Chanakya Niti: ಚಾಣಕ್ಯರ ಪ್ರಕಾರ ಈ 4 ಅಭ್ಯಾಸಗಳನ್ನು ಹೊಂದಿರುವವರು ಎಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ, ಇವುಗಳಿಂದ ಇಂದೇ ದೂರಾಗಿ
ಜೀವನದಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತಲ್ಲ. ಆದರೆ ಕೆಲವರು ತಮ್ಮ ಯಶಸ್ಸನ್ನು ತಮ್ಮ ಕೈಯಾರೆ ತಾವೇ ಹಾಳು ಮಾಡಿಕೊಳ್ಳುತ್ತಾರೆ. ಮನುಷ್ಯರಲ್ಲಿ ಇರುವ ಈ ಕೆಲವು ಅಭ್ಯಾಸಗಳು ಎಂದಿಗೂ ಯಶಸ್ಸು ಗಳಿಸಲು ಬಿಡುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಅಂತಹ 4 ಅಭ್ಯಾಸಗಳು ಯಾವುವು ನೋಡಿ.
ಆಚಾರ್ಯ ಚಾಣಕ್ಯರನ್ನು ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಚಾಣಕ್ಯರ ಅಪರಿಮಿತ ಬುದ್ಧಿವಂತಿಕೆಯಿಂದಾಗಿ ಅವರನ್ನು ಕೌಟಿಲ್ಯ ಎಂದೂ ಕರೆಯಲಾಗುತ್ತದೆ. ಚಾಣಕ್ಯರು ನೀತಿಶಾಸ್ತ್ರ ಎಂಬ ಪುಸ್ತಕವನ್ನು ಬರೆದಿದ್ದು, ಇದರಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಸಂಬಂಧ, ಯಶಸ್ಸು, ವೃತ್ತಿ ಹೀಗೆ ಮನುಷ್ಯನ ಜೀವನಕ್ಕೆ ಅವಶ್ಯವಿರುವ ಹಲವು ವಿಚಾರಗಳನ್ನು ಇವರು ನೀತಿಶಾಸ್ತ್ರದಲ್ಲಿ ವಿವರಿಸಿದ್ದರು.
ಚಾಣಕ್ಯರ ನೀತಿಗಳನ್ನು ಜೀವನದಲ್ಲಿ ಅನುಸರಿಸುವ ಮೂಲಕ ನಾವು ಬದುಕಿನಲ್ಲಿ ಸಕಾರಾತ್ಮಕ ಮಾರ್ಗದಲ್ಲಿ ಸಾಗಬಹುದು, ಮಾತ್ರವಲ್ಲ ಯಶಸ್ಸು ಗಳಿಸಬಹುದು. ಜೀವನಕ್ಕೆ ಸರಿಯಾದ ಮಾರ್ಗದರ್ಶನ ಬೇಕು ಎಂದರೂ ಇದನ್ನು ಪಾಲಿಸುವುದು ಅವಶ್ಯ.
ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮನುಷ್ಯನ ನಡವಳಿಕೆಯ ಬಗ್ಗೆಯೂ ವಿವರಿಸಿದ್ದಾರೆ. ಅವರ ಪ್ರಕಾರ ಮನುಷ್ಯನ ಕೆಲವು ನಡವಳಿಕೆಗಳೇ ಅವನ ಸೋಲಿಗೆ ಕಾರಣವಾಗುತ್ತದೆ. ಅಲ್ಲದೇ ಅವನನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ನಮ್ಮಲ್ಲಿ ಉತ್ತಮ ಅಭ್ಯಾಸಗಳಿದ್ದರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ಆದಾಗ್ಯೂ, ಕೆಲವು ಅಭ್ಯಾಸಗಳು ಪ್ರಗತಿಯಲ್ಲಿ ಅಡೆತಡೆಗಳಾಗಿವೆ. ವ್ಯಕ್ತಿಯಲ್ಲಿ ಸೋಮಾರಿತನ ಇರಬಾರದು ಎಂಬುದು ಚಾಣಕ್ಯನ ನಂಬಿಕೆ. ಈ ಅಭ್ಯಾಸದಿಂದಾಗಿ ಅವನು ಜೀವನದಲ್ಲಿ ಮುಂದುವರಿಯುವ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ.
ಭೂತಕಾಲವನ್ನು ಯೋಚಿಸುತ್ತಾ ಕಾಲ ಕಳೆಯುವುದು
ಕೆಲವರು ಭೂತಕಾಲದ ಬಗ್ಗೆ ಪದೇ ಪದೇ ಯೋಚಿಸುವ ಮೂಲಕ ತಮ್ಮ ವರ್ತಮಾನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಭೂತಕಾಲದ ಬಗ್ಗೆಯೇ ಯೋಚಿಸುವ ವ್ಯಕ್ತಿಯು ಸೋಲಿನ ಹಾದಿಯನ್ನು ತಾನೇ ಹುಡುಕಿಕೊಂಡಂತೆ. ವ್ಯಕ್ತಿಯ ಆ ಅಭ್ಯಾಸವು ಅವನಿಗೆ ಅಡ್ಡಿಯಾಗುತ್ತದೆ. ಯಾವುದೇ ಘಟನೆ ಅಥವಾ ಸೋಲಿನಿಂದ ಪಾಠ ಕಲಿತು ಅದರಿಂದ ಮುಂದೆ ಸಾಗಬೇಕೇ ವಿನಹ ಅದರ ಬಗ್ಗೆಯೇ ಯೋಚಿಸುತ್ತಾ ಕೂರಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಸೋಲನ್ನು ಸ್ವೀಕರಿಸದೇ ಇರುವುದು
ವೈಫಲ್ಯಗಳನ್ನು ಸ್ವೀಕರಿಸದ ಅಭ್ಯಾಸವು ಎಂದಿಗೂ ನಮಗೆ ಒಳಿತಲ್ಲ. ಇದರಿಂದ ನಮಗೆ ತೊಂದರೆಯೇ ಹೆಚ್ಚು. ಆಚಾರ್ಯ ಚಾಣಕ್ಯರ ಪ್ರಕಾರ, ಮನುಷ್ಯನು ಯಾವಾಗಲೂ ತನ್ನ ತಪ್ಪುಗಳಿಂದ ಕಲಿಯಬೇಕು. ಇದರಿಂದ ಅವನು ಪದೇ ಪದೇ ಅದೇ ತಪ್ಪನ್ನು ಮಾಡುವುದಿಲ್ಲ. ಅಲ್ಲದೆ, ನೀವು ಯಾವಾಗಲೂ ನಿಮ್ಮ ಮನಸ್ಸಿನಲ್ಲಿ ವಿಷಯಗಳನ್ನು ಸ್ವೀಕರಿಸುವ ಭಾವನೆಯನ್ನು ಹೊಂದಿರಬೇಕು.
ನಕಾರಾತ್ಮಕ ಆಲೋಚನೆ ಮಾಡುತ್ತಿರುವುದು
ನಕಾರಾತ್ಮಕವಾಗಿ ಯೋಚಿಸುವ ಅಭ್ಯಾಸವನ್ನು ಹೊಂದಿರುವ ಜನರು ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಆಚಾರ್ಯ ಚಾಣಕ್ಯ ಹೇಳುವಂತೆ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ಈ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸುತ್ತವೆ, ಅದು ನಂತರ ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ.
ಆತ್ಮವಿಶ್ವಾಸದ ಕೊರತೆ ಹೊಂದಿರುವುದು
ಆಚಾರ್ಯ ಚಾಣಕ್ಯರ ಪ್ರಕಾರ, ಎಲ್ಲದಕ್ಕೂ ಇತರರಲ್ಲಿ ಕ್ಷಮೆಯಾಚಿಸುವ ಜನರು ಆತ್ಮವಿಶ್ವಾಸವನ್ನು ಹೊಂದಿರುವುದಿಲ್ಲ. ಅಂತಹ ಜನರು ಹೃದಯದಲ್ಲಿ ದುರ್ಬಲರು. ಒಬ್ಬ ವ್ಯಕ್ತಿಯು ಯಾವಾಗಲೂ ವಿಷಯಗಳ ಬಗ್ಗೆ ವಿಶ್ವಾಸ ಹೊಂದಿರಬೇಕು ಎಂದು ಅವರು ನಂಬುತ್ತಾರೆ. ಇದರಿಂದ ಸಮಾಜದಲ್ಲಿ ಗೌರವವೂ ಉಳಿಯುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
ವಿಭಾಗ