Horoscope Today: ತಪ್ಪು ನಿರ್ಧಾರದಿಂದ ಹಣಕಾಸಿನ ತೊಂದರೆ, ಆರೋಗ್ಯದಲ್ಲಿ ಏರುಪೇರು ಸಾಧ್ಯತೆ; ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ
Mar 30, 2024 05:10 AM IST
ಮಾರ್ಚ್ 30ರ ದಿನಭವಿಷ್ಯ ಧನು ರಾಶಿಯಿಂದ ಮೀನದವರೆಗೆ
- 30 ಮಾರ್ಚ್ 2024, ಶನಿವಾರ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (30th March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th March 2024 Daily Horoscope).
ತಾಜಾ ಫೋಟೊಗಳು
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಶನಿವಾರ
ತಿಥಿ: ಪಂಚಮಿ ಸಂಜೆ 5.17 ರವರೆಗೂ ಇರುತ್ತದೆ. ಅನಂತರ ಷಷ್ಠಿ ಆರಂಭವಾಗಲಿದೆ.
ನಕ್ಷತ್ರ: ಅನುರಾದ ನಕ್ಷತ್ರವು ಸಂಜೆ 6.31 ರವರೆಗೂ ಇರುತ್ತದೆ. ಅನಂತರ ಜ್ಯೇಷ್ಠ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಿಗ್ಗೆ 6.16
ಸೂರ್ಯಾಸ್ತ: ಸಂಜೆ 6.30
ರಾಹುಕಾಲ: ಬೆಳಿಗ್ಗೆ 9.00 ರಿಂದ ಬೆಳಿಗ್ಗೆ 10.30
ಧನಸ್ಸು
ಕುಟುಂಬದ ದಿನನಿತ್ಯದ ಕೆಲಸಗಳನ್ನಷ್ಟೇ ಮಾಡಲು ಸಾಧ್ಯವಾಗಲಿದೆ. ಬೇಸರದ ವಾತಾವರಣವಿರುತ್ತದೆ. ಮುಂಗೋಪದಲ್ಲಿ ಆತ್ಮೀಯರನ್ನು ದೂರ ಮಾಡುವಿರಿ. ತಪ್ಪಾದ ನಿರ್ಧಾರದಿಂದ ಹಣಕಾಸಿನ ತೊಂದರೆ ಎದುರಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗಳ ರೀತಿ ನೀತಿಯಿಂದ ಅಸಮಾಧಾನಗೊಳ್ಳುವಿರಿ. ಸಹೋದ್ಯೋಗಿಗಳ ಸಹಾಯ ದೊರೆಯಲಿದೆ. ಮಕ್ಕಳ ಜೊತೆಯಲ್ಲಿ ಪ್ರೀತಿಯಿಂದ ವರ್ತಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಯೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ವ್ಯಾಪಾರದಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತವೆ. ಆರೋಗ್ಯದ ಬಗ್ಗೆ ಗಮನ ಇರಲಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ.
ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಮಕರ
ಕುಟುಂಬದ ಹೆಚ್ಚಿದ ಕೆಲಸ ಕಾರ್ಯಗಳ ಕಾರಣ ವಿಶ್ರಾಂತಿ ಇರದು. ಬದಲಾವಣೆ ಬಯಸಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಅರೆ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಕಷ್ಟ ನಷ್ಟಗಳಿಗೆ ಹೆದರುವುದಿಲ್ಲ. ಯಾರಿಂದಲೂ ಸಹಾಯ ಬಯಸುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಉನ್ನತ ಸ್ಥಾನ ದೊರೆಯುತ್ತದೆ. ವಂಶದ ಹಿರಿಯರ ಆಸ್ತಿಯಲ್ಲಿ ಸಿಂಹಪಾಲು ಲಭಿಸುತ್ತದೆ. ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಜಯಶಾಲಿಯಾಗುವರು. ಸೋದರನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಪ್ರಶಾಂತವಾದ ಸನ್ನಿವೇಶವನ್ನು ಇಷ್ಟಪಡುವಿರಿ. ಆತ್ಮೀಯರ ಹಣದ ವ್ಯವಹಾರದಲ್ಲಿ ಸಹಾಯ ಮಾಡುವಿರಿ. ಹಣದ ಕೊರತೆ ಉಂಟಾಗಲಿದೆ. ಚುರುಕುತನ ಬೆಳೆಸಿಕೊಳ್ಳಿ.
ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಕುಂಭ
ಹಠದ ಕಾರಣ ಕುಟುಂಬದಲ್ಲಿ ಗಂಭೀರತೆ ಆವರಿಸಿರುತ್ತದೆ. ನಿಮ್ಮ ಮಾತನ್ನು ಎಲ್ಲರೂ ಗೌರವಿಸುತ್ತಾರೆ. ಉದ್ಯೋಗದಲ್ಲಿ ಅಧಿಕಾರಿಯ ಸ್ಥಾನಮಾನವನ್ನು ತಲುಪುವಿರಿ. ವಿದ್ಯಾರ್ಥಿಗಳ ಇಚ್ಛೆಗೆ ತಕ್ಕಂತೆ ನಡೆಯುವುದು ಒಳ್ಳೆಯದು. ಮನರಂಜನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ಶುದ್ಧ ಮನಸ್ಕರಾಗಿ ದೊರೆಯುವ ಕೆಲಸವನ್ನು ಮಾಡುವಿರಿ. ಅನಾವಶ್ಯಕವಾದ ಮಾತುಗಾರಿಕೆಗೆ ಪ್ರಾಶಸ್ತ್ಯ ನೀಡುವುದಿಲ್ಲ. ಮಕ್ಕಳ ಮೇಲೆ ಅನುಕಂಪ ಇರುತ್ತದೆ. ಸದ್ದಿಲ್ಲದೆ ಸ್ವಂತ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಸುಂದರವಾದ ಬಟ್ಟೆಗಳನ್ನು ಕೊಳ್ಳಲು ಇಚ್ಛಿಸುವಿರಿ.
ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಮೀನ
ಬುದ್ಧಿವಂತಿಕೆಯ ನಿರ್ಧಾರ ಕುಟುಂಬಕ್ಕೆ ಆಸರೆಯಾಗುತ್ತದೆ. ವಿಶ್ವಾಸದ ಮಾತುಕತೆಯಿಂದ ಉದ್ಯೋಗದಲ್ಲಿ ನೂತನ ಅವಕಾಶ ದೊರೆಯಲಿದೆ. ವಾಸಸ್ಥಳವನ್ನು ಬದಲಿಸುವಿರಿ. ಹಣಕಾಸಿನ ಕೊರತೆ ನೀಗಲು ಬಿಡುವಿನ ವೇಳೆ ವ್ಯಾಪಾರವನ್ನು ಆರಂಭಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸಕ್ಕೆ ಒತ್ತು ನೀಡುತ್ತಾರೆ. ಭೂಮಿಗೆ ಸಂಬಂಧಿಸಿದ ವಹಿವಾಟಿನಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಸ್ವಂತ ಬಳಕೆಗಾಗಿ ದೊಡ್ಡ ವಾಹನವನ್ನು ಕೊಳ್ಳುವಿರಿ. ಮನೆಯನ್ನು ವಿಸ್ತರಿಸಲು ನಿರ್ಧರಿಸುವಿರಿ. ವೃದ್ದಾಶ್ರಮ ಅಥವಾ ಅನಾಥಾಶ್ರಮದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಮನೆಯನ್ನು ಶುಭ್ರಗೊಳಿಸಲು ಪ್ರಯತ್ನಿಸುವಿರಿ.
ಪರಿಹಾರ: ಪುಟ್ಟ ಮಕ್ಕಳಿಗೆ ಬೆಣ್ಣೆ ನೀಡಿ ಇಂದಿನ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಕಂದು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).