logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಮಿ ವೃಕ್ಷ ಪೂಜಿಸಿದರೆ ಕಾಡುವ ಶನಿ ಉಪಶಮನ; ಹೀಗಿದೆ ಶನಿದೇವನ ಓಲೈಕೆಗೆ ಬನ್ನಿ ಮರ ಪೂಜಿಸುವ ಕ್ರಮ

ಶಮಿ ವೃಕ್ಷ ಪೂಜಿಸಿದರೆ ಕಾಡುವ ಶನಿ ಉಪಶಮನ; ಹೀಗಿದೆ ಶನಿದೇವನ ಓಲೈಕೆಗೆ ಬನ್ನಿ ಮರ ಪೂಜಿಸುವ ಕ್ರಮ

Reshma HT Kannada

Dec 27, 2023 11:21 AM IST

google News

ಶಮಿ ಗಿಡ

    • ಸಾಡೆಸಾತಿ, ಧೈಯಾ ಸೇರಿದಂತೆ ಶನಿಗ್ರಹದ ಅಶುಭ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಶಮಿಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಆದರೆ ಈ ಗಿಡವನ್ನು ನೆಡುವಾಗ ವಾಸ್ತುವಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಪೂಜಾಕ್ರಮಕ್ಕೂ ಮಹತ್ವ ನೀಡಬೇಕು.
ಶಮಿ ಗಿಡ
ಶಮಿ ಗಿಡ

ಹಿಂದೂ ಧರ್ಮದಲ್ಲಿ ಶಮಿ ಅಥವಾ ಬನ್ನಿ ಗಿಡಕ್ಕೆ ಬಹಳ ಪ್ರಾಮುಖ್ಯವಿದೆ. ಶಮಿ ಸಸ್ಯವು ಶಿವ ಮತ್ತು ಶನಿ ದೇವರಿಗೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ನಕಾರಾತ್ಮಕ ಅಂಶ ದೂರವಾಗುತ್ತದೆ. ಶನಿ ದೋಷದ ದುಷ್ಪರಿಣಾಮಗಳಿಂದ ಪರಿಹಾರ ದೊರೆಯುತ್ತದೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಿರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ವಾಸ್ತುಪ್ರಕಾರ ಶಮಿ ಗಿಡವನ್ನು ಮನೆಯಲ್ಲಿ ನೆಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶಮಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಮುಖ್ಯವಾಗುತ್ತದೆ. ದಿಕ್ಕು ತಪ್ಪಿ ನೆಡುವುದರಿಂದ ಮನೆ ಹಾಗೂ ಮನೆಯಲ್ಲಿ ಇರುವವರ ಜೀವನದಲ್ಲಿ ಹಲವು ತೊಂದರೆಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.

ಶನಿಯ ಸಾಡೇಸಾತಿ ಮತ್ತು ಧೈಯಾದಿಂದ ಪರಿಹಾರ ಪಡೆಯಲು ಶಮಿ ಮರವನ್ನು ನೆಡುವಾಗ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯೋಣ.

ಇದನ್ನೂ ಓದಿ: Vastu Tips: ಶನಿಯ ಅಶುಭ ಪರಿಣಾಮ ನಿಗ್ರಹಿಸಲು ಕುದುರೆ ಗೊರಸನ್ನು ಮನೆಯ ಈ ದಿಕ್ಕಿನಲ್ಲಿ ಇಡಿ; ಸಂಪತ್ತು ವೃದ್ಧಿಯಾಗುವುದು ಖಂಡಿತ

ಶಮಿ ಸಸ್ಯಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳು

ವಾಸ್ತುಪ್ರಕಾರ ಶಮಿ ಗಿಡವನ್ನು ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಇದು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ ಮತ್ತು ಸಂಪತ್ತಿನ ಒಳಹರಿವಿನ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಶನಿವಾರದಂದು ಶಮಿಗಿಡದ ಕೆಳಗೆ ದೀಪವನ್ನು ಹಚ್ಚಿ ಪೂಜಿಸುವುದರಿಂದ ಶನಿಯ ಅಶುಭ ಪರಿಣಾಮಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ವಾಸ್ತು ನಿಯಮಗಳ ಪ್ರಕಾರ ಶಮಿ ಗಿಡವನ್ನು ಕೊಳಕು ಜಾಗದಲ್ಲಿ ಅಪ್ಪಿತಪ್ಪಿಯೂ ನೆಡಬಾರದು. ಇದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶನಿವಾರದಂದು ಮನೆಯ ಮುಖ್ಯದ್ವಾರದ ಎಡಭಾಗದಲ್ಲಿ ಶಮಿಗಿಡವನ್ನು ನೆಟ್ಟರೆ ಶುಭವೆಂದು ಪರಿಗಣಿಸಲಾಗಿದೆ. ಇದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತುಪ್ರಕಾರ ಶಮಿ ಗಿಡದ ಬಳಿ ಶೂ ಮತ್ತು ಚಪ್ಪಲಿ ಇಡಬಾರದು. ಹಾಗೆ ಮಾಡುವುದು ಅಶುಭ.

ಇದನ್ನೂ ಓದಿ: ವಾಸ್ತು ಪ್ರಕಾರ ಆಮೆ ಪ್ರತಿಮೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಉತ್ತಮ; ಇಲ್ಲಿದೆ ಮಾಹಿತಿ

ಶಮಿ ಗಿಡದ ಧಾರ್ಮಿಕ ಪ್ರಾಮುಖ್ಯ

ಪ್ರತಿ ಶನಿವಾರ ಶಮಿ ತಪ್ಪದೇ ಶಮಿಗಿಡವನ್ನು ಪೂಜಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದರೊಂದಿಗೆ ಸಾಡೇಸಾತಿ, ಧೈಯಾ ಸೇರಿದಂತೆ ಶನಿಗ್ರಹದ ಅಶುಭ ಪರಿಣಾಮಗಳಿಂದ ಉಂಟಾಗುವ ತೊಂದರೆಗಳಿಂದ ವ್ಯಕ್ತಿಯು ಪರಿಹಾರವನ್ನು ಪಡೆಯುತ್ತಾನೆ. ಪ್ರತಿದಿನ ಸಂಜೆ ಶಮಿ ಗಿಡದ ಬಳಿ ದೀಪವನ್ನು ಬೆಳಗಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ಅಡೆತಡೆಗಳಿಂದ ಮುಕ್ತನಾಗುತ್ತಾನೆ ಮತ್ತು ಅವನ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ