logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ವ್ಯಾಪಾರಿಗಳಿಗೆ ಉತ್ತಮ ಲಾಭ ಇರುತ್ತೆ, ಪತ್ನಿಯ ಬಗ್ಗೆ ಕಾಳಜಿ ತೋರಿಸುತ್ತೀರಿ; ಸೆಪ್ಟೆಂಬರ್ 8ರ ದಿನ ಭವಿಷ್ಯ

Horoscope Today: ವ್ಯಾಪಾರಿಗಳಿಗೆ ಉತ್ತಮ ಲಾಭ ಇರುತ್ತೆ, ಪತ್ನಿಯ ಬಗ್ಗೆ ಕಾಳಜಿ ತೋರಿಸುತ್ತೀರಿ; ಸೆಪ್ಟೆಂಬರ್ 8ರ ದಿನ ಭವಿಷ್ಯ

Raghavendra M Y HT Kannada

Sep 08, 2024 05:25 AM IST

google News

ದ್ವಾದಶ ರಾಶಿಗಳ ದಿನ ಭವಿಷ್ಯ ಸೆಪ್ಟೆಂಬರ್ 8

    • Horoscope Today: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ.  ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ದಿನ ಭವಿಷ್ಯ ಹೀಗಿದೆ.
ದ್ವಾದಶ ರಾಶಿಗಳ ದಿನ ಭವಿಷ್ಯ ಸೆಪ್ಟೆಂಬರ್ 8
ದ್ವಾದಶ ರಾಶಿಗಳ ದಿನ ಭವಿಷ್ಯ ಸೆಪ್ಟೆಂಬರ್ 8

Horoscope Today: ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸಹಜವಾಗಿ ಕಣ್ಣು ಹಾಯಿಸುತ್ತಾರೆ. ಅಂತಹ ಕುತೂಹಲ ತಣಿಸುವುದಕ್ಕಾಗಿ ರಾಶಿಗಳ ಗ್ರಹಗತಿಗಳಿಗೆ ಅನುಗುಣವಾಗಿ 12 ರಾಶಿಗಳ ಆರೋಗ್ಯ ಜಾತಕವನ್ನು ಇಲ್ಲಿ ನೀಡಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಮೇಷ ರಾಶಿ

ಕೆಲಸದ ಒತ್ತಡ ಅಧಿಕವಾಗಿರುತ್ತದೆ. ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ತೀರ್ಪುಗಳು ನಿಧಾನವಾಗಿ ನಡೆಯುತ್ತವೆ. ಪ್ರತಿಷ್ಠಿತ ಜನರೊಂದಿಗೆ ಕೆಲವು ಪ್ರಯೋಜನಗಳಿವೆ. ಹೊಸ ಉದ್ಯೋಗ ಹುಡುಕುವ ಪ್ರಯತ್ನಗಳು ಫಲ ನೀಡಲಿವೆ. ಜವಳಿ ವ್ಯಾಪಾರಿಗಳಿಗೆ ಲಾಭವಿದೆ. ಆಧ್ಯಾತ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೀರಿ.

ವೃಷಭ ರಾಶಿ

ಹಠದಿಂದ ಮುನ್ನಡೆಯುತ್ತೀರಿ. ಸಾಲ ಪಾವಸ್ ಮಾಡಲಾಗುತ್ತದೆ. ಗೃಹ ಪ್ರವೇಶದ ಶುಭ ಕಾರ್ಯಗಳು ಯೋಜಿಸಿದಂತೆ ಪೂರ್ಣಗೊಳ್ಳುತ್ತವೆ. ಆದಾಯ ಮತ್ತು ವೆಚ್ಚಗಳು ಸಮಾನವಾಗಿರುತ್ತೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತೀರಿ. ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮದಿಂದ ವರ್ತಿಸಿ. ಲಲಿತಕಲೆಗಳ ಬಗ್ಗೆ ಒಲವು ಇರುತ್ತೆ.

ಮಿಥುನ ರಾಶಿ

ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಸಾಫ್ಟ್‌ವೇರ್ ಕ್ಷೇತ್ರದವರಿಗೆ ಹೊಸ ಅವಕಾಶಗಳು ಬರಲಿವೆ. ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ ನೀಡುತ್ತೀರಿ. ಹೊಸ ಸಾಲಗಳನ್ನು ಮಾಡಲು ಮುಂದಾಗುತ್ತೀರಿ. ಬ್ಯಾಂಕ್ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿಗಳಿವೆ. ಸಂಗಾತಿಯೊಂದಿಗೆ ಮಾತುಕತೆ ಸಂಬಂಧವನ್ನು ಗಟ್ಟಿಗೊಳಿಸುತ್ತೆ.

ಕಟಕ ರಾಶಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನವನ್ನು ಪ್ರಾರಂಭಿಸುತ್ತೀರಿ. ಬಾಲ್ಯದ ಸ್ನೇಹಿತರಿಗೆ ಸಹಾಯ ಮಾಡುತ್ತೀರಿ. ಸಾಗರೋತ್ತರ ಅವಕಾಶಗಳನ್ನು ಪಡೆಯುವ ಪ್ರಯತ್ನಗಳು ಕೂಡಿ ಬರುತ್ತವೆ.

ಸಿಂಹ ರಾಶಿ

ಯೋಜಿತ ಕಾರ್ಯಕ್ರಮಗಳಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ಶತ್ರುಗಳ ಮೇಲೆ ಮೇಲುಗೈ ಸಾಧಿಸುತ್ತೀರಿ. ಕಷ್ಟದ ಸಮಯದಲ್ಲಿಯೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಶಿಸ್ತು ಎಲ್ಲದಕ್ಕೂ ಮೂಲವಾಗುತ್ತೆ ಎಂಬುದನ್ನು ಅರಿತುಕೊಳ್ಳುತ್ತೀರಿ. ಗಾಸಿಪ್ ಮಾತುಗಳಿಗೆ ಕಿವಿಕೊಡುವುದಿಲ್ಲ. ಉದ್ಯೋಗಾವಕಾಶಗಳು ಉತ್ತಮವಾಗಿವೆ.

ಕನ್ಯಾ ರಾಶಿ

ವ್ಯಾಪಾರಿಗಳಿಗೆ ಲಾಭವು ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಕ್ಕಾಗಿ ಪ್ರಯತ್ನಗಳು ಫಲ ನೀಡುತ್ತವೆ. ಸಿವಿಲ್ ಗುತ್ತಿಗೆದಾರರಿಗೆ ಒಳ್ಳೆಯ ಸುದ್ದಿಗಳಿವೆ. ಗುತ್ತಿಗೆ ಮತ್ತು ಪರವಾನಗಿಗಳು ಸಿಗುತ್ತವೆ. ಜನರ ಮೆಚ್ಚುಗೆ ಮತ್ತು ಅಭಿಮಾನಕ್ಕಾಗಿ ಶ್ರಮಿಸುತ್ತೀರಿ. ಎಲ್ಲಾ ರೀತಿಯ ವ್ಯಾಪಾರಿಗಳಿಗೆ ಲಾಭವಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತೆ.

ತುಲಾ ರಾಶಿ

ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡಿದವರಿಗೆ ನಿಮ್ಮ ಬಗ್ಗೆ ಅರಿವಾಗುತ್ತೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಜವಾಬ್ದಾರಿಗಳನ್ನು ನಿರ್ವಹಿಸುತ್ತೀರಿ. ಮಕ್ಕಳ ಮೇಲೆ ಪ್ರೀತಿ ಜಾಸ್ತಿ ಇದ್ದರೂ ಅವರು ಸಿಗದೇ ಅವರ ಜೊತೆ ಸಮಯ ಕಳೆಯಲು ಆಗದಂತಹ ಸನ್ನಿವೇಶಗಳು ಎದುರಾಗುತ್ತವೆ.

ವೃಶ್ಚಿಕ ರಾಶಿ

ನಿಮ್ಮನ್ನು ದ್ವೇಷಿಸುವವರು ಮತ್ತು ಅಸೂಯೆ ಪಡುವವರ ಮುಂದೆ ನೀವು ಉನ್ನತ ಮಟ್ಟದಲ್ಲಿ ಇರುತ್ತೀರಿ. ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ವರ್ಗಾವಣೆ ಪ್ರಯತ್ನಗಳನ್ನ ಮುಂದುವರಿಸುತ್ತೀರಿ. ಐಷಾರಾಮಿ ಜೀವನ ನಡೆಸಲು ಉತ್ಸುಕರಾಗಿದ್ದೀರಿ.

ಧನು ರಾಶಿ

ಸಂಗಾತಿಯ ಬಗ್ಗೆ ಕಾಳಜಿಯನ್ನು ತೋರಿಸುತ್ತೀರಿ. ಅವರ ಅಗತ್ಯತೆಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮುಂದಾಗುತ್ತೀರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚುತ್ತವೆ. ಕೆಲವೇ ವರ್ಷಗಳಲ್ಲಿ ನಾವು ಸರಿಹೋಗುತ್ತೇವೆ ಎಂಬ ಧೈರ್ಯ ನಮ್ಮಲ್ಲಿರುತ್ತೆ. ಭೂಮಿಗೆ ಸಂಬಂಧಿಸಿದ ಮಾತುಕತೆಗಳು, ಅವುಗಳಲ್ಲಿ ಪ್ರಗತಿ ಸಾಧಿಸುತ್ತೀರಿ.

ಮಕರ ರಾಶಿ

ಪ್ರಯೋಜನಗಳನ್ನು ಕಳೆದುಕೊಳ್ಳದಂತೆ ಶ್ರಮಿಸುತ್ತೀರಿ. ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ಹೊಸ ಸ್ನೇಹ ಸಂಬಂಧಗಳು ಇರುತ್ತವೆ. ಪ್ರಯಾಣದಲ್ಲಿ ಕಲಿಯಬಹುದಾದ ಕೆಲವು ವಿಷಯಗಳಿವೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಇತರರ ಅಜಾಗರೂಕತೆ ನಿಮಗೆ ತೊಂದರೆ ನೀಡಬಹುದು. ಮನರಂಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ.

ಕುಂಭ ರಾಶಿ

ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ತೇಜನ ದೊರೆಯಲಿದೆ. ಕಲೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಸೂಕ್ತ ದಿನವಾಗಿದೆ. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ತೋರಿಸುತ್ತೀರಿ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತೆ. ಆರ್ಥಿಕವಾಗಿ ಬಲಗೊಳ್ಳುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ವರ್ಗಾವಣೆ ಪ್ರಯತ್ನಗಳು ಮುಂದುವರಿಯುತ್ತವೆ.

ಮೀನ ರಾಶಿ

ಆತ್ಮೀಯ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೀರಿ. ಮನೆ, ವಾಹನ ಖರೀದಿಗೆ ಪ್ರಯತ್ನಗಳು ನಡೆಯುತ್ತವೆ. ಆರೋಗ್ಯದ ಅರಿವು ಅತ್ಯಗತ್ಯವಾಗಿದೆ. ತಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಭೂ ವ್ಯಾಜ್ಯಗಳು ಇತ್ಯರ್ಥವಾಗಿ ಲಾಭವನ್ನು ಪಡೆಯುತ್ತೀರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನವಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ - 94949 81000
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ