logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ: ಕುಂಡಲಿ ದೋಷ, ಗ್ರಹ ಗ್ರತಿಗಳ ಚಲನೆ ಪ್ರಕಾರ ಯಾವ ಪರಿಹಾರ ಕೈಗೊಳ್ಳಬೇಕು?

ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ: ಕುಂಡಲಿ ದೋಷ, ಗ್ರಹ ಗ್ರತಿಗಳ ಚಲನೆ ಪ್ರಕಾರ ಯಾವ ಪರಿಹಾರ ಕೈಗೊಳ್ಳಬೇಕು?

Rakshitha Sowmya HT Kannada

Dec 16, 2024 05:21 PM IST

google News

ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ

  • ಜಾತಕದಲ್ಲಿ ದೋಷ ಇದ್ದರೆ ಗೋಪೂಜೆ, ಸರ್ಪದೋಷ ನಿವಾರಣೆ, ನಾಯಿಗಳಿಗೆ ಆಹಾರ ನೀಡಲು ಜ್ಯೋತಿಷಿಗಳು ಸೂಚಿಸುತ್ತಾರೆ. ಅದೇ ರೀತಿ ಯಾವ ರಾಶಿಗಳ ಜೊತೆ ಯಾವ ರಾಶಿ ಇದ್ದಲ್ಲಿ ಜನರಿಗೆ ಸಮಸ್ಯೆ, ಅದನ್ನು ಸರಿಪಡಿಸಿಕೊಳ್ಳಲು ಏನು ಪರಿಹಾರ, ಜ್ಯೋತಿಷ್ಯದಲ್ಲಿ ಸಾಕುಪ್ರಾಣಿಗಳ ಪಾತ್ರದ ಬಗ್ಗೆ ಇಲ್ಲಿ ಮಾಹಿತಿ ಇದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ
ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ

ಜೋತಿಷ್ಯದಲ್ಲಿ ಪಂಚ ಪಕ್ಷಿಶಾಸ್ತ್ರ ಎಂಬ ಪದ್ದತಿ ನಮ್ಮಲ್ಲಿದೆ. ಪುರಾತನ ಕಾಲದ ಗಿಣಿಶಾಸ್ತ್ರ ಇಂದಿಗೂ ಪ್ರಸ್ತುತಿಯಲ್ಲಿದೆ. ಕೆಲವರ ಅನಿಸಿಕೆಯಂತೆ ನಾಯಿ ಮಾತ್ರ ಜೋತಿಷ್ಯದಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ನಾಯಿಯು ಶನಿ, ರಾಹು ಮತ್ತು ಕೇತು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಆದರೆ ಇದರ ಜೊತೆ ಜನ್ಮ ಕುಂಡಲಿಯ ಅಷ್ಟಮ ಭಾವ ಗಮನಿಸಬೇಕು. ಆನಂತರ ಅಷ್ಟಮಾಧಿಪತಿಯು ಇರುವ ಸ್ಥಾನವನ್ನು ಅರಿಯಬೇಕು. ಇದಲ್ಲದೆ ರಾಹು ಮತ್ತು ಕೇತುಗಳ ಯುತಿಯಲ್ಲಿ ಇರುವ ಗ್ರಹಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಆರ್ಥಿಕ ವಿಚಾರದಲ್ಲಿ ಏರಿಳಿತಗಳನ್ನು ಕಾಣುತ್ತೀರಿ, ಸಂಗಾತಿಗೆ ಇಷ್ಟವಾಗದ ಯಾವುದೇ ಕೆಲಸ ಮಾಡಬೇಡಿ

Dec 16, 2024 03:08 PM

ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶುಕ್ರ, ಶನಿ ಸಂಯೋಗ: ಡಿಸೆಂಬರ್‌ನಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ

Dec 15, 2024 09:24 PM

ನಾಳಿನ ದಿನ ಭವಿಷ್ಯ: ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ, ದೈಹಿಕ ಆರೋಗ್ಯದ ಬಗ್ಗೆ ಗಮನ ಕೊಡಿ

Dec 15, 2024 04:04 PM

ಧನು ರಾಶಿಗೆ ಸೂರ್ಯ ಸಂಚಾರ; ಈ 3 ರಾಶಿಯವರು ಭಾರಿ ಅದೃಷ್ಟವಂತರು, ಆದಾಯ ಮತ್ತು ಗೌರವ ಹೆಚ್ಚಾಗುತ್ತೆ

Dec 15, 2024 08:30 AM

ನಾಳಿನ ದಿನ ಭವಿಷ್ಯ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತೆ, ವ್ಯವಹಾರದಲ್ಲಿ ಲಾಭ ಕಾಣುತ್ತೀರಿ

Dec 14, 2024 06:12 PM

ಬಾಬಾ ವಂಗಾ ಭವಿಷ್ಯ ವಾಣಿ 2025: ಹೊಸ ವರ್ಷ ಕಟಕ ಸೇರಿದಂತೆ ಈ 3 ರಾಶಿಯವರ ಜೀವನದಲ್ಲಿ ತರಲಿದೆ ಹರ್ಷ

Dec 14, 2024 04:04 PM

ಶುಕ್ರನ ಶಾಂತಿಗಾಗಿ ಗೋಪೂಜೆ ಅಥವ ಗೋದಾನವನ್ನು ಮಾಡಬೇಕಾಗುತ್ತದೆ. ಆದರೆ ಶುಕ್ರನ ಜೊತೆಯಲ್ಲಿ ಬುಧ ಗ್ರಹ ಇದ್ದಲ್ಲಿ ಗಿಣಿಯನ್ನು ಸೂಚಿಸುತ್ತದೆ. ಶುಕ್ರನ ಜೊತೆಯಲ್ಲಿ ರಾಹು ಅಥವಾ ಕೇತುಗ್ರಹವಿದ್ದಲ್ಲಿ ಸರ್ಪದ ವಿಚಾರ ಬರುತ್ತದೆ. ರಾಹು ಮತ್ತು ಕೇತು ಗ್ರಹಗಳು ಕುಂಡಲಿಯಲ್ಲಿ ಸರ್ಪವನ್ನು ಪ್ರತಿನಿಧಿಸುತ್ತದೆ. ಸರ್ಪದೋಷ ಅಥವ ಸರ್ಪಶಾಪಕ್ಕೆ ರಾಹು ಮತ್ತು ಕೇತುಗಳು ಕಾರಣವಾಗುತ್ತವೆ. ಇದರ ಜೊತೆಯಲ್ಲಿ ರವಿ ಮತ್ತು ಶುಕ್ರಗ್ರಹಗಳ ಸ್ಥಾನವು ಮುಖ್ಯವಾಗುತ್ತದೆ. ರಾಹು ಗ್ರಹವು ಕೇವಲ ಕುಂಡಲಿಯ ತೃತೀಯ ಭಾವದಲ್ಲಿ ಉತ್ತಮ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉಳಿದ ಭಾವಗಳಲ್ಲಿ ಶುಭ ಫಲಗಳು ದೊರೆಯುವುದಿಲ್ಲ. ಕೇತುವು ಪ್ರತಿಯೊಂದು ಭಾವದಲ್ಲಿಯೂ ಋಣಾತ್ಮಕ ಫಲಿತಾಂಶಗಳನ್ನು ಮಾತ್ರ ನೀಡುತ್ತಾನೆ.

ಕುಂಡಲಿ ದೋಷ, ಗ್ರಹ ಗ್ರತಿಗಳ ಚಲನೆ ಪ್ರಕಾರ ಯಾವ ಪರಿಹಾರ ಕೈಗೊಳ್ಳಬೇಕು?

  • ರವಿಯ ಜೊತೆಯಲ್ಲಿ ರಾಹು ಇದ್ದಲ್ಲಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಮುಖ್ಯವಾಗಿ ಕುಟುಂಬದಲ್ಲಿನ ಹಿರಿಯ ಪುರುಷರಿಗೆ ತೊಂದರೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಸಾಕಿರುವ ನಾಯಿಗಳಿಗೆ ಮಳೆ, ಗಾಳಿ ಮತ್ತು ಬಿಳಿಲಿನಿಂದ ತೊಂದರೆ ಆಗದಂತೆ ಗೂಡನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗಬಹುದು.

ಇದನ್ನೂ ಓದಿ: ಕುಂಭ, ಸಿಂಹ ರಾಶಿಗೆ ಪ್ರವೇಶಿಸಲಿರುವ ರಾಹು ಕೇತು; 3 ರಾಶಿಯವರಿಗೆ ಆಶೀರ್ವದಿಸಲಿವೆ ನೆರಳು ಗ್ರಹಗಳು

  • ರವಿಯ ಜೊತೆಯಲ್ಲಿ ಕೇತು ಇದ್ದಲ್ಲಿ ಕುಟುಂಬದ ಹಿರಿಯರ ಜೀವನದಲ್ಲಿ ಅಡ್ಡಿ ಆತಂಕಗಳು ಇರುತ್ತವೆ. ಆದ್ದರಿಂದ ಕಪ್ಪು ಮತ್ತು ಬಿಳಿ ಬಣ್ಣದ ನಾಯಿಗೆ ಆಹಾರ ನೀಡಿದಲ್ಲಿ ಅಡ್ಡಿ ಆತಂಕಗಳು ದೂರವಾಗುತ್ತವೆ.
  • ಚಂದ್ರನ ಜೊತೆಯಲ್ಲಿ ರಾಹುಗ್ರಹ ಇದ್ದಲ್ಲಿ ಕುಟುಂಬದ ಹಿರಿಯ ಸ್ತ್ರೀಯರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮನದಲ್ಲಿ ಯಾವುದೋ ರೀತಿಯ ಭ್ರಮೆ ಇರುತ್ತದೆ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಆದ್ದರಿಂದ ಕಪ್ಪು ನಾಯಿಗೆ ಬೆಳಗಿನ ವೇಳೆ ಹಾಲು ಮತ್ತು ಇತರ ಆಹಾರವನ್ನು ನೀಡಬೇಕು ಇದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
  • ಚಂದ್ರನ ಜೊತೆ ಕೇತು ಗ್ರಹ ಇದ್ದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಆದರೆ ಮನಸಿನಲ್ಲಿ ವೈರಾಗ್ಯದ ಭಾವನೆ ಸದಾಕಾಲ ಇರುತ್ತದೆ. ಕುಜನ ಜೊತೆಯಲ್ಲಿ ರಾಹು ಗ್ರಹ ಇದ್ದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಸೋದರರ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿರುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಆದ್ದರಿಂದ ರಸ್ತೆಬದಿ ನಾಯಿಗಳಿಗೆ ಆಹಾರ ನೀಡುವುದು ಬಹಳ ಮುಖ್ಯ. ಇದರಿಂದ ಜೀವನವು ಸರಿದಾರಿಯಲ್ಲಿ ಸಾಗುತ್ತದೆ.
  • ಕುಜನ ಜೊತೆಯಲ್ಲಿ ಕೇತು ಗ್ರಹವಿದ್ದಲ್ಲಿ ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಇವರಲ್ಲಿ ಎಂತಹ ಪ್ರತಿಭೆ ಇದ್ದರೂ ಬೇರೆಯವರನ್ನು ತಮ್ಮ ಕೆಲಸ ಕಾರ್ಯಗಳಿಗಾಗಿ ಅವಲಂಬಿಸಬೇಕಾಗುತ್ತದೆ. ವಿವಾಹದ ವಿಚಾರದಲ್ಲಿ ಗೊಂದಲವಿರುತ್ತದೆ. ನಿರಾಸಕ್ತಿಯ ಜೀವನವನ್ನು ನಡೆಸುತ್ತಾರೆ. ಇವರು ಕಂದುಬಣ್ಣದ ನಾಯಿಗಳಿಗೆ ಆಹಾರವನ್ನು ನೀಡುವುದು ಉತ್ತಮ. ಪ್ರಾಣಿಗಳಿಗೆ ತೊಂದರೆ ನೀಡಬಾರದು.
  • ಬುಧನ ಜೊತೆಯಲ್ಲಿ ರಾಹು ಇದ್ದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಹಿರಿಯರ ಸಹಾಯ ಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಸಹಾಯ ಬೇಕೆನಿಸುತ್ತದೆ.

ಇದನ್ನೂ ಓದಿ: ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶುಕ್ರ, ಶನಿ ಸಂಯೋಗ: ಡಿಸೆಂಬರ್‌ನಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ

  • ಬುಧನ ಜೊತೆ ಕೇತು ಇದ್ದಲ್ಲಿ ವಿಶೇಷವಾದ ಬುದ್ದಿಶಕ್ತಿ ಇರುತ್ತದೆ. ಅದಕ್ಕೆ ತಕ್ಕನಾದ ವೇದಿಕೆಯನ್ನು ಗುರುಹಿರಿಯರು ನೀಡಬೇಕಾಗುತ್ತದೆ.
  • ಗುರುವಿನ ಜೊತೆಯಲ್ಲಿ ರಾಹು ಇದ್ದಲ್ಲಿ ಅನಾರೋಗ್ಯವಿರುತ್ತದೆ. ಇರುವ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುವುದಿಲ್ಲ. ಆದ್ದರಿಂದ ನಾಯಿಮರಿಗಳಿಗೆ ತೊಂದರೆ ನೀಡದೆ ಅವುಗಳನ್ನು ಸಲಹಬೇಕು. ಇದರಿಂದ ಎಲ್ಲಾ ರೀತಿಯ ಅನುಕೂಲತೆಗಳು ದೊರೆಯುತ್ತವೆ.
  • ಗುರುವಿನ ಜೊತೆ ಕೇತು ಇದ್ದಲ್ಲಿ ಮನದಲ್ಲಿ ಯಾವುದೇ ಆಸೆ ಆಕಾಂಕ್ಷೆಗಳು ಇರುವುದಿಲ್ಲ. ಯಾರೊಂದಿಗೂ ಬೆರೆಯದೆ ಏಕಾಂಗಿಯಾಗಿ ಇರಲು ಬಾಳಲು ಇಚ್ಚಿಸುವರು. ಆದ್ದರಿಂದ ನಾಯಿಗಳನ್ನು ಸಲಹುವ ಕೇಂದ್ರಕ್ಕೆ ಸಹಾಯ ಸಹಕಾರ ನೀಡಬೇಕು. ಇದರಿಂದ ಎಲ್ಲರ ಜೊತೆ ಸಂತೋಷದಿಂದ ಬಾಳುವ ಮನಸ್ಸಾಗುತ್ತದೆ. ಮನದಲ್ಲಿನ ಅಳುಕು ದೂರವಾಗುತ್ತದೆ. ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ.
  • ಶುಕ್ರನ ಜೊತೆಯಲ್ಲಿ ರಾಹು ಇದ್ದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಅಶುಭಫಲಗಳು ದೊರೆಯುತ್ತವೆ. ಅನಾರೋಗ್ಯವಿರುತ್ತದೆ. ಆಗತಾನೆ ಜನಿಸಿದ ನಾಯಿ ಮರಿಗಳನ್ನು ಪೋಷಿಸಿದಲ್ಲಿ ದೋಷ ಪರಿಹಾರವಾಗುತ್ತದೆ. ಅವಕಾಶವಿದ್ದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದು ಒಳ್ಳೆಯದು.
  • ಶುಕ್ರನ ಜೊತೆಯಲ್ಲಿ ಕೇತು ಇದ್ದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
  • ಶನಿಯ ಜೊತೆಯಲ್ಲಿ ರಾಹು ಇದ್ದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
  • ಶನಿಯ ಜೊತೆಯಲ್ಲಿ ಕೇತು ಇದ್ದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮನಸ್ಸಿರುವುದಿಲ್ಲ. ಆತ್ಮವಿಶ್ವಾಸ ಕೊರತೆ ಇರುತ್ತದೆ. ಆದ್ದರಿಂದ ಕಪ್ಪು ಮತ್ತು ಬಿಳಿ ಬಣ್ಣದ ನಾಯಿಗೆ ಆಹಾರ ನೀಡಿದಲ್ಲಿ ಮನಸ್ಸು ಪರಿವರ್ತನೆ ಆಗುತ್ತದೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಬರಹ: ಎಚ್. ಸತೀಶ್, ಜ್ಯೋತಿಷಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ