ಭಗವದ್ಗೀತೆ ಉಪದೇಶ: ಕರ್ಮದ ಮೇಲಿನ ಅಪನಂಬಿಕೆ ನಿನ್ನ ಕಾರಣವಾಗುತ್ತೆ; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ
Nov 27, 2024 10:27 AM IST
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಮಾತುಗಳನ್ನು ಇಲ್ಲಿ ವಿವರಿಸಲಾಗಿದೆ. ಮನುಷ್ಯನ ಜೀವನಕ್ಕೆ ಉಪಯುಕ್ತವಾದ ಸಂದೇಶಗಳು ಇಲ್ಲಿವೆ.
- ಭಗವದ್ಗೀತೆ ಉಪದೇಶ: ಶ್ರೀಮದ್ ಭಗವದ್ಗೀತೆಯಲ್ಲಿ ಕ್ರಿಯೆಯನ್ನು ಅನುಮಾನಿಸುವ ಮೂಲಕ ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ ಎಂದ ಬರೆಯಲಾಗಿದೆ. ಶ್ರೀಕೃಷ್ಣನು ಹೇಳಿರುವ ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ವಿಷಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.
ಭಗವದ್ಗೀತೆ ಹಿಂದೂ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದು ಶ್ರೀಕೃಷ್ಣನ ಬೋಧನೆಗಳನ್ನು ವಿರಿಸುತ್ತದೆ. ಗೀತಾ ಬೋಧನೆಯನ್ನು ಶ್ರೀಕೃಷ್ಣನು ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನಿಗೆ ನೀಡಿದ ಉಪದೇಶವಾಗಿದೆ. ಗೀತೆಯಲ್ಲಿ ನೀಡಿದ ಉಪದೇಶಗಳು ಇಂದಿನಗೂ ಪ್ರಸ್ತುತವಾಗಿವೆ. ಮನುಷ್ಯನಿಗೆ ಸರಿಯಾದ ಜೀವನ ಮಾರ್ಗವನ್ನು ತೋರಿಸುತ್ತವೆ.
ತಾಜಾ ಫೋಟೊಗಳು
ಭಗವದ್ಗೀತೆ ಧರ್ಮ, ಕ್ರಿಯೆ ಹಾಗೂ ಜೀವನದಲ್ಲಿ ಪ್ರೀತಿಯ ಪಾಠಗಳನ್ನು ನೀಡುತ್ತದೆ. ಜೀವನದಲ್ಲಿ ಸಮಸ್ಯೆಗಳು ಏಕೆ ಉದ್ಭವಿಸುತ್ತವೆ ಮತ್ತು ಅವುಗಳಿಗೆ ಪರಿಹಾರವೇನು ಎಂಬುದನ್ನು ಶ್ರೀಕೃಷ್ಣ ಗೀತೆಯಲ್ಲಿ ವಿವರಿಸಿದ್ದಾನೆ. ಭಗವದ್ಗೀತೆಯು ಕರ್ಮದ ತತ್ವಗಳ ಜ್ಞಾನವನ್ನು ಹೆಚ್ಚಿಸಲು ಮತ್ತು ಜೀವನದಲ್ಲಿ ಆ ಕರ್ಮವನ್ನು ಹೇಗೆ ನಿರ್ವಹಿಸಬೇಕೆಂಬುದರ ಉತ್ತಮ ಮಾರ್ಗದರ್ಶಿಯಾಗಿದೆ. ಗೀತೋಪದೇಶದಲ್ಲಿನ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಶ್ರೀಮದ್ ಭಗವದ್ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕರ್ಮವನ್ನು ಅನುಮಾನಿಸಿದರೆ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ.
ಗೀತೆಯ ಪ್ರಕಾರ, ಒಬ್ಬನು ತನ್ನ ಕರ್ಮವನ್ನು ಎಂದಿಗೂ ಅನುಮಾನಿಸಬಾರದು. ಹೀಗೆ ಮಾಡುವುದರಿಂದ ಮನುಷ್ಯನು ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ. ಆದ್ದರಿಂದ ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ, ನೀವು ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಆತ್ಮವಿಶ್ವಾಸದಿಂದ ಮಾಡಿ. ಆಗ ಮಾತ್ರ ಯಶ್ಸಿನ ಹಾದಿಯಲ್ಲಿ ಸಾಗುತ್ತೀರಿ.
ಯಾವುದೇ ಕೆಲಸವನ್ನು ಮಾಡುವಾಗ ಫಲವನ್ನು ಬಯಸದೆ ಮಾಡಬೇಕು. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಬಯಸಿದರೆ, ನಿಮ್ಮ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಇತರ ಆಲೋಚನೆಗಳು ನಿಮ್ಮ ಗುರಿಯಿಂದ ನಿಮ್ಮನ್ನು ವಿಚಲಿತಗೊಳಿಸಬಹುದು.
ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ಮನಸ್ಸನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕೆಲಸ ಮಾಡುವಾಗ ನಿಮ್ಮ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ಸ್ಥಿರವಾಗಿರಿಸಿಕೊಳ್ಳಿ. ಕೋಪವು ಬುದ್ಧಿಯನ್ನು ನಾಶಪಡಿಸುತ್ತದೆ. ಮಾಡಿದ ಕೆಲಸವನ್ನು ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.
ಶ್ರೀಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ, ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳಬಾರದು. ಈ ಬಾಂಧವ್ಯವೇ ಮನುಷ್ಯನ ದುಃಖ ಮತ್ತು ವೈಫಲ್ಯಕ್ಕೆ ಕಾರಣ. ಅತಿಯಾದ ಬಾಂಧವ್ಯವು ವ್ಯಕ್ತಿಯಲ್ಲಿ ಕೋಪ ಮತ್ತು ದುಃಖದ ಭಾವನೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ನೀವು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಒಬ್ಬರು ಅತಿಯಾದ ಬಾಂಧವ್ಯವನ್ನು ತಪ್ಪಿಸಬೇಕು.
ಶ್ರೀಕೃಷ್ಣನ ಪ್ರಕಾರ, ಯಾವುದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ಒಬ್ಬನು ತನ್ನೊಳಗೆ ಅಡಗಿರುವ ಭಯವನ್ನು ತೊಡೆದುಹಾಕಬೇಕು. ಈ ಪಾಠವನ್ನು ಹೇಳುವಾಗ ಕೃಷ್ಣನು ಅರ್ಜುನನಿಗೆ, ಓ ಅರ್ಜುನಾ, ನಿರ್ಭಯವಾಗಿ ಹೋರಾಡು ಎಂದು ಹೇಳುತ್ತಾನೆ. ಯುದ್ಧದಲ್ಲಿ ಸತ್ತರೆ ಸ್ವರ್ಗವೂ, ಗೆದ್ದರೆ ಭೂಮಿಯಲ್ಲಿ ರಾಜ್ಯವೂ ಸಿಗುತ್ತದೆ. ಆದ್ದರಿಂದ ನಿಮ್ಮ ಮನಸ್ಸಿನಿಂದ ಭಯವನ್ನು ತೊಡೆದುಹಾಕಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.