Santan Saptami 2024: ಈ ಬಾರಿ ಸಂತಾನ ಸಪ್ತಮಿ ಉಪವಾಸ ವ್ರತಾಚರಣೆ ಯಾವಾಗ; ಮಂಗಳಕರ ಸಮಯ, ಪೂಜಾ ವಿಧಾನ
Sep 09, 2024 08:53 PM IST
ಈ ಬಾರಿ ಸಂತಾನ ಸಪ್ತಮಿ ಉಪವಾಸ ವ್ರತಾಚರಣೆ ಯಾವಾಗ
- ಭಾದ್ರಪದ ಸಪ್ತಮಿ ತಿಥಿಯು ಸೆಪ್ಟೆಂಬರ್ 9ರಂದು ರಾತ್ರಿ ಆರಂಭವಾಗಿ 10ರಂದು ರಾತ್ರಿ ಶುಭಮುಹೂರ್ತ ಕೊನೆಗೊಳ್ಳುತ್ತದೆ. ಹಿಂದೂ ಪಂಚಾಂಗದ ಆಧಾರದ ಮೇಲೆ ಸಂತಾನ ಸಪ್ತಮಿಯನ್ನು ಸೆಪ್ಟೆಂಬರ್ 10ರ ಮಂಗಳವಾರ ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಸಂತಾನ ಸಪ್ತಮಿ ಉಪವಾಸಕ್ಕೆ (Santana Saptami 2024) ಮಹತ್ವವಿದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಮಕ್ಕಳ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ಇದೇ ವೇಳೆ ಈ ದಿನ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಸಂತಾನ ಸಪ್ತಮಿಯ ಉಪವಾಸ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರಿಗೆ ಈ ದಿನ ವಿಶೇಷವಾಗಿದ್ದು, ಈ ಬಾರಿ ಸಂತಾನ ಸಪ್ತಮಿಯನ್ನು ಸೆಪ್ಟೆಂಬರ್ 10ರಂದು ಆಚರಿಸಲಾಗುತ್ತದೆ. 2024ರಲ್ಲಿ ಈ ಉಪವಾಸ ವೃತದ ಶುಭ ಮುಹೂರ್ತ ಕುರಿತ ಮಾಹಿತಿ ಇಲ್ಲಿದೆ.
ತಾಜಾ ಫೋಟೊಗಳು
ಹಿಂದೂ ಪಂಚಾಂಗದ ಪ್ರಕಾರ, ಭಾದ್ರಪದ ಸಪ್ತಮಿ ತಿಥಿಯು ಸೆಪ್ಟೆಂಬರ್ 9ರಂದು ರಾತ್ರಿ 9.53ಕ್ಕೆ ಪ್ರಾರಂಭವಾಗುತ್ತದೆ. ಇದೇ ವೇಳೆ ಸೆಪ್ಟೆಂಬರ್ 10ರಂದು ರಾತ್ರಿ 11:11ಕ್ಕೆ ಶುಭಮುಹೂರ್ತ ಕೊನೆಗೊಳ್ಳುತ್ತದೆ. ಹೀಗಾಗಿ ಪಂಚಾಂಗದ ಆಧಾರದ ಮೇಲೆ ಸಂತಾನ ಸಪ್ತಮಿಯನ್ನು 2024ರ ಸೆಪ್ಟೆಂಬರ್ 10ರ ಮಂಗಳವಾರ ಆಚರಿಸಲಾಗುತ್ತದೆ. ಹೀಗಾಗಿ ಉಪವಾಸ ವೃತ ಬಯಸುವವರು ಸೆಪ್ಟೆಂಬರ್ 10ರಂದು ಮಾತ್ರ ಉಪವಾಸ ವ್ರತವನ್ನು ಆಚರಿಸಬೇಕು.
ಸಂತಾನ ಸಪ್ತಮಿ ಪೂಜಾ ವಿಧಾನ
- ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಿವ ಮತ್ತು ಪಾರ್ವತಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಉಪವಾಸ ಆರಂಭಿಸಿ ಪೂಜಾ ಪ್ರತಿಜ್ಞೆ ಮಾಡಬೇಕು.
- ಬಲಿಪೀಠದ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ಶಿವ ಪಾರ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.
- ಕಲಶದಲ್ಲಿ ನೀರು ತುಂಬಿಸಿ ಅದರ ಮೇಲೆ ತೆಂಗಿನಕಾಯಿ ಮತ್ತು ಅದರ ಸುತ್ತಲೂ ಮಾವಿನ ಎಲೆಗಳನ್ನು ಇಡಬೇಕು.
- ವಿಗ್ರಹಕ್ಕೆ ಹೂವು ಹಾಕಿ, ಅಕ್ಕಿ, ವೀಳ್ಯದೆಲೆ, ವೀಳ್ಯದೆಲೆ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಅರ್ಪಿಸಬೇಕು. ತುಪ್ಪದ ದೀಪವನ್ನು ಬೆಳಗಬೇಕು.
- ಶಿವ ಮತ್ತು ತಾಯಿ ಪಾರ್ವತಿಗೆ ವಸ್ತ್ರಗಳನ್ನು ಅರ್ಪಿಸುವ ಕ್ರಮವಿದೆ.
- ಉಪವಾಸ ವ್ರತ ಮಾಡುವವರು ಸಂತಾನ ಸಪ್ತಮಿ ವ್ರತ ಕಥಾವನ್ನು ಪಠಿಸಿ ನಂತರ ಆರತಿಯೊಂದಿಗೆ ಪೂಜೆಯನ್ನು ಪೂರ್ಣಗೊಳಿಸಬೇಕು.
- ಪೂಜೆಯ ಸಮಯದಲ್ಲಿ ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವ ಕ್ರಮವಿದೆ. ಇದೇ ವೇಳೆ ಹಿರಿಯರ ಆಶೀರ್ವಾದ ಪಡೆದು ಶುಭಫಲಗಳನ್ನು ಪಡೆಯಬಹುದು.
- ಮರುದಿನ ಪ್ರಸಾದ ಸೇವಿಸುವ ಮೂಲಕ ಉಪವಾಸ ವ್ರತ ಬಿಡಬೇಕು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.