಮಗಳನ್ನು ಹೊಂದಿದ್ದರೂ, ಗುರುವಿಗೆ ಅಗ್ರ ಪಟ್ಟವನ್ನು ನೀಡಲಾಗಿದೆ. ದೇವಗುರು ಮತ್ತು ಅಸುರ ಗುರುಗಳು ತಮ್ಮ ತಮ್ಮ ಪಾಲಿನ ಫಲಗಳನ್ನು ನೀಡುತ್ತಾರೆ. ಗೃಹಪ್ರವೇಶ, ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳಿಗೂ ನಾವು ಮೊದಲು ಗುರುಬಲವನ್ನು ನೋಡುತ್ತೇವೆ.
ತಾಜಾ ಫೋಟೊಗಳು
ಪ್ರಸ್ತುತ ಯಾವ ರಾಶಿಗಳಿಗೆ ಗುರುಬಲವಿದೆ
ಗುರುವು ಎರಡು, ಐದು, ಏಳು, ಒಂಬತ್ತು ಮತ್ತು ಹನ್ನೊಂದನೆಯ ಭಾವದಲ್ಲಿ ಗೋಚಾರದಲ್ಲಿ ಸಂಚಾರ ಮಾಡುತ್ತಿದ್ದಲ್ಲಿ ಆಯಾ ರಾಶಿಯವರು ಗುರುಬಲವನ್ನು ಹೊಂದಿರುತ್ತಾರೆ ಎಂದು ತಿಳಿಯಬಹುದು. ಉದಾಹರಣೆಗೆ ಪ್ರಸಕ್ತ ಸನ್ನಿವೇಶದಲ್ಲಿ ಗುರುಬಲವು ಮಿಥುನ ಸಿಂಹ ತುಲಾ ಮತ್ತು ಮೀನ ರಾಶಿಗಳಿಗೆ ಇದೆ. ಗುರುವು ಪ್ರತಿಯೊಬ್ಬರನ್ನು ಸರಿಯಾದ ಮಾರ್ಗದಲ್ಲಿ ನಡೆಯಲು ದಾರಿ ತೋರಿಸುತ್ತಾನೆ.
ಗುರುವಿಗೆ ಮೇಷ, ಕಟಕ, ಸಿಂಹ, ವೃಶ್ಚಿಕ ಮಿತ್ರ ಕ್ಷೇತ್ರಗಳಾಗುತ್ತವೆ. ಧನಸ್ಸು ರಾಶಿ ಮತ್ತು ಮೀನ ರಾಶಿಗಳು ಸ್ವಕ್ಷೇತ್ರಗಳಾಗುತ್ತವೆ. ವೃಷಭ, ಮಿಥುನ, ಕನ್ಯಾ, ತುಲಾ ರಾಶಿಗಳು ಶತ್ರು ಕ್ಷೇತ್ರಗಳಾಗಿವೆ. ಉಳಿದಂತೆ ಮಕರ ಮತ್ತು ಕುಂಭ ರಾಶಿಗಳು ಸಮಕ್ಷೇತ್ರವಾಗುತ್ತದೆ. ಗುರುವು ಕುಂಭದಲ್ಲಿಯೂ ಉಚ್ಚರಾಶಿಯ ಫಲಗಳನ್ನು ನೀಡುತ್ತಾನೆ ಎಂದು ಕೆಲವು ಜೋತಿಷ್ಯ ಶಾಸ್ತ್ರಗಳಲ್ಲಿವೆ. ಗುರುವು ಕಟಕ ರಾಶಿಯಲ್ಲಿ ಉಚ್ಚನಾದರೆ ಮಕರದಲ್ಲಿ ನೀಚನಾಗುತ್ತಾನೆ. ಪರೋಪಕಾರ, ದಾನ ಧರ್ಮ ಬೇರೆಯವರಿಗೆ ಗೌರವ ಕೊಡುವುದು, ನ್ಯಾಯ ತೀರ್ಮಾನ, ಆಯುಷ್ಯ, ವಿದ್ಯೆ ವಿಚಾರ ಸೇರಿ ಮುಂತಾದ ವಿಚಾರಗಳಲ್ಲಿ ಗುರುವು ಆಸಕ್ತಿ ತೋರಿಸುತ್ತಾನೆ.
ಗುರು ಯಾವ ಫಲಗಳನ್ನು ನೀಡುತ್ತಾನೆ
ಸಾಮಾನ್ಯವಾಗಿ ಯಾರ ಜಾತಕದಲ್ಲಿ ಗುರುವು ಶಕ್ತಿಯುತನಾಗಿರುತ್ತಾನೆಯೋ ಅವರು ಯಾವ ಕಾರಣಕ್ಕೂ ಒಂಟಿಯಾಗಿ ಕೆಲಸದಲ್ಲಿ ಮುಂದುವರೆಯುವುದಿಲ್ಲ. ದೇವತಾ ಕಾರ್ಯದಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತಾರೆ. ಹಣದ ತೊಂದರೆ ಬಾರದು. ವಿದೇಶಿ ಕಂಪನಿಗಳಲ್ಲಿ ಇವರಿಗೆ ಉದ್ಯೋಗ ಲಭಿಸುತ್ತದೆ. ಒಂದು ವೇಳೆ ಗುರು ಶಕ್ತಿ ಹೀನನಾಗಿದ್ದಲ್ಲಿ ಕಾಮಾಲೆ ,ಮಧುಮೇಹ, ಅಜೀರ್ಣ ಮುಂತಾದ ತೊಂದರೆಗಳಿಂದ ಬಳಲುತ್ತಾರೆ.
ದೇವಾನಾಂಶ ಋಷೀನಾಂಚ ಗುರು ಕಾಂಚನ ಸನ್ನಿಭಂ , ಬುದ್ಧಿ ಭೂತಂ ತಿಲೋಕೇಶಂ ತಂ ನಮಾಮಿ ಗೃಹಸ್ಪತಿಂ ಈ ಮಂತ್ರವನ್ನು ಪ್ರತಿದಿನ ಪಠಿಸಿದಲ್ಲಿ ಗುರುವು ಜೀವನವನ್ನು ಉನ್ನತ ಶ್ರೇಣಿಯಲ್ಲಿ ನಡೆಸುತ್ತಾನೆ. ಪ್ರತಿ ಗುರುವಾರ ಗುರುವಿಗೆ ಸಂಬಂಧಿಸಿದ ಯಾವುದೇ ಮಂತ್ರವನ್ನು ಜಪಿಸುತ್ತಾ ಅಶ್ವತ್ಥ ವೃಕ್ಷಕ್ಕೆ 12 ಬಾರಿ ಪ್ರದಕ್ಷಿಣೆ ಬರಬೇಕು, ಆನಂತರ ಹಳದಿ ಬಟ್ಟೆ , ಕಡಲೆ ಬೇಳೆ ಅಥವಾ ಕಡಲೆಕಾಳನ್ನು ಸಮರ್ಪಿಸಿದರೆ ಗುರುವಿನಿಂದ ಶುಭ ಫಲಗಳನ್ನು ಪಡೆಯಬಹುದು. ಗುರುವಿನ ದೇವಾಲಯಕ್ಕೆ ಭೇಟಿ ನೀಡಿದಾಗಲೂ ಆರತಿಯನ್ನು ತೆಗೆದುಕೊಂಡ ನಂತರ 12 ಪ್ರದಕ್ಷಿಣೆಗಳನ್ನು ಬರಬೇಕು. ನಂತರ ಅಕ್ಷತೆ ಪಡೆಯಬೇಕು ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಗುರುಬಲ ಇದ್ದಲ್ಲಿ ಹಣದ ತೊಂದರೆ ಉಂಟಾಗದು, ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಬಹುದು.
ಗುರುಬಲ ಪ್ರಾಪ್ತಿಗೆ ಏನು ಮಾಡಬೇಕು?
ಗುರುವಿಗಾಗಿ ಹಯಗ್ರೀವ ತಯಾರಿಸಿ ನೈವೇದ್ಯ ಮಾಡಿ ಸೇವಿಸುವುದರಿಂದ ಶುಭಫಲ ದೊರೆಯುತ್ತದೆ. ಮನೆಯಲ್ಲಿ ಗುರುವಿನ ಪೂಜೆಯನ್ನು ಮಾಡಿ ಬೇಯಿಸಿದ ಕಡಲೆಕಾಳನ್ನು ದಾನ ನೀಡಿದರೆ ವಿಶೇಷ ಫಲಗಳು ಲಭಿಸುತ್ತದೆ . ಜಾತಕದಲ್ಲಿ ಗುರುವು ಶಕ್ತಿಹೀನನಾಗಿದ್ದಲ್ಲಿ ಗುರುವಾರದಂದು ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರೆ ಅದು ಗುರುಬಲಕ್ಕೆ ಸಮನಾಗುವುದು. ಈ ಕಾರಣದಿಂದಲೇ ಮದುವೆ ಉಪನಯನ ಅಥವಾ ಇತರ ಯಾವುದೇ ಮಂಗಳ ಕಾರ್ಯಗಳನ್ನು ಮಾಡುವ ಮುನ್ನ ಕುಟುಂಬದ ಹಿರಿಯರ ಆಶೀರ್ವಾದ ಪಡೆಯುತ್ತೇವೆ. ಗುರುಬಲ ಇರದಿದ್ದರೂ ಗುರು ಹಿರಿಯರ ಆಶೀರ್ವಾದದಿಂದ ನಿಧಾನವಾಗಿ ಗುರುಬಲ ಪ್ರಾಪ್ತಿಯಾಗುತ್ತದೆ.
ವಿಭಾಗ