logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿ ಇರುವವರು ಪರಿಪೂರ್ಣ ಸತ್ಯವನ್ನ ಅರಿಯಲು ಪ್ರಯತ್ನಿಸುತ್ತಾರೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನಲ್ಲಿ ಇರುವವರು ಪರಿಪೂರ್ಣ ಸತ್ಯವನ್ನ ಅರಿಯಲು ಪ್ರಯತ್ನಿಸುತ್ತಾರೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Sep 07, 2024 05:24 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತನಲ್ಲಿ ಇರುವವರು ಪರಿಪೂರ್ಣ ಸತ್ಯವನ್ನ ಅರಿಯಲು ಪ್ರಯತ್ನಿಸುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 24 ಮತ್ತು 25ನೇ ಶ್ಲೋಕದಲ್ಲಿ ಬರೆಯಲಾಗಿದೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 24

ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ |

ಸರ್ವಥಾ ವರ್ತಮಾನೋಪಿ ನ ಸ ಭೂಯೋಭಿಜಾಯತೇ ||24||

ಅನುವಾದ: ಪ್ರಕೃತಿಯನ್ನೂ ಜೀವಿಯನ್ನೂ ಮತ್ತು ಗುಣಗಳ ಪರಸ್ಪರ ಪ್ರಕ್ರಿಯೆಯನ್ನೂ ಕುರಿತ ಈ ತತ್ವಜ್ಞಾನವನ್ನು ಅರ್ಥಮಾಡಿಕೊಂಡವನು ಮುಕ್ತಿಯನ್ನು ಪಡೆಯುವುದು ನಿಶ್ಚಯ. ಅವನ ಪ್ರಸ್ತುತ ಸ್ಥಿತಿ ಏನೇ ಆಗಿರಲಿ, ಅವನು ಇಲ್ಲಿ ಮತ್ತೆ ಹುಟ್ಟುವುದಿಲ್ಲ (Bhagavad Gita Updesh).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಾವಾರ್ಥ: ಐಹಿಕ ಪ್ರಕೃತಿ, ಪರಮಾತ್ಮ, ಜೀವಿ ಮತ್ತು ಅವರ ಪರಸ್ಪರ ಪ್ರತಿಕ್ರಿಯೆ ಇವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರಿಂದ ಮನುಷ್ಯನು ಮತ್ತೆ ಈ ಐಹಿಕ ಪ್ರಕೃತಿಗೆ ಹಿಂದಿರುಗುವ ಒತ್ತಾಯವಿಲ್ಲದೆ ಮುಕ್ತನಾಗುವುದಕ್ಕೆ ಅಧ್ಯಾತ್ಮಿಕ ವಾತಾವರಣಕ್ಕೆ ತಿರುಗಳು ಅರ್ಹನಾಗುತ್ತಾನೆ. ಇದು ಜ್ಞಾನದ ಫಲ. ಜೀವಿಯು ಅಕಸ್ಮಾತ್ತಾಗಿ ಈ ಐಹಿಕ ಅಸ್ತಿತ್ವದಲ್ಲಿ ಬಿದ್ದುಬಿಟ್ಟಿದ್ದಾನೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಜ್ಞಾನದ ಉದ್ದೇಶ.

ಅಧಿಕಾರಿಗಳು, ಸಂತಸದೃಶ ಜನರು ಮತ್ತು ಗುರು ಇವರ ಸಹವಾಸದಲ್ಲಿ ಮನುಷ್ಯನು ತಾನೇ ಪ್ರಯತ್ನಿಸಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅನಂತರ ದೇವೋತ್ತಮ ಪುರುಷನು ವಿವರಿಸಿದಂತೆ ಭಗವದ್ಗೀತೆಯನ್ನು ಅರ್ಥಮಾಡಿಕೊಂಡು ಅಧ್ಯಾತ್ಮಿಕ ಪ್ರಜ್ಞೆಗೆ ಅಥವಾ ಕೃಷ್ಣಪ್ರಜ್ಞೆಗೆ ಹಿಂದಿರುಗಬೇಕು. ಆಗ ಆತನು ಮತ್ತೆ ಈ ಐಹಿಕ ಅಸ್ತಿತ್ವಕ್ಕೆ ಬರುವುದಿಲ್ಲ ಎನ್ನುವುದು ನಿಶ್ಚಯ. ಆತನು ನಿತ್ಯಜ್ಞಾನಾನಂದದ ಬದುಕಿಗಾಗಿ ದಿವ್ಯಲೋಕಕ್ಕೆ ಸ್ಥಳಾಂತರ ಹೊಂದುವನು.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 25

ಧ್ಯಾನೇತಾತ್ಮನಿ ಪಶ್ಯನ್ತಿ ಕೇಚಿದಾತ್ಮಾನಮಾತ್ಮನಾ |

ಅನ್ಯೇ ಸಾನ್ಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ ||23||

ಅನುವಾದ: ಕೆಲವರು ಧ್ಯಾನದಿಂದ, ಮತ್ತೆ ಕೆಲವರು ಜ್ಞಾನವನ್ನು ಬೆಳೆಸಿಕೊಂಡು, ಇನ್ನು ಕೆಲವರು ನಿಷ್ಕಾಮಕರ್ಮದಿಂದ ತಮ್ಮೊಳಗಿರುವ ಪರಮಾತ್ಮನನ್ನು ಕಾಣುತ್ತಾರೆ.

ಭಾವಾರ್ಥ: ಆತ್ಮಸಾಕ್ಷಾತ್ಕಾರಕ್ಕಾಗಿ ಮನುಷ್ಯನ ಅನ್ವೇಷಣೆಯ ದೃಷ್ಟಿಯಿಂದ ಬದ್ಧಾತ್ಮಗಳನ್ನು ಎರಡು ವರ್ಗಗಳಾಗಿ ವಿಭಾಗಿಸಬಹುದು ಎಂದು ಕೃಷ್ಣನು ಅರ್ಜುನನಿಗೆ ತಿಳಿಸುತ್ತಾನೆ. ನಾಸ್ತಿಕರು, ಅಜ್ಞೇಯತಾವಾದಿಗಳು ಮತ್ತು ಸಂದೇಹವಾದಿಗಳು ಅಧ್ಯಾತ್ಮಿಕ ತಿಳುವಳಿಕೆಗೆ ದೂರವಾದವರು. ಆದರೆ ಅಧ್ಯಾತ್ಮಿಕ ಬದುಕನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಷ್ಠರಾದ ಇತರರು ಇದ್ದಾರೆ. ಅವರನ್ನು ಆತ್ಮಪರೀಕ್ಷೆ ಮಾಡಿಕೊಳ್ಳುವ ಭಕ್ತರು, ತತ್ವಜ್ಞಾನಿಗಳು ಮತ್ತು ನಿಷ್ಕಾಮ ಕರ್ಮಿಗಳು ಎಂದು ಕರೆಯುತ್ತಾರೆ.

ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಲು ಸದಾ ಯತ್ನಿಸುವವರನ್ನು ನಾಸ್ತಿಕರಲ್ಲಿ ಮತ್ತು ಅಜ್ಞೇಯತಾವಾದಿಗಳಲ್ಲಿ ಸೇರಿಸಲಾಗುತ್ತದೆ ಎಂದರೆ ದೇವೋತ್ತಮ ಪರಮ ಪುರುಷನ ಭಕ್ತರು ಮಾತ್ರ ಅಧ್ಯಾತ್ಮಿಕ ತಿಳುವಳಿಕೆಯಲ್ಲಿ ಅತ್ಯುತ್ತಮವಾಗಿ ನೆಲೆಗೊಂಡವರು. ಏಕೆಂದರೆ ಈ ಐಹಿಕ ಪ್ರಕೃತಿಯಾಚೆ ದಿವ್ಯಜಗತ್ತಿದೆ. ಪರಮಾತ್ಮನಾಗಿ, ವಿಸ್ತೃತನಾದ ಮತ್ತು ಎಲ್ಲರಲ್ಲಿರುವ ಪರಮಾತ್ಮನಾಗಿ, ಸರ್ವಾಂರ್ಯಾಮಿಯಾದ ದೇವೋತ್ತಮನಾಗಿ ದೇವೋತ್ತಮ ಪರಮ ಪುರುಷನಿದ್ದಾನೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ನಿಜ, ಜ್ಞಾನವನ್ನು ಬೆಳೆಸಿಕೊಂಡು ಪರ ಪರಿಪೂರ್ಣ ಸತ್ಯವನ್ನು ಅರಿಯಲು ಪ್ರಯತ್ನಮಾಡುವವರಿದ್ದಾರೆ. ಅವರನ್ನು ಶ್ರದ್ಧಾವಂತರ ವರ್ಗಕ್ಕೆ ಸೇರಿಸಬಹುದು.

ಸಾಂಖ್ಯ ದಾರ್ಶನಿಕರು ಐಹಿಕ ಜಗತ್ತನ್ನು ಇಪ್ಪತ್ನಾಲ್ಕು ತತ್ವಗಳಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಜೀವಾತ್ಮನನ್ನು ಇಪ್ಪತ್ತೈದನೆಯ ತತ್ವವಾಗಿ ಪರಿಗಣಿಸುತ್ತಾರೆ. ಜೀವಾತ್ಮನ ಸ್ವಭಾವವು ಐಹಿಕ ತತ್ವಗಳನ್ನು ಮೀರಿದುದು ಎಂದು ಅವರು ಅರ್ಥಮಾಡಿಕೊಳ್ಳಬೇಕು. ಆಗ ಅವರಿಗೆ ಜೀವಾತ್ಮನ ಮೇಲೆ ದೇವೋತ್ತಮ ಪರಮ ಪುರುಷನಿದ್ದಾನೆ ಎಂದು ಅರ್ಥವಾಗುತ್ತದೆ. ಆತನು ಇಪ್ಪತ್ತಾರನೆಯ ತತ್ವ. ಆಗ ಅವರು ಕ್ರಮೇಣ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯ ಮಟ್ಟಕ್ಕೆ ಬರುತ್ತಾರೆ. ನಿಷ್ಕಾಮಕರ್ಮಿಗಳು ಮನೋಧರ್ಮದಲ್ಲಿ ಪರಿಪೂರ್ಣರು. ಅವರಿಗೆ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯ ನೆಲೆಗೆ ಬರಲು ಅವಕಾಶ ದೊರೆಯುತ್ತದೆ.

ಶುದ್ಧಪ್ರಜ್ಞೆಯವರಾಗಿದ್ದು ಧ್ಯಾನದಿಂದ ತಮ್ಮೊಳಗಿನ ಪರಮಾತ್ಮನನ್ನು ಕಂಡುಕೊಳ್ಳಲು ಪ್ರಯತ್ನಿಸುವ ಕೆಲವರು ಜನರಿದ್ದಾರೆ. ಅವರು ತಮ್ಮೊಳಗೆ ಪರಮಾತ್ಮನನ್ನು ಕಂಡುಕೊಂಡಾಗ ಅವರಿಗೆ ಅಧ್ಯಾತ್ಮಿಕ ನೆಲೆ ದೊರೆಯುತ್ತದೆ. ಹೀಗೆಂದು ಇಲ್ಲಿ ಹೇಳಿದೆ. ಇದೇ ರೀತಿಯಲ್ಲಿ ಜ್ಞಾನವನ್ನು ಬೆಳೆಸಿಕೊಂಡು ಪರಮಾತ್ಮನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವವರಿದ್ದಾರೆ. ಹಠಯೋಗ ಪದ್ಧತಿಯನ್ನು ಅಭ್ಯಾಸ ಮಾಡುವ ಇತರರು ದೇವೋತ್ತಮ ಪರಮ ಪುರುಷನನ್ನು ತಮ್ಮ ಬಾಲಿಶ ಚಟುವಟಿಕೆಗಳಿಂದ ತೃಪ್ತಿಪಡಿಸಲು ಪ್ರಯತ್ನಿಸುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ