logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುಳಿ ಕೆನ್ನೆ ಚೆಲುವೆಯರ ಅದೃಷ್ಟ ಹೇಗಿರುತ್ತೆ; ಇವರ ಜೀವನವೇ ವಿಭಿನ್ನ, ಕೆನ್ನೆಯ ಆಕಾರವು ಹೇಳುತ್ತೆ ವ್ಯಕ್ತಿತ್ವ

ಗುಳಿ ಕೆನ್ನೆ ಚೆಲುವೆಯರ ಅದೃಷ್ಟ ಹೇಗಿರುತ್ತೆ; ಇವರ ಜೀವನವೇ ವಿಭಿನ್ನ, ಕೆನ್ನೆಯ ಆಕಾರವು ಹೇಳುತ್ತೆ ವ್ಯಕ್ತಿತ್ವ

Raghavendra M Y HT Kannada

Sep 26, 2024 07:46 AM IST

google News

ಗುಳಿಕೆನ್ನೆ ಚೆಲುವೆಯರ ಅದೃಷ್ಟ ಹೇಗಿರುತ್ತೆ, ಅವರು ಜೀವನದಲ್ಲಿ ಹೇಗೆಲ್ಲಾ ಇರುತ್ತಾರೆ ಅನ್ನೋದನ್ನು ತಿಳಿಯೋಣ.

    • ಕೆನ್ನೆ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ಉದ್ದ ಇದ್ದರೆ, ಮತ್ತೊಬ್ಬರಿಗೆ ಅಗಲ, ಉಬ್ಬಿಕೊಂಡಂತೆ ಹೀಗೆಲ್ಲಾ ಇರುತ್ತೆ. ಗುಳಿಕೆನ್ನೆ, ಅಲ್ಲಲ್ಲಿ ಮಚ್ಚೆಗಳು ಇರುವವರು ಇದ್ದಾರೆ. ಗುಳಿಕೆನ್ನೆ ಇದ್ದವರ ಅದೃಷ್ಟ ಹೇಗಿರುತ್ತೆ ಅನ್ನೋದನ್ನ ತಿಳಿಯೋಣ. (ಬರಹ: ಜ್ಯೋತಿಷಿ ಎಚ್‌. ಸತೀಶ್)
ಗುಳಿಕೆನ್ನೆ ಚೆಲುವೆಯರ ಅದೃಷ್ಟ ಹೇಗಿರುತ್ತೆ, ಅವರು ಜೀವನದಲ್ಲಿ ಹೇಗೆಲ್ಲಾ ಇರುತ್ತಾರೆ ಅನ್ನೋದನ್ನು ತಿಳಿಯೋಣ.
ಗುಳಿಕೆನ್ನೆ ಚೆಲುವೆಯರ ಅದೃಷ್ಟ ಹೇಗಿರುತ್ತೆ, ಅವರು ಜೀವನದಲ್ಲಿ ಹೇಗೆಲ್ಲಾ ಇರುತ್ತಾರೆ ಅನ್ನೋದನ್ನು ತಿಳಿಯೋಣ.

ಕೆಲವರಿಗೆ ತಮ್ಮ ವ್ಯಕ್ತಿತ್ವವನ್ನು ತಿಳಿಯಲು ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ಕೆನ್ನೆ ಗುಂಡಾಗಿದ್ದು, ಅದರ ಮಧ್ಯದಲ್ಲಿ ಗುಳಿ ಇರುತ್ತದೆ. ಇದನ್ನು ಗುಳಿಕೆನ್ನೆ ಎಂದು ಕರೆಯಲಾಗುತ್ತೆ. ಇಂಥ ಗುಳಿಕೆನ್ನೆ ಇರುವವರ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯೋಣ. ಗುಳಿಕೆನ್ನೆಯವರ ಜೀವನವೇ ವಿಶೇಷವಾಗಿರುತ್ತದೆ. ಇವರನ್ನು ಅದೃಷ್ಟವಂತರು ಎಂದು ಹೇಳಬಹುದು. ಚಿಕ್ಕ ವಯಸ್ಸಿನಲ್ಲಿ ಇವರು ಜನಾನುರಾಗಿರುತ್ತಾರೆ. ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬೇರೆಯವರಿಂದ ಮಾಡಿಸಿಕೊಳ್ಳುತ್ತಾರೆ. ಇವರು ಸೋಮಾರಿಗಳಲ್ಲ. ಆದರೆ ಇವರಿಗೆ ಸಿಗುವ ಉತ್ತಮ ಅವಕಾಶ ಮತ್ತು ಬೇರೆಯವರ ಸಹಕಾರ ಯಾವುದೇ ಕೆಲಸವನ್ನು ಮಾಡಬಲ್ಲದು. ಚಿಕ್ಕ ಮಕ್ಕಳಲ್ಲಿ ಆರೋಗ್ಯದ ತೊಂದರೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ತೋರಿದಲ್ಲಿ ಕಲಿಕೆಯಲ್ಲಿ ಉನ್ನತ ಸ್ಥಾನಮಾನ ಗಳಿಸಬಹುದು. ಆದರೆ ಇವರು ಓದಿನ ವಿಚಾರದಲ್ಲಿಯೂ ಲೆಕ್ಕಾಚಾರದ ಸ್ವಭಾವವನ್ನು ತೋರಿಸುತ್ತಾರೆ. ಪರೀಕ್ಷೆಗೆ ಬರಬಹುದಾದ ವಿಷಯಗಳನ್ನು ಅಷ್ಟೇ ಅಧ್ಯಯನ ಮಾಡುವುದು ಇವರ ಗುಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕೆಲವೊಮ್ಮೆ ಇವರ ನಿರೀಕ್ಷೆಯಂತೆ ಓದಿದ ವಿಚಾರಗಳು ಮಾತ್ರ ಪರೀಕ್ಷೆಗಳಲ್ಲಿ ಬರುತ್ತವೆ. ಇವರ ಮುಖವನ್ನು ನೋಡಿದವರಿಗೆ ಸಹಾಯ ಮಾಡಬೇಕೆನ್ನುವ ಮನಸ್ಸು ಉಂಟಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಚಿಕ್ಕಂದಿನಿಂದಲೇ ಇವರು ಜಿಪುಣತನ ತೋರಿಸುತ್ತಾರೆ. ಬರುವ ಆದಾಯದಲ್ಲಿ ಕನಿಷ್ಠ ಪಾಲನ್ನಾದರೂ ಉಳಿಸುವುದು ಇವರ ಗುರಿಯಾಗಿರುತ್ತದೆ. ವಿದ್ಯಾಭ್ಯಾಸದ ಸಮಯದಲ್ಲೇ ಹಣ ಸಂಪಾದನೆ ಆರಂಭಿಸಿರುತ್ತಾರೆ. ಇವರಲ್ಲಿನ ಅಪಾರ ಬುದ್ಧಿಶಕ್ತಿಗೆ ಎಲ್ಲರೂ ತಲೆಗೆ ದೂಗುತ್ತಾರೆ. ಉದ್ಯೋಗದಲ್ಲಿ ಇವರಿಗೆ ಅನುಕೂಲವಾಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ.

ಜಗಳಕ್ಕೆ ಅವಕಾಶ ನೀಡದೆ ಎಲ್ಲರಿಗೂ ಮೆಚ್ಚುಗೆಯಾಗುವಂತೆ ಮಾತನಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇವರ ವೈವಾಹಿಕ ಜೀವನವು ಮಿಶ್ರ ಫಲಿತಾಂಶಗಳಿಂದ ಕೂಡಿರುತ್ತೆ, ಸೋಲು ಗೆಲುವುಗಳನ್ನು ಕಾಣುತ್ತಾರೆ. ಇವರ ಸಂಗಾತಿಗೆ ಇವರ ಮನಸ್ಸಿನಲ್ಲಿರುವ ವಿಚಾರಗಳು ಅರ್ಥವಾಗುವುದಿಲ್ಲ. ದಂಪತಿಯಲ್ಲಿ ಪರಸ್ಪರ ನಂಬಿಕೆಯ ಕೊರತೆ ಕಂಡುಬರುತ್ತದೆ. ತಮ್ಮ ಜೀವನ ನಡೆಸಲು ಇವರು ಯಾರನ್ನೂ ಆಶ್ರಯಿಸುವುದಿಲ್ಲ. ನಿತ್ಯ ಜೀವನಕ್ಕೆ ಬೇಕಾದ ಹಣವನ್ನು ಸಂಪಾದಿಸುವ ಛಲ ಇವರಿಗೆ ಇರುತ್ತದೆ. ವಯಸ್ಸಾದ ನಂತರವೂ ಇವರು ಸ್ವತಂತ್ರವಾದ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ.

ಮೀನಿನ ಹೊಟ್ಟೆಯ ಆಕಾರದಂತೆ ಕೆನ್ನೆ ಇರುವವರ ವ್ಯಕ್ತಿತ್ವ ಹೇಗಿರುತ್ತೆ?

ಕೆಲವರ ಕೆನ್ನೆಯು ಮೀನಿನ ಹೊಟ್ಟೆಯ ಆಕಾರದಂತೆ ಇರುತ್ತದೆ. ಸಾಮಾನ್ಯವಾಗಿ ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇವರ ಮನಸ್ಸಿನ ಎಲ್ಲಾ ಆಸೆ ಆಕಾಂಕ್ಷೆಗಳು ಸುಲಭವಾಗಿ ಈಡೇರುತ್ತವೆ. ಮಕ್ಕಳಿದ್ದಾಗಲೂ ಸಹ ಇವರು ಐಷಾರಾಮಿ ಜೀವನ ನಡೆಸುತ್ತಾರೆ. ತಂದೆ ಅಥವಾ ತಾಯಿಯಿಂದ ಹಣದ ಸಹಾಯ ದೊರವ ಕಾರಣ ವಿದ್ಯಾರ್ಥಿಗಳು ಯಾವುದೇ ಅಡೆತಡೆ ಇಲ್ಲದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ತ್ರೀಯರಾದಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ವಿದ್ಯಾಭ್ಯಾಸದಲ್ಲಿ ಉನ್ನತಿ ಸಾಧಿಸಲು ಹೆಚ್ಚಿನ ಪ್ರಯತ್ನ ಪಡುತ್ತಾರೆ. ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ದೊರೆಯುತ್ತದೆ. ಸ್ವತಂತ್ರವಾಗಿ ಜೀವನ ನಡೆಸಲು ಅವಶ್ಯಕತೆ ವಾದಂತಹ ಜ್ಞಾನವನ್ನು ಇವರು ಸಂಪಾದಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮುಗಿದ ತಕ್ಷಣ ಇವರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ.

ಉದ್ಯೋಗದಲ್ಲಿ ಇವರ ಮನಸ್ಸಿಗೆ ಒಪ್ಪುವಂತಹ ಸನ್ನಿವೇಶಗಳು ಎದುರಾಗುತ್ತವೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ. ಇವರ ಮನಸ್ಸನ್ನು ಒಪ್ಪುವಂತಹ ಸಂಗಾತಿಯೊಂದಿಗೆ ವಿವಾಹವಾಗುತ್ತದೆ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಮನೆ ಮಾಡರುತ್ತದೆ. ಮನೆಗೆ ಸಂಬಂಧಿಸಿದ ವಿಚಾರಗಳು ಬೇರೆಯವರಿಗೆ ತಿಳಿಯದಂತೆ ನಿಗಾ ವಹಿಸುವಲ್ಲಿ ಯಶಸ್ಸು ಗಳಿಸುತ್ತಾರೆ. ಬಂಧು ಬಳಗದವರ ಅಥವಾ ನೆರೆಹೊರೆಯವರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಾರೆ. ಕುಟುಂಬದ ಹಿರಿಯ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳು ಇವರ ಬೆಂಬಲಕ್ಕೆ ಸದಾ ಕಾಲ ನಿಲ್ಲುತ್ತಾರೆ.

ಹವ್ಯಾಸವಾಗಿ ಆರಂಭವಾದ ಬರವಣಿಗೆಯು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಾ ಜೀವನ ನಡೆಸಲು ಆಧಾರವಾಗುತ್ತದೆ. ಸಮಾಜದಲ್ಲಿ ನಾಯಕರಾಗಿ ಬೆಳೆಯುವ ಅವಕಾಶ ದೊರೆಯಲಿದೆ. ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ, ಆದರೆ ರಾಜಕೀಯ ವ್ಯಕ್ತಿಗಳ ಒಡನಾಟವು ಸುಲಭವಾಗಿ ದೊರೆಯುತ್ತದೆ. ಹೆಚ್ಚಿನ ಅನುಕೂಲ ದೊರೆಯುವ ಉದ್ಯೋಗವು ಇವರಾಗುತ್ತದೆ. ಪದೇ ಪದೇ ಉದ್ಯೋಗವನ್ನು ಬದಲಾಯಿಸುವ ಹವ್ಯಾಸ ಬೆಳೆಯುತ್ತದೆ. ಮಕ್ಕಳ ಜೊತೆಯಲ್ಲಿ ಸುಖ ಸಂತೋಷದ ಜೀವನವನ್ನು ನಡೆಸುತ್ತಾರೆ. ಇವರ ಆರೋಗ್ಯದಲ್ಲಿ ಸದಾ ಕಾಲ ಏನಾದರೂ ತೊಂದರೆ ಕಂಡು ಬರುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ