2025ರಲ್ಲಿ ಲಕ್ಷ್ಮಿ ನಾರಾಯಣ ಯೋಗ ಯಾವಾಗ ರೂಪುಗೊಳ್ಳುತ್ತೆ? ಮೇಷ, ಮಿಥುನ ಸೇರಿ 3 ರಾಶಿಯವರಿಗೆ ಹಣಕ್ಕೆ ಕೊರತೆಯೇ ಇರಲ್ಲ
Dec 15, 2024 07:30 AM IST
2025ರ ಹೊಸ ವರ್ಷದಲ್ಲಿ ಲಕ್ಷ್ಮಿ ನಾರಾಯಣ ಯೋಗ ಯಾವಾಗ ಶುರುವಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ
- ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಜಾತಕದಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ಸೇರಿದಾಗ ಅದು ಲಕ್ಷ್ಮಿ ನಾರಾಯಣ ಯೋಗವಾಗುತ್ತದೆ. ಈ ಯೋಗ ರೂಪುಗೊಂಡಾಗ ವ್ಯಕ್ತಿಯು ಸಂಪತ್ತು ಮತ್ತು ಯಶಸ್ಸನ್ನು ಪಡೆಯುತ್ತಾನೆ. 2025 ರಲ್ಲಿ ಲಕ್ಷ್ಮಿ ನಾರಾಯಣ ಯೋಗ ಯಾವಾಗ ರೂಪುಗೊಳ್ಳುತ್ತದೆ ಎಂಬುದನ್ನು ತಿಲಿಯೋಣ.
2025 ರ ಹೊಸ ವರ್ಷವನ್ನು ಸ್ವಾಗತಿಸಲು ಇನ್ನ ಕೆಲವೇ ದಿನಗಳ ಬಾಕಿ ಇವೆ. ಹೊಸ ವರ್ಷದಲ್ಲಿ ಗ್ರಹಗಳ ಸಂಚಾರವು ಕೆಲವು ರಾಶಿಯವರಿಗೆ ಭಾರಿ ಅದೃಷ್ಟವನ್ನೇ ತಂದಿದೆ. ಈ ಸಮಯದಲ್ಲಿ ಕೆಲವು ಯೋಗಗಳು ಕೂಡ ಇರಲಿವೆ. 2025 ರಲ್ಲಿ ಲಕ್ಷ್ಮಿ ನಾರಾಯಣ ಯೋಗವು ಫೆಬ್ರವರಿಯಲ್ಲಿ ರೂಪುಗೊಳ್ಳುತ್ತದೆ. ಈ ಯೋಗವು ಗುರುವಿನ ಮೀನ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಮೀನ ರಾಶಿಯಲ್ಲಿ ಸಂತೋಷ ಮತ್ತು ವೈಭವದ ಅಧಿಪತಿಗಳಾದ ಶುಕ್ರ ಮತ್ತು ಬುಧ ಇಬ್ಬರೂ ಒಟ್ಟಿಗೆ ಭೇಟಿಯಾಗುತ್ತಾರೆ. ಈ ಗ್ರಹಗಳ ಸೇರ್ಪಡೆಯೊಂದಿಗೆ, ಈ ಯೋಗವು ರೂಪುಗೊಳ್ಳಲಿದೆ.
ತಾಜಾ ಫೋಟೊಗಳು
ಶುಕ್ರ ಮತ್ತು ಬುಧನ ಸಂಯೋಗದೊಂದಿಗೆ ರೂಪಗೊಳ್ಳಲಿರುವ ಲಕ್ಷ್ಮಿ ನಾರಾಯಣ ಯೋಗದಿಂದ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಇರಲಿದೆ. ವ್ಯಕ್ತಿಯು ಸಂಪತ್ತು ಮತ್ತು ಯಶಸ್ಸನ್ನು ಪಡೆಯುತ್ತಾನೆ. ಈ ಯೋಗದ ರಚನೆಯು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಗರಿಷ್ಠ ಪರಿಣಾಮವು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ದೃಕ್ ಪಂಚಾಂಗದ ಪ್ರಕಾರ, 2025ರ ಜನವರಿ 28 ರಂದು ಶುಕ್ರನು ಮೀನ ರಾಶಿಯಲ್ಲಿ ಬರುತ್ತಾನೆ. ಮೇ 31 ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಇದರ ನಂತರ, 2025ರ ಫೆಬ್ರವರಿ 27 ರಂದು ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇಬ್ಬರೂ ಒಟ್ಟಿಗೆ ಸೇರಿದಾಗ, ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಮೇಷ, ಮಿಥುನ ಮತ್ತು ಮೀನ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಮೇಷ ರಾಶಿ
ಲಕ್ಷ್ಮಿ ನಾರಾಯಣ ಯೋಗ ಇರುವವರೆಗೆ ಮೇಷ ರಾಶಿಯವರು 2025 ರಲ್ಲಿ ಆರ್ಥಿಕ ಸಮೃದ್ಧಿಯನ್ನು ಪಡೆಯುತ್ತಾರೆ. ಹಣಕಾಸಿನ ವಿಷಯದಲ್ಲಿ ಹೊಸದಾಗಿ ಪ್ರಗತಿಯನ್ನು ಕಾಣುತ್ತೀರಿ. ನಿಮ್ಮ ಕೆಲಸಗಲು ಸುಲಭವಾಗಿ ನಡೆಯುತ್ತವೆ. ನಿಮಗೆ ಹಣದ ಕೊರತೆ ಇರುವುದಿಲ್ಲ. ವ್ಯವಹಾರಗಳು ಹೆಚ್ಚಾಗುತ್ತವೆ. ಹಣಕಾಸಿನ ಮೂಲಗಳು ಹೆಚ್ಚಾಗುತ್ತವೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಲಕ್ಷ್ಮಿ ನಾರಾಯಣದ ಯೋಗದ ಫಲಗಳಿವೆ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮ ತಪ್ಪು ನಿರ್ಧಾರದಿಂದ ಹಾಳಾಗಿದ್ದ ಕೆಲಸವನ್ನು ಈಗ ಮಾಡಲಾಗುತ್ತದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮೀನ ರಾಶಿ
ಲಕ್ಷ್ಮಿ ನಾರಾಯಣ ಯೋಗ ಮೀನ ರಾಶಿಯವರಿಗೆ ಸಾಕಷ್ಟು ಶುಭ ಫಲಗಳನ್ನು ತಂದಿದೆ. ನೀವು ಅಧ್ಯಾತ್ಮಿಕತೆಯತ್ತ ಒಲವು ತೋರುತ್ತೀರಿ. ಈ ಸಮಯದಲ್ಲಿ ಸಮತೋಲಿತ ವಿಧಾನವನ್ನು ಅಳವಡಿಸಿಕೊಳ್ಳುತ್ತೀರಿ. ಹಣದ ವಿಷಯದಲ್ಲಿ ಸಿಹಿ ಸುದ್ದಿ ಇರಲಿದೆ. ಹೊಸ ಸಂಪನ್ಮೂಲಗಳು ನಿಮ್ಮದಾಗಲು ಪ್ರಾರಂಭಿಸುತ್ತವೆ. ಇದಲ್ಲದೆ, ನೀವು ಉದ್ಯೋಗ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಹ ಪಡೆಯುತ್ತೀರಿ. ತುಂಬಾ ಸಂತೋಷದ ದಿನಗಳನ್ನು ಕಳೆಯುತ್ತೀರಿ. ಹಣದ ಮೂಲಗಳು ಹೆಚ್ಚಾಗುತ್ತವೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)