logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೊಹರಂ 2024: ಅಶುರಾ ಆಚರಣೆ ಯಾವಾಗ; ಈ ಸಮಯದಲ್ಲಿ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುವುದೇಕೆ?

ಮೊಹರಂ 2024: ಅಶುರಾ ಆಚರಣೆ ಯಾವಾಗ; ಈ ಸಮಯದಲ್ಲಿ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುವುದೇಕೆ?

HT Kannada Desk HT Kannada

Jul 09, 2024 10:12 AM IST

google News

ಮೊಹರಂ 2024: ಅಶುರಾ ಆಚರಣೆ ಯಾವಾಗ; ಈ ಸಮಯದಲ್ಲಿ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುವುದೇಕೆ?

  • Muharram 2024: ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಸಲುವಾಗಿ ಮುಸ್ಲಿಂಮರು ಪ್ರತಿ ವರ್ಷ ಮೊಹರಂ ಆಚರಿಸುತ್ತಾರೆ. 9 ದಿನಗಳ ಕಾಲ ಉಪವಾಸ ಆಚರಿಸಿ 10ನೇ ದಿನ ಅಶುರಾ ಎಂದು ಆಚರಿಸಲಾಗುತ್ತದೆ. ಈ ಬಾರಿ ಜುಲೈ 17 ರಂದು ಅಶುರಾ ಆಚರಿಸಲಾಗುತ್ತದೆ. 

ಮೊಹರಂ 2024: ಅಶುರಾ ಆಚರಣೆ ಯಾವಾಗ; ಈ ಸಮಯದಲ್ಲಿ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುವುದೇಕೆ?
ಮೊಹರಂ 2024: ಅಶುರಾ ಆಚರಣೆ ಯಾವಾಗ; ಈ ಸಮಯದಲ್ಲಿ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುವುದೇಕೆ?

Muharram 2024: ಮುಸ್ಲಿಂಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಮೊಹರಂ ಕೂಡಾ ಒಂದು. ಮೊಹರಂ, ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಮುಸ್ಲಿಮರಿಗೆ ಮತ್ತೊಂದು ಪವಿತ್ರ ತಿಂಗಳಾಗಿದೆ. ಮೊಹರಂನ ಮೊದಲ ದಿನವನ್ನು ಇಸ್ಲಾಮಿಕ್ ಹೊಸ ವರ್ಷ ಅಥವಾ ಅಲ್ ಹಿಜ್ರಿ ಅಥವಾ ಅರೇಬಿಕ್ ಹೊಸ ವರ್ಷ ಎಂದು ಕರೆಯಲಾಗುತ್ತದೆ. ಈ ಬಾರಿ ಜುಲೈ 8 ರಿಂದ ಮೊಹರಂ ಆರಂಭವಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಜುಲೈ 17 ರಂದು ಅಶುರಾ ಆಚರಣೆ

ಪ್ರವಾದಿ ಮುಹಮ್ಮದ್ ಮಕ್ಕಾದಿಂದ ಮದೀನಕ್ಕೆ ವಲಸೆ ಬಂದ ಈ ಸಮಯದಲ್ಲಿ ಈ ತಿಂಗಳು ಪ್ರಪಂಚದಾದ್ಯಂತ ಇರುವ ಮುಸ್ಲಿಮರಿಗೆ ಬಹಳ ಮಹತ್ವದ ದಿನವಾಗಿದೆ. ಸುನ್ನಿ ಮತ್ತು ಶಿಯಾ ಎರಡೂ ಪಂಗಡಗಳು ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌, ಚಂದ್ರನ ಚಲನೆಯನ್ನು ಆಧರಿಸಿದೆ, ಆದ್ದರಿಂದ ಮೊಹರಂನ ದಿನಾಂಕಗಳು ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ ಬದಲಾಗುತ್ತವೆ.

ಚಂದ್ರನ ಚಕ್ರವನ್ನು ಆಧರಿಸಿ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ, ಮೊರಾಕೊದಲ್ಲಿ ಮೊಹರಂ ಆಚರಿಸುತ್ತಾರೆ, ಸೌದಿ ಅರೇಬಿಯಾ, ಯುಎಇ, ಓಮನ್ ಮುಂತಾದ ಗಲ್ಫ್ ದೇಶಗಳಲ್ಲಿ ಚಂದ್ರನ ತಿಂಗಳ ನಂತರ ಒಂದು ದಿನ ಆಚರಿಸಲಾಗುತ್ತದೆ. ಈ ಬಾರಿ ಜುಲೈ 17ರಂದು ಮೊಹರಂ ಆಚರಿಸಲಾಗುತ್ತಿದೆ.

ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸಲಾಗುವ ದಿನವೇ ಮೊಹರಂ. ಮೊಹರಂ ತಿಂಗಳ 10 ನೇ ದಿನವನ್ನು ಅಶುರಾ ದಿನವಾಗಿ ಆಚರಿಸಲಾಗುತ್ತದೆ, ಕರ್ಬಲಾ ಕದನ ನಡೆದ ದಿನವೇ ಅಶುರಾ. ಈ ಯುದ್ಧದಲ್ಲಿ ಪ್ರವಾದಿ ಮುಹಮ್ಮದ್ ಅವರ ಪ್ರೀತಿಯ ಮೊಮ್ಮಗ ಇಮಾಮ್ ಹುಸೇನ್ ಕ್ರೂರವಾಗಿ ಕೊಲ್ಲಲ್ಪಟ್ಟರು. ಮೊದಲ ಇಸ್ಲಾಮಿಕ್ ರಾಜ್ಯದ ಸ್ಥಾಪನೆಗೆ ಕಾರಣವಾದ ಹೋರಾಟವನ್ನು ನಿಷೇಧಿಸಿದಾಗ ಅವರನ್ನು ಕ್ರೂರವಾಗಿ ಕೊಲ್ಲಲಾಯಿತು. ಇದು ತರುವಾಯ ಮೊದಲ ಇಸ್ಲಾಮಿಕ್ ರಾಜ್ಯದ ಸ್ಥಾಪನೆಗೆ ಕಾರಣವಾಯಿತು. ಹುಸೇನ್ ಇಬ್ನ್ ಅಲಿಯ ಮರಣದ ನೆನಪಿಗಾಗಿ ಮೊಹರಂ ಆಚರಿಸಲಾಗುತ್ತದೆ. ಈ ಪವಿತ್ರ ತಿಂಗಳನ್ನು ಹದೀಸ್‌ಗಳಲ್ಲಿ ಅಲ್ಲಾಹನ ತಿಂಗಳು ಎಂದೂ ಕರೆಯಲಾಗುತ್ತದೆ.

ಮುಸ್ಲಿಮರು ದೇಹ ದಂಡಿಸಿಕೊಳ್ಳುವುದೇಕೆ?

ಹುಸೇನ್ ಅಲಿ ಅವರ ಮರಣದ ಸ್ಮರಣಾರ್ಥವಾಗಿ ಮುಸ್ಲಿಮರು 9 ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ. ಅಶುರಾ ದಿನದಂದು ಅಂದರೆ ಮೊಹರಂ 10ನೇ ದಿನದಂದು ಉಪವಾಸ ಮುರಿಯುತ್ತಾರೆ. ಮೊಹರಂನ್ನು ಸುನ್ನಿ ಮತ್ತು ಶಿಯಾ ಮುಸ್ಲಿಮರು ಶೋಕಾಚರಣೆಯ ದಿನವಾಗಿ ಆಚರಿಸುತ್ತಾರೆ. ಶಿಯಾಗಳು ಈ ಪವಿತ್ರ ದಿನವನ್ನು ಶೋಕದ ದಿನವನ್ನಾಗಿ ಆಚರಿಸುತ್ತಾರೆ. ಶಿಯಾ ಮುಸ್ಲಿಮರು ಶೋಕ ಮೆರವಣಿಗೆಗಳನ್ನು ನಡೆಸುತ್ತಾರೆ. ದುಃಖದಿಂದ ತಮ್ಮ ಎದೆಯನ್ನು ಹೊಡೆದುಕೊಳ್ಳುತ್ತಾರೆ. ಹರಿತವಾದ ಆಯುಧಗಳಿಂದ ತಮ್ಮ ದೇಹವನ್ನು ರಕ್ತ ಬರುವವರೆಗೂ ದಂಡಿಸಿಕೊಳ್ಳುತ್ತಾರೆ. ಮಸೀದಿಗಳಲ್ಲಿ ಶೋಕಾಚರಣೆ ಮಾಡುತ್ತಾರೆ.

ಮೊಹರಂ ತಿಂಗಳಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಹುಸೇನ್ ಇಬ್ನ್ ಅಲಿ ಅವರಿಗೆ ಸಂತಾಪ ಸೂಚಿಸಲು ಆಚರಿಸಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ