ಹೊಳೆನರಸೀಪುರದಲ್ಲಿ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ 144ನೇ ಜಯಂತ್ಯುತ್ಸವ; ಡಿಸೆಂಬರ್ 15 ರಿಂದ ವೇದಾಂತ ಸಪ್ತಾಹ ಮಹೋತ್ಸವ
Dec 12, 2024 10:45 AM IST
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಡಿಸೆಂಬರ್ 15 ರಿಂದ ಹೊಳೆನರಸೀಪುರದಲ್ಲಿ ವೇದಾಂತ ಸಪ್ತಾಹ ಮಹೋತ್ಸವ ಹಮ್ಮಿಕೊಂಡಿದೆ. ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ 144ನೇ ಜಯಂತ್ಯುತ್ಸವ ನಡೆಯಲಿದೆ.
- ಹೊಳೆನರಸೀಪುರದಲ್ಲಿರುವವ ಅಧ್ಯಾತ್ಮಕ ಪ್ರಕಾಶ ಕಾರ್ಯಾಲಯದಲ್ಲಿ ಡಿಸೆಂಬರ್ 15 ರಿಂದ 7 ದಿನಗಳ ಕಾಲ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ 144ನೇ ಜಯಂತ್ಯುತ್ಸವ ಮತ್ತು ವೇದಾಂತ ಸಪ್ತಾಹ ಮಹೋತ್ಸವ ನಡೆಯಲಿದೆ. ಅದರ ವಿವರಗಳು ಇಲ್ಲಿವೆ.
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ಅಧ್ಯಾತ್ಮ ಪ್ರಕಾಶ ಕಾರ್ಯಾಲಯವು ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಯವರ 144ನೇ ಜಯಂತ್ಯುತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಡಿಸೆಂಬರ್ 15ರ ಗುರುವಾರದಿಂದ ಡಿಸೆಂಬರ್ 21ರ ಬುಧವಾರದ ವರಿಗೆ ಒಟ್ಟು 7 ದಿನಗಳ ಕಾಲ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಯವರ 144ನೇ ಜಯಂತ್ಯುತ್ಸವ, ಬ್ರಹ್ಮಚೈತನ್ಯರ ಆರಾಧನೆ ಹಾಗೂ ಜ್ಞಾನಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ ಆರಾಧನೆ ಪ್ರಯುಕ್ತ ವೇದಾಂತ ಸಪ್ತಾಹವನ್ನು ಆಯೋಜಿಸಲಾಗಿದೆ.
ತಾಜಾ ಫೋಟೊಗಳು
ವೇದಾಂತ ಸಪ್ತಾಹ ಮಹೋತ್ಸವದಲ್ಲಿ ಪ್ರತಿದಿನ ಬೆಳಗ್ಗೆ 6.30ರಿಂದ 7.15ರ ವರೆಗೆ ಅಭಿಷೇಕ ಮತ್ತು ಪೂಜೆ, ಬೆಳಗ್ಗೆ 7.15 ರಿಂದ 7.50 ರವರೆಗೆ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಬೆಳಗ್ಗೆ 8 ರಿಂದ 9 ಗಂಟೆಯವರಿಗೆ ಪ್ರಸ್ಥಾನತ್ರಯಭಾಷ್ಯ ಗ್ರಂಥಗಳನ್ನು ಕುರಿತು ಉಪನ್ಯಾಸಗಳು, 10.30 ರಿಂದ 11.30 ವರೆಗೆ ಮತ್ತು ಸಂಜೆ 4 ರಿಂದ 5 ಗಂಟೆಯವರಿಗೆ ಪ್ರವಚನ, ಪುರಾಣ ಹಾಗೂ ಸಂಜೆ 6.46 ರಿಂದ 7.45 ರ ವರೆಗೆ ಭಜನೆ ಕಾರ್ಯಗಳನ್ನು ನೆರವೇರುತ್ತವೆ ಎಂದು ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಪ್ತಾಹಗಳಲ್ಲಿ ಭಾಗವಹಿಸುವವರು 8 ದಿನ ಮುಂಚಿತವಾಗಿ ಪತ್ರ ಅಥವಾ ದೂರವಾಣಿ ಮೂಲಕ ಹೆಸರು ತಿಳಿಸಬೇಕಾಗಿ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಮನವಿ ಮಾಡಿದೆ. ಬೇರೆ ಬೇರೆ ಸ್ಥಳಗಳಿಂದ ಬರುವ ಭಕ್ತಾಧಿಗಲಿಗೆ ಊಟ, ತಿಂಡಿ ಹಾಗೂ ವಸತಿ ವ್ಯವಸ್ಥೆ ಮಾಡಿರುವುದಾರಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-08175-273820, ಮೊಬೈಲ್ ಸಂಖ್ಯೆ - 9353790641.