logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ರಾಮ ನವಮಿಯಂದು ಏನು ಮಾಡಬೇಕು? ಶ್ರೀರಾಮನಿಗೂ ಧರ್ಮಕ್ಕೂ ಇರುವ ಸಂಬಂಧವೇನು?

Rama Navami 2024: ರಾಮ ನವಮಿಯಂದು ಏನು ಮಾಡಬೇಕು? ಶ್ರೀರಾಮನಿಗೂ ಧರ್ಮಕ್ಕೂ ಇರುವ ಸಂಬಂಧವೇನು?

Rakshitha Sowmya HT Kannada

Apr 16, 2024 06:14 PM IST

google News

ಶ್ರೀರಾಮನವಮಿಯಂದು ರಾಮನನ್ನು ಹೇಗೆ ಪೂಜಿಸಬೇಕು ಎಂಬುದರ ಕುರಿತು ಮಾಹಿತಿ

  • Rama Navami 2024: ಶ್ರೀರಾಮ ಜನಿಸಿದ ದಿನಾಂಕದಂದೇ ಪಟ್ಟಾಭಿಷೇಕ ಹಾಗೂ ಮದುವೆ ಆಯಿತು ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಆದ ದಿನವನ್ನು ಶ್ರೀರಾಮನವಮಿಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಈ ದಿನ ದೇವಸ್ಥಾನದಲ್ಲಿ ಶ್ರೀರಾಮಕಲ್ಯಾಣ ಪಟ್ಟಾಭಿಷೇಕವನ್ನು ನೋಡಿ ಕಲ್ಯಾಣದ ಅಕ್ಷತೆಯನ್ನು ತಲೆ ಮೇಲೆ ಹಾಕಿಕೊಂಡರೆ ಶುಭ ಎಂದು ನಂಬಲಾಗಿದೆ. 

ಶ್ರೀರಾಮನವಮಿಯಂದು ರಾಮನನ್ನು ಹೇಗೆ ಪೂಜಿಸಬೇಕು ಎಂಬುದರ ಕುರಿತು ಮಾಹಿತಿ
ಶ್ರೀರಾಮನವಮಿಯಂದು ರಾಮನನ್ನು ಹೇಗೆ ಪೂಜಿಸಬೇಕು ಎಂಬುದರ ಕುರಿತು ಮಾಹಿತಿ

ಶ್ರೀರಾಮ ನವಮಿ 2024: ಈ ಬಾರಿ ಏಪ್ರಿಲ್‌ 17 ರಂದು ರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚೈತ್ರ ಮಾಸದ ಶುಕ್ಲ ನವಮಿ ತಿಥಿಯಂದು ಪುನರ್ವಸು ನಕ್ಷತ್ರದಲ್ಲಿ ಗುರು ಚಂದ್ರನು ಕರ್ಕಾಟಕ ಲಗ್ನದಲ್ಲಿದ್ದರೆ ರವಿ ಬುಧನು ದಶಮದಲ್ಲಿದ್ದು ಬುಧಾದಿತ್ಯ ಮತ್ತು ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಅಭಿಜಿನ್‌ ಮುಹೂರ್ತದಲ್ಲಿ ಶ್ರೀ ರಾಮನವಮಿಯನ್ನು ಆಚರಿಸಲಾಗುತ್ತದೆ ಎಂದು ಪಂಚಾಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಶರ್ಮಾ ಹೇಳಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಚೈತ್ರ ಮಾಸ ಶುಕ್ಲ ಪಕ್ಷ ನವಮಿಯ ಮಧ್ಯಾಹ್ನ ಪ್ರಸರಣವಿರುವುದರಿಂದ ಏಪ್ರಿಲ್ 17 , ಬುಧವಾರದಂದು ಶ್ರೀರಾಮನವಮಿ ಆಚರಿಸಬೇಕು. ಶ್ರೀರಾಮ ಜನಿಸಿದ ದಿನಾಂಕದಂದೇ ಪಟ್ಟಾಭಿಷೇಕ ಹಾಗೂ ವಿವಾಹ ಕೂಡಾ ನಡೆಯಿತು ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ.

ಶ್ರೀ ರಾಮನವಮಿಯ ದಿನ ಏನು ಮಾಡಬೇಕು?

ಶ್ರೀರಾಮ ನವಮಿಯ ದಿನ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಆ ದಿನ ಉಪವಾಸ ಮಾಡುವುದು ಉತ್ತಮ. ಆ ದಿನ ರಾಮಚಂದ್ರಮೂರ್ತಿಗೆ ಮನೆಯಲ್ಲಿ ಪೂಜೆ ಸಲ್ಲಿಸಬೇಕು ಮತ್ತು ರಾಮಮಂದಿರಕ್ಕೆ ಭೇಟಿ ನೀಡಬೇಕು. ದೇವಸ್ಥಾನಗಳಲ್ಲಿ ನಡೆಯುವ ಶ್ರೀರಾಮ ಸೀತಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಒಳಿತು. ಅಂದು ಸಂಜೆ ರಾಮನಿಗೆ ಪಟ್ಟಾಭಿಷೇಕವಾಯಿತು ಎಂದು ಹೇಳಲಾಗುತ್ತದೆ. ಹನುಮಂತನ ಸಹಾಯದಿಂದ ವಸಿಷ್ಠರು 500 ನದಿಗಳ ನೀರಿನಿಂದ ರಾಮಚಂದ್ರಮೂರ್ತಿಗೆ ಪಟ್ಟಾಭಿಷೇಕ ಮಾಡಿದರು. ಇದಕ್ಕೆ ಸಂಬಂಧಿಸಿದ ಕಥೆಯನ್ನು ಕೇಳಿ ಶ್ರೀರಾಮಚಂದ್ರಮೂರ್ತಿಯ ದರ್ಶನ ಮಾಡಿ ಶ್ರೀರಾಮಕಲ್ಯಾಣ ಪಟ್ಟಾಭಿಷೇಕವನ್ನು ನೋಡಿ ಕಲ್ಯಾಣದ ಅಕ್ಷತೆಯನ್ನು ತಲೆಯಲ್ಲಿ ಹಾಕಿಕೊಂಡರೆ ಒಳ್ಳೆಯದು. ಅಲ್ಲದೆ ಆ ದಿನ ಶ್ರೀರಾಮಕೋಟಿ ಬರೆದು ತಾರಕಮಂತ್ರ, ರಾಮನಾಮಸ್ಮರಣೆ ಮಾಡಿ ಮರುದಿನ ರಾಮಮಂದಿರಕ್ಕೆ ತೆರಳಿ ರಾಮನ ದರ್ಶನ ಮಾಡಿ ಶ್ರೀರಾಮನ ಪೂಜೆ ಮಾಡಿದರೆ ಅಂಥವರಿಗೆ ಶ್ರೀರಾಮ ನವಮಿಯ ಫಲ ದೊರೆಯುತ್ತದೆ.

ಮರ್ಯಾದಾ ಪುರುಷೋತ್ತಮ ಎಂದು ಕರೆಯಲ್ಪಡುವ ಶ್ರೀರಾಮನು ಭಗವಾನ್ ವಿಷ್ಣುವಿನ 7ನೇ ಅವತಾರ. ವಿಷ್ಣುವಿನ ಇತರ ಎಲ್ಲಾ ಅವತಾರಗಳಲ್ಲಿ ರಾಮನನ್ನು ಸಂಪೂರ್ಣ ಅವತಾರ ಎಂದು ಪರಿಗಣಿಸಲಾಗುತ್ತದೆ.

ಸದ್ಗುಣಗಳ ರಾಮ

ಒಮ್ಮೆ ವಾಲ್ಮೀಕಿಯು ನಾರದ ಮಹಾಮುನಿಯನ್ನು ಕುರಿತು ಧರ್ಮ ಮತ್ತು ಪ್ರಾಯೋಗಿಕ ಸತ್ಯದ ಸಾರಾಂಶವಾಗಿ ಉಲ್ಲೇಖಿಸಬಹುದಾದ ವ್ಯಕ್ತಿ ಯಾರು ಎಂದು ಕೇಳುತ್ತಾರೆ "ಪ್ರಾಮಾಣಿಕತೆ, ಶೌರ್ಯ, ಸದಾಚಾರ, ಸತ್ಯನಿಷ್ಠೆ, ಬದ್ಧತೆ, ವಿಶ್ವಾಸ, ದೋಷರಹಿತ ಗುಣ, ಸಹಾನುಭೂತಿ, ಜ್ಞಾನ, ಕೌಶಲ್ಯ, ಸೂಕ್ಷ್ಮ ಮನಸ್ಸು, ಜವಾಬ್ದಾರಿಯುತ ನಡವಳಿಕೆ, ಇಂದ್ರಿಯತೆ, ಸಮಚಿತ್ತತೆ, ಬದ್ಧತೆ, ನಿರ್ಭಯತೆ ಮುಂತಾದ ಗುಣಗಳು ಶ್ರೀರಾಮಚಂದ್ರನಲ್ಲಿ ಮಾತ್ರ ಇದೆ ಎಂದು ನಾರದರು ಉತ್ತರಿಸುತ್ತಾರೆ. ರಾಮೋ ವಿಗ್ರಹವಾನ್ ಧರ್ಮಃ ಎಂದರೆ ರಾಮನು ಧರ್ಮದ ರೂಪದಲ್ಲಿದ್ದಾನೆ. ರಾಮನ ಇಡೀ ಜೀವನವು ಧರ್ಮವನ್ನು ಅನುಸರಿಸಲು ಮಾರ್ಗದರ್ಶಿಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಾವು ರಾಮನ ಜೀವನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಭಗವಾನ್ ರಾಮನು ತನ್ನ ತಂದೆಯ ಮಾತನ್ನು ಪಾಲಿಸಿದ ಮಗ, ನಿಷ್ಠಾವಂತ ವಿದ್ಯಾರ್ಥಿ, ಪರಾಕ್ರಮಿ ಯೋಧ, ಉತ್ತಮ ಸ್ನೇಹಿತ ಮತ್ತು ನೀತಿವಂತ ರಾಜ. ರಾಮನ ಜೀವನದ ಪ್ರತಿಯೊಂದು ಹಂತವೂ ಇತರರಿಗೆ ಮಾದರಿಯಾಗಿದೆ. ಈ ಗುಣವು ಅವನ ಶತ್ರುಗಳಿಗೂ ಪ್ರಿಯವಾಯಿತು. ಭಗವಾನ್ ರಾಮನು ವಿಷ್ಣುವಿನ ಅವತಾರವಾಗಿದ್ದರೂ, ಜಗತ್ತಿನಲ್ಲಿ ಕಷ್ಟ ಸುಖವನ್ನು ಎದುರಿಸುವ ಮಾನವನಾಗಿ ಬದುಕಿದನು. ಮನುಷ್ಯ ಸನ್ಮಾರ್ಗದಲ್ಲಿ ನಡೆದರೆ ದೇವರಾಗಬಹುದು ಎಂಬುದನ್ನು ಸಾಬೀತುಪಡಿಸಿದರು. ಶ್ರೀರಾಮನ ಸಾಗಿದ ಹಾದಿಯು ಎಲ್ಲಾ ವಯೋಮಾನದವರಿಗೂ ಆದರ್ಶಪ್ರಾಯರನ್ನಾಗಿಸಿದೆ.

ಭಗವಾನ್ ರಾಮನ ಗುಣಲಕ್ಷಣಗಳನ್ನು ವಿವರಿಸುವ ಸ್ತೋತ್ರಗಳು

ಅನ್ನಮಾಚಾರ್ಯ, ಭಕ್ತರಾಮದಾಸ, ತ್ಯಾಗರಾಜ, ಪುರಂದರದಾಸ, ಮುತ್ತುಸ್ವಾಮಿ ದೀಕ್ಷಿತರಂತಹ ಅನೇಕರು, ಹಾಡುಗಳು ಮತ್ತು ಕೀರ್ತನೆಗಳ ಮೂಲಕ ಶ್ರೀರಾಮನ ಭಕ್ತಿಯನ್ನು ವ್ಯಕ್ತಪಡಿಸಿದರು. ಅವರು ರಾಮಾಯಣದ ಸಾರವನ್ನು ತೆಗೆದುಕೊಂಡು ಅವರ ಜೀವನದ ಹಲವು ಮಜಲುಗಳನ್ನು, ಅವರ ವ್ಯಕ್ತಿತ್ವದ ಹಲವು ಗುಣಗಳನ್ನು ಹೊಗಳಿದ್ದಾರೆ. ಅವರ ಬರಹಗಳಲ್ಲಿ ನವವಿದಭಕ್ತಿ ಪ್ರಕಟವಾಗಿದೆ. ಕೆಲವು ಸ್ತೋತ್ರಗಳು ಪುರುಷೋತ್ತಮನನ್ನು ಕೀರ್ತಿಸುತ್ತವೆ. ಇನ್ನು ಕೆಲವರು ರಾಮನ ಸೌಂದರ್ಯವನ್ನು ವರ್ಣಿಸುತ್ತಾರೆ. ಇತರರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ