logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Akshaya Tritiya 2024: ಅಕ್ಷಯ ತೃತೀಯ ದಿನ ಈ 5 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ; ಸಂಪತ್ತು, ಸಮೃದ್ಧಿ, ಯಶಸ್ಸು ಪಡೆಯಿರಿ

Akshaya Tritiya 2024: ಅಕ್ಷಯ ತೃತೀಯ ದಿನ ಈ 5 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ; ಸಂಪತ್ತು, ಸಮೃದ್ಧಿ, ಯಶಸ್ಸು ಪಡೆಯಿರಿ

Rakshitha Sowmya HT Kannada

May 03, 2024 06:00 AM IST

google News

ಅಕ್ಷಯ ತೃತೀಯ ದಿನ ಈ 5 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ

  • Akshaya Tritiya 2024: ಅಕ್ಷಯ ತೃತೀಯದ ಶುಭ ದಿನದಂದು ಈ 5 ಮಂತ್ರಗಳನ್ನು ಪಠಿಸಿದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೊತೆಗೆ ನೀವು ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ ಲಕ್ಷ್ಮಿ ದೇವಿಯ ಕೃಪೆ ಕೂಡಾ ನಿಮಗೆ ದೊರೆಯುತ್ತದೆ.

 ಅಕ್ಷಯ ತೃತೀಯ ದಿನ ಈ 5 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ
ಅಕ್ಷಯ ತೃತೀಯ ದಿನ ಈ 5 ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ

ಅಕ್ಷಯ ತೃತೀಯ 2024: ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಶುಭ ಕಾರ್ಯಗಳನ್ನು ಮಾಡಲು ಮತ್ತು ಚಿನ್ನವನ್ನು ಖರೀದಿಸಲು ಅಕ್ಷಯ ತೃತೀಯವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಆಚರಣೆಗೆ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಮಾಡಿದ ಯಾವುದೇ ಕೆಲಸವು ಸಮೃದ್ಧಿ ತರುತ್ತದೆ, ಯಶಸ್ಸು ದೊರೆಯುತ್ತದೆ. ಚಿರಕಾಲ ಉಳಿಯುತ್ತದೆ ಎಂಬ ನಂಬಿಕೆ ಇದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅಕ್ಷಯ ತೃತೀಯ ದಿನದಂದು ಕೈಗೊಳ್ಳುವ ಯಾವುದೇ ಕಾರ್ಯವು ಅಂತ್ಯವಿಲ್ಲದ ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಈ ಶುಭ ದಿನ ಕೆಲವು ಮಂತ್ರಗಳನ್ನು ಪಠಿಸುವುದು ಬಹಳ ಒಳ್ಳೆಯದು. ಇದರಿಂದ ಜೀವನದಲ್ಲಿ ನಿಮಗೆ ಎಲ್ಲಾ ರೀತಿಯ ಸಂತೋಷ ದೊರೆಯುತ್ತದೆ. ಈ ಬಾರಿ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಸಮೃದ್ಧಿಗಾಗಿ ಈ 5 ಶಕ್ತಿಯುತ ಮಂತ್ರಗಳನ್ನು ಪಠಿಸಿ.

ಗಣೇಶ ಮಂತ್ರ: ಓಂ ಗಣಪತಯೇ ನಮಃ

ಗಣಪತಿಯನ್ನು ವಿಘ್ನಗಳ ನಿವಾರಣೆಗಾಗಿ ಪೂಜಿಸಲಾಗುತ್ತದೆ . ಅದಕ್ಕಾಗಿಯೇ ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಗಣೇಶನ ಪೂಜೆ ಮತ್ತು ಗಣೇಶ ಮಂತ್ರವನ್ನು ಪಠಿಸುವುದರಿಂದ, ನಿಮ್ಮ ಅಭಿವೃದ್ಧಿ, ಸುಖ ಸಂತೋಷಕ್ಕೆ ಅಡ್ಡಿ ಬರುವ ಯಾವುದೇ ಅಡೆತಡೆಗಳು ನಿವಾರಣೆಯಾಗುತ್ತವೆ. ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು, ಅದೃಷ್ಟ ಒಲಿಯುತ್ತದೆ.

ಲಕ್ಷ್ಮಿ ಮಂತ್ರ: ಓಂ ಶ್ರೀಂ ಹ್ರೀಂ ಕ್ಲಿಂ ಐಂ ಲಕ್ಷ್ಮೀ ನಾರಾಯಣಾಯ ನಮಃ

ಲಕ್ಷ್ಮಿ ದೇವಿಯನ್ನು ಸಂಪತ್ತು, ಸಮೃದ್ಧಿಯ ಅಧಿ ದೇವತೆ ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯದಂದು ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ. ಆರ್ಥಿಕ ಸ್ಥಿರತೆ ಇರುತ್ತದೆ. ಹೇರಳವಾದ ಆದಾಯದ ಮೂಲಗಳು ದೊರೆಯುತ್ತದೆ. ಆದಾಯ ಹೆಚ್ಚಲಿದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರುತ್ತಾಳೆ.

ಕುಬೇರ ಮಂತ್ರ: ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ| ಧನಧಾನ್ಯಾದಿಪತಯೇ ಧನಧಾನ್ಯಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ

ಕುಬೇರನನ್ನು ಸಂಪತ್ತಿನ ಪ್ರಧಾನ ದೇವರು ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ ದಿನದಂದು ಕುಬೇರನನ್ನು ಪೂಜಿಸುವುದರಿಂದ ಮತ್ತು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಸಮೃದ್ಧಿಗೆ ಯಾವುದೇ ಕೊರತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ. ನೀವು ಎಲ್ಲಾ ವ್ಯವಹಾರದಲ್ಲಿ ಯಶಸ್ಸು ಪಡೆಯುತ್ತೀರಿ. ಸಾಲದ ಸಮಸ್ಯೆ ಇರುವುದಿಲ್ಲ.

ವಿಷ್ಣು ಮಂತ್ರ: ಓಂ ನಮೋ ಭಗವತೇ ವಾಸುದೇವಾಯ ನಮಃ

ವೈಶಾಖ ಮಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಭಗವಾನ್ ವಿಷ್ಣುವನ್ನು ಬ್ರಹ್ಮಾಂಡದ ರಕ್ಷಕ ಮತ್ತು ಧರ್ಮದ ಪಾಲಕ ಎಂದು ಪೂಜಿಸಲಾಗುತ್ತದೆ. ಅಕ್ಷಯ ತೃತೀಯದ ಈ ಶುಭ ದಿನ ವಿಷ್ಣುವಿಗೆ ಸಂಬಂಧಿಸಿದಂತೆ ಈ ಮಂತ್ರವನ್ನು ಪಠಿಸುವುದರಿಂದ ಭಗವಾನ್ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜೀವನದಲ್ಲಿ ಶಾಂತಿ ಇರುತ್ತದೆ. ಅಡೆತಡೆಗಳು ನಿವಾರಣೆಯಾಗುತ್ತವೆ. ಎಲ್ಲಾ ಯಶಸ್ಸು ನಿಮ್ಮದಾಗುತ್ತದೆ.

ದುರ್ಗಾ ಮಂತ್ರ: ಓಂ ದುಂ ದುರ್ಗಯೇ ನಮಃ

ದುರ್ಗೆಯನ್ನು ಬ್ರಹ್ಮಾಂಡವನ್ನು ರಕ್ಷಿಸುವವಳು ಎಂದು ಪೂಜಿಸಲಾಗುತ್ತದೆ. ಅಕ್ಷಯ ತೃತೀಯದಲ್ಲಿ ದುರ್ಗಾ ದೇವಿಗೆ ಸಂಬಂಧಿಸಿದಂತೆ ಈ ಮಂತ್ರವನ್ನು ಪಠಿಸುವುದರಿಂದ ದೇವಿಯ ಅನುಗ್ರಹವಾಗುತ್ತದೆ. ನೀವು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲ್ಪಡುತ್ತೀರಿ. ಇದು ಜೀವನದಲ್ಲಿ ಶಕ್ತಿ, ಧೈರ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯದ ಶುಭ ದಿನದಂದು ಈ ಶಕ್ತಿಯುತ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಎಲ್ಲಾ ಸಂತೋಷ ನಿಮ್ಮದಾಗುತ್ತದೆ. ದೇವರ ಆಶೀರ್ವಾದ ಪಡೆಯಲಿದ್ದೀರಿ. ಈ ಮಂತ್ರಗಳು ಸಂಪತ್ತು, ಯಶಸ್ಸು, ಸಂತೋಷ, ಧನಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ಕೆಲಸ ಮಾಡುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ