logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ಕುಶನಾಭನ ಮಕ್ಕಳಿಗೆ ತೊಂದರೆ ನೀಡಿದ ವಾಯುದೇವ, ರಾಮ–ಲಕ್ಷ್ಮಣರಿಗೆ ಕುಶ ಸಾಮ್ರಾಜ್ಯದ ಕಥೆ ಹೇಳಿದ ವಿಶ್ವಾಮಿತ್ರರು

ರಾಮಾಯಣ: ಕುಶನಾಭನ ಮಕ್ಕಳಿಗೆ ತೊಂದರೆ ನೀಡಿದ ವಾಯುದೇವ, ರಾಮ–ಲಕ್ಷ್ಮಣರಿಗೆ ಕುಶ ಸಾಮ್ರಾಜ್ಯದ ಕಥೆ ಹೇಳಿದ ವಿಶ್ವಾಮಿತ್ರರು

Reshma HT Kannada

Sep 20, 2024 05:35 PM IST

google News

ವಿಶ್ವಾಮಿತ್ರರೊಂದಿಗೆ ರಾಮ ಲಕ್ಷ್ಮಣರು

    • ಬ್ರಹ್ಮದೇವನ ಮಗ ಕುಶನಿಗೆ 4 ಮಂದಿ ಮಕ್ಕಳು. ಅವರಲ್ಲಿ ಒಬ್ಬ ಕುಶನಾಭ. ಕುಶನಾಭನಿಗೆ 100 ಮಂದಿ ಹೆಣ್ಣುಮಕ್ಕಳು. ಅವರು ಮಹಾನ್ ಸುಂದರಿಯರು. ಅವರ ಸೌಂದರ್ಯಕ್ಕೆ ಮಾರು ಹೋಗುವ ವಾಯುದೇವ ಅವರಿಗೆ ತೊಂದರೆ ನೀಡುತ್ತಾನೆ. ವಿಶ್ವಾಮಿತ್ರರು ರಾಮ–ಲಕ್ಷಣರಿಗೆ ಹೇಳಿದೆ ಕುಶ ಸಾಮ್ರಾಜ್ಯದ ಕಥೆಯನ್ನು ನೀವೂ ತಿಳಿಯಿರಿ. (ಬರಹ: ಎಚ್. ಸತೀಶ್‌, ಜ್ಯೋತಿಷಿ)
ವಿಶ್ವಾಮಿತ್ರರೊಂದಿಗೆ ರಾಮ ಲಕ್ಷ್ಮಣರು
ವಿಶ್ವಾಮಿತ್ರರೊಂದಿಗೆ ರಾಮ ಲಕ್ಷ್ಮಣರು (PC: The Hans India)

ಶ್ರೀ ರಾಮ ಲಕ್ಷ್ಮಣರು ವಿಶ್ವಾಮಿತ್ರರಿಗೆ ಕೈ ಮುಗಿದು, ಮಹರ್ಷಿಗಳೇ ದಯಮಾಡಿ ನಮಗೆ ಈ ಸುಂದರವಾದ ದೇಶದ ಬಗ್ಗೆ ತಿಳಿಸಿಕೊಡಿ ಎಂದು ಕೇಳುತ್ತಾರೆ. ವಿಶ್ವಾಮಿತ್ರರು ಅವರಿಗೆ ಸದ್ಯ ಅವರಿದ್ಧ ಆ ಸಾಮ್ರಾಜ್ಯದ ಬಗ್ಗೆ ಕಥೆ ಹೇಳಲು ಆರಂಭಿಸುತ್ತಾರೆ. ಅವರು ಹೇಳುತ್ತಿರುವುದು ಬ್ರಹ್ಮ ಮೊಮ್ಮಗ ಕುಶನಾಭನ ಸಾಮ್ರಾಜ್ಯ ಹಾಗೂ ಅವರ 100 ಮಂದಿ ಅಪ್ಸರೆಯಂತಹ ಹೆಣ್ಣುಮಕ್ಕಳ ಕಥೆ. ಕುಶನಾಭನ ಮಕ್ಕಳಿಗೆ ಬ್ರಹ್ಮದೇವ ತೊಂದರೆ ನೀಡುತ್ತಾನೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಮುಂದೆ ಓದಿ. 

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಯಾರೀ ಕುಶನಾಭ 

ಬ್ರಹ್ಮನಿಗೆ ಒಬ್ಬ ಮಗನಿದ್ದನು. ಅವನ ಹೆಸರು ಕುಶ. ಇವನು ಮಹಾ ತಪಸ್ವಿಯಾಗಿದ್ದನು. ಪ್ರತಿಯೊಂದು ವಿಚಾರಗಳಲ್ಲಿಯೂ ಅವನಿಗೆ ಯಶಸ್ಸು ದೊರೆಯುತ್ತಿತ್ತು. ಇವನಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುವುದೆಂದರೆ ಬಹಳ ಇಷ್ಟ. ಇವನು ನ್ಯಾಯ, ನೀತಿ, ಧರ್ಮದಿಂದ ರಾಜ್ಯದ ಆಡಳಿತ ಮಾಡುತ್ತಿದ್ದ. ಇವನು ಸಜ್ಜನರನ್ನು ಮತ್ತು ಮಹಾತ್ಮರನ್ನು ಗೌರವದಿಂದ ಕಂಡು ಅವರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಿದ್ದ. ಅವನ ರೀತಿ ನೀತಿಗೆ ಹೊಂದಿಕೊಳ್ಳುವಂತಹ ಸರ್ವ ಗುಣಗಳನ್ನು ಹೊಂದಿದ್ದ ಮಡದಿ ಅವನಿಗಿದ್ದಳು. ಆಕೆಯ ಹೆಸರು ವೈದರ್ಭೀ. ಈ ದಂಪತಿಗಳಿಗೆ ಕುಶಾಂಬ, ಕುಶನಾಭ, ಅಮೂರ್ತರಜಸ ಮತ್ತು ವಸು ಎಂಬ ನಾಲ್ಕು ಜನ ಮಕ್ಕಳಿದ್ದರು. ಕೇವಲ ಕ್ಷತ್ರಿಯ ಧರ್ಮವನ್ನು ಮಾತ್ರವಲ್ಲದೆ ಧಾರ್ಮಿಕ ಪ್ರವೃತ್ತಿಯ ಬಗ್ಗೆಯೂ ಕುಶನು ತಿಳಿಸುತ್ತಾನೆ.

ತನ್ನ ಮಕ್ಕಳನ್ನು ಕುರಿತು ಕುಶನು ‘ಮೊದಲು ನಮಗೆ ನಮ್ಮ ಪ್ರಜೆಗಳೇ ಮುಖ್ಯರಾಗುತ್ತಾರೆ. ಆದ್ದರಿಂದ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ರಾಜ್ಯಭಾರ ಮಾಡಬೇಕು‘ ಎಂದು ತಿಳಿಸುತ್ತಾನೆ. ಜನೋಪಯೋಗಿ ಕೆಲಸ ಕಾರ್ಯಗಳಿಂದ ಮತ್ತು ಗುರುಹಿರಿಯರ ಸೇವೆಯಿಂದ ಪುಣ್ಯವನ್ನು ಪಡೆಯಬಹುದು ಎಂದು ಹೇಳುತ್ತಾನೆ. ಇದರಿಂದ ಉತ್ತೇಜಿತರಾದ ಅವನ ಮಕ್ಕಳು ಕೌಶಾಂಬಿ, ಮಹೋದಯ, ಧರ್ಮಾರಣ್ಯ ಮತ್ತು ಗಿರಿವ್ರಜ ಎಂಬ ಸುಂದರವಾದ ಪಟ್ಟಣಗಳನ್ನು ನಿರ್ಮಿಸುತ್ತಾರೆ.

‘ಈಗ ನಾವು ಇರುವ ಪ್ರದೇಶವು ಸಹ ವಸು ನಿರ್ಮಿಸಿದ ಪಟ್ಟಣಕ್ಕೆ ಸೇರಿದೆ. ಈ ಪಟ್ಟಣಕ್ಕೆ ಗಿರಿವಜಾ ಎಂಬ ಹೆಸರು ಇದೆ. ಈ ಹೆಸರು ಬರಲು ಒಂದು ಕಾರಣವಿದೆ. ವಿಶಾಲವಾದ ಮತ್ತು ಆಕರ್ಷಕವಾದ 5 ಪರ್ವತಗಳು ಇಲ್ಲಿವೆ. ಆದ್ದರಿಂದ ಇದನ್ನು ಗಿರಿವ್ರಜ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಹರಿಯುತ್ತಿರುವ ನದಿಯ ಹೆಸರು ಶೋಣ. ಈ ನದಿಯ ಉಗಮವು ಮಾಗದ ದೇಶದಲ್ಲಿ ಆಗುತ್ತದೆ. ಮಾಗದ ದೇಶದಲ್ಲಿ ಸಸ್ಯ ಸಂಪತ್ತು ಹೆಚ್ಚಾಗಿದೆ‘ ಎಂದು ವಿಶ್ವಾಮಿತ್ರರು ರಾಮಲಕ್ಷಣರಿಗೆ ಕಥೆ ಹೇಳುತ್ತಾ ಸಾಗುತ್ತಾರೆ.  

ಕುಶನಾಭ  ಘೃತಾಚೀ ಎಂಬ ಅಪ್ಸರೆಯ ಜೊತೆ ಮದುವೆಯಾಗುತ್ತಾರೆ. ಇವರಿಗೆ 100 ಮಂದಿ ಹೆಣ್ಣು ಮಕ್ಕಳಿರುತ್ತಾರೆ. ಅವರು ಮದುವೆಯ ವಯಸ್ಸನ್ನು ತಲುಪುತ್ತಾರೆ. ಇವರಷ್ಟು ರೂಪವಂತೆಯರಾದ ಯುವತಿಯರು ಬೇರಾರು ಇರುವುದಿಲ್ಲ. ಇವರನ್ನು ಕಂಡ ವಾಯುದೇವನು ಈ ಕನ್ಯೆಯರಿಗೆ ‘ನನಗೆ ನಿಮ್ಮ ಮೇಲೆ ಮನಸ್ಸಾಗಿದೆ. ನೀವು ನನ್ನನ್ನು ವಿವಾಹವಾದಲ್ಲಿ ನಿಮಗೆ ಮನುಷ್ಯರೂಪವೂ ಹೊರಟು ಹೋಗಿ ದೈವತ್ವ ಉಂಟಾಗುತ್ತದೆ. ಇದರಿಂದ ನಿಮ್ಮ ಆಯುಷ್ಯವು ಹೆಚ್ಚುತ್ತದೆ. ಆದ್ದರಿಂದ ನನ್ನನ್ನು ವಿವಾಹವಾಗಿ ಅಮರತ್ವವನ್ನು ಪಡೆಯಿರಿ. ಶಾಶ್ವತವಾಗಿ ನೀವು ಯುವತಿಯರಾಗಿ ಇರುವಿರಿ‘ ಎಂದು ತಿಳಿಸುತ್ತಾನೆ.

ಇದನ್ನು ನಂಬದ ಆ ಯುವತಿಯರು ವಾಯುದೇವರನ್ನು ಅಪಹಾಸ್ಯ ಮಾಡುತ್ತಾರೆ. ನೀನು ಕೇವಲ ಮನುಷ್ಯರಲ್ಲದೇ ಪ್ರಾಣಿ ಪಕ್ಷಿಯ ಹೃದಯದಲ್ಲಿಯೂ ನೆಲೆಸಿರುವೆ. ಅಂದರೆ ನಮ್ಮಲ್ಲಿಯೂ ನೀನಿರುವೆ. ಹೀಗಿದ್ದ ಸಂದರ್ಭದಲ್ಲಿಯೂ ನಿನಗೆ ನನ್ನ ಹೃದಯದ ಆಸೆ ಏನೆಂಬುದು ತಿಳಿಯದೆ ಹೋಯಿತಲ್ಲ. ನಿನ್ನ ಈ ಮಾತುಗಳು ನಮಗೆ ಅವಮಾನವನ್ನು ಉಂಟುಮಾಡುತ್ತವೆ. ನಾವು ಮಹಾತ್ಮನಾದ ಕುಶನಾಭನ ಪುತ್ರಿಯರು. ನಮಗೆ ನಿಮ್ಮನ್ನು ಸ್ಥಾನಭ್ರಷ್ಟನನ್ನಾಗಿ ಮಾಡಬಲ್ಲ ಸಾಮರ್ಥ್ಯವಿದೆ. ನಿನಗೆ ಶಾಪವನ್ನು ನೀಡಿ ನಾವು ಗಳಿಸಿರುವ ತಪಸ್ಸಿನ ಫಲವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೇ ಕಾರಣಕ್ಕೂ ನಮ್ಮ ತಂದೆ ತಾಯಿಯ ತೀರ್ಮಾನದ ವಿರುದ್ಧ ಯಾರನ್ನು ನಾವು ವಿವಾಹವಾಗಲಾರೆವು. ತಂದೆ ತಾಯಿಯ ಮಹತ್ವವು ದೇವತೆಗಳಿಗಿಂತ ನಮ್ಮಂತ ಮನುಷ್ಯರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಇದು ನಿನಗೆ ಅರ್ಥವಾಗದ ವಿಚಾರ. ನಮ್ಮ ತಂದೆ ತಾಯಿಯರು ಒಪ್ಪಿದ ವರನನ್ನೇ ನಾವು ಪತಿಯನ್ನಾಗಿ ಸ್ವೀಕರಿಸುತ್ತೇವೆ. ನಿನ್ನ ಮಾತುಗಳಿಗೆ ಇಲ್ಲಿ ಯಾವುದೇ ಬೆಲೆ ಇಲ್ಲ ಹೊರಟು ಹೋಗು ಎಂದು ತಿಳಿಸುತ್ತಾರೆ.

ಅವರ ಮಾತುಗಳನ್ನು ಕೇಳಿದ ವಾಯುದೇವನಿಗೆ ಅತಿಯಾದ ಕೋಪ ಬರುತ್ತದೆ. ತಕ್ಷಣವೇ ಅವರ ದೇಹವನ್ನು ಪ್ರವೇಶಿಸಿ ಅವರ ಆರೋಗ್ಯವನ್ನು ಹಾಳು ಮಾಡುತ್ತಾನೆ. ಇದನ್ನು ಕಂಡ ಕುಶನಾಭನು ನಿಮ್ಮ ಈ ಅವಸ್ಥೆಗೆ ಕಾರಣರಾದವರು ಯಾರು? ಎಂದು ಕೇಳುತ್ತಾನೆ. ಆದರೆ ಹೆಣ್ಣು ಮಕ್ಕಳು ಮಾತನಾಡದ ಸ್ಥಿತಿಯಲ್ಲಿ ಇರುತ್ತಾರೆ. ಯಾಕೆಂದರೆ ಅವರು ವಾಯುದೇವನನ್ನೇ ಅಪಹಾಸ್ಯ ಮಾಡಿರುತ್ತಾರೆ. ಹೀಗೆ ವಾಯುದೇವ ಕುಶನಾಭನ ಮಕ್ಕಳಿಗೆ ವಾಯುದೇವ ತೊಂದರೆ ನೀಡಿದ ಕಥೆಯನ್ನು ರಾಮ–ಲಕ್ಷಣರಿಗೆ ವಿವರಿಸುತ್ತಾರೆ ವಿಶ್ವಾಮಿತ್ರ. 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ