logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Guru Chandal Yoga: ಚೈತ್ರ ನವರಾತ್ರಿಯ ಒಂದು ತಿಂಗಳ ನಂತರ, ಈ ರಾಶಿಯಲ್ಲಿ ಗುರು ಚಂಡಾಲ ಯೋಗ; ಶನಿಯ ದೃಷ್ಟಿಯೂ ಇದೆ!

Guru Chandal Yoga: ಚೈತ್ರ ನವರಾತ್ರಿಯ ಒಂದು ತಿಂಗಳ ನಂತರ, ಈ ರಾಶಿಯಲ್ಲಿ ಗುರು ಚಂಡಾಲ ಯೋಗ; ಶನಿಯ ದೃಷ್ಟಿಯೂ ಇದೆ!

HT Kannada Desk HT Kannada

Mar 23, 2023 05:46 AM IST

google News

ಗುರು ಚಂಡಾಲ ಯೋಗ 2023

  • Guru Chandal Yoga: ಚೈತ್ರ ನವರಾತ್ರಿಯ ಒಂದು ತಿಂಗಳ ನಂತರ, ಮೇಷದಲ್ಲಿ ಎರಡು ಗ್ರಹಗಳ ಭೇಟಿಯಿಂದಾಗಿ ಗುರು ಚಂಡಾಲ ಯೋಗವು ರೂಪುಗೊಳ್ಳುತ್ತಿದೆ. ವಾಸ್ತವವಾಗಿ ಏಪ್ರಿಲ್ 22 ರಂದು ಗುರು ಈ ಮೇಷ ರಾಶಿಯಲ್ಲಿ ಪ್ರವೇಶ ಮಾಡುತ್ತಿದ್ಧಾನೆ. ಈಗಾಗಲೇ ರಾಹು ಮೇಷರಾಶಿಯಲ್ಲಿದ್ದಾನೆ.

ಗುರು ಚಂಡಾಲ ಯೋಗ 2023
ಗುರು ಚಂಡಾಲ ಯೋಗ 2023

ಚೈತ್ರ ನವರಾತ್ರಿ ಸಂಪನ್ನಗೊಂಡು ಒಂದು ತಿಂಗಳ ನಂತರ, ಮೇಷದಲ್ಲಿ ಎರಡು ಗ್ರಹಗಳ ಭೇಟಿಯ ಕಾರಣ ಗುರು ಚಂಡಾಲ ಯೋಗವು ರೂಪುಗೊಳ್ಳುತ್ತಿದೆ. ವಾಸ್ತವವಾಗಿ ಏಪ್ರಿಲ್ 22 ರಂದು ಗುರು ಮೇಷ ರಾಶಿಯಲ್ಲಿರುತ್ತಾನೆ.

ತಾಜಾ ಫೋಟೊಗಳು

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ; ನಾಳಿನ ದಿನಭವಿಷ್ಯ

Dec 17, 2024 05:14 PM

ಹೌದು, ರಾಹು ಈಗಾಗಲೇ ಈ ರಾಶಿಯಲ್ಲಿದ್ದಾನೆ. ಕೆಲವು ದಿನಗಳ ನಂತರ, ಮೀನವನ್ನು ಬಿಟ್ಟು, ಸೂರ್ಯನೂ ಈ ರಾಶಿಯನ್ನು ತಲುಪುತ್ತಾನೆ. ಈ ಯೋಗ 6 ತಿಂಗಳು ತನಕ ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಗುರು ಚಂಡಾಲ ಯೋಗದ ರಚನೆಯಿಂದಾಗಿ, ಗುರುವಿನ ಪ್ರಭಾವವು ವ್ಯಕ್ತಿಯ ಜಾತಕದಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ರಾಹುವು ಗುರುವಿನ ಶುಭ ಪರಿಣಾಮಗಳನ್ನು ಕಡಿಮೆ ಮಾಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಪರಿಣಾಮಗಳು ಕಂಡುಬರುತ್ತವೆ. ಯಾರ ಜಾತಕದಲ್ಲಿ ಈ ಯೋಗವು ರೂಪುಗೊಳ್ಳುತ್ತದೆಯೋ ಅವರು ಈ ಯೋಗದ ರಚನೆಯಿಂದಾಗಿ, ಧರ್ಮ ನಿರಾಸಕ್ತಿ ಹೊಂದುತ್ತಾರೆ. ಬೂಟಾಟಿಕೆ ಮತ್ತು ವಂಚನೆಯಲ್ಲಿ ತೊಡಗುತ್ತಾರೆ.

ಅಷ್ಟೇ ಅಲ್ಲ, ಈ ಗುರು ಚಂಡಾಲ ಯೋಗದ ಜತೆಗೆ ಶನಿಯ ದೃಷ್ಟಿಯೂ ಈ ಯೋಗದ ಮೇಲೆ ಬೀಳಲಿದ್ದು, ವಿವಿಧ ರಾಶಿಯವರು ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಗುರು ಚಂಡಾಲ ಯೋಗದ ರಚನೆಯಿಂದ ಯಾವ ರಾಶಿಯವರಿಗೆ ಈ ಯೋಗದಲ್ಲಿ ಗುರು ಬಲಹೀನನಾಗುತ್ತಾನೆ ಮತ್ತು ರಾಹು ಯಾವ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಈ ಸಂದರ್ಭದಲ್ಲಿ ರಾಹುವು ಗುರುವಿನ ಎಲ್ಲ ಶಕ್ತಿಯುತ ಪರಿಣಾಮಗಳನ್ನು ಕಡಿಮೆ ಮಾಡುತ್ತಾನೆ. ಇದರಿಂದಾಗಿ ಗುರುವು ಕಡಿಮೆ ಪರಿಣಾಮಗಳಿಂದ ಹೆಚ್ಚು ಅತಿ ಅಪಾಯಕಾರಿ ರೋಗಗಳನ್ನು ಹರಡಬಹುದು.

ದೇಶದ ದೃಷ್ಟಿಯಿಂದಲೂ ನೋಡಿದರೆ ಈ ಪರಿಸ್ಥಿತಿ ಸರಿಯಿಲ್ಲ. ಗುರು ಚಂಡಾಲ ಯೋಗದ ವೇಳೆ ಒಟ್ಟಿನಲ್ಲಿ ಬಿಕ್ಕಟ್ಟಿನ ಕಾಲ ಎಂದೇ ಹೇಳಬಹುದು.

ಆದರೆ ಸೂರ್ಯನ ನಿರ್ಗಮನದ ನಂತರ ಪರಿಸ್ಥಿತಿ ಸುಧಾರಿಸುತ್ತದೆ. 6 ತಿಂಗಳ ನಂತರ ರಾಹು ಕೂಡ ಮೇಷದಿಂದ ಹೊರಡುತ್ತಾನೆ. ನಂತರ ಗುರು ಚಂಡಾಲ ಯೋಗವು ಕೊನೆಗೊಳ್ಳುತ್ತದೆ.

ಈ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ಮಾಹಿತಿಯನ್ನು ತಿಳಿವಳಿಕೆಗಾಗಿ ನೀಡಲಾಗಿದೆ. ವೈಯಕ್ತಿಕ ನಿಖರ ರಾಶಿಫಲ ತಿಳಿಯಲು ಜನ್ಮಕುಂಡಲಿಯೊಂದಿಗೆ ಜ್ಯೋತಿಷ್ಯ ಶಾಸ್ತ್ರ ಪರಿಣತರನ್ನು ಭೇಟಿಯಾಗುವುದು ಉತ್ತಮ.

112 ವರ್ಷಗಳ ಬಳಿಕ 5 ಪ್ರಮುಖ ರಾಜಯೋಗ!; 4 ರಾಶಿಯವರಿಗೆ ಇದು ಅದೃಷ್ಟ ಯೋಗ!

5 Auspicious Rajyoga: ಹೌದು.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 112 ವರ್ಷಗಳ ನಂತರ ಪಂಚ ಮಹಾ ರಾಜಯೋಗಗಳು ಎದುರಾಗಿವೆ. ಇದರ ಪರಿಣಾಮ 4 ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಬಾರಿ ಈ ರಾಶಿಯವರಿಗೆ ಹಣದ ಕೊರತೆ ಕಡಿಮೆಯಾಗಲಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

8 ದಿನಗಳ ಆರ್ಥಿಕ ಅದೃಷ್ಟ, ನಂತರ ಸುವರ್ಣ ಆಶ್ಚರ್ಯ! ಬುಧ ಸಂಕ್ರಮಣದಲ್ಲಿ ಯಾವ ರಾಶಿಯವರು ಅದೃಷ್ಟಶಾಲಿಗಳು

Budh Gochar Lucky Zodiac Signs: ಇದೇ ಮಾರ್ಚ್ 31 ರಂದು ಬುಧನ ಪಥ ಬದಲಾಗಲಿದೆ. ಅಂದರೆ ನವರಾತ್ರಿಯ ನಂತರದ ಹತ್ತನೇ ದಿನದಿಂದ ನವದುರ್ಗೆಯರ ಪೂಜೆಯ ನಂತರ ಈ ಮಂಗಳಕರ ಯೋಗ ಪ್ರಾರಂಭವಾಗುತ್ತದೆ. 3 ರಾಶಿಚಕ್ರದವರು ಈ ಸಮಯದಲ್ಲಿ ಉತ್ತಮ ಲಾಭಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ