logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಇಂದ್ರಿಯಗಳು, ಮನಸ್ಸು ಶುದ್ಧವಾಗಿದ್ದರೆ ಭಗವಂತನನ್ನು ಸದಾ ಕಾಣಬಹುದು; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಇಂದ್ರಿಯಗಳು, ಮನಸ್ಸು ಶುದ್ಧವಾಗಿದ್ದರೆ ಭಗವಂತನನ್ನು ಸದಾ ಕಾಣಬಹುದು; ಭಗವದ್ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Aug 31, 2024 05:19 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಇಂದ್ರಿಯಗಳು, ಮನಸ್ಸು ಶುದ್ಧವಾಗಿದ್ದರೆ ಭಗವಂತನನ್ನು ಸದಾ ಕಾಣಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯ 16 ಮತ್ತು 17ನೇ ಶ್ಲೋಕದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 16

ಬಹಿರನ್ತಶ್ಚ ಭೂತಾನಾಮಚರಂ ಚರಮೇವ ಚ |

ಸೂಕ್ಷ್ಮತ್ತ್ವಾತ್ತದವಿಜ್ಞೇಯಂ ದೂರಸ್ಥಂ ಚಾನ್ತಿಕೇ ಚ ತತ್ ||16||

ಅನುವಾದ: ಪರಮ ಸತ್ಯನು ಎಲ್ಲ ಜೀವಿಗಳ ಮತ್ತು ಚರಾಚರಗಳ ಒಳಗೂ ಹೊರಗೂ ಇದ್ದಾನೆ. ಆತನು ಸೂಕ್ಷ್ಮನಾದದ್ದರಿಂದ ಐಹಿಕ ಇಂದ್ರಿಯಗಳು ಅವನನ್ನು ನೋಡಲಾರವು ಮತ್ತು ತಿಳಿಯಲಾರವು. ಬಹುದೂರದಲ್ಲಿದ್ದರೂ ಅವನು ಎಲ್ಲರಿಗೂ ಸಮೀಪದಲ್ಲಿದ್ದಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಾವಾರ್ಥ: ಪರಮ ಪುರುಷನಾದ ನಾರಾಯಣನು ಪ್ರತಿಯೊಂದು ಜೀವಿಯ ಒಳಗೂ ಹೊರಗೂ ವಾಸಮಾಡುತ್ತಾನೆ ಎಂದು ವೇದಸಾಹಿತ್ಯದಿಂದ ನಮಗೆ ತಿಳಿದುಬರುತ್ತದೆ. ಅವನು ಅಧ್ಯಾತ್ಮಿಕ ಮತ್ತು ಐಹಿಕ ಜಗತ್ತುಗಳೆರಡರಲ್ಲಿಯೂ ಇದ್ದಾನೆ. ಅವನು ಬಹುದೂರದಲ್ಲಿದ್ದರೂ ನಮ್ಮ ಹತ್ತಿರವಿದ್ದಾನೆ. ಹೀಗೆಂದು ವೇದಸಾಹಿತ್ಯ ಹೇಳುತ್ತದೆ. ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ (ಕಠ ಉಪನಿಷತ್ತು 1.2.21). ಸದಾ ದಿವ್ಯಾನಂದದಲ್ಲಿರುವುದರಿಂದ ಅವನು ತನ್ನ ಪೂರ್ಣಸಿರಿಯನ್ನು ಹೇಗೆ ಸವಿಯುತ್ತಾನೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ.

ನಮ್ಮ ಐಹಿಕ ಇಂದ್ರಿಯಗಳಿಂದ ನೋಡುವುದಾಗಲೀ ಅರ್ಥಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಆದುದರಿಂದ ಅವನ್ನನು ಅರ್ಥಮಾಡಿಕೊಳ್ಳಲು ನಮ್ಮ ಐಹಿಕ ಮನಸ್ಸು ಮತ್ತು ಇಂದ್ರಿಯಗಳು ಕೆಲಸಮಾಡಲಾರವು ಎಂದು ವೈದಿಕ ಭಾಷೆಯಲ್ಲಿ ಹೇಳಿದೆ. ಆದರೆ ಭಕ್ತಿಸೇವೆಯಲ್ಲಿ ಕೃಷ್ಣಪ್ರಜ್ಞೆಯನ್ನು ಅಭ್ಯಾಸಮಾಡಿಕೊಂಡು ತನ್ನ ಮನಸ್ಸನ್ನೂ ಇಂದ್ರಿಯಗಳನ್ನೂ ಶುದ್ಧಗೊಳಿಸಿಕೊಂಡಿರುವವನು ಸದಾ ಅವನನ್ನು ನೋಡಬಲ್ಲ.

ಪರಮ ಪ್ರಭುವಿನಲ್ಲಿ ಪ್ರೀತಿಯನ್ನು ಬೆಳೆಸಿಕೊಂಡ ಭಕ್ತನು ಅವಿಚ್ಛಿನ್ನವಾಗಿ ನಿರಂತರವೂ ಅವನನ್ನು ಕಾಣಬಲ್ಲ ಎಂದು ಬ್ರಹ್ಮಸಂಹಿತೆಯು ದೃಢಪಡಿಸಿದೆ. ಭಕ್ತಿಸೇವೆಯಿಂದ ಮಾತ್ರ ಅವನನ್ನು ಕಂಡು ಅರ್ಥಮಾಡಿಕೊಳ್ಳುವುದು ಸಾಧ್ಯ. ಭಕ್ತ್ಯಾತ್ವನನ್ಯಯಾ ಶಕ್ಯಃ ಎಂದು ಭಗವದ್ಗೀತೆಯಲ್ಲಿ (11.54) ದೃಢಪಡಿಸಿದೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 17

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ |

ಭೂತಭರ್ತೃ ಚ ತಜ್‌ಜ್ಞೇಯಂ ಗ್ರಸಿಷ್ಣು ಚ ||17||

ಅನುವಾದ: ಪರಮಾತ್ಮನು ಎಲ್ಲ ಪ್ರಾಣಿಗಳಲ್ಲಿ ಹಂಚಿರುವಂತೆ ಕಂಡರೂ ಅವನು ವಿಭಾಗವಾಗುವುದಿಲ್ಲ. ಅವನು ಏಕವಾಗಿ ಸ್ಥಿತನಾಗಿರುತ್ತಾನೆ. ಪ್ರತಿಯೊಂದು ಜೀವಿಯ ಪಾಲಕನಾದರೂ ಅವನು ಎಲ್ಲರನ್ನೂ ತಿಂದುಹಾಕುತ್ತಾನೆ ಮತ್ತು ಎಲ್ಲರನ್ನೂ ಬೆಳೆಸುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು.

ಭಾವಾರ್ಥ: ಪರಮಾತ್ಮನಾಗಿ ಪ್ರಭುವು ಎಲ್ಲರ ಹೃದಯಗಳಲ್ಲಿಯೂ ಇದ್ದಾನೆ. ಹೇಗೆಂದರೆ ಅವನು ವಿಭಾಗವಾಗಿದ್ದಾನೆ ಎಂದು ಅರ್ಥವೆ? ಇಲ್ಲ. ವಾಸ್ತವವಾಗಿ ಅವನು ಏಕ. ಸೂರ್ಯನ ಉದಾಹರಣೆಯನ್ನು ಸಾಮಾನ್ಯವಾಗಿ ಕೊಡುತ್ತಾರೆ. ಅವನು ಮಧ್ಯಾಹ್ನ ರೇಖೆಯಲ್ಲಿರುವಾಗ ತನ್ನ ಸ್ಥಾನದಲ್ಲಿರುತ್ತಾನೆ. ಆದರೆ ಯಾರಾದರೂ ಎಲ್ಲ ದಿಕ್ಕುಗಳಲ್ಲಿ ಐದು ಸಾವಿರ ಮೈಲಿ ಹೋಗಿ, ಸೂರ್ಯನೆಲ್ಲಿ? ಎಂದು ಕೇಳಿದರೆ ಎಲ್ಲರೂ ಆತನಿಗೆ ಸೂರ್ಯನು ಅವನ ನೆತ್ತಿಯ ಮೇಲೆಯೇ ಪ್ರಕಾಶಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಪರಮಾತ್ಮನು ಭಾಗವಾಗದಿದ್ದರೂ ಭಾಗವಾದಂತೆ ನೆಲೆಸಿರುತ್ತಾನೆ ಎಂದು ತೋರಿಸಲು ವೇದಸಾಹಿತ್ಯದಲ್ಲಿ ಈ ಉದಾಹರಣೆಯನ್ನು ಕೊಡುತ್ತಾರೆ.

ಅಲ್ಲದೆ, ಹಲವಾರು ಸ್ಥಳಗಳಲ್ಲಿ ಸೂರ್ಯನು ಹಲವಾರು ಮಂದಿಗೆ ಗೋಚರನಾಗುವಂತೆ ಒಬ್ಬ ವಿಷ್ಣುವು ತನ್ನ ಸರ್ವಶಕ್ತಿಯಿಂದ ಎಲ್ಲೆಲ್ಲೂ ಇದ್ದಾನೆ ಎಂದು ವೇದಸಾಹಿತ್ಯದಲ್ಲಿ ಹೇಳಿದೆ. ಪರಮ ಪ್ರಭುವು ಎಲ್ಲ ಜೀವಿಗಳ ಪಾಲಕನಾದರೂ, ಪ್ರಳಯಕಾಲದಲ್ಲಿ ಎಲ್ಲರನ್ನೂ ನುಂಗಿ ಹಾಕುತ್ತಾನೆ. ಹನ್ನೊಂದನೆಯ ಅಧ್ಯಾಯದಲ್ಲಿ ಪ್ರಭುವು ತಾನು ಕುರುಕ್ಷೇತ್ರದಲ್ಲಿ ನೆರೆದಿದ್ದ ಎಲ್ಲ ಯೋಧರನ್ನು ತಿನ್ನಲು ಬಂದಿದ್ದೇನೆ ಎಂದು ಹೇಳಿದಾಗ ಇದು ದೃಢಪಟ್ಟಿತು.

ಕಾಲದ ರೂಪದಲ್ಲಿಯೂ ತಾನು ಭಕ್ಷಿಸುವುದಾಗಿ ಅವನು ಹೇಳಿದ. ಅವನು ಲಯಕಾರಿ, ಸರ್ವವಿನಾಶಕ. ಸೃಷ್ಟಿಯಾಗುವಾಗ ಅವನು ಎಲ್ಲರನ್ನೂ ಅವರ ಮೂಲ ಸ್ಥಿತಿಯಿಂದ ಬೆಳೆಸುತ್ತಾನೆ, ಪ್ರಳಯಕಾಲದಲ್ಲಿ ಅವರನ್ನು ಭಕ್ಷಿಸುತ್ತಾನೆ. ಎಲ್ಲ ಜೀವಿಗಳ ಮೂಲನೂ ಅವನೇ, ಶಾಂತಿತಾಣವೂ ಅವನೇ ಎಂದು ವೇದಗಳ ಸ್ತೋತ್ರಗಳು ದೃಢಪಡಿಸುತ್ತವೆ. ಸೃಷ್ಟಿಯನಂತರ ಎಲ್ಲಕ್ಕೂ ಅವನ ಸರ್ವಶಕ್ತಿಯೇ ಆಧಾರ. ಪ್ರಳಯದನಂತರ ಎಲ್ಲವೂ ಅವನಲ್ಲಿ ವಿರಮಿಸಲು ಹಿಂದಿರುಗುತ್ತವೆ. ವೇದಗಳ ಸ್ತೋತ್ರಗಳು ಹೀಗೆ ದೃಢಪಡಿಸುತ್ತವೆ. ಯತೋ ವಾ ಇಮಾನಿ ಭೂತಾನಿ ಜಾಯನ್ತೇ ಯೇನ ಜಾತಾನಿ ಜೀವನ್ತಿ ಯತ್ ಪ್ರಯನ್ತಿ ಅಭಿಸಂವಿಶನ್ತಿ ತದ್ ಬ್ರಹ್ಮ ತದ್ ವಿಜಿಜ್ಞಾಸಸ್ವ (ತೈತ್ತರೀಯ ಉಪನಿಷತ್ತು 3.1)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ