logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪರಿಚಯ; ಕುತೂಹಲ ತಣಿಸಿಕೊಂಡ ರಾಮ, ಲಕ್ಷ್ಮಣರು

ರಾಮಾಯಣ: ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪರಿಚಯ; ಕುತೂಹಲ ತಣಿಸಿಕೊಂಡ ರಾಮ, ಲಕ್ಷ್ಮಣರು

Suma Gaonkar HT Kannada

Sep 30, 2024 05:54 PM IST

google News

ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪರಿಚಯ

    • ಇಂದ್ರನ ರಾಜ್ಯವನ್ನು ಆಕ್ರಮಿಸಿಕೊಳ್ಳುತ್ತಾನೆ. ಅತಿ ದೊಡ್ಡಯಜ್ಞವನ್ನು ಮಾಡಲು ಬಲಿ ಚಕ್ರವರ್ತಿಯು ಆರಂಭಿಸಿಸುತ್ತಾನೆ. ಇದರಿಂದ ದೇವಾನುದೇವತೆಗಳಿಗೆ ಭಯ ಉಂಟಾಗುತ್ತದೆ. ಆದ್ದರಿಂದ ಅಗ್ನಿಯ ನೇತೃತ್ವದಲ್ಲಿ ಸಿದ್ದಾಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ವಿಷ್ಣುವಿನ ಬಳಿ ಎಲ್ಲರೂ ಬರುತ್ತಾರೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)
ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪರಿಚಯ
ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಪರಿಚಯ

ಶ್ರೀ ರಾಮನ ಕುತೂಹಲವನ್ನು ಗಮನಿಸಿದ ವಿಶ್ವಾಮಿತ್ರರು ತಾವು ನಿಂತಿರುವ ಸ್ಥಳದ ಮಹಾತ್ಮೆಯನ್ನು ತಿಳಿಸುತ್ತಾ ಹೋಗುತ್ತಾರೆ. ರಾಮನೆ ನಿನಗೆ ಇಲ್ಲಿ ವಿಶೇಷವಾದಂತಹ ಅನುಭವವಾಗಲು ಕಾರಣ ಸಾಕ್ಷಾತ್ ಭಗವಾನ್ ವಿಷ್ಣು. ತನ್ನ ಮನಸ್ಸಿನ ಕೋರಿಕೆಗಳು ಈಡೇರಿಸಿಕೊಳ್ಳಲು ಶ್ರೀ ಮಹಾವಿಷ್ಣುವು ನೂರಾರು ಯುಗಗಳನ್ನು ಇಲ್ಲಿಯೇ ಕಳೆದಿದ್ದಾನೆ. ಇದೇ ಆಶ್ರಮದಲ್ಲಿ ಕಶ್ಯಪ ಮುನಿಗಳು ಸಿದ್ಧಿಯನ್ನು ಸಹ ಸಾಧಿಸಿದ್ದಾರೆ. ಆದ್ದರಿಂದ ಈ ಆಶ್ರಮಕ್ಕೆ ಸಿದ್ದಾಶ್ರಮ ಎಂದು ಹೆಸರು ಬಂದಿದೆ. ಭಗವಾನ್ ವಿಷ್ಣು ತಪಸ್ಸು ಮಾಡುತ್ತಿದ್ದ ಆ ಕಾಲದಲ್ಲಿ ವಿರೋಚನನ ಮಗನಾದ ಬಲಿಚಕ್ರವರ್ತಿಯು ದೇವತೆಗಳನ್ನು ಸೋಲಿಸುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಬಲಿ ಚಕ್ರವರ್ತಿಯ ಪ್ರಸ್ತಾಪ

ಇಂದ್ರನ ರಾಜ್ಯವನ್ನು ಆಕ್ರಮಿಸಿಕೊಳ್ಳುತ್ತಾನೆ. ಅತಿ ದೊಡ್ಡಯಜ್ಞವನ್ನು ಮಾಡಲು ಬಲಿ ಚಕ್ರವರ್ತಿಯು ಆರಂಭಿಸಿಸುತ್ತಾನೆ. ಇದರಿಂದ ದೇವಾನುದೇವತೆಗಳಿಗೆ ಭಯ ಉಂಟಾಗುತ್ತದೆ. ಆದ್ದರಿಂದ ಅಗ್ನಿಯ ನೇತೃತ್ವದಲ್ಲಿ ಸಿದ್ದಾಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ವಿಷ್ಣುವಿನ ಬಳಿ ಎಲ್ಲರೂ ಬರುತ್ತಾರೆ. ಭಗವಾನ್ ವಿಷ್ಣುವು ಬಂದ ಕಾರಣವನ್ನು ತಿಳಿಯಬಯಸುತ್ತಾನೆ. ಆಗ ದೇವರು ಬಲಿ ಚಕ್ರವರ್ತಿಯ ಮಹಾ ಯಜ್ಞದ ಬಗ್ಗೆ ತಿಳಿಸುತ್ತಾನೆ. ಯಾವುದೇ ಮೂಲೆಯಿಂದ ಯಾಚಕರು ಬಂದು ಬಲಿಯ ಬಳಿ ದಾನವನ್ನು ಬೇಡಿದಾಗ ಅವರ ಬೇಡಿಕೆಯನ್ನು ಈಡೇರಿಸುತ್ತಾನೆ. ಆದ್ದರಿಂದ ನೀನು ಸಮಸ್ತ ದೇವತೆಗಳ ಒಳಿತಿಗಾಗಿ ಬಲಿ ಚಕ್ರವರ್ತಿಯನ್ನು ಬುದ್ಧಿವಂತಿಕೆಯಿಂದ ಮರಳು ಮಾಡಬೇಕೆಂದು ತಿಳಿಸುತ್ತಾರೆ.

ಕಶ್ಯಪರ ಮಾತು

ಅವನಿಂದ ಒದಗಬಹುದಾದ ಉಪಟಳದಿಂದ ಪಾರುಮಾಡಬೇಕೆಂದು ವಿನಂತಿಸಿಕೊಳ್ಳುತ್ತಾನೆ. ಅದೇ ವೇಳೆಗೆ ಕಶ್ಯಪನು ಅದಿತಿಯ ಜೊತೆಗೂಡಿ ಒಂದು ಸಾವಿರ ವರುಷಗಳ ಕಾಲ ತಪಸ್ಸನ್ನು ಮಾಡಿ ಭಗವಾನ್ ವಿಷ್ಣುವಿನ ದರ್ಶನವನ್ನು ಪಡೆಯುತ್ತಾರೆ. ಭಗವಾನ್ ವಿಷ್ಣುವು ಕಶ್ಯಪನನ್ನು ಕುರಿತು, ನೀನು ಮಾಡಿದ ತಪಸ್ಸಿಗೆ ಮತ್ತು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನಗೆ ಬೇಕಿರುವ ವರವನ್ನು ಕೇಳು ಎನ್ನುತ್ತಾನೆ. ಆಗ ಕಶ್ಯಪನು ವಿಷ್ಣುವನ್ನು ಕುರಿತು, ನೀನು ನನಗೂ ಮತ್ತು ಅದಿತಿಗೂ ಮಗನಾಗಿ ಜನಿಸಬೇಕು. ಆಗ ನೀನು ಇಂದ್ರನಿಗೆ ಕಿರಿಸೋದರನಾಗುವೆ. ನೀನು ನನ್ನ ತಪಸ್ಸನ್ನು ಮೆಚ್ಚಿ ಈ ವರವನ್ನು ನೀಡಿದರೆ ಇದು ಸಿದ್ದಾಶ್ರಮ ಎಂದು ಪ್ರಸಿದ್ಧಿಗೊಳ್ಳುತ್ತದೆ. ಆನಂತರ ಜಗತ್ತಿನ ಕಲ್ಯಾಣಕ್ಕಾಗಿ ಈ ಆಶ್ರಮವನ್ನು ತೊರೆದು ಹೊರ ಬರಬೇಕಾಗುತ್ತದೆ ಎಂದು ಹೇಳಿದನು.

ಕಶ್ಯಪರ ಮಾತನ್ನು ಒಪ್ಪಿದ ವಿಷ್ಣು ಅವರ ಮಗನಾಗಿ ಜನಿಸಿ ವಾಮನನ ರೂಪವನ್ನು ಧರಿಸುತ್ತಾನೆ. ಆನಂತರ ದೇವತೆಗಳ ಅಭಿಮತದಂತೆ ಎದುರಾಗಬಹುದಾದಂತಹ ಕಂಟಕದಿಂದ ಅವರನ್ನು ರಕ್ಷಿಸಲು ಬಲಿಚಕ್ರವರ್ತಿಯ ಅರಮನೆಗೆ ಆಗಮಿಸುತ್ತಾನೆ. ಬಲಿಚಕ್ರವರ್ತಿಯ ಬಳಿ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬೇಡುತ್ತಾನೆ. ಮೊದಲ ಎರಡು ಹೆಜ್ಜೆಗಳಿಂದ ಎಲ್ಲಾ ಲೋಕಗಳನ್ನು ದಾನವಾಗಿ ಪಡೆಯುತ್ತಾನೆ. ಮೂರನೇ ಹೆಜ್ಜೆಯಾಗಿ ಬರಿ ಚಕ್ರವರ್ತಿಯ ತಲೆಯ ಮೇಲೆ ಕಾಲನ್ನು ಇಟ್ಟು ಅವನನ್ನು ಪಾತಾಳಕ್ಕೆ ತುಳಿಯುತ್ತಾನೆ. ಈ ರೀತಿಯಲ್ಲಿ ದೇವತೆಗಳನ್ನು ಕಾಪಾಡಿ ಇಂದ್ರನನ್ನು ಮೂರು ಲೋಕಕ್ಕೂ ಅಧಿಪತಿಯನ್ನಾಗಿ ಮಾಡುತ್ತಾನೆ.

ಇಂದಿಗೂ ನಾನು ವಾಮನನ ಆಶ್ರಮದಲ್ಲಿ ಇದ್ದೇನೆ. ರಾಕ್ಷಸರು ಪದೇಪದೇ ತೊಂದರೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿ ಅವರ ಅಂತ್ಯವು ನಿನ್ನಿಂದಲೇ ಆಗಬೇಕಾಗಿದೆ. ನಾವೆಲ್ಲರೂ ಈಗ ಸಿದ್ದಾಶ್ರಮಕ್ಕೆ ತೆರಳೋಣ ಎಂದು ಹೇಳುತ್ತಾರೆ. ಸಿದ್ದಾಶ್ರಮಕ್ಕೆ ಬಂದ ರಾಮ ಲಕ್ಷ್ಮಣರನ್ನು ಋಷಿಮುನಿಗಳು ಮನಸಾರ ಹರಸುತ್ತಾರೆ. ವಿಶ್ವಾಮಿತ್ರರು ಸಹ ವಿಶೇಷವಾದಂತಹ ಅತಿಥಿ ಸತ್ಕಾರವನ್ನು ಪಡೆಯುತ್ತಾರೆ.

ಅಮಿತೋತ್ಸಾಹದಿಂದ ಯಜ್ಞಯಾಗಾದಿಗಳನ್ನು ಮಾಡಲು ಆರಂಭಿದ ಬಗ್ಗೆ

ರಾಮ ಲಕ್ಷ್ಮಣರು ವಿಶ್ವಾಮಿತ್ರರನ್ನು ಕುರಿತು ಈಗಲೇ ನೀವು ಯಜ್ಞ ದೀಕ್ಷೆಯನ್ನು ತೆಗೆದುಕೊಳ್ಳಿರಿ. ಆ ರಾಕ್ಷಸರನ್ನು ಸಂಹಾರ ಮಾಡುವ ಜವಾಬ್ದಾರಿಯು ನಮಗಿರಲಿ ಎಂದು ತಿಳಿಸುತ್ತಾರೆ. ಅವರ ಮಾತನ್ನು ಕೇಳಿದ ವಿಶ್ವಾಮಿತ್ರರು ಅಮಿತೋತ್ಸಾಹದಿಂದ ಯಜ್ಞಯಾಗಾದಿಗಳನ್ನು ಮಾಡಲು ಆರಂಭಿಸುತ್ತಾರೆ. ಆ ದಿನ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ರಾಮ ಲಕ್ಷ್ಮಣರು ಸುಖನಿದ್ರೆ ಮಾಡುತ್ತಾರೆ. ತಪಸ್ವಿಗಳಿಂದ ಬೋಧನೆಯನ್ನು ಪಡೆದ ಮಂತ್ರ ಗಳನ್ನು ಪಠಿಸಿ, ಆನಂತರ ಗಾಯಿತ್ರಿ ಮಂತ್ರವನ್ನು ಜಪಿಸಿದ ನಂತರ ವಿಶ್ವಾಮಿತ್ರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುತ್ತಾರೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ