logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಕಿರು ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ

ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಕಿರು ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ

Raghavendra M Y HT Kannada

Jun 24, 2024 08:00 AM IST

google News

ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಕಿರು ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ

    • ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಮಧ್ಯದ ಕಿರು ಬೆರಳು ಮಹತ್ವ ಏನು? ಈ ಬೆರಳಿಗೆ ಇರುವ ಬೇರೆ ಹೆಸರುಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)
ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಕಿರು ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ
ಕೈ ಬೆರಳುಗಳಿಂದಲೂ ಅದೃಷ್ಟ ನಿರ್ಧಾರ; ಕಿರು ಬೆರಳಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ

ಬೆರಳುಗಳಲ್ಲಿಯೇ ನಾಜೂಕದ ಹೆಚ್ಚು ಸುಂದರವಾದ ಬೆರಳೆಂದರೆ ನಮ್ಮ ಕಿರುಬೆರಳು. ಹೆಬ್ಬೆಟ್ಟಿಗಿಂತ ಉದ್ದ ಮತ್ತು ಉಳಿದ ಬೆರಳುಗಳಿಗಿಂತ ಪುಟ್ಟದಾದ ಆಕಾರವುಳ್ಳ ಈ ಬೆರಳು ಹೆಬ್ಬೆಟ್ಟಿನ ವಿನಹ ಉಳಿದ ಮೂರು ಬೆರಳುಗಳಿಗೆ ಇದು ಬೆನ್ನೆಲುಬು ಎಂದರು ತಪ್ಪಿಲ್ಲ. ಕಾರಣ ಕಿರು ಬೆರಳಿನಲ್ಲಿರುವ ಶಕ್ತಿ ಕಡಿಮೆಯಾದರೂ ಅದರ ಯುಕ್ತಿ ಅಪಾರ. ಕೆಲವು ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಕಿರುಬೆರಳು ಬುಧನ ಪ್ರಭಾವಕ್ಕೆ ಒಳಗಾಗುತ್ತದೆ. ಆದರೆ ಇನ್ನೂ ಕೆಲವು ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಕಿರುಬೆರಳನ್ನು ಬುಧ ಮತ್ತು ಶುಕ್ರಗ್ರಹಗಳ ಸಂಯೋಗಕ್ಕೆ ಹೋಲಿಸಲಾಗುತ್ತದೆ. ಈ ಕಾರಣದಿಂದಲೇ ಬುಧನ ಪಚ್ಚೆಯ ಉಂಗುರ ಮತ್ತು ಶುಕ್ರನ ವಜ್ರದ ಉಂಗುರಗಳನ್ನು ಕಿರು ಬೆರಳುಗಳಲ್ಲಿ ಧರಿಸುತ್ತಾರೆ. ಯಾರ ಜನ್ಮ ಕುಂಡಲಿಯಲ್ಲಿ ಬುಧನು ಶುಕ್ರನೊಂದಿಗೆ ಸುಸ್ಥಿತಿಯಲ್ಲಿ ಇರುತ್ತಾನೋ ಅಂತಹ ಜಾತಕರು ಕಷ್ಟನಷ್ಟಗಳಿಂದ ದೂರವಿರುತ್ತಾರೆ. ಅಪಾರವಾದಂತಹ ವಿದ್ಯಾ ಬುದ್ಧಿ ಅವರಿಗೆ ಇರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಕಿರುಬೆರಳು ಚೂಪಾಗಿ ಮತ್ತು ಉದ್ಯವಾಗಿ ಇದ್ದರೆ ಅಂತಹ ವ್ಯಕ್ತಿಯು ಯಾವುದೇ ಕಷ್ಟ ನಷ್ಟಗಳು ಎದುರಾದರೂ ತನ್ನಲ್ಲಿರುವ ಅಪಾರ ಬುದ್ಧಿವಂತಿಕೆಯಿಂದ ಜಯಶೀಲನಾಗುತ್ತಾನೆ. ಸಾಮಾನ್ಯವಾಗಿ ಇವನನ್ನು ಕಷ್ಟಗಳು ಹುಡುಕಿಕೊಂಡು ಬರುತ್ತವೆ, ಆದರೆ ಬೆದರುವುದಿಲ್ಲ. ಶತ್ರುಗಳನ್ನು ಹಿಮ್ಯಟ್ಟಿಸುವಲ್ಲಿ ಇಂತಹವರು ಪ್ರಥಮವಾಗಿರುತ್ತಾರೆ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನವೇ ಅದಕ್ಕೆ ಸಂಬಂಧಪಟ್ಟಂತೆ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಾರೆ. ಇವರ ಕಾರ್ಯನೈಪುಣ್ಯತೆಗೆ ಮೆಚ್ಚಿ ಎಲ್ಲರೂ ಇವರ ಸ್ನೇಹವನ್ನು ಬಯಸುತ್ತಾರೆ.

ಕಲೆಗೆ ತಕ್ಕಸ್ಥಾನಮಾನ ದೊರೆಯುವವರೆಗೂ ಸಾಧನೆ ಮಾಡುತ್ತಾರೆ

ಕುಟುಂಬದಲ್ಲಿ ಇವರಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯಲಾರವು. ಕೇವಲ ಕುಟುಂಬಾವಸ್ಥೆ ಅಲ್ಲದೇ ಸಮಾಜದಲ್ಲಿಯೂ ಇವರಿಗೆ ವಿಶೇಷವಾದ ಗೌರವ ದೊರೆಯುತ್ತದೆ. ಉತ್ತಮ ಕಲಾವಿದರಾಗಿರುತ್ತಾರೆ. ತಮ್ಮ ಕಲೆಗೆ ತಕ್ಕಸ್ಥಾನಮಾನ ದೊರೆಯುವವರೆಗೂ ಸಾಧನೆಯಲ್ಲಿ ತೊಡಗುತ್ತಾರೆ. ಇವರು ಮಾತನಾಡಲು ಆರಂಭಿಸಿದರೆ ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರೂ ಮನವಿಟ್ಟು ಕೇಳುತ್ತಾರೆ. ಪೂರ್ವ ತಯಾರಿ ಇಲ್ಲದೆ ಇವರು ಕೆಲಸ ಮಾಡುವುದು ಇಲ್ಲ ಮಾತನಾಡುವುದು ಇಲ್ಲ.

ಸೂಕ್ಷ್ಮವಾಗಿ ಗಮನಿಸಿದರೆ ಕೆಲವರ ಕೈಯಲ್ಲಿರುವ ಕಿರುಬೆರಳು ಸ್ವಲ್ಪ ಮಟ್ಟಿಗೆ ಡೊಂಕಾಗಿರುತ್ತದೆ. ಇಂಥವರಿಗೆ ಎಲ್ಲರೂ ಮೆಚ್ಚಿಕೊಳ್ಳುವಂತಹ ಒಳ್ಳೆಯ ಗುಣಗಳಿರುತ್ತವೆ. ಆದರೆ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಇಷ್ಟಪಡುವುದಿಲ್ಲ. ತಮ್ಮ ಜವಾಬ್ದಾರಿಯನ್ನು ಬುದ್ಧಿವಂತಿಕೆಯಿಂದ ಬೇರೆಯವರಿಗೆ ನೀಡುತ್ತಾರೆ. ಬೇರೆಯವರಿಗೆ ಸಲಹೆ ಸೂಚನೆ ನೀಡುವುದೆಂದರೆ ಇವರಿಗೆ ಸುಗ್ಗಿ. ಆದರೆ ಅದನ್ನು ಪಾಲಿಸಿದವರಿಗೆ ನಿಶ್ಚಿತವಾದ ಯಶಸ್ಸು ದೊರೆಯುತ್ತದೆ. ಆದ್ದರಿಂದ ಇವರ ಸುತ್ತಮುತ್ತ ಜನರ ಗುಂಪು ಸದಾ ಇರುತ್ತದೆ.

ಸಾಮಾನ್ಯವಾಗಿ ಇವರು ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಾರೆ. ತಮ್ಮ ಕೆಲಸ ಕಾರ್ಯಗಳ ಜೊತೆಯಲ್ಲಿ ಬೇರೆಯವರ ಸೇವೆ ಮಾಡುವುದು ಇವರಿಗೆ ಸಂತಸ ನೀಡುವ ವಿಚಾರ. ರುಚಿಯಾದ ಮತ್ತು ಶುಚಿಯಾದ ಆಹಾರವನ್ನು ಇವರೇ ತಯಾರಿಸಿ ತಿನ್ನುವ ಜನ. ಕೆಲಸ ಕಾರ್ಯದಲ್ಲಿಯೂ ಸಹ ಬೇರೆಯವರ ಕೆಲಸದಿಂದ ಇವರಿಗೆ ಅನುಕೂಲ ಉಂಟಾಗುವಂತೆ ಸಲಹೆ ನೀಡುತ್ತಾರೆ. ಇವರನ್ನು ವಿರೋಧಿಸುವ ಜನರು ಅತಿ ವಿರಳ. ವಾದ ವಿವಾದಗಳನ್ನು ಇಷ್ಟಪಡುವುದಿಲ್ಲ.

ಹಾಸ್ಯದಿಂದ ಮತ್ತು ಪ್ರೀತಿ ವಿಶ್ವಾಸದಿಂದ ಜಯ ಸಾಧಿಸುವ ಬುದ್ದಿ ಚತುರ್ಯ ಇವರಿಗಿರುತ್ತದೆ. ಸ್ವತಂತ್ರವಾಗಿ ಇವರು ಕೆಲಸ ಮಾಡಬೇಕೆಂದರೆ ಬಲು ನಿದಾನ. ಉದಾಹರಣೆಗೆ ಒಂದು ಘಂಟೆ ಕೆಲಸ ಮಾಡಿದರೆ ಅರ್ಧ ಘಂಟೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಇವರ ಶತ್ರುಗಳು ಸಹ ಇವರೊಂದಿಗೆ ಸ್ನೇಹ ಬೆಳೆಸುವಂತೆ ಮೂಡಿ ಮಾಡಬಲ್ಲರು. ಇವರ ವಿದ್ಯೆ ಎಷ್ಟೇ ಇರಲಿ ಅಥವಾ ವಯಸ್ಸು ಎಷ್ಟೇ ಇರಲಿ ಹಿರಿಯ ಅಧಿಕಾರಿಗಳು ಸಹ ಇವರ ಬಳಿ ಸಲಹೆಯನ್ನು ಕೇಳಿ ಪರಿಪಾಲಿಸುತ್ತಾರೆ. ಒಟ್ಟಿನಲ್ಲಿ ಸುಖವಾದ ಜೀವನ ನಡೆಸುವುದು ಹೇಗೆ ಎಂಬುದನ್ನು ಇವರನ್ನು ನೋಡಿ ತಿಳಿಯಬೇಕು. ಇವರ ಬಾಳ ಸಂಗಾತಿ ಮತ್ತು ಮಕ್ಕಳು ಸಹ ಇವರ ಗುಣವನ್ನೇ ಹೊಂದಿರುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ