Ketu Transit: ಹಸ್ತ ನಕ್ಷತ್ರದಲ್ಲಿ ಕೇತು ಸಂಕ್ರಮಣ; 12 ರಾಶಿಯವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಇರುತ್ತೆ ತಿಳಿಯಿರಿ
Sep 08, 2024 12:04 PM IST
ಕೇತು ಸಂಚಾರದಿಂದ 12 ರಾಶಿಯವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.
- Ketu Transit: ನೆರಳಿನ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಕೇತು ಗಣೇಶ ಚತುರ್ಥಿಯ ದಿನ ತನ್ನ ಸ್ಥಾನವನ್ನು ಬದಲಾಯಿಸಿದ್ದಾನೆ. ಇದು ಮೇಷದಿಂದ ಮೀನದವರೆಗೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ಕಂಡುಕೊಳ್ಳಿ.
ಸೆಪ್ಟೆಂಬರ್ 7 ರ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಚಂದ್ರನ ರಾಶಿಯಲ್ಲಿ ಕೇತು ಗ್ರಹವು ತನ್ನ ಚಲನೆಯನ್ನು ಬದಲಾಯಿಸಲಿದೆ. ಹಸ್ತಾ ನಕ್ಷತ್ರವು ಎರಡನೇ ಹಂತದಿಂದ ಮೊದಲ ಹಂತಕ್ಕೆ ಚಲಿಸಲಿದೆ. ಇದು ಮೇಷದಿಂದ ಮೀನದವರೆಗಿನ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕೇತುವಿನ ಚಲನೆಯಲ್ಲಿನ ಬದಲಾವಣೆಯು ರಾಶಿಚಕ್ರ ಚಿಹ್ನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯೋಣ.
ತಾಜಾ ಫೋಟೊಗಳು
ಮೇಷ ರಾಶಿ
ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸುತ್ತೀರಿ. ಕೇತುವಿನ ಸಂಚಾರವು ಜೀವನಶೈಲಿ, ಆಹಾರ ಪದ್ಧತಿ, ಫಿಟ್‌ನೆಸ್ ದಿನಚರಿಯಲ್ಲಿ ಬದಲಾವಣೆಯ ಬಗ್ಗೆ ಆಲೋಚನೆಗಳನ್ನು ತರಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಈ ಹಂತದಲ್ಲಿ, ನಿಮ್ಮ ಹಳೆಯ ದಿನಚರಿಯನ್ನು ಅನುಸರಿಸಲು ನಿಮಗೆ ಬೇಸರವಾಗುತ್ತದೆ. ಇದು ಹೊಸ ಪ್ರಮುಖ ಕೆಲಸಗಳ ಆರಂಭವನ್ನು ಸೂಚಿಸುತ್ತದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ.
ವೃಷಭ ರಾಶಿ
ಕೇತು ಸಂಕ್ರಮಣದ ಪರಿಣಾಮ ನೀವು ಹೊಸದಾಗಿ ತಿಳಿದುಕೊಳ್ಳಬೇಕೆಂಬ ಬಯಕೆಗಳು ಹೆಚ್ಚಾಗುತ್ತವೆ. ಜೀವನದಲ್ಲಿ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲು ಈ ಸಮಯವು ನಿಮಗೆ ಸಹಾಯ ಮಾಡುತ್ತದೆ. ವ್ಯಾಪಾರದ ಬಗ್ಗೆ ಹೆಚ್ಚು ಯೋಚಿಸಬೇಡಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ದಾನ ಮಾಡುತ್ತೀರಿ. ಜೀವನದಲ್ಲಿ ಎಲ್ಲವೂ ವಿಭಿನ್ನವಾಗಿದೆ.
ಮಿಥುನ ರಾಶಿ
ಕೇತುವಿನ ಶುಭ ಪ್ರಭಾವವು ಹಿಂದಿನ ನಕಾರಾತ್ಮಕ ಸಮಸ್ಯೆಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಕುಟುಂಬದ ತೊಂದರೆಗಳನ್ನು ಮನೆಯಲ್ಲಿನ ಗಣಪತಿ ಪೂಜೆಯಲ್ಲಿ ಭಾಗವಹಿಸಿ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ.
ಕಟಕ ರಾಶಿ
ಹಸ್ತಾ ನಕ್ಷತ್ರದಲ್ಲಿ ಕೇತುವಿನ ಸಂಕ್ರಮಣವು ಬರವಣಿಗೆ, ಬೋಧನೆ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಸಂವಹನ ಕೌಶಲ್ಯವು ಸುಧಾರಿಸುತ್ತದೆ. ಸಹೋದರ ಸಹೋದರಿಯರೊಂದಿಗೆ ಸಂಬಂಧವನ್ನು ಬಲಪಡಿಸಲು ಇದು ಉತ್ತಮ ಸಮಯ.
ಸಿಂಹ ರಾಶಿ
ಕೇತುವಿನ ಸಂಚಾರವು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ತರುತ್ತದೆ. ಹೊಸ ಹೂಡಿಕೆ ಅವಕಾಶಗಳು ದೊರೆಯಲಿವೆ. ಹಣಕಾಸಿನ ವಿಷಯಗಳಲ್ಲಿಯೂ ಅನಿಶ್ಚಿತತೆ ಉಂಟಾಗಬಹುದು. ಹಣದ ವಿಷಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಪ್ರಯತ್ನಿಸಿ. ಕುಟುಂಬ ಸಂಬಂಧಗಳನ್ನು ಸುಧಾರಿಸುವ ಸಮಯ ಇದು.
ಕನ್ಯಾ ರಾಶಿ
ನಿಮ್ಮ ಜೀವನದಲ್ಲಿನ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ಗಣೇಶನ ಕೃಪೆಯಿಂದ ದೂರವಾಗುತ್ತವೆ. ವೈಯಕ್ತಿಕ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಗೊಂದಲ ನಿವಾರಣೆಯಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಆದರೆ ನೀವು ವೈಯಕ್ತಿಕ ಬೆಳವಣಿಗೆ, ಗೌರವವನ್ನು ಗಳಿಸುವ ಬಗ್ಗೆ ಕಾಳಜಿ ವಹಿಸುತ್ತೀರಿ.
ತುಲಾ ರಾಶಿ
ನಿಮ್ಮ ಜೀವನದಲ್ಲಿ ಯಾವುದೇ ವಿಷಕಾರಿ ಸಂಬಂಧ, ಕೋಪ ಅಥವಾ ಹಿಂದಿನದನ್ನು ಬಿಡಲು ಬಯಸುತ್ತೀರಿ. ಗಣೇಶನನ್ನು ಪ್ರಾರ್ಥಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯಿಂದ ಮುಕ್ತಿ ಪಡೆಯಬಹುದು. ಬದಲಾವಣೆಗಳನ್ನು ಸ್ವೀಕರಿಸಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಈ ಅವಧಿಯಲ್ಲಿ ವಿದೇಶ ಅಥವಾ ಧಾರ್ಮಿಕ ಸ್ಥಳಗಳಿಗೆ ಹೋಗುವ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿ
ಕೇತುವಿನ ಸಂಚಾರದಿಂದಾಗಿ ನೀವು ಆದ್ಯತೆಗಳನ್ನು ಬದಲಾಯಿಸಲು ಬಯಸುತ್ತೀರಿ. ಹೊಸ ಜನರೊಂದಿಗೆ ಸಂಪರ್ಕ ಬೆಳಸಬೇಕೆನಿಸುತ್ತದೆ. ಗಣೇಶ ಚತುರ್ಥಿ ಹಬ್ಬವು ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕ ಆಸಕ್ತಿಗಳನ್ನು ಸೃಷ್ಟಿಸುತ್ತದೆ. ವೈಯಕ್ತಿಕ ಬೆಳವಣಿಗೆಗೆ ಹಲವು ಅವಕಾಶಗಳಿವೆ. ಗಣೇಶನ ಆರಾಧನೆಯಿಂದ ಜೀವನದ ಎಲ್ಲಾ ನೋವುಗಳು ಮತ್ತು ತೊಂದರೆಗಳು ಪರಿಹಾರವಾಗುತ್ತವೆ.
ಧನು ರಾಶಿ
ಕೇತು ಸಂಚಾರದ ಪ್ರಭಾವದಿಂದಾಗಿ, ನಿಮ್ಮ ವೃತ್ತಿಜೀವನದಲ್ಲಿ ಹಠಾತ್ ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಈ ಬದಲಾವಣೆಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಆಯ್ಕೆಗಳನ್ನು ಹುಡುಕುತ್ತೀರಿ. ಇದು ಪ್ರಯೋಜನಕಾರಿಯಾಗದಿರಬಹುದು ಅಥವಾ ವೃತ್ತಿ ಅಸ್ಥಿರತೆಗೆ ಕಾರಣವಾಗಬಹುದು. ವೃತ್ತಿಪರ ಅಡೆತಡೆಗಳನ್ನು ನಿವಾರಿಸಲು ಗಣೇಶನನ್ನು ಪೂಜಿಸಲು ಇದು ಉತ್ತಮ ಸಮಯ.
ಮಕರ ರಾಶಿ
ನಿಮ್ಮನ್ನು ತಿಳಿದುಕೊಳ್ಳುವ ಸಮಯ ಇದು. ಇದರೊಂದಿಗೆ ನೀವು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯುತ್ತೀರಿ. ಹೊಸ ಆಧ್ಯಾತ್ಮಿಕ ಪ್ರಯಾಣವು ಗಣೇಶನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು ಇದು ಸೂಕ್ತ ಸಮಯ.
ಕುಂಭ ರಾಶಿ
ಹಿಂದಿನದನ್ನು ಮರೆತು ಜೀವನದಲ್ಲಿ ಹೊಸ ಬದಲಾವಣೆಗಳನ್ನು ಸ್ವಾಗತಿಸಲು ಸಿದ್ಧರಾಗುತ್ತೀರಿ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು ಅವಕಾಶವನ್ನು ಪಡೆಯುತ್ತೀರಿ. ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ. ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತೆ. ವಿಶೇಷವಾಗಿ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ.
ಮೀನ ರಾಶಿ
ಕೇತು ಸಂಕ್ರಮಣದಿಂದ ನೀವು ಕೆಲವೊಮ್ಮೆ ಲೌಕಿಕ ಜೀವನಕ್ಕೆ ಗುಡ್‌ಬೈ ಹೇಳಿ ಆಧ್ಯಾತ್ಮಿಕರಾಗುವ ಅಗತ್ಯದ ಬಗ್ಗೆ ಯೋಚಿಸುತ್ತೀರಿ. ಇದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಸಂಗಾತಿಯೊಂದಿಗಿನ ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಗಣಪತಿಯನ್ನು ಆರಾಧಿಸಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.