ಡಿಸೆಂಬರ್ 28 ರಂದು ಕುಂಭ ರಾಶಿಗೆ ಶುಕ್ರನ ಸಂಚಾರ: ಶನಿ-ಶುಕ್ರ ಸಂಯೋಗದಿಂದ ವೃಷಭ ಸೇರಿ ಈ 5 ರಾಶಿಯವರಿಗೆ ಕನಕವರ್ಷ
Dec 19, 2024 05:20 PM IST
ಡಿಸೆಂಬರ್ 28 ರಂದು ಕುಂಭ ರಾಶಿಗೆ ಶುಕ್ರನ ಸಂಚಾರ
ಇದೇ ವರ್ಷ ಡಿಸೆಂಬರ್ 28 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಶನಿಯು ಅಲ್ಲಿದ್ದು ಶುಕ್ರ-ಶನಿಯ ಸಂಯೋಗ ಉಂಟಾಗುತ್ತದೆ. ಇದರಿಂದ ವೃಷಭ, ತುಲಾ ಸೇರಿದಂತೆ 5 ರಾಶಿಯವರ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ, ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.
ಶುಕ್ರ ಗ್ರಹವು ಡಿಸೆಂಬರ್ 28 ರಂದು ರಾತ್ರಿ 11:48 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಕರ್ಮಫಲಗಳನ್ನು ನೀಡುವ ಮತ್ತು ಗ್ರಹಗಳ ತೀರ್ಪುಗಾರನಾದ ಶನಿದೇವನು ಈಗಾಗಲೇ ಕುಂಭ ರಾಶಿಯಲ್ಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕುಂಭ ರಾಶಿಯಲ್ಲಿ ಶನಿ-ಶುಕ್ರ ಸಂಯೋಗವು ರೂಪುಗೊಳ್ಳುತ್ತದೆ. 2025 ರ ಆರಂಭದ ಮೊದಲು, ಶನಿ ಮತ್ತು ಶುಕ್ರನ ಸಂಯೋಗವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ತಂದುಕೊಡುತ್ತದೆ.
ತಾಜಾ ಫೋಟೊಗಳು
ಶುಕ್ರ ಮತ್ತು ಶನಿಯ ಸಂಯೋಗದಿಂದ ಯಾವ ರಾಶಿಯವರಿಗೆ ಶುಭ ಫಲ ದೊರೆಯಲಿದೆ ನೋಡೋಣ
ವೃಷಭ ರಾಶಿ
ಈ ರಾಶಿಯವರಿಗೆ ಶನಿ-ಶುಕ್ರ ಸಂಯೋಗವು ಶುಭಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಉದ್ಯಮಿಗಳು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಸಂಗಾತಿಯಿಂದ ನೀವು ಆರ್ಥಿಕವಾಗಿ ಲಾಭ ಪಡೆಯಬಹುದು. ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ.
ಕಟಕ ರಾಶಿ
ಶನಿ ಮತ್ತು ಶುಕ್ರರ ಸಂಯೋಗವು ಕಟಕ ರಾಶಿಯವರಿಗೆ ಬಹಳ ಶುಭ ಫಲಗಳನ್ನು ನೀಡಲಿದೆ. ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ವಿವಿಧ ಮೂಲಗಳಿಂದ ಹಣಕಾಸಿನ ಲಾಭ ದೊರೆಯುತ್ತದೆ. ಆದರೆ, ಮಾನಸಿಕ ಸ್ಥಿತಿ ಸ್ವಲ್ಪ ಏರುಪೇರಾಗಬಹುದು. ಉದ್ಯೋಗದಲ್ಲಿ ಪ್ರಗತಿಯೊಂದಿಗೆ ಆದಾಯವು ಹೆಚ್ಚಾಗಬಹುದು.
ತುಲಾ ರಾಶಿ
ಕುಂಭ ರಾಶಿಯಲ್ಲಿ ಶುಕ್ರ ಮತ್ತು ಶನಿ ಒಟ್ಟಿಗೆ ಸಂಯೋಜನೆಗೊಳ್ಳುವುದು ತುಲಾ ರಾಶಿಯವರಿಗೆ ಅದೃಷ್ಟದ ದಿನಗಳನ್ನು ತರಲಿದೆ. ಈ ಅವಧಿಯಲ್ಲಿ ಭೂಮಿ, ಕಟ್ಟಡ ಮತ್ತು ವಾಹನ ಖರೀದಿ ಸಾಧ್ಯವಿದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಗೌರವ ಹೆಚ್ಚಳವಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಭಾವನೆಗಳನ್ನು ನಿಯಂತ್ರಿಸುವ ಮೂಲಕ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಮಕರ ರಾಶಿ
ಶುಕ್ರ-ಶನಿ ಸಂಯೋಗವು ಮಕರ ರಾಶಿಯವರಿಗೆ ಶುಭವಾಗಲಿದೆ. ಪ್ರತಿಯೊಂದು ವಿಷಯದಲ್ಲೂ ನೀವು ಯಶಸ್ಸನ್ನು ಸಾಧಿಸುವಿರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಬಹಳ ವರ್ಷಗಳ ನಂತರ ಹಳೆಯ ಗೆಳೆಯ/ಗೆಳತಿಯನ್ನು ಭೇಟಿ ಆಗುವಿರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ಅವಿವಾಹಿತರಿಗೆ ಸೂಕ್ತ ವಿವಾಹ ಪ್ರಸ್ತಾಪಗಳು ಬರಬಹುದು.
ಕುಂಭ ರಾಶಿ
ಶುಕ್ರ-ಶನಿ ಸಂಯೋಗವು ಕುಂಭ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಕೆಲಸಕ್ಕಾಗಿ ನೀವು ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ. ವೇತನವೂ ಹೆಚ್ಚಳವಾಗಲಿದೆ. ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ. ಸಂತೋಷ ಮತ್ತು ಸಂಪತ್ತು ಹೆಚ್ಚಾಗಬಹುದು. ಸ್ಥಾನ-ಮಾನ ಪ್ರತಿಷ್ಠೆ, ಗೌರವ ಹೆಚ್ಚಾಗಲಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.