logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ekadanta Sankashti Chaturthi: ಇಂದು ಏಕದಂತ ಸಂಕಷ್ಟಹರ ಚತುರ್ಥಿ, ಚಂದ್ರೋದಯದ ಸಮಯವೇನು?; ಮುಹೂರ್ತ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ

Ekadanta Sankashti Chaturthi: ಇಂದು ಏಕದಂತ ಸಂಕಷ್ಟಹರ ಚತುರ್ಥಿ, ಚಂದ್ರೋದಯದ ಸಮಯವೇನು?; ಮುಹೂರ್ತ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ

Rakshitha Sowmya HT Kannada

May 26, 2024 09:16 AM IST

google News

ಈ ಬಾರಿ ಸಂಕಷ್ಟಹರ ಚತುರ್ಥಿ ಯಾವಾಗ, ಚಂದ್ರೋದಯದ ಸಮಯವೇನು; ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ

  • ಇಂದು (ಮೇ 26, ಭಾನುವಾರ( ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಏಕದಂತ ಸಂಕಷ್ಟ ಚತುರ್ಥಿಯ ಪೂಜಾ ಸಮಯ, ಶುಭ ಮುಹೂರ್ತ, ಚಂದ್ರೋದಯ ಹಾಗೂ ಗಣೇಶ ಆರತಿ ಬಗ್ಗೆ ಇಲ್ಲಿ ವಿವರವಿದೆ.  

ಈ ಬಾರಿ ಸಂಕಷ್ಟಹರ ಚತುರ್ಥಿ ಯಾವಾಗ, ಚಂದ್ರೋದಯದ ಸಮಯವೇನು; ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ
ಈ ಬಾರಿ ಸಂಕಷ್ಟಹರ ಚತುರ್ಥಿ ಯಾವಾಗ, ಚಂದ್ರೋದಯದ ಸಮಯವೇನು; ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ (PC: Pixabay)

ಪ್ರತಿ ತಿಂಗಳು ಹುಣ್ಣಿಮೆಯಾದ ನಾಲ್ಕನೇ ದಿನದಂದು ಸಂಕಷ್ಟಹರ ಚತುರ್ಥಿ ಬರುತ್ತದೆ. ಈ ದಿನ ಭಕ್ತರು ವಿಘ್ನ ನಿವಾರಕ ಗಣೇಶನನ್ನು ಪೂಜಿಸುತ್ತಾರೆ. ವಿನಾಯಕನನ್ನು ಪ್ರಥಮ ಪೂಜೆಗೆ ಅಧಿಪತಿ ಎಂದು ಕರೆಯಲಾಗುತ್ತದೆ. ಇಂಥ ಏಕದಂತನ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಈ ಬಾರಿ ಮೇ 26, ಭಾನುವಾರ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮೇ ತಿಂಗಳ ಈ ಚತುರ್ಥಿಯನ್ನು ಏಕದಂತ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುವುದು. ತಾಯಂದಿರು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ, ಮತ್ತು ಸಂತಾನ ಪ್ರಾಪ್ತಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಹಿರಿಯರು, ಕಿರಿಯರು ಎನ್ನದೆ ಸಂಕಷ್ಟಹರ ಚತುರ್ಥಿಯನ್ನು ತಮ್ಮ ಇಷ್ಟಾರ್ಥಸಿದ್ದಿಗಾಗಿ ಎಲ್ಲರೂ ಆಚರಿಸುತ್ತಾರೆ. ಈ ದಿನ ಶ್ರೀ ಗಣೇಶ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ. ಏಕದಂತ ಸಂಕಷ್ಟಹರ ಚತುರ್ಥಿ ಪೂಜೆ, ತಿಥಿ, ಮಂತ್ರ, ಶುಭ ಮುಹೂರ್ತ, ಚಂದ್ರೋದಯದ ಸಮಯ ಮತ್ತು ಆರತಿಯ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಏಕದಂತ ಸಂಕಷ್ಟಹರ ಚತುರ್ಥಿಯ ಶುಭ ಸಮಯ

ಸಂಕಷ್ಟ ಚತುರ್ಥಿ ತಿಥಿಯು 26 ಮೇ 26 ಭಾನುವಾರ ಸಂಜೆ 06:06 ಕ್ಕೆ ಪ್ರಾರಂಭವಾಗುತ್ತದೆ, ಮರುದಿನ, ಅಂದರೆ ಮೇ 27 ಸಂಜೆ 04:53 ಕ್ಕೆ ಕೊನೆಗೊಳ್ಳುತ್ತದೆ. ದೃಕ್ ಪಂಚಾಂಗದ ಪ್ರಕಾರ, ಭಾನುವಾರ ರಾತ್ರಿ ಚಂದ್ರೋದಯವು ಮೇ 26 ರಂದು ರಾತ್ರಿ 10:13 ಕ್ಕೆ ಸಂಭವಿಸುತ್ತದೆ. ಆದರೆ ವಿವಿಧ ನಗರಗಳಲ್ಲಿ

ಚಂದ್ರೋದಯದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು. ಚಂದ್ರನ ದರ್ಶನ ಮತ್ತು ಪೂಜೆಯ ನಂತರವೇ ಉಪವಾಸ ಮುರಿಯಬೇಕು. ಆಗ ಮಾತ್ರ ನಿಮಗೆ ವ್ರತದ ಸಂಪೂರ್ಣ ಪ್ರಯೋಜನ ದೊರೆಯುತ್ತದೆ.

ಗಣೇಶನನ್ನು ಯಾವ ರೀತಿ ಪೂಜಿಸಬೇಕು?

ಆ ದಿನ ಮಡಿಯುಟ್ಟು ಮನೆ, ದೇವರಗುಡಿಯನ್ನು ಸ್ವಚ್ಛಗೊಳಿಸಿ. ಗಣೇಶನಿಗೆ ಜಲಾಭಿಷೇಕ ಮಾಡಿ. ಗಣೇಶನಿಗೆ ಹಳದಿ ಚಂದನವನ್ನು ಲೇಪಿಸಿ ಹೂಗಳನ್ನು ಅರ್ಪಿಸಿ. ಗರಿಕೆ, ಬಿಳಿ ಎಕ್ಕದ ಹೂವಿನ ಹಾರ ಹಾಕಿ ನೈವೇದ್ಯ ಇಟ್ಟು ಧೂಪ, ದೀಪ, ಆರತಿ ಬೆಳಗಿ ಬೆಳಗಿನ ಪೂಜೆಯನ್ನು ಮುಗಿಸಿ. ಸಾಧ್ಯವಾದರೆ ಎಳ್ಳಿನ ಉಂಡೆ ಅಥವಾ, ಮೋದಕವನ್ನು ಗಣೇಶನಿಗೆ ನೈವೇದ್ಯವನ್ನಾಗಿ ಅರ್ಪಿಸಿ. ಸಂಜೆ ಮತ್ತೆ ಶುಭ್ರರಾಗಿ ಗಣೇಶನ ಮುಂದೆ ದೀಪ ಹಚ್ಚಿ ಆರತಿ ಬೆಳಗಿ. ಓಂ ಗಂ ಗಣಪತಯೇ ಎಂಬ ಮಂತ್ರವನ್ನು ಪಠಿಸಿ. ಏಕದಂತೆ ಸಂಕಷ್ಟಹರ ಚತುರ್ಥಿಯನ್ನು ಪಠಿಸಿ. ಗಣೇಶನಿಗೆ ಆರತಿ ಮಾಡಿ, ಚಂದ್ರೋದಯವಾದ ನಂತರ ಚಂದ್ರನನ್ನು ನೋಡಿ ಆರತಿ ಬೆಳಗಿ. ಲಘು ಉಪಹಾರ ಮಾಡುವ ಮೂಲಕ ಉಪವಾಸ ತ್ಯಜಿಸಿ.

ಗಣೇಶ ಆರತಿ ಮಂತ್ರ

ಗಣೇಶನಿಗೆ ಆರತಿ ಮಾಡುವಾಗ ಈ ಸ್ತೋತ್ರ ಹೇಳಿ

ಜಯವೆನ್ನಿರಿ ಜಯವೆನ್ನಿರಿ ಮಂಗಳ ಮೂರುತಿಗೆ, ಮೋದಕ ಹಸ್ತನಿಗೆ

ಜಯವೆನ್ನಿರಿ ಶಿವನಂದನ ಸಿದ್ದಗಣೇಶನಿಗೆ ಜಯವೆನ್ನಿರಿ ಜಯವೆನ್ನಿರಿ

ಮೂಸಿಕವಾಹನ ಗಜಮುಖಿ ಗೌರಿಸುತ ಗಣಪ ಗಣನಾಯಕ ಠೊಣಪ

ಧನಕನಕವ ದಯಪಾಲಿಸೋ ಹೇರಂಭ ಬೆನಕ ಜಯವೆನ್ನಿರಿ ಜಯವೆನ್ನಿರಿ

ಅಷ್ಟವಿನಾಯಕ ಕರಿಮುಖ ಲಂಬೋದರ ದೇವಾ ಪೀತಾಂಬರ ದೇಹ

ಇಷ್ಟ ನೆರವೇರಿಸೋ ಸಂಕಷ್ಟಹರಗೇ ಜಯವೆನ್ನಿರಿ ಜಯವೆನ್ನಿರಿ

ಗುರುಪೂಜಿತ ಸುರವಂತಿತ ವಿಘ್ನಹರ ಗಣಪಾ, ಮನ್ನಿಸಿಬಿಡು ತಪ್ಪಾ

ಶರಣೆಂಬುವು ಕರುಣೆಯ ತೋರೋ ಗಣಪತಿ ಬಪ್ಪಾ ಜಯವೆನ್ನಿರಿ ಜಯವೆನ್ನಿರಿ

ಜಯವೆನ್ನಿರಿ ಜಯವೆನ್ನಿರಿ ಮಂಗಳ ಮೂರುತಿಗೆ, ಮೋದಕ ಹಸ್ತನಿಗೆ

ಜಯವೆನ್ನಿರಿ ಶಿವನಂದನ ಸಿದ್ದಗಣೇಶನಿಗೆ ಜಯವೆನ್ನಿರಿ ಜಯವೆನ್ನಿರಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ