logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ದೇವರ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಹೆಚ್ಚು ಅದೃಷ್ಟ; ವಾಸ್ತುಶಾಸ್ತ್ರದಲ್ಲಿ ಪೂಜಾಸ್ಥಳದ ಬಗ್ಗೆ ತಿಳಿಯಿರಿ

ಮನೆಯಲ್ಲಿ ದೇವರ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಹೆಚ್ಚು ಅದೃಷ್ಟ; ವಾಸ್ತುಶಾಸ್ತ್ರದಲ್ಲಿ ಪೂಜಾಸ್ಥಳದ ಬಗ್ಗೆ ತಿಳಿಯಿರಿ

Raghavendra M Y HT Kannada

Dec 15, 2024 05:23 PM IST

google News

ಮನೆಯ ಯಾವ ದಿಕ್ಕಿನಲ್ಲಿ ಪೂಜಾ ಕೋಣೆ ಇರಬೇಕು, ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ

    • ದೇವರನ್ನು ಸರ್ವತೋಮುಖಿ ಎಂದು ಕರೆಯುತ್ತೇವೆ. ದೇವರ ಎಲ್ಲಾ ಕಡೆಯೂ ಇರುತ್ತಾನೆ. ಆದರೆ ಮನೆಯಲ್ಲಿ ದೇವರ ಕೋಣೆಯನ್ನು ಮಾತ್ರ ಪೂರ್ವ ಉತ್ತರದ ಮೂಲೆ ಅಂದರೆ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸುವುದು ಒಳ್ಳೆಯದು. ಪೂಜಾ ಸ್ಥಳವನ್ನು ಹಗುರವಾಗಿ ಇರುವಂತೆ ನಿರ್ಮಿಸಬೇಕು. ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯಿರಿ.
ಮನೆಯ ಯಾವ ದಿಕ್ಕಿನಲ್ಲಿ ಪೂಜಾ ಕೋಣೆ ಇರಬೇಕು, ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ
ಮನೆಯ ಯಾವ ದಿಕ್ಕಿನಲ್ಲಿ ಪೂಜಾ ಕೋಣೆ ಇರಬೇಕು, ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ

ಕೆಲವರು ತಮ್ಮ ಮನೆಯಲ್ಲಿ ದೇವರ ವಿಗ್ರಹಗಳಿಲ್ಲ. ಆದ್ದರಿಂದ ದೇವರ ಪೂಜೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಆದರೆ ದೇವರ ವಿಗ್ರಹಗಳು ಇಲ್ಲದೆ ಹೋದರು ಮನೆಯಲ್ಲಿ ದಿನನಿತ್ಯ ಬಳಸುವ ಹಲವಾರು ವಸ್ತುಗಳು ಇರುತ್ತವೆ. ಈ ವಸ್ತುಗಳನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಸಮಾನವಾದವು ಎಂದು ಪರಿಗಣಿಸಲಾಗಿದೆ. ಗ್ರಹಗಳನ್ನು ದೇವರುಗಳ ಪ್ರತಿನಿಧಿಗಳು ಎಂದು ಕರೆಯಲಾಗುತ್ತದೆ. ಕಾರಣವೇನೆಂದರೆ ಜನ್ಮ ಕುಂಡಲಿಯಲ್ಲಿರುವ ದೋಷಪೂರಿತ ಗ್ರಹಗಳನ್ನು ತಿಳಿದು ಅವುಗಳಿಂದ ದೊರೆಯುವ ಕೆಟ್ಟ ಫಲಗಳಿಂದ ಪಾರಾಗಬೇಕು, ಇದಕ್ಕಾಗಿ ದೇವರ ಪೂಜೆಯನ್ನೇ ಮಾಡಬೇಕು. ಅಥವಾ ದಾನ ಧರ್ಮಗಳಿಂದಲೂ ಸಾಧ್ಯವಾಗುತ್ತದೆ. ಇದನ್ನು ಸಹ ಪರೋಕ್ಷವಾಗಿ ದೇವರಿಗೆ ಅರ್ಪಿಸುತ್ತೇವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ, ದೈಹಿಕ ಆರೋಗ್ಯದ ಬಗ್ಗೆ ಗಮನ ಕೊಡಿ

Dec 15, 2024 04:04 PM

ಧನು ರಾಶಿಗೆ ಸೂರ್ಯ ಸಂಚಾರ; ಈ 3 ರಾಶಿಯವರು ಭಾರಿ ಅದೃಷ್ಟವಂತರು, ಆದಾಯ ಮತ್ತು ಗೌರವ ಹೆಚ್ಚಾಗುತ್ತೆ

Dec 15, 2024 08:30 AM

ನಾಳಿನ ದಿನ ಭವಿಷ್ಯ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತೆ, ವ್ಯವಹಾರದಲ್ಲಿ ಲಾಭ ಕಾಣುತ್ತೀರಿ

Dec 14, 2024 06:12 PM

ಬಾಬಾ ವಂಗಾ ಭವಿಷ್ಯ ವಾಣಿ 2025: ಹೊಸ ವರ್ಷ ಕಟಕ ಸೇರಿದಂತೆ ಈ 3 ರಾಶಿಯವರ ಜೀವನದಲ್ಲಿ ತರಲಿದೆ ಹರ್ಷ

Dec 14, 2024 04:04 PM

ಈ ರಾಶಿಯಲ್ಲಿ ಜನಿಸಿದವರು ಅಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ, ಪ್ರೀತಿಯಲ್ಲಿ ಇವರು ಎತ್ತಿದ ಕೈ

Dec 13, 2024 08:27 PM

ನಾಳಿನ ದಿನ ಭವಿಷ್ಯ: ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ, ವೈವಾಹಿಕ ಜೀವನದಲ್ಲಿನ ಸಂತೋಷ ಹೆಚ್ಚಾಗುತ್ತೆ

Dec 13, 2024 04:23 PM

ಇನ್ನು ದಿನನಿತ್ಯ ನಾವು ಬಳಸುವ ನೀರನ್ನು ಗಂಗೆಗೆ ಹೋಲಿಸುತ್ತೇವೆ. ಆಹಾರ ತಯಾರಿಸಲು ಬೇಕಾದ ಅಕ್ಕಿ ಬೇಳೆ ಮುಂತಾದವುಗಳನ್ನು ಅನ್ನಪೂರ್ಣೇಶ್ವರಿಗೆ ಹೋಲಿಸುತ್ತೇವೆ. ಪ್ರತಿನಿತ್ಯ ನಮಗೆ ಅಗತ್ಯವಾಗಿರುವ ಹಣವನ್ನು ಲಕ್ಷ್ಮಿಗೆ ಹೋಲಿಸುತ್ತೇವೆ. ಪುಸ್ತಕಗಳನ್ನು ಮತ್ತು ದಿನಪತ್ರಿಕೆಗಳನ್ನು ಸಹ ಸರಸ್ವತಿಗೆ ಹೋಲಿಸುತ್ತೇವೆ. ಆದ್ದರಿಂದ ನಮ್ಮ ಮನೆಗಳಲ್ಲಿ ದೇವರ ವಿಗ್ರಹಗಳು ಇಲ್ಲದೆ ಹೋದರು ಅದಕ್ಕೆ ಸಮಾನವಾದ ವಸ್ತುಗಳು ಇರುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಮತ್ತು ಸರಿಯಾದ ಸ್ಥಳಗಳಲ್ಲಿ ಶೇಖರಣೆ ಮಾಡುವುದರಿಂದ ವಾಸ್ತುದೋಷದಿಂದ ಮುಕ್ತರಾಗಬಹುದು.

ಮನೆಯಲ್ಲಿ ದೇವರನ್ನು ಯಾವ ದಿಕ್ಕಿನಲ್ಲಿ ಇಡಬೇಕು

ದೇವರನ್ನು ಯಾವುದೇ ದಿಕ್ಕಿನಲ್ಲೂ ಇಡಬಹುದು. ಕಾರಣವೇನೆಂದರೆ ದೇವರನ್ನು ಸರ್ವತೋಮುಖಿ ಎಂದು ಕರೆಯುತ್ತೇವೆ. ಆದರೆ ಪೂಜಾ ಗೃಹವನ್ನು ಮಾತ್ರ ಪೂರ್ವ ಉತ್ತರದ ಮೂಲೆ ಅಂದರೆ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸುವುದು ಒಳ್ಳೆಯದು. ಆದರೆ ಪೂಜಾ ಸ್ಥಳವನ್ನು ಹಗುರವಾಗಿ ಇರುವಂತೆ ನಿರ್ಮಿಸಬೇಕು. ಅನಿವಾರ್ಯವಾಗಿ ಪೂಜಾ ಸ್ಥಳವನ್ನು ಮನೆಯ ಬೇರೆ ಸ್ಥಳಗಳಲ್ಲಿ ನಿರ್ಮಿಸಿದ್ದಲ್ಲಿ, ನಾವು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖವನ್ನು ಮಾಡಿ ಕುಳಿತು ಪೂಜೆ ಮಾಡುವಂತಿರಬೇಕು. ಪೂಜಾ ಸ್ಥಳವನ್ನು ಪೂರ್ವ ದಿಕ್ಕಿನ ಗೋಡೆಯಲ್ಲಿನ ಮಧ್ಯಭಾಗದಲ್ಲಿ ಸಹ ನಿರ್ಮಿಸಬಹುದು. ಆದರೆ ಆಗ್ನೇಯ ಮೂಲೆಯಲ್ಲಿ ಪೂಜಾಗೃಹವನ್ನು ನಿರ್ಮಿಸಬಾರದು.

ಮನೆಯಲ್ಲಿ ನೀರನ್ನು ಶೇಖರಿಸಿಡಬಹುದು. ಆದರೆ ಪೂಜಾ ಕೋಣೆಯಲ್ಲಿ ನೀವು ನೆಲದ ಮೇಲೆ ನಿಂತುಕೊಳ್ಳಬಾರದು. ಪೂಜಾ ಕೋಣೆಯಲ್ಲಿ ಧೂಳು ಇರದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಪೂಜಾ ಸ್ಥಳದಲ್ಲಿ ಮತ್ತು ಪೂಜಾ ಸ್ಥಳದ ಅಕ್ಕಪಕ್ಕಗಳಲ್ಲಿ ಜೇಡರಬಲೆ ಇರಬಾರದು. ಪೂಜಾಗೃಹಕ್ಕೆ ಬಾಗಿಲುಗಳು ಇದ್ದಲ್ಲಿ ಅದನ್ನು ಸದಾ ಕಾಲ ಮುಚ್ಚಿರಬಾರದು. ಪೂಜಾಗೃಹದಲ್ಲಿ ವಿದ್ಯುತ್ ದೀಪಗಳ ಅಲಂಕಾರವಿದ್ದರೂ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿಡುವುದನ್ನು ಮರೆಯಬಾರದು.

ಮನೆಯ ಪೂಜಾ ಕೋಣೆಯ ಬಗ್ಗೆ ತಿಳಿದಿರಲೇಬೇಕಾದ ವಿಚಾರಗಳಿವು

ಪೂಜಾ ಕೋಣೆಯನ್ನು ಮನೆಯ ಹಿರಿಯರ ಎದೆಯ ಮಟ್ಟಕ್ಕೆ ಇರುವಂತೆ ನಿರ್ಮಿಸುವುದು ಒಳ್ಳೆಯದು. ಮನೆಯಲ್ಲಿನ ಪೂಜಾ ಗೃಹಕ್ಕೆ ಕಬ್ಬಿಣದ ಬಾಗಿಲುಗಳನ್ನು ಇಡಬಾರದು. ಪೂಜಾ ಗೃಹದ ಎಡಗಡೆಯ ಮೂಲೆಯಲ್ಲಿ ತೂಕವಿರುವ ಪದಾರ್ಥವನ್ನು ಇಡಬಾರದು. ಪೂಜಾ ಸಾಮಗ್ರಿಗಳನ್ನು ಮತ್ತು ಪೂಜೆಗೆ ಬಳಸುವ ಪದಾರ್ಥಗಳನ್ನು ಪೂಜಾ ಗೃಹದ ಎಡ ಭಾಗದಲ್ಲಿ ಇಡುವುದು ಒಳ್ಳೆಯದು. ಪೂಜೆಯನ್ನು ಮಾಡುವ ಮುನ್ನ ದೇವರುಗಳನ್ನು ಕದಲಿಸಬೇಕು. ಪೂಜಾ ಗೃಹದ ಮೇಲ್ಭಾಗದಲ್ಲಿ ಬಟ್ಟೆಗಳನ್ನು ಅಥವಾ ತಯಾರಿಸಿದ ಆಹಾರವನ್ನು ಇಡಬಾರದು.

ಮನೆಯಲ್ಲಿ ಪೂಜಿಸುವ ದೇವರ ವಿಗ್ರಹಗಳು ನಮ್ಮ ಹೆಬ್ಬೆರಳಿಗಿಂತ ಉದ್ದವಾಗಿ ಇರಬಾರದು. ಬೇರೆಯವರಿಂದ ದಾನವಾಗಿ ಅಥವಾ ಕಾಣಿಕೆಯಾಗಿ ಪಡೆದ ದೇವರ ವಿಗ್ರಹಗಳನ್ನು ಪೂಜಿಸಬಹುದು. ಆದರೆ ದೇವಾಲಯಗಳಿಂದ ವಿಗ್ರಹವನ್ನು ತಂದು ಪೂಜಿಸುವುದು ಶ್ರೇಯಸ್ಕರವಲ್ಲ. ಬೆಳಗಿನ ವೇಳೆ ಮತ್ತು ಸಂಜೆಯ ವೇಳೆಗಳಲ್ಲಿ ದೇವರಕೋಣೆಗೆ ಅಡ್ಡವಾಗಿ ಮಲಗಬಾರದು. ಪೂಜಾ ಗೃಹಕ್ಕೆ ಕಾಲು ತೋರಿಸಿ ಮಲಗಬಾರದು. ಸೂರ್ಯನ ಬೆಳಕು ನೇರವಾಗಿ ಪೂಜಾಗೃಹದ ಮೇಲೆ, ಪೂಜಾ ಕೋಣೆಯ ಒಳಗೆ ಅಥವಾ ದೇವರುಗಳ ಮೇಲೆ ಬೀಳುವುದು ಒಳ್ಳೆಯದು. ಆದರೆ ಕನ್ನಡಿಯ ಸಹಾಯದಿಂದ ಬೆಳಕು ಬೀಳುವಂತೆ ಮಾಡಬಾರದು. ಪೂಜಾ ಗೃಹದಲ್ಲಿ ಯಾವುದೇ ದಿಕ್ಕಿನಲ್ಲಿಯೂ ಕನ್ನಡಿಗಳನ್ನು ಇಡಬಾರದು. ಅದೇ ರೀತಿ ಪೂಜೆಗಾಗಿ ಕುಳಿತು ಕನ್ನಡಿಯನ್ನು ನೋಡಿಕೊಂಡು ಹಣೆಗೆ ಕುಂಕುಮ ಅಥವಾ ವಿಭೂತಿಯನ್ನು ಧರಿಸಬಾರದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ