ರಾತ್ರಿ ನಿದ್ರೆ ಬರದೆ ಹಿಂಸೆ ಅನುಭವಿಸುತ್ತಿದ್ದೀರಾ, ದು:ಸ್ವಪ್ನ ಕಾಡುತ್ತಿದ್ಯಾ; ಸಮಸ್ಯೆ ಪರಿಹಾರಕ್ಕೆ ಈ ವಾಸ್ತು ಟಿಪ್ಸ್‌ ನಿಮಗಾಗಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾತ್ರಿ ನಿದ್ರೆ ಬರದೆ ಹಿಂಸೆ ಅನುಭವಿಸುತ್ತಿದ್ದೀರಾ, ದು:ಸ್ವಪ್ನ ಕಾಡುತ್ತಿದ್ಯಾ; ಸಮಸ್ಯೆ ಪರಿಹಾರಕ್ಕೆ ಈ ವಾಸ್ತು ಟಿಪ್ಸ್‌ ನಿಮಗಾಗಿ

ರಾತ್ರಿ ನಿದ್ರೆ ಬರದೆ ಹಿಂಸೆ ಅನುಭವಿಸುತ್ತಿದ್ದೀರಾ, ದು:ಸ್ವಪ್ನ ಕಾಡುತ್ತಿದ್ಯಾ; ಸಮಸ್ಯೆ ಪರಿಹಾರಕ್ಕೆ ಈ ವಾಸ್ತು ಟಿಪ್ಸ್‌ ನಿಮಗಾಗಿ

ಬಹಳಷ್ಟು ಜನರು ರಾತ್ರಿ ನಿದ್ರಾ ಹೀನತೆಯಿಂದ ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಅವರ ಆಹಾರ ಕ್ರಮ ಜೀವನ ಶೈಲಿ ಕಾರಣವಾದರೆ ಕೆಲವೊಮ್ಮೆ ವಾಸ್ತು ದೋಷಗಳೂ ಕಾರಣವಾಗಬಹುದು. ಉತ್ತಮ ನಿದ್ರೆ ಆವರಿಸಲು ಈ ವಾಸ್ತು ಸಲಹೆಗಳನ್ನು ಫಾಲೋ ಮಾಡಿ.

ರಾತ್ರಿ ನಿದ್ರೆ ಬರದೆ ಹಿಂಸೆ ಅನುಭವಿಸುತ್ತಿದ್ದೀರಾ, ದು:ಸ್ವಪ್ನ ಕಾಡುತ್ತಿದ್ಯಾ; ಸಮಸ್ಯೆ ಪರಿಹಾರಕ್ಕೆ ಈ ವಾಸ್ತು ಟಿಪ್ಸ್‌ ನಿಮಗಾಗಿ
ರಾತ್ರಿ ನಿದ್ರೆ ಬರದೆ ಹಿಂಸೆ ಅನುಭವಿಸುತ್ತಿದ್ದೀರಾ, ದು:ಸ್ವಪ್ನ ಕಾಡುತ್ತಿದ್ಯಾ; ಸಮಸ್ಯೆ ಪರಿಹಾರಕ್ಕೆ ಈ ವಾಸ್ತು ಟಿಪ್ಸ್‌ ನಿಮಗಾಗಿ

ಬೆಳಗಿನಿಂದ ಮನೆ ಕೆಲಸ, ಕಚೇರಿ ಒತ್ತಡ ಇನ್ನಿತರ ಕೆಲಸಗಳ ನಡುವೆ ದಣಿವಾಗಿ ಒಮ್ಮೆ ದಿಂಬಿಗೆ ತಲೆ ಕೊಟ್ಟರೆ ಸಾಕು ಎನಿಸುತ್ತದೆ. ನಿದ್ರೆ ಮಾಡಿ ಎದ್ದರೆ ಬಹಳ ರಿಲಾಕ್ಸ್‌ ಎನಿಸುತ್ತದೆ. ಆದರೆ ಕೆಲವರಿಗೆ ಬೆಳಗ್ಗೆ ಎಷ್ಟೇ ದಣಿವಾಗಿದ್ದರೂ ರಾತ್ರಿ ನಿದ್ರೆ ಬರುವುದಿಲ್ಲ. ರಾತ್ರಿಯಿಡೀ ನಿದ್ರೆ ಬಾರದೆ ಒದ್ದಾಡುತ್ತಾರೆ. ಹೀಗೆ ನಿದ್ರಾಹೀನತೆಯಿಂದ ಬಳಲುವವರಿಗೆ ಮುಂದೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು.

ನಿದ್ರಾಹೀನತೆಗೆ ವಾಸ್ತು ಪರಿಹಾರಗಳು

ನಿದ್ರೆಯು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ ವಾಸ್ತು ಪರಿಹಾರಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಹುದು. ನೀವು ಕೆಲವೊಂದು ವಸ್ತುಗಳನ್ನು ನೀವು ಮಲಗುವ ಸ್ಥಳದಲ್ಲಿ ಇರಿಸಿಕೊಂಡರೆ ನಿಮಗೆ ಉತ್ತಮ ನಿದ್ರೆಯೂ ಬರುತ್ತದೆ. ನಿಮ್ಮ ವೈಯಕ್ತಿಕ ಜೀವನ, ಮನೆಯ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಕೂಡಾ ಬೀರುತ್ತದೆ. ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಕೂಡಾ ನೀಡುತ್ತದೆ. ಹಾಗಾದರೆ ಮಲಗುವ ಮುನ್ನ ನಿಮ್ಮ ಹಾಸಿಗೆಯ ಪಕ್ಕದಲ್ಲಿ ನೀವು ಯಾವ ವಸ್ತುಗಳು ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

  • ಮಲಗುವ ಮುನ್ನ ಮಲ್ಲಿಗೆ, ಸಂಪಿಗೆ, ಸುಗಂಧರಾಜ, ಪಾರಿಜಾತ, ಮರಳೆ ಸೇರಿದಂತೆ ಪರಿಮಳಯುಕ್ತ ಹೂವುಗಳನ್ನು ದಿಂಬಿನ ಬಳಿ ಇಡಬೇಕು. ಇದು ವಾತಾವರಣವನ್ನು ಸುಧಾರಿಸುವುದು ಮಾತ್ರವಲ್ಲದೆ ಶುಕ್ರನ ಪ್ರಭಾವವನ್ನು ಹೆಚ್ಚಿಸುತ್ತದೆ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಈ ಪರಿಹಾರವನ್ನು ಅನುಸರಿಸುವ ಮೂಲಕ ವ್ಯಕ್ತಿಯು ಮಾನಸಿಕ ಶಾಂತಿಯನ್ನು ಅನುಭವಿಸುತ್ತಾನೆ. ಇದಲ್ಲದೆ, ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳಲು ಕೂಡಾ ಇದು ಉತ್ತಮ ಪರಿಹಾರವಾಗಿದೆ.
  • ಮಲಗುವ ಸಮಯದಲ್ಲಿ, ನಿಮ್ಮ ಹಾಸಿಗೆಯ ಪಕ್ಕದಲ್ಲಿ ನೀರು ತುಂಬಿದ ತಾಮ್ರದ ಚೊಂಬು ಅಥವಾ ಯಾವುದೇ ಪಾತ್ರೆಯನ್ನು ಇಡಿ. ಮರುದಿನ ಬೆಳಗ್ಗೆ ಈ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಮರ ಅಥವಾ ಗಿಡಕ್ಕೆ ಸುರಿಯಿರಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹಾಗೂ ಉತ್ತಮ ನಿದ್ರೆ ಬರುತ್ತದೆ. ನಿಮ್ಮ ಮಾನಸಿಕ ಆರೋಗ್ಯ ಕೂಡಾ ಸುಧಾರಿಸುತ್ತದೆ.
  • ಕುಟುಂಬದ ಸದಸ್ಯರು, ಮಕ್ಕಳು ನಿದ್ರೆ ಮಾಡುವಾಗ ಒಮ್ಮೆಲೇ ಬೆಚ್ಚುತ್ತಾ ಎಚ್ಚರಗೊಂಡರೆ ಅವರ ದಿಂಬಿನ ಕೆಳಗೆ ಕಬ್ಬಿಣದಿಂದ ಮಾಡಿದ ಯಾವ ವಸ್ತುವನ್ನಾದರೂ ಇಟ್ಟುಕೊಳ್ಳಬಹುದು. ಈ ಪರಿಹಾರವನ್ನು ಅನುಸರಿಸುವುದರಿಂದ ಭಯಾನಕ ಕನಸುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಮಲಗುವ ಸಮಯದಲ್ಲಿ, ಒಂದು ಬಟ್ಟಲಿನಲ್ಲಿ ಕಲ್ಲು ಉಪ್ಪು ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿ ಮತ್ತು ಅದನ್ನು ನಿಮ್ಮ ಹಾಸಿಗೆಯ ಬಳಿ ಇರಿಸಿ. ಇದರಿಂದ ನಕಾರಾತ್ಮಕತೆ ತೊಲಗಿ ನೀವು ಉತ್ತಮ ನಿದ್ರೆಗೆ ಜಾರುತ್ತೀರ.

ಇದನ್ನೂ ಓದಿ: ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚಿದರೆ ಹಲವು ಶುಭಫಲ; ಪ್ರತಿ ಸೋಮವಾರ ಶಿವನಿಗೆ ಹಿಪ್ಪೆ ಎಣ್ಣೆಯ ದೀಪದಾರತಿ ಮಾಡಿರೋ

  • ನೀವು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿ ಭಾನುವಾರ ಒಂದು ಲೋಟದಲ್ಲಿ ಹಾಲನ್ನು ತುಂಬಿಸಿ ಮತ್ತು ಮಲಗುವಾಗ ನಿಮ್ಮ ಹಾಸಿಗೆಯ ಬಳಿ ಇರಿಸಿ. ಮರುದಿನ ಬೆಳಿಗ್ಗೆ ಸ್ನಾನ ಇತ್ಯಾದಿಗಳ ನಂತರ, ಈ ಹಾಲನ್ನು ಎಕ್ಕದ ಮರದ ಬೇರಿಗೆ ಸುರಿಯಿರಿ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಬಹುದು.
  • ದಿಂಬಿನ ಕೆಳಗೆ ಮೆಂತ್ಯ ಕಾಳುಗಳನ್ನು ಇಟ್ಟು ಮಲಗುವುದರಿಂದ ರಾಹುದೋಷ ಕಡಿಮೆಯಾಗುತ್ತದೆ ಮತ್ತು ದುಃಸ್ವಪ್ನ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ. ಹಾಗೇ ನಿದ್ರಾಹೀನತೆಯಿಂದ ಬಳಲುತ್ತಿರುವವರು ದಿಂಬಿನ ಕೆಳಗೆ ಹಸಿರು ಏಲಕ್ಕಿಯನ್ನು ಇಟ್ಟುಕೊಂಡು ಮಲಗಿದರೆ ಉತ್ತಮ ನಿದ್ರೆ ಬರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.