logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ 5 ರಾಶಿಗಳ ಮಹಿಳೆಯರಿಗೆ ದಾಂಪತ್ಯದಲ್ಲಿ ಹೊಂದಾಣಿಕೆ ಸುಲಭ; ಸಂಸಾರದಲ್ಲಿ ನೆಮ್ಮದಿ ನೆಲೆಸಲು ಸತತ ಪ್ರಯತ್ನ ಮಾಡ್ತಾರೆ

ಈ 5 ರಾಶಿಗಳ ಮಹಿಳೆಯರಿಗೆ ದಾಂಪತ್ಯದಲ್ಲಿ ಹೊಂದಾಣಿಕೆ ಸುಲಭ; ಸಂಸಾರದಲ್ಲಿ ನೆಮ್ಮದಿ ನೆಲೆಸಲು ಸತತ ಪ್ರಯತ್ನ ಮಾಡ್ತಾರೆ

Raghavendra M Y HT Kannada

Sep 18, 2024 07:41 AM IST

google News

ಈ ಐದು ರಾಶಿಯವರು ಸಂಸಾರದಲ್ಲಿ ನೆಮ್ಮದಿಗಾಗಿ ಸತತ ಪ್ರಯತ್ನ ಮಾಡುತ್ತಾರೆ. ಆ ರಾಶಿಯವರು ಯಾರು ಎಂಬುದರ ವಿವರ ಇಲ್ಲಿದೆ.

    • ಎಂಥ ಸವಾಲುಗಳು ಎದುರಾದಲು ಕೆಲವು ರಾಶಿಯ ಮಹಿಳೆಯರು ಎದೆಗುಂದದೆ ಸಂಸಾರದ ಬಂಡಿಯನ್ನು ಎಳೆದುಕೊಂಡು ಹೋಗುತ್ತಾರೆ. ಸಣ್ಣ ಸಣ್ಣ ವಿಷಯದಲ್ಲೂ ಇವರು ಸಂತೋಷವನ್ನು ಕಾಣುತ್ತಾರೆ. ಸಂಸಾರದಲ್ಲಿ ನೆಮ್ಮದಿ ನೆಲೆಸಲು ಸತತ ಪ್ರಯತ್ನ ಮಾಡುತ್ತಾರೆ. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಈ ಐದು ರಾಶಿಯವರು ಸಂಸಾರದಲ್ಲಿ ನೆಮ್ಮದಿಗಾಗಿ ಸತತ ಪ್ರಯತ್ನ ಮಾಡುತ್ತಾರೆ. ಆ ರಾಶಿಯವರು ಯಾರು ಎಂಬುದರ ವಿವರ ಇಲ್ಲಿದೆ.
ಈ ಐದು ರಾಶಿಯವರು ಸಂಸಾರದಲ್ಲಿ ನೆಮ್ಮದಿಗಾಗಿ ಸತತ ಪ್ರಯತ್ನ ಮಾಡುತ್ತಾರೆ. ಆ ರಾಶಿಯವರು ಯಾರು ಎಂಬುದರ ವಿವರ ಇಲ್ಲಿದೆ.

ವೃಷಭ ರಾಶಿ

ತುಂಬಾ ತಾಳ್ಮೆ ಮತ್ತು ವಿಶ್ವಾಸಕ್ಕೆ ವೃಷಭ ರಾಶಿಯ ಕೆಲವು ಮಹಿಳೆಯರು ಹೆಸರುವಾಸಿಯಾಗಿರುತ್ತಾರೆ. ಇವರು ದೀರ್ಘಾವಧಿಯ ಸಂಬಂಧಗಳನ್ನು ಗೌರವಿಸುತ್ತಾರೆ. ಪ್ರೀತಿ ಪಾತ್ರರನ್ನು ತುಂಬಾ ಹೃದಯದ ಅಂತರಾಳದಿಂದ ನೋಡಿಕೊಳ್ಳುತ್ತಾರೆ. ಪರಸ್ಪರ ಮಾತುಕತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಪತಿಯ ಪ್ರತಿಯೊಂದು ಕಾರ್ಯಕ್ಕೂ ಬೆಂಬಲವಾಗಿ ನಿಲ್ಲುತ್ತಾರೆ. ಈ ಮಹಿಳೆಯರ ಕಾರ್ಯವೈಖರಿಗೆ ಅವರ ಸಂಗಾತಿಯೇ ಮೂಕವಿಸ್ಮಿತನಾಗುತ್ತಾನೆ. ದಾಂಪತ್ಯದಲ್ಲಿ ಸಂತೋಷ ನೆಲೆಸಲು ಇವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕಟಕ ರಾಶಿ

ಈ ರಾಶಿಯ ಕೆಲವು ಮಹಿಳೆಯರು ದೃಢ ಸಂಕಲ್ಪದಿಂದ ಜೀವನವನ್ನು ಸಾಗಿಸುತ್ತಾರೆ. ಎಷ್ಟೇ ಸವಾಲುಗಳು ಎದುರಾದರು ದಿಟ್ಟವಾಗಿ ಎದುರಿಸುತ್ತಾರೆ. ಅಚಲ ನಿಷ್ಠೆ ಮತ್ತು ಪೋಷಣೆಯ ಸ್ವಭಾವಕ್ಕೆ ಇವರು ತುಂಬಾ ಹೆಸರುವಾಸಿಯಾಗಿರುತ್ತಾರೆ. ತಮ್ಮ ಪತಿ ಅಥವಾ ಸಂಗಾತಿಗೆ ಪ್ರೀತಿ, ಕಾಳಜಿ ಹಾಗೂ ಹೆಚ್ಚಿನ ಗಮನವನ್ನು ನೀಡುತ್ತಾರೆ. ಸಂಗಾತಿ ತಾನು ತುಂಬಾ ಸುರಕ್ಷಿತ ಎಂಬ ಭಾವನೆ ಮೂಡುವಂತೆ ಮಾಡುತ್ತಾರೆ. ಈ ಮಹಿಳೆಯರ ಸ್ವಭಾವದಿಂದ ಪತಿ ಅಥವಾ ಸಂಗಾತಿ ತಾನು ಏನು ಬೇಕಾದರೂ ಸಾಧಿಸಬಹುದು ಎಂಬ ನಿರ್ಧಾರಕ್ಕೆ ಬರುತ್ತಾನೆ.

ಕನ್ಯಾ ರಾಶಿ

ಈ ರಾಶಿಯ ಮಹಿಳೆಯರು ಪ್ರಾಯೋಗಿಕ ಮತ್ತು ಸಮರ್ಪಿತ ಪಾಲುದಾರರಾಗಿರುತ್ತಾರೆ. ಸಂಬಂಧ ಹಾಗೂ ಕುಟುಂಬದಲ್ಲಿ ಸಾಮರಸ್ಯೆ, ಸ್ಥಿರತೆ ನೆಲೆಸಲು ಪ್ರಯತ್ನಿಸುತ್ತಾರೆ. ಅಚಲವಾದ ಬೆಂಬಲ ಮತ್ತು ನಿಷ್ಠೆಯನ್ನು ಹೊಂದಿರುತ್ತಾರೆ. ಪತ್ನಿಯ ಎಲ್ಲಾ ಕಷ್ಟ-ಸುಖಗಳಲ್ಲಿ ಭಾಗವಹಿಸುತ್ತಾರೆ. ಕುಟುಂಬದ ಬೆಳವಣಿಗೆಗೆ ತಮ್ಮ ಕೈಲಾದ ಸಹಾಯವನ್ನ ಮಾಡುತ್ತಾರೆ. ಪತಿಯ ಪ್ರತಿಯೊಂದು ಕೆಲಸಕ್ಕೂ ಕೈ ಜೋಡಿಸಿ ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅಚಲವಾದ ಬೆಂಬಲ ಮತ್ತು ನಿಷ್ಠೆಯನ್ನು ತೋರುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಕೆಲವು ಮಹಿಳೆಯರು ತಮ್ಮ ಕುಟುಂಬವನ್ನು ಉನ್ನತ ಮಟ್ಟದಲ್ಲಿ ಇಡಲು ಹೋರಾಟ ಮಾಡುತ್ತಾರೆ. ಇವರ ತಾಳ್ಮೆ ಹಾಗೂ ಕಠಿಣ ಪರಿಶ್ರಮದಿಂದ ಕುಟುಂಬದಲ್ಲಿ ಸಂತೋಷ ನೆಲೆಸಲು ಸಾಧ್ಯವಾಗಿರುತ್ತದೆ. ತುಂಬಾ ನಿಷ್ಠಾವಂತರಾಗಿರುತ್ತಾರೆ. ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಲು ಪತಿ ಅಥವಾ ಸಂಗಾತಿಗೆ ನೆರವಾಗುತ್ತಾರೆ. ಇವರಿಗೆ ಗ್ರಹಿಕೆ ಶಕ್ತಿ ಹೆಚ್ಚಿರುತ್ತೆ. ಇದರ ಆಧಾರದ ಮೇಲೆಯೇ ಕುಟುಂಬದವನ್ನು ಉನ್ನತ ರೀತಿಯಲ್ಲಿ ನಡೆಸುತ್ತಾರೆ.

ಮೀನ ರಾಶಿ

ಮೀನ ರಾಶಿಯವರಿಗೆ ಸಹಾನುಭೂತಿ ಮತ್ತು ಆಳವಾದ ಪ್ರೀತಿಯನ್ನು ಹೊಂದಿರುತ್ತಾರೆ. ಅಧ್ಯಾತ್ಮಿಕ ಮಟ್ಟದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ. ಇವರ ನಮ್ಯತೆ ಮತ್ತು ಹೊಂದಾಣಿಕೆಯ ಸ್ವಭಾವದಿಂದಾಗಿ ಸಂಗಾತಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷಕ್ಕೆ ಇವರ ಕೊಡುಗೆ ಅಪಾರವಾಗಿರುತ್ತದೆ. ಯಾರನ್ನೂ ನೋಯಿಸಲು ಇವರು ಬಯಸುವುದಿಲ್ಲ. ತುಂಬಾ ತಾಳ್ಮೆಯಿಂದಾಗಿ ಇವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ