Bhagavad Gita: ಭೂತ, ವರ್ತಮಾನ, ಭವಿಷ್ಯ ಎಲ್ಲವನ್ನೂ ಭಗವಂತ ಕಾಣುತ್ತಾನೆ; ಭಗವದ್ಗೀತೆಯ ಅರ್ಥ ತಿಳಿಯಿರಿ
Aug 30, 2024 06:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಭೂತ, ವರ್ತಮಾನ, ಭವಿಷ್ಯ ಎಲ್ಲವನ್ನೂ ಭಗವಂತ ಕಾಣುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 15 ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 15
ಸರ್ವೇನ್ದ್ರಿಯಗುಣಾಭಾಸಂ ಸರ್ವೇನ್ದ್ರಿಯವಿವರ್ಜಿತಮ್ |
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ||15||
ಅನುವಾದ: ಪರಮಾತ್ಮನು ಎಲ್ಲ ಇಂದ್ರಿಯಗಳ ಆದಿಮೂಲ, ಆದರೂ ಆತನಿಗೆ ಇಂದ್ರಿಯಗಳಲ್ಲಿ, ಆತನು ಎಲ್ಲ ಜೀವರಾಶಿಯನ್ನು ಪಾಲಿಸುವವನಾದರೂ ನಿರಾಸಕ್ತನು. ಆತನು ನಿಸರ್ಗದ ಗುಣಗಳನ್ನು ಮೀರಿದವನು, ಅದೇ ಕಾಲದಲ್ಲಿ ನಿಸರ್ಗದ ಎಲ್ಲ ಗುಣಗಳ ಪ್ರಭು.
ತಾಜಾ ಫೋಟೊಗಳು
ಭಾವಾರ್ಥ: ಪರಮಾತ್ಮನು ಜೀವಿಗಳ ಎಲ್ಲ ಇಂದ್ರಿಯಗಳ ಮೂಲನಾದರೂ ಅವರಿಗಿರುವಂತೆ ಅವನಿಗೆ ಭೌತಿಕ ಇಂದ್ರಿಯಗಳಿಲ್ಲ. ವಾಸ್ತವವಾಗಿ ವ್ಯಕ್ತಿಗತ ಆತ್ಮಗಳಿಗೆ ಅಧ್ಯಾತ್ಮಿಕ ಇಂದ್ರಿಯಗಳುಂಟು, ಆದರೆ ಬದ್ಧಜೀವನದಲ್ಲಿ ಐಹಿಕ ಘಟಕಾಂಶಗಳು ಅವನ್ನು ಮರೆಮಾಡಿರುತ್ತವೆ. ಆದುದರಿಂದ ಇಂದ್ರಿಯಗಳ ಚಟುವಟಿಕೆಗಳು ಜಡವಸ್ತುವಿನ ಮೂಲಕ ಪ್ರಕಟವಾಗುತ್ತವೆ. ಪರಮ ಪ್ರಭುವಿನ ಇಂದ್ರಿಯಗಳಿಗೆ ಈ ಬಗೆಯ ಮರೆಯಿಲ್ಲ. ಅವನು ಇಂದ್ರಿಯಗಳು ಅಲೌಕಿಕವಾದುವು, ಆದುದರಿಂದ ಅವನು ನಿರ್ಗುಣ ಎಂದು ಕರೆಯಲಾಗಿದೆ.
ಗುಣ ಎಂದರೆ ಐಹಿಕ ಗುಣಗಳು. ಆದರೆ ಅವನ ಇಂದ್ರಿಯಗಳಿಗೆ ಐಹಿಕ ಆಚ್ಛಾದನೆಯಿಲ್ಲ. ಅವನ ಇಂದ್ರಿಯಗಳು ನಮ್ಮ ಇಂದ್ರಿಯಗಳಂತೆಯೇ ಇಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ನಮ್ಮ ಇಂದ್ರಿಗಳ ಎಲ್ಲ ಚಟುವಟಿಕೆಗಳ ಮೂಲ ಅವನೇ ಆದರೂ ಅವನಿಗೆ ಅಲೌಕಿಕ ಇಂದ್ರಿಯಗಳಿವೆ. ಅವು ನಿರ್ಮಲವಾಗಿವೆ. ಶ್ವೇತಾತ್ವತರ ಉಪನಿಷತ್ತಿನ ಅಪಾಣಿ ಪಾದೋ ಜವನೋ ಗ್ರಹೀತಾ ಎನ್ನುವ ಶ್ಲೋಕದಲ್ಲಿ ಇದನ್ನು ಬಹು ಚೆನ್ನಾಗಿ ವಿವರಿಸಿದೆ. ದೇವೋತ್ತಮ ಪರಮ ಪುರುಷನಿಗೆ ಐಹಿಕ ಕಶ್ಮಲದ ಸೋಂಕಿರುವ ಕೈಗಳಿಲ್ಲ. ಆದರೂ ಅವನಿಗೆ ಕೈಗಳಿವೆ.
ಅವನಿಗೆ ಅರ್ಪಿಸಿದ ಯಜ್ಞಗಳನ್ನು ಸ್ವೀಕರಿಸುತ್ತಾನೆ. ಬದ್ಧ ಆತ್ಮಕ್ಕೂ ಪರಮಾತ್ಮನಿಗೂ ಇದೇ ವ್ಯತ್ಯಾಸ. ಅವನಿಗೆ ಐಹಿಕ ಕಣ್ಣುಗಳಿಲ್ಲ. ಆದರೆ ಅವನಿಗೆ ಕಣ್ಣುಗಳಿವೆ. ಇಲ್ಲವಾದರೆ ಅವನು ನೋಡಲು ಹೇಗೆ ಸಾಧ್ಯವಾಗುತ್ತಿತ್ತು? ಭೂತ, ವರ್ತಮಾನ, ಭವಿಷ್ಯ ಎಲ್ಲವನ್ನೂ ಆತ ಕಾಣುತ್ತಾನೆ. ಆತನು ಜೀವಂತ ಪ್ರಾಣಿಯ ಹೃದಯದಲ್ಲಿ ಇದ್ದಾನೆ. ನಾವು ಹಿಂದೆ ಏನು ಮಾಡಿದ್ದೇವೆ, ಈಗ ಏನು ಮಾಡುತ್ತಿದ್ದೇವೆ ಮತ್ತು ಮುಂದೆ ನಮಗಾಗಿ ಏನು ಕಾದಿದೆ ಎಲ್ಲ ಅವನಿಗೆ ಗೊತ್ತು. ಇದನ್ನು ಭಗವದ್ಗೀತೆಯಲ್ಲೂ ದೃಢಪಡಿಸಿದೆ. ಅವನಿಗೆ ಎಲ್ಲವೂ ತಿಳಿದಿದೆ. ಆದರೆ ಅವನನ್ನು ತಿಳಿದವರಿಲ್ಲ.
ಪರಮ ಪ್ರಭುವಿಗೆ ಮನಗಿರುವಂತೆ ಕಾಲುಗಳಿಲ್ಲ. ಆದರೆ ಅವನಿಗೆ ಅಧ್ಯಾತ್ಮಿಕ ಕಾಲುಗಳಿರುವುದರಿಂದ ಆಕಾಶದಲ್ಲಿ ಅವನು ಪ್ರಯಾಣ ಮಾಡಬಲ್ಲ, ಎಂದರೆ ಪ್ರಭುವು ನಿರಾಕಾರನಲ್ಲ. ಅವನಿಗೆ ಕಣ್ಣುಗಳು, ಕಾಲುಗಳು, ಕೈಗಳು ಮತ್ತು ಉಳಿದೆಲ್ಲ ಅಂಗಾಂಗಗಳಿವೆ ಮತ್ತು ನಾವು ಪರಮ ಪ್ರಭುವಿನ ಅವಿಭಾಜ್ಯ ಅಂಗಗಳಾದದ್ದರಿಂದ ನಮಗೂ ಆ ಅಂಗಾಂಗಗಳಿವೆ. ಆದರೆ ಅವನ ಕೈಗಳು, ಕಾಲುಗಳು, ಕಣ್ಣುಗಳು ಮತ್ತು ಇಂದ್ರಿಯಗಳಿಗೆ ಐಹಿಕ ಪ್ರಕೃತಿಯ ಕಲ್ಮಷದ ಸೋಂಕಿಲ್ಲ.
ಪ್ರಭುವು ಕಾಣಿಸಿಕೊಂಡಾಗ ತನ್ನ ಅಂತರಂಗ ಶಕ್ತಿಯಿಂದಾಗಿ ತಾನಿರುವಂತೆಯೇ ಕಾಣಿಸಿಕೊಳ್ಳುತ್ತಾನೆ ಎಂದು ಭಗವದ್ಗೀತೆಯು ದೃಢಪಡಿಸುತ್ತದೆ. ಐಹಿಕ ಶಕ್ತಿಯು ಅವನನ್ನು ಮಲಿನಗೊಳಿಸುವುದಿಲ್ಲ. ಏಕೆಂದರೆ ಅವನು ಐಹಿಕ ಶಕ್ತಿಯ ಪ್ರಭು. ಅವನ ಇಡೀ ಶರೀರವು ಅಧ್ಯಾತ್ಮಿಕವಾದದ್ದು ಎನ್ನುವುದನ್ನು ವೇದಸಾಹಿತ್ಯದಲ್ಲಿ ಕಾಣುತ್ತೇವೆ. ಅವನದು ಶಾಶ್ವತರೂಪ. ಅದಕ್ಕೆ ಸಚ್ಚಿದಾನಂದ ವಿಗ್ರಹ ಎಂದು ಹೆಸರು. ಅವನಲ್ಲಿ ಎಲ್ಲ ಸಿರಿಗಳಿವೆ. ಅವನು ಎಲ್ಲ ಸಿರಿಗಳ ಒಡೆಯ. ಎಲ್ಲ ಶಕ್ತಿಯೂ ಅವನಿಗೆ ಸೇರಿದ್ದು. ಅವನು ಅತ್ಯಂತ ಧೀಮಂತ ಮತ್ತು ಜ್ಞಾನಪೂರ್ಣ. ಇವು ದೇವೋತ್ತಮ ಪರಮ ಪುರುಷನ ಕೆಲವು ಲಕ್ಷಣಗಳು. ಅವನು ಎಲ್ಲ ಜೀವಿಗಳ ಪಾಲಕ ಮತ್ತು ಸರ್ವಸಾಕ್ಷಿ.
ವೇದಸಾಹಿತ್ಯದಿಂದ ನಾವು ತಿಳಿದುಕೊಳ್ಳಲು ಸಾಧ್ಯವಾಗುವ ಮಟ್ಟಿಗೆ ಪರಮ ಪ್ರಭುವು ಯಾವಾಗಲೂ ದಿವ್ಯನು. ಅವನ ತಲೆ, ಮುಖ, ಕೈಗಳು ಮತ್ತು ಕಾಲುಗಳನ್ನು ನಾವು ಕಾಣಲು ಸಾಧ್ಯವಿಲ್ಲದಿದ್ದರೂ ಅವನಿಗೆ ಅವುಗಳುಂಟು. ನಾವು ಅಲೌಕಿಕ ಸ್ಥಿತಿಗೆ ಏರಿದಾಗ ಅವನ ರೂಪವನ್ನು ಕಾಣಬಹುದು. ನಮ್ಮ ಇಂದ್ರಿಯಗಳಿಗೆ ಐಹಿಕ ಕಲ್ಮಶದ ಸೋಂಕಿರುವುದರಿಂದ ನಾವು ಅವನ ರೂಪವನ್ನು ಕಾಣಲಾರೆವು. ಆದುದರಿಂದಲೇ ಐಹಿಕ ಜಗತ್ತಿನ ಪ್ರಭಾವಕ್ಕೆ ಒಳಗಾದ ನಿರಾಕಾರವಾದಿಗಳು ದೇವೋತ್ತಮ ಪುರುಷನನ್ನು ಅರ್ಥಮಾಡಿಕೊಳ್ಳಲಾರರು.