Tomorrow Horoscope: ವೃಷಭ ರಾಶಿಯವರಿಗೆ ಕಣ್ಣಿನ ತೊಂದರೆ ಉಂಟಾಗಬಹುದು, ಧನು ರಾಶಿಯವರು ಸಾಲದ ವ್ಯವಹಾರಕ್ಕೆ ಕೈ ಹಾಕಬಾರದು; ನಾಳಿನ ಭವಿಷ್ಯ
Oct 06, 2023 05:28 PM IST
ಅಕ್ಟೋಬರ್ 8ರ ದಿನ ಭವಿಷ್ಯ
- Tomorrow Horoscope- October 7th: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಪ್ರತಿನಿತ್ಯ ರಾಶಿಭವಿಷ್ಯ ಓದಲು ಬಯಸುವವರಿಗೆ ನಾಳೆಯ ದಿನ ಭವಿಷ್ಯವನ್ನು ಜ್ಯೋತಿಷಿ ಎಚ್. ಸತೀಶ್ ಇಲ್ಲಿ ನೀಡಿದ್ದಾರೆ. (Tomorrow Horoscope In Kannada, 7th october 2023 )
ನಾಳೆಯ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( october 7th, 2023, Tomorrow Horoscope In Kannada).
ತಾಜಾ ಫೋಟೊಗಳು
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶನಿವಾರ
ತಿಥಿ: ಅಷ್ಟಮಿ ಬೆಳಿಗ್ಗೆ 9.44ರವರೆಗೂ ಇರುತ್ತದೆ. ಆನಂತರ ನವಮಿ ಆರಂಭವಾಗುತ್ತದೆ.
ನಕ್ಷತ್ರ: ಪುನರ್ವಸು ನಕ್ಷತ್ರವು ರಾತ್ರಿ 2.13 ರವರೆಗೂ ಇರುತ್ತದೆ. ಆನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಿಗ್ಗೆ 6.08
ಸೂರ್ಯಾಸ್ತ: ಸಂಜೆ 6.05
ರಾಹುಕಾಲ: ಬೆಳಿಗ್ಗೆ 9.00 ರಿಂದ ಬೆಳಿಗ್ಗೆ 10.30
ರಾಶಿ ಫಲಗಳು
ಮೇಷ
ಆತ್ಮೀಯರ ವಿವಾಹದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ದಂಪತಿಗಳ ನಡುವಿನ ಮನಸ್ತಾಪವು ಕಡಿಮೆ ಆಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಯೋಗ ಪ್ರಾಣಾಯಾಮದಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.
ಹೀಗೆ ಮಾಡಿ: ಸಹೋದರನಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಗುಲಾಬಿ
ವೃಷಭ
ಗೆಲುವನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳುವಿರಿ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ಪಡೆಯಲಾಗುವುದಿಲ್ಲ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕಣ್ಣಿನ ತೊಂದರೆ ಉಂಟಾಗಬಹುದು. ಹಳೆಯ ಒಪ್ಪಂದಂತೆ ಪಾಲುಗಾರಿಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ.
ಹೀಗೆ ಮಾಡಿ: 10 ವರ್ಷದ ಒಳಗಿನ ಮಕ್ಕಳಿಗೆ ಕುಡಿಯಲು ಹಾಲನ್ನು ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೀಲಿ
ಮಿಥುನ
ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಹೆಚ್ಚಿನ ಶ್ರದ್ಧೆ ತೋರುವರು. ಕುಟುಂಬದಲ್ಲಿ ಒಮ್ಮತ ಇರುತ್ತದೆ. ಹಣಕಾಸಿನ ವಿವಾದದಿಂದ ಪಾರಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಹೀಗೆ ಮಾಡಿ: ಮನೆಯ ಮುಂದಿರುವ ಗಿಡಗಳಿಗೆ ನೀರನ್ನು ಹಾಕಿ ದಿನದ ಕೆಲಸ ಕಾರ್ಯಗಳನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಆಗ್ನೇಯ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಕಟಕ
ಕುಟುಂಬದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ನರಗಳ ಶಕ್ತಿಹೀನತೆ ನಿಮ್ಮನ್ನು ಬಹುವಾಗಿ ಕಾಡುತ್ತದೆ. ಕುಟುಂಬದವರ ಜೊತೆಗೂಡಿ ಬೃಹತ್ ವ್ಯಾಪಾರದ ಯೋಜನೆಯನ್ನು ರೂಪಿಸುವಿರಿ.
ಹೀಗೆ ಮಾಡಿ: ತಾಯಿಯವರಿಂದ ಹಣವನ್ನುಪಡೆದು ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಎಣೆಗೆಂಪು
ಸಿಂಹ
ಉದ್ಯೋಗದಲ್ಲಿ ಅಧಿಕಾರ ಲಭಿಸುತ್ತದೆ. ಸಹೋದರನಿಗೆ ವೈರಾಗ್ಯದ ಭಾವನೆ ಉಂಟಾಗುತ್ತದೆ. ಬೇಸಾಯಕ್ಕೆ ಪೂರಕವಾದ ಪರಿಕರಣಗಳ ವ್ಯಾಪಾರದಲ್ಲಿ ಲಾಭವಿದೆ. ರಾಜಕೀಯ ಧುರೀಣರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ತಂದೆಯವರಿಗೆ ವ್ಯಾಪಾರದಲ್ಲಿ ನೆರವಾಗುವಿರಿ.
ಹೀಗೆ ಮಾಡಿ: ಧಾರ್ಮಿಕ ಗುರುಗಳ ಆರ್ಶೀವಾದ ಪಡೆದ ನಂತರ ಇಂದಿನ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ವಾಯುವ್ಯ
ಅದೃಷ್ಟದ ಬಣ್ಣ: ಕೆಂಪುಬಣ್ಣ
ಕನ್ಯಾ
ಕುಟುಂಬದಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬರುತ್ತದೆ. ಉದ್ಯೋಗದಲ್ಲಿ ಎದುರಾಗುವ ವಿರೋಧವನ್ನು ಗೆಲ್ಲುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸು ಗಳಿಸುತ್ತಾರೆ. ಜೀವನೋಪಾಯಕ್ಕಾಗಿ ಕೃಷಿಭೂಮಿಯನ್ನು ಕೊಳ್ಳುವಿರಿ. ಯಂತ್ರೋಪಕರಣಗಳ ಸರಬರಾಜಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ.
ಹೀಗೆ ಮಾಡಿ: ಬಡವರ ವಿವಾಹಕಾರ್ಯಕ್ಕೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಎಲೆ ಹಸಿರು
ತುಲಾ
ಉದ್ಯೋಗದಲ್ಲಿ ಚುರುಕುತನದಿಂದ ವಾದ ವಿವಾದವಿಲ್ಲದೆ ಕೆಲಸ ಸಾಧಿಸುವಿರಿ. ಪ್ರಖ್ಯಾತ ಸಂಸ್ಥೆಯೊಂದರಲ್ಲಿ ಸಲಹೆಗಾರರ ಉದ್ಯೋಗ ಲಭಿಸುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದ ಮಧ್ಯವರ್ತಿಯಾದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ನೀವು ವರ್ತಿಸಬಲ್ಲಿರಿ.
ಹೀಗೆ ಮಾಡಿ: ಜೀವನದಲ್ಲಿ ಮುಂದುವರಿಯಲು ಹಿರಿಯರ ಆಶೀರ್ವಾದ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಠದ ಬಣ್ಣ: ಕೆಮ್ಮಣ್ಣಿನ ಬಣ್ಣ
ವೃಶ್ಚಿಕ
ಮನೆಯಲ್ಲಿ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರುತ್ತದೆ. ಸಿಡುಕುತನದ ಕಾರಣ ಜನರು ನಿಮ್ಮಿಂದ ದೂರ ಉಳಿಯುತ್ತಾರೆ. ವಿದ್ಯಾರ್ಜನೆಯಲ್ಲಿ ಯಾವುದೇ ತೊಂದರೆ ಇರದು. ಕುಟುಂಬದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ಹೀಗೆ ಮಾಡಿ: ಪುಟ್ಟ ಮಕ್ಕಳಿಗೆ ಸಿಹಿ ತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು ಪೂರ್ವ
ಅದೃಷ್ಟದ ಬಣ್ಣ: ಹಳದಿ
ಧನಸ್ಸು
ಕೆಲಸ ಕಾರ್ಯದ ಆರಂಭದಲ್ಲಿ ನಿರಾಸಕ್ತಿ ತೋರುವಿರಿ. ದಿನಪೂರ್ತಿ ಅಜೀರ್ಣದ ಸಮಸ್ಯೆ ನಿಮ್ಮನ್ನು ಕಾಡಲಿದೆ. ಗಣ್ಯವ್ಯಕ್ತಿಗಳ ಸಹಕಾರ ನಿಮಗೆ ದೊರೆಯುತ್ತದೆ. ಸ್ವಂತ ವ್ಯಾಪಾರ ವಹಿವಾಟಿನಲ್ಲಿ ಅಲ್ಪ ಪ್ರಮಾಣದ ಲಾಭ ದೊರೆಯುತ್ತದೆ. ಶಾಲಾ ಕಾಲೇಜನ್ನು ಆರಂಭಿಸುವ ಯೋಜನೆ ಸಾಫಲ್ಯಗೊಳ್ಳಲಿದೆ.
ಹೀಗೆ ಮಾಡಿ: ಮನೆಯ ಮುಂದಿನ ಹೂವಿನ ಗಿಡಗಳಿಗೆ ನೀರನ್ನು ಹಾಕಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಠದ ಬಣ್ಣ: ಕೆಂಪು
ಮಕರ
ಉದ್ಯೋಗದಲ್ಲಿ ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸದ ಕಾರಣ ತೊಂದರೆ ಎದುರಾಗುತ್ತದೆ. ವಿದ್ಯಾರ್ಥಿಗಳು ಎಲ್ಲರೊಂದಿಗೆ ಸ್ನೇಹ ವಿಶ್ವಾಸವನ್ನು ಕಾಯ್ದುಕೊಳ್ಳುವರು. ತಂದೆಗೆ ಸೇರಿದ ಹಣದಲ್ಲಿ ಉತ್ತಮ ಪಾಲು ದೊರೆಯುತ್ತದೆ.
ಹೀಗೆ ಮಾಡಿ: ಶಿಥಿಲಗೊಂಡ ಕಬ್ಬಿಣದ ವಸ್ತುಗಳನ್ನು ಮನೆಯಿಂದ ಹೊರಗಿಟ್ಟು ದಿನದ ಕೆಲಸ ಕಾರ್ಯವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು ಈಶಾನ್ಯ
ಅದೃಷ್ಠದ ಬಣ್ಣ: ಕೆಂಪು
ಕುಂಭ
ನಿಮ್ಮಲ್ಲಿ ಹುದುಗಿರುವ ಕಲೆಗೆ ತಕ್ಕ ವೇದಿಕೆ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಉದ್ಯೋಗಸ್ಥರು ಸಾಮಾನ್ಯವಾದ ಯಶಸ್ಸಿಗೆ ಸಮಾಧಾನರಾಗಬೇಕು.
ಹೀಗೆ ಮಾಡಿ: ಹಸುವಿಗೆ ಕುಡಿವ ನೀರನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಠದ ಬಣ್ಣ: ನೇರಳೆ ಬಣ್ಣ
ಮೀನ
ಮನೆಯಲ್ಲಿ ಪರಸ್ಪರ ಆತ್ಮೀಯತೆ ಮನೆಮಾಡಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸ್ಥಿರತೆ ಕಂಡುಬರದು. ಶುಭ್ರವಾದ ಮನಸ್ಸನ್ನು ಅರಿತವರು ಸದಾ ಸ್ನೇಹ ಸಂಬಂಧವನ್ನು ಇಚ್ಛಿಸುತ್ತಾರೆ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಮನದ ಭಾವನೆಯನ್ನು ತಕ್ಷಣ ಯಾರಿಗೂ ತಿಳಿಸುವುದಿಲ್ಲ.
ಹೀಗೆ ಮಾಡಿ: ಕಂದು ಬಣ್ಣದ ನಾಯಿಗೆ ಆಹಾರ ನೀಡುವ ಮೂಲಕ ದಿನ ಆರಂಭವಾಗಲಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಠದ ಬಣ್ಣ: ಹಳದಿ
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)