logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಬಯಕೆಯ ತೃಪ್ತಿಗಾಗಿ ಇರುವ ಸಾಧನೆಗಳು ಇಂದ್ರಿಯಗಳು; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಬಯಕೆಯ ತೃಪ್ತಿಗಾಗಿ ಇರುವ ಸಾಧನೆಗಳು ಇಂದ್ರಿಯಗಳು; ಭಗವದ್ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Sep 05, 2024 05:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಬಯಕೆಯ ತೃಪ್ತಿಗಾಗಿ ಇರುವ ಸಾಧನೆಗಳು ಇಂದ್ರಿಯಗಳು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 21 ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 21

ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ |

ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ||21||

ಅನುವಾದ: ಎಲ್ಲ ಐಹಿಕ ಕಾರ್ಯಕಾರಣಗಳ ಕಾರಣವು ಪ್ರಕೃತಿ ಎಂದು ಹೇಳಲಾಗಿದೆ. ಈ ಪ್ರಪಂಚದಲ್ಲಿ ಹಲವು ಬಗೆಯ ಸುಖದುಃಖಗಳಿಗೆ ಜೀವಿಯು ಕಾರಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಾವಾರ್ಥ: ಜೀವಿಗಳಲ್ಲಿ ದೇಹಗಳು ಮತ್ತು ಇಂದ್ರಿಯಗಳು ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುವುದುಕ್ಕೆ ಐಹಿಕ ಪ್ರಕೃತಿಯೇ ಕಾರಣ. ಜೀವಿಗಳಲ್ಲಿ 84,00,000 ಬೇರೆ ಬೇರೆ ವರ್ಗಗಳಿವೆ. ಈ ಭಿನ್ನ ರೀತಿಗಳು ಐಹಿಕ ಪ್ರಕೃತಿಯ ಸೃಷ್ಟಿ. ಇವು ಜೀವಿಯ ಬೇರೆ ಬೇರೆ ಇಂದ್ರಿಯ ಸುಖಗಳಿಂದ ಹುಟ್ಟುತ್ತವೆ. ಜೀವಿ ಈ ದೇಹದಲ್ಲಿ ಅಥವಾ ಆ ದೇಹದಲ್ಲಿ ಇರಬೇಕೆಂದು ಬಯಸುತ್ತಾನೆ. ಆತನನ್ನು ಬೇರೆ ಬೇರೆ ದೇಹಗಳಲ್ಲಿ ಇಟ್ಟಾಗ ಬೇರೆ ಬೇರೆ ರೀತಿಗಳ ಸುಖ ದುಃಖಗಳನ್ನು ಅನುಭವಿಸುತ್ತಾನೆ. ಅವನ ಐಹಿಕ ಸುಖದುಃಖಗಳಿಗೆ ಕಾರಣ ಅವನು ಇರುವ ರೀತಿಯಲ್ಲ, ಆದರೆ ಅವನ ದೇಹ. (Bhagavad Gita Updesh in Kannada)

ಅವನ ಮೂಲಸ್ಥಿತಿಯಲ್ಲಿ ಭೋಗದ ವಿಷಯದಲ್ಲಿ ಅನುಮಾನವೇ ಇಲ್ಲ. ಆದುದರಿಂದ ಅದೇ ಅವನ ನಿಜವಾದ ಸ್ಥಿತಿ. ಐಹಿಕ ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸಬೇಕೆಂಬ ಅಪೇಕ್ಷೆಯ ಫಲವಾಗಿ ಅವನು ಐಹಿಕ ಜಗತ್ತಿನಲ್ಲಿದ್ದಾನೆ. ಅಧ್ಯಾತ್ಮಿಕ ಜಗತ್ತಿನಲ್ಲಿ ಇಂತಹುದು ಇಲ್ಲವೇ ಇಲ್ಲ. ಅಧ್ಯಾತ್ಮಿಕ ಜಗತ್ತು ಪರಿಶುದ್ಧವಾದದ್ದು. ಆದರೆ ಐಹಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ದೇಹಕ್ಕಾಗಿ ಬೇರೆ ಬೇರೆ ಬಗೆಯ ಸುಖಗಳನ್ನು ಪಡೆಯಲು ಶ್ರಮಪಡುತ್ತಾರೆ. ದೇಹವು ಇಂದ್ರಿಯಗಳ ಪರಿಣಾಮ ಎಂದು ಹೇಳಿದರೆ ಇದು ಇನ್ನೂ ಸ್ಪಷ್ಟವಾದೀತು.

ಬಯಕೆಯ ತೃಪ್ತಿಗಾಗಿ ಇರುವ ಸಾಧನೆಗಳು ಇಂದ್ರಿಯಗಳು. ದೇಹ ಮತ್ತು ಸಾಧನಗಳಾದ ಇಂದ್ರಿಯಗಳು ಒಟ್ಟಾಗಿ ಇವನನ್ನು ಐಹಿಕ ಪ್ರಕೃತಿ ನೀಡುತ್ತದೆ. ಮುಂದಿನ ಶ್ಲೋಕದಲ್ಲಿ ಸ್ಪಷ್ಟವಾಗುವಂತೆ ಜೀವಿಯ ಹಿಂದಿನ ಬಯಕೆ ಮತ್ತು ಕರ್ಮಗಳಿಗೆ ಅನುಗುಣವಾಗಿ ಅವನಿಗೆ ಹಿತವಾದ ಅಥವಾ ಅಹಿತವಾದ ಸನ್ನಿವೇಶವು ಲಭ್ಯವಾಗುತ್ತವೆ. ಐಹಿಕ ಪ್ರಕೃತಿಯು ಮನುಷ್ಯನ ಬಯಕೆಗಳು ಮತ್ತು ಕರ್ಮಗಳಿಗೆ ಅನುಗುಣವಾಗಿ ಅವನನ್ನು ವಿವಿಧ ವಾಸಸ್ಥಗಳಲ್ಲಿ ಇರಿಸುತ್ತದೆ. ಯಾವುದೇ ವಾಸಸ್ಥಳ ಲಭ್ಯವಾಗುವುದಕ್ಕೆ ಮತ್ತು ಅವನಿಗೆ ಬರುವ ಸುಖ ದುಃಖಗಳಿಗೆ ಆ ಜೀವಿಯೇ ಕಾರಣ.

ದೇಹವು ಜಡವಸ್ತುವಾದದ್ಧರಿಂದ ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ. ಆದುದರಿಂದ ಜೀವಿಯನ್ನು ಒಮ್ಮೆ ಒಂದು ನಿರ್ದಿಷ್ಟವಾದ ಬಗೆಯ ದೇಹದಲ್ಲಿ ಇರಿಸುತ್ತಲೇ ಅವನು ಪ್ರಕೃತಿಯ ನಿಯಂತ್ರಣಕ್ಕೆ ಬರುತ್ತಾನೆ. ಪ್ರಕೃತಿಯ ನಿಯಮವನ್ನು ಬದಲು ಮಾಡಲು ಆ ಕಾಲದಲ್ಲಿ ಜೀವಿಗೆ ಶಕ್ತಿಯಿರುವುದಿಲ್ಲ. ಜೀವಿಯನ್ನು ಒಂದು ನಾಯಿಯ ದೇಹದಲ್ಲಿ ಇರಿಸಿದೆ ಎಂದುಕೊಳ್ಳೋಣ. ನಾಯಿಯ ದೇಹದಲ್ಲಿ ಇರಿಸಿದ ಕೂಲಡಲೇ ಅವನು ನಾಯಿಯಂತೆ ನಡೆದುಕೊಳ್ಳಬೇಕು. ಅವನು ಬೇರೆ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ.

ಜೀವಿಯನ್ನು ಒಂದು ಹಂದಿಯ ದೇಹದಲ್ಲಿ ಇರಿಸಿದರೆ ಅವನು ಹೊಲಸನ್ನು ತಿಂದು ಹಂದಿಯಂತೆ ನಡೆದುಕೊಳ್ಳಬೇಕು. ಹಾಗೆಯೇ ಜೀವಿಯನ್ನು ಒಬ್ಬ ದೇವತೆಯ ದೇಹದಲ್ಲಿ ಇಟ್ಟರೆ ಅವನು ತನ್ನ ದೇಹಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಇದು ಪ್ರಕೃತಿಯ ನಿಯಮ. ಆದರೆ ಎಲ್ಲ ಸನ್ನಿವೇಶಗಳಲ್ಲಿಯೂ ಪರಮಾತ್ಮನು ಜೀವಾತ್ಮನೊಡನೆ ಇರುತ್ತಾನೆ. ಇದನ್ನು ವೇದಗಳಲ್ಲಿ (ಮುಂಡಕ ಉಪನಿಷತ್ತು 3.1.1) ಹೀಗೆ ವಿವರಿಸಿದೆ - ದ್ವಾ ಸುಪರ್ಣಾ ಸಯುಜಾ ಸುಖಾಯಃ. ಪರಮ ಪ್ರಭುವು ಜೀವಾತ್ಮನ ವಿಷಯದಲ್ಲಿ ಎಷ್ಟು ಕರುಣಾಮಯನೆಂದರೆ ಅವನು ಜೀವಾತ್ಮನೊಡನೆ ಇರುತ್ತಾನೆ ಮತ್ತು ಎಲ್ಲ ಸನ್ನಿವೇಶಗಳಲ್ಲಿಯೂ ಪರಮಾತ್ಮನಾಗಿ ಇರುತ್ತಾನೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ