logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ, ಆಂಜನೇಯ: ಎರಡು ಮಹಾಶಕ್ತಿಗಳ ನಡುವಣ ಪೌರಾಣಿಕ ಸಂಬಂಧದಿಂದ ಮನುಷ್ಯರ ಕಷ್ಟ ಹೀಗೆ ನಿವಾರಣೆಯಾಗುತ್ತೆ

ಶನಿ, ಆಂಜನೇಯ: ಎರಡು ಮಹಾಶಕ್ತಿಗಳ ನಡುವಣ ಪೌರಾಣಿಕ ಸಂಬಂಧದಿಂದ ಮನುಷ್ಯರ ಕಷ್ಟ ಹೀಗೆ ನಿವಾರಣೆಯಾಗುತ್ತೆ

Raghavendra M Y HT Kannada

Sep 21, 2024 09:37 AM IST

google News

ಶನಿ ಮತ್ತು ಆಂಜನೇಯ ನಡುವಿನ ಪೌರಾಣಿಕ ಸಂಬಂಧದಿಂದ ಮನುಷ್ಯರ ಕಷ್ಟಗಳು ನಿವಾರಣೆಯಾಗುತ್ತೆ. ಇಲ್ಲಿನ ಸ್ಟೋರಿ ಓದಿ.

    • ಶನಿಯಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಅಧ್ಯಾತ್ಮಿಕ ಅಭ್ಯಾಸಗಳನ್ನು ಮಾಡಬೇಕು, ಶನಿ ಮಂತ್ರ ಪಠಿಸುವುದು, ಬಡವರಿಗೆ ದಾನ ಮಾಡಿದರೆ ದೋಷದಿಂದ ಪರಿಹಾರ ಸಿಗುತ್ತದೆ. ಜೊತೆಗೆ ಹನುಮಾನ್ ಭಕ್ತರು ನೀವಾಗಿದ್ದರೆ ನಿಮಗೆ ಶನಿ ದೋಷ ಕಡಿಮೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಶನಿ ಮತ್ತು ಆಂಜನೇಯ ನಡುವಿನ ಪೌರಾಣಿಕ ಸಂಬಂಧದಿಂದ ಮನುಷ್ಯರ ಕಷ್ಟಗಳು ನಿವಾರಣೆಯಾಗುತ್ತೆ. ಇಲ್ಲಿನ ಸ್ಟೋರಿ ಓದಿ.
ಶನಿ ಮತ್ತು ಆಂಜನೇಯ ನಡುವಿನ ಪೌರಾಣಿಕ ಸಂಬಂಧದಿಂದ ಮನುಷ್ಯರ ಕಷ್ಟಗಳು ನಿವಾರಣೆಯಾಗುತ್ತೆ. ಇಲ್ಲಿನ ಸ್ಟೋರಿ ಓದಿ.

ಹಿಂದೂ ಪುರಾಣಗಳ ಪ್ರಕಾರ ಶನಿ ಬಹುಮುಖ ಪಾತ್ರವನ್ನು ವಹಿಸುವ ಗ್ರಹವಾಗಿದೆ. ನ್ಯಾಯ ಮತ್ತು ಅಧ್ಯಾತ್ಮಿಕ ಸಂಕೇತವನ್ನು ಎತ್ತಿ ತೋರಿಸುತ್ತೆ. ಶನಿಯ ಪ್ರಭಾವವು ಪ್ರಮುಖವಾಗಿ ಕರ್ಮಕ್ಕೆ ಸಂಬಂಧಿಸಿದೆ. ಇದೇ ಕಾರಣಕ್ಕೆ ನ್ಯಾಯದ ಅಧಿಪತಿಯೆಂದು ಪರಿಗಣಿಸಲಾಗಿದೆ. ಪ್ರಮುಖ ಕಥೆಗಳಲ್ಲಿ ಹೇಳಿರುವಂತೆ ಭಗವಾನ್ ಶಿವನ ಅವತಾರವಾಗಿದ್ದು, ರಾಮಾಯಣದಲ್ಲಿ ವಾನರ ದೇವರಾದ ಆಂಜನೇಯನೊಂದಿಗೆ ಸಂಬಂಧವನ್ನು ಕಾಣುತ್ತೇವೆ. ದಂತಕಥೆಗಳ ಪ್ರಕಾರ, ಶನಿಯು ಭಗವಾನ್ ಆಂಜನೇಯನ ಮೇಲೆ ತನ್ನ ದೃಷ್ಟಿಯನ್ನು ಬೀರಲು ಪ್ರಯತ್ನಿಸಲು ಹೋಗಿ ಸೋಲುತ್ತಾನೆ. ಆ ನಂತರ ಹನುಮಂತನನ್ನು ನೋಡಿದರೆ ಶನಿ ಭಯ ಪಡುತ್ತಾನೆ.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ಒಂದು ಕಥೆಯ ಪ್ರಕಾರ ಶನಿ ಬಾಲ್ಯದಲ್ಲೇ ಕಪ್ಪಾಗಿ ಇರುತ್ತಾನೆ. ಇದು ಆತನ ತಂದೆಯ ಅಸಮಾಧಾನಕ್ಕೆ ಕಾರಣವಾಗಿರುತ್ತೆ. ಇದೇ ಕಾರಣ ಶನಿ ತನ್ನ ಬಾಲ್ಯದಲ್ಲೇ ಮನೆಯಿಂದ ಹೊರ ಬಂದು ತನ್ನ ಶಕ್ತಿಯಿಂದ ಗ್ರಾಮವೊಂದರಲ್ಲಿ ಜನರಿಗೆ ತೊಂದರೆ ಕೊಡುತ್ತಾನೆ. ಅಲ್ಲಿನ ಜನರು ಶನಿಗೆ ನೀರು ಕುಡಿಯಲು ಬಿಟ್ಟಿರುವುದಿಲ್ಲ, ಇದರಿಂದ ಕೋಪಗೊಂಡು ಗ್ರಾಮಕ್ಕೆ ಬೆಂಕಿಯನ್ನು ಹಚ್ಚುತ್ತಾನೆ. ಜನರೆಲ್ಲರೂ ಶನಿಯನ್ನು ಕೊಲ್ಲುವುದಕ್ಕೆ ಸುತ್ತುವರಿದ ಸಂದರ್ಭದಲ್ಲಿ ಹನುಮಂತನು ಬಂದು ಆತನನ್ನು ರಕ್ಷಿಸಿ ಮನೆಗೆ ಹೋಗುವಂತೆ ಬುದ್ಧಿಮಾತು ಹೇಳುತ್ತಾನೆ. ಆದರೆ ಇದನ್ನು ಕೇಳದ ಶನಿಯು ಹನುಮಂತನ ಮೇಲೆಯೇ ಜಗಳ ಮಾಡೋಕೆ ಶುರು ಮಾಡುತ್ತಾನೆ. ಇಬ್ಬರ ನಡುವೆ ಯುದ್ದ ಆರಂಭವಾಗುತ್ತದೆ. ನಂತರ ಆಂಜನೇಯ ತನ್ನ ಬಾಲದಲ್ಲಿ ಸುತ್ತಿ ಎಸೆಯುತ್ತಾನೆ. ಅಂದಿನಿಂದ ಭಗವಾನ್ ಹನುಮಂತನನ್ನು ಕಂಡರೆ ಶನಿಗೆ ಭಯವೆಂದು ಕಥೆಗಳು ಹೇಳುತ್ತವೆ.

ಜನರ ಜೀವನ ಮೇಲೆ ಪರಿಣಾಮ ಬೀರುತ್ತೆ ಶನಿ ಸಂಚಾರ

ಎಲ್ಲಾ ಗ್ರಹಗಳಿಗೆ ಹೋಲಿಸಿಕೊಂಡರೆ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷಗಳ ಕಾಲ ಬೇಕಾಗುತ್ತದೆ. 2024ರ ನವೆಂಬರ್‌ನಲ್ಲಿ ಶನಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದು ಕೆಲವು ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶನಿ ಕೆಲವೊಮ್ಮೆ ನೇರವಾಗಿ ಚಲಿಸುತ್ತಾನೆ. ಸದ್ಯಕ್ಕೆ ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭದಲ್ಲಿ ಇದ್ದಾನೆ. 2025ರ ಮಾರ್ಚ್ ವರೆಗೆ ಇದೇ ರಾಶಿಯಲ್ಲಿ ಶನಿ ಸಂಚರಿಸುತ್ತಾನೆ. ಶನಿಯ ಈ ಸ್ಥಳ ಬದಲಾವಣೆ ಹಲವು ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತದೆ.

ಶನಿಯಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಅಧ್ಯಾತ್ಮಿಕ ಅಭ್ಯಾಸಗಳನ್ನು ಮಾಡಬೇಕು, ಮಂತ್ರ ಪಠಣ, ಬಡವರಿಗೆ ದಾನ ಮಾಡಿದರೆ ದೋಷದಿಂದ ಪರಿಹಾರ ಸಿಗುತ್ತದೆ. ಜೊತೆಗೆ ಹನುಮಾನ್ ಭಕ್ತರು ನೀವಾಗಿದ್ದರೆ ನಿಮಗೆ ಶನಿ ದೋಷ ಕಡಿಮೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಹನುಮಾನ್ ಮತ್ತು ಶನಿಯ ನಡುವಿನ ಸಂಬಂಧವನ್ನು ಹಿಂದೂ ಪುರಾಣಗಳಲ್ಲಿ ತಿಳಿದು ಬರುತ್ತದೆ. ಶನಿ ಕಾಟವನ್ನು ತಪ್ಪಿಸಲು ಹನುಮಾನ್ ಮಂತ್ರಗಳನ್ನು ಪಠಿಸಲಾಗುತ್ತದೆ. ವಿಶೇಷವಾಗಿ ಶನಿವಾರದಂದು ಈ ಮಂತ್ರಗಳನ್ನು ಪಠಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ಶನಿ ದೋಷ ಪರಿಹಾರಕ್ಕಾಗಿ ಪಠಿಸಬೇಕಾದ ಹನುಮಾನ್ ಮಂತ್ರಗಳು

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ|

ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ||

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ|

ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ||

ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಂ|

ರಾಮಾಯಣ ಮಹಾಮಾಲಾ ರತ್ನಂ ವಂದೇ ನಿಲಾತ್ಮಜಂ||

ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ|

ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ||

ಜಯ ಹುಮಾನ ಜ್ಞಾನ ಗುಣ ಸಾಗರ |

ಜಯ ಕಪೀಶ ತಿಹು ಲೋಕ ಉಜಾಗರ ||

ರಾಮದೂತ ಅತುಲಿತ ಬಲಧಾಮಾ|

ಅಂಜನಿ ಪುತ್ರ ಪವನಸುತ ನಾಮಾ||

ಮಹಾವೀರ ವಿಕ್ರಮ ಬಜರಂಗೀ |

ಕುಮತಿ ನಿವಾರ ಸುಮತಿ ಕೇ ಸಂಗೀ ||

ಕಂಚನ ವರಣ ವಿರಾಜ ಸುವೇಶಾ |

ಕಾನನ ಕುಂಡಲ ಕುಂಚಿತ ಕೇಶಾ ||

ಹಾಥವಜ್ರ ಔ ಧ್ವಜಾ ವಿರಾಜೈ |

ಕಾಂಥೇ ಮೂಂಜ ಜನೇವೂ ಸಾಜೈ ||

ಶಂಕರ ಸುವನ ಕೇಸರೀ ನಂದನ |

ತೇಜ ಪ್ರತಾಪ ಮಹಾಜಗ ವಂದನ ||

ವಿದ್ಯಾವಾನ ಗುಣೀ ಅತಿ ಚಾತುರ|

ರಾಮ ಕಾಜ ಕರಿವೇ ಕೋ ಆತುರ ||

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |

ರಾಮಲಖನ ಸೀತಾ ಮನ ಬಸಿಯಾ ||

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |

ವಿಕಟ ರೂಪಧರಿ ಅಸುರ ಸಂಹಾರೇ ||

ಭೀಮ ರೂಪಧರಿ ಅಸುರ ಸಂಹಾರೇ |

ರಾಮಚಂದ್ರ ಕೇ ಕಾಜ ಸಂವಾರೇ ||

ಲಾಯ ಸಂಜೀವನ ಲಖನ ಜಿಯಾಯೇ |

ಶ್ರೀ ರಘುವೀರ ಹರಷಿ ಉರಲಾಯೇ ||

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ