logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ugadi Wishes 2024: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಏನು ವಿಶ್‌ ಮಾಡಬೇಕು ಎಂದುಕೊಂಡಿದ್ದೀರಿ? ಇಲ್ಲಿವೆ ಕೆಲವು ಐಡಿಯಾಗಳು

Ugadi Wishes 2024: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಏನು ವಿಶ್‌ ಮಾಡಬೇಕು ಎಂದುಕೊಂಡಿದ್ದೀರಿ? ಇಲ್ಲಿವೆ ಕೆಲವು ಐಡಿಯಾಗಳು

Rakshitha Sowmya HT Kannada

Apr 03, 2024 09:00 AM IST

google News

ಯುಗಾದಿ ಶುಭಾಶಯಗಳು 2024

  • Ugadi Wishes 2024: ಹಬ್ಬ ಎಂದರೆ ಸಡಗರ, ಸಂಭ್ರಮ. ಪೂಜೆ ಪುನಸ್ಕಾರ ಹಬ್ಬದ ಅಡುಗೆಯ ಸಂತೋಷದ ನಡುವೆ ಪ್ರೀತಿ ಪಾತ್ರರಿಗೆ ಹಬ್ಬದ ಶುಭ ಕೋರುವುದು ಮತ್ತೊಂದು ಖುಷಿ. ಈ ಬಾರಿ ನಿಮ್ಮ ಪ್ರೀತಿಪಾತ್ರರಿಗೆ ಯುಗಾದಿ ಹಬ್ಬಕ್ಕೆ ಏನು ಶುಭ ಹಾರೈಸಬೇಕು ಎಂದು ಪ್ಲ್ಯಾನ್‌ ಮಾಡಿದ್ದೀರಿ? ನಿಮಗಾಗಿ ಒಂದಿಷ್ಟು ಐಡಿಯಾಗಳು ಇಲ್ಲಿವೆ ನೋಡಿ. 

ಯುಗಾದಿ ಶುಭಾಶಯಗಳು 2024
ಯುಗಾದಿ ಶುಭಾಶಯಗಳು 2024 (PC: Canva)

ಯುಗಾದಿ ಶುಭಾಶಯಗಳು: ಮತ್ತೆ ಯುಗಾದಿ ಬಂದೇಬಿಡ್ತು. ಈ ಬಾರಿ ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ಯುಗಾದಿಯನ್ನು ಆಚರಿಸಲು ಎಲ್ಲರೂ ಸಂಭ್ರಮದಿಂದ ಕಾಯುತ್ತಿದ್ದಾರೆ. ಯುಗಾದಿಯಿಂದಲೇ ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುತ್ತದೆ. ಮನೆ ಮುಂದೆ ರಂಗೋಲಿ, ತಳಿರು ತೋರಣ, ಎಲ್ಲಿ ನೋಡಿದರೂ ಮಂತ್ರ ಘೋಷ, ಯುಗಾದಿ ಹಬ್ಬದ ಹಾಡು, ಅಡುಗೆಯ ಘಮ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಮೊದಲೆಲ್ಲಾ ಪತ್ರದ ಮೂಲಕ ದೂರದ ಊರಿನಲ್ಲಿ ನೆಲೆಸಿರುವ ಸ್ನೇಹಿತರಿಗೆ, ಸಂಬಂಧಿಕರಿಗೆ ಯುಗಾದಿ ಹಬ್ಬದ ಶುಭ ಕೋರಲಾಗುತ್ತಿತ್ತು. ಆದರೆ ಮೊಬೈಲ್‌ ಬಂದ ನಂತರ ಎಲ್ಲವೂ ಬದಲಾಗಿದೆ, ಸುಲಭವಾಗಿದೆ. ಒಂದೇ ಒಂದು ಮೆಸೇಜ್‌ ಮೂಲಕ ಆಪ್ತರಿಗೆ ಯುಗಾದಿ ಹಬ್ಬದ ಶುಭ ಕೋರಬಹುದಾಗಿದೆ. ವಾಟ್ಸಾಫ್‌, ಫೇಸ್‌ಬುಕ್‌ ಸೇರಿದಂತೆ ಎಲ್ಲಾ ಸೋಷಿಯಲ್‌ ಮೀಡಿಯಾದಲ್ಲಿ ಯುಗಾದಿ ಹಬ್ಬದ ಸಂದೇಶ ಹರಿದಾಡುತ್ತಿರುತ್ತದೆ. ನೀವೂ ಕೂಡಾ ನಿಮ್ಮ ಆತ್ಮೀಯರಿಗೆ ಯುಗಾದಿ ಶುಭ ಕೋರಬೇಕು ಎಂದುಕೊಂಡಿದ್ದರೆ ಇಲ್ಲಿದೆ ಕೆಲವೊಂದು ಸುಂದರ ವಿಶಸ್‌ಗಳು.

ಯುಗಾದಿ ಶುಭ ಹಾರೈಕೆಗಳು

  • ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಹುರುಪು ನೀಡಲಿ. ನಿಮ್ಮ ಬಾಳಲ್ಲಿ ಸಂತೋಷವೇ ತುಂಬಿರಲಿ ಯುಗಾದಿ ಹಬ್ಬದ ಶುಭಾಶಯಗಳು.
  • ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ನಿಮ್ಮ‌ ಬದುಕಲ್ಲಿ ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭ ಕಾಮನೆಗಳು.
  • ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ. ಹೊಸ ಭರವಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ, ಯುಗಾದಿಯ ಶುಭ ಹಾರೈಕೆಗಳು.
  • ಸೃಷ್ಟಿಯ ಮೊದಲ ದಿನ, ಸೂರ್ಯನ ಕಿರಣದ ಮೊದಲ ದಿನ, ಮರ ಗಿಡಗಳು ಚಿಗುರಾಗುವ ದಿನ, ಹಿಂದೂ ವರ್ಷದ ಆರಂಭದ ದಿನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಯುಗಾದಿ ಹಬ್ಬದ ಶುಭಾಶಯಗಳು, ಬೇವು ಬೆಲ್ಲ ಸವಿಯೋಣ, ನಿಮ್ಮ ಬಾಳಿನಲ್ಲಿ ಬೇವಿಗಿಂತ ಬೆಲ್ಲವೇ ಹೆಚ್ಚಾಗಿರಲಿ ಎಂದು ಶುಭ ಹಾರೈಸುತ್ತೇನೆ.

ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಜೊತೆಯಾಗಲಿವೆ 3 ರಾಜಯೋಗಗಳು; ಹಿಂದೂಗಳ ಹೊಸ ವರ್ಷ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ತರಲಿದೆ ನೋಡಿ

  • ಬದುಕಿನಲ್ಲಿ ಸಿಹಿ ಕಹಿ ಸಹಜ. ದು:ಖ ಬಂದಾಗ ಹೆದರದೆ, ಸುಖ ಬಂದಾಗ ಹಿಗ್ಗದೆ ಎರಡೂ ಸಮಾನವಾಗಿ ಸ್ವೀಕರಿಸಿ,ಈ ಯುಗಾದಿಯು ನಿಮ್ಮ ಬಾಳಲ್ಲಿನ ಕಹಿಯನ್ನು ತೊಡೆದು ಹೆಚ್ಚು ಸಿಹಿಯನ್ನೇ ತುಂಬಲಿ.
  • ಬೇವಿನ ಕಹಿ ಕಡಿಮೆಯಾಗಿ, ಬೆಲ್ಲದ ಸಿಹಿ ಹೆಚ್ಚಾಗಲಿ , ದ್ವೇಷ ಅಸೂಯೆ ಮರೆಯಾಗಿ, ಮನೆ ಮನದಲ್ಲಿ ಪ್ರೀತಿಯೇ ತುಂಬಿರಲಿ, ಯುಗಾದಿ ಹಬ್ಬದ ಶುಭ ಹಾರೈಕೆಗಳು.
  • ಯುಗ ಯಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ಹೊಸ ಚಿಗುರಿನಂತೆ ನಿಮ್ಮ ಬಾಳಲ್ಲಿ ದುಃಖದ ದಿನಗಳು ಕಳೆದು ಹೊಸ ಸಂತೋಷ ಚಿಗುರಲಿ. ಕತ್ತಲೆ ಕಳೆದು ಹೊಸ ಬಾಳಿಗೆ ನಾಂದಿಯಾಗಲಿ ಹೊಸ ಯುಗದ ಆರಂಭ ನಿಮ್ಮ ಬದುಕಿನಲ್ಲಿ ಸಂತೋಷವನ್ನೇ ತರಲಿ ಯುಗಾದಿಯ ಶುಭ ಹಾರೈಕೆಗಳು.

ಇದನ್ನೂ ಓದಿ: ಯುಗಾದಿ ಹಬ್ಬದಂದು ನೈವೇದ್ಯಕ್ಕೆ ಪುಳಿಯೋಗರೆ ಮಾಡಬೇಕು ಅಂತಿದ್ದೀರಾ? ಇಲ್ಲಿದೆ ಸ್ಪೆಷಲ್‌ ಪುಳಿಯೋಗರೆ ರೆಸಿಪಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ