logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಉತ್ತಮ ಅವಕಾಶದಿಂದ ಉದ್ಯೋಗ ಬದಲಾವಣೆ ಮಾಡುತ್ತೀರಿ, ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತೆ; ವಾರ ಭವಿಷ್ಯ

Weekly Horoscope: ಉತ್ತಮ ಅವಕಾಶದಿಂದ ಉದ್ಯೋಗ ಬದಲಾವಣೆ ಮಾಡುತ್ತೀರಿ, ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತೆ; ವಾರ ಭವಿಷ್ಯ

Raghavendra M Y HT Kannada

May 26, 2024 06:00 AM IST

google News

ಮೇ 26ರ ಭಾನುವಾರದಿಂದ ಜೂನ್ 1ರ ಶನಿವಾರದ ವರೆಗೆ ನಿಮ್ಮ ವಾರ ಭವಿಷ್ಯ ತಿಳಿಯಿರಿ.

    • Weekly Horoscope: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (May 26th to June 1st Weekly Horoscope)
 ಮೇ 26ರ ಭಾನುವಾರದಿಂದ ಜೂನ್ 1ರ ಶನಿವಾರದ ವರೆಗೆ ನಿಮ್ಮ ವಾರ ಭವಿಷ್ಯ ತಿಳಿಯಿರಿ.
ಮೇ 26ರ ಭಾನುವಾರದಿಂದ ಜೂನ್ 1ರ ಶನಿವಾರದ ವರೆಗೆ ನಿಮ್ಮ ವಾರ ಭವಿಷ್ಯ ತಿಳಿಯಿರಿ.

ವಾರದ ಭವಿಷ್ಯ: ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ, ವಾರದ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (May 26th to June 1st Weekly Horoscope)

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಮೇಷ ರಾಶಿ

ಆತ್ಮವಿಶ್ವಾಸದ ಮಾತುಗಳಿಂದ ಮಕ್ಕಳನ್ನು ಹುರಿದುಂಬಿಸುವಿರಿ. ಸ್ವಂತಂತ್ರವಾಗಿ ಮಾಡುವ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ನಿರ್ಧಿಷ್ಟವಾದ ಆದಾಯ ಕಂಡುಬರುತ್ತದೆ. ವಿಶ್ರಾಂತಿ ಬಯಸದೆ ಕರ್ತವ್ಯಪಾಲನೆಯಲ್ಲಿ ನಿರತರಾಗುವಿರಿ. ಆತುರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹಿರಿಯರ ಆಶಯದಂತೆ ನಡೆದುಕೊಳ್ಳುವಿರಿ. ಎಲ್ಲರೊಂದಿಗೆ ಸ್ನೇಹದಿಂದ ಇರಲು ಪ್ರಯತ್ನಿಸುವಿರಿ.

ವೃಷಭ ರಾಶಿ

ಬೇಸರ ಮರೆತು ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಉತ್ತಮ ಅವಕಾಶ ದೊರೆವ ಕಾರಣ ಉದ್ಯೋಗವನ್ನು ಬದಲಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ವರಮಾನ ಗಳಿಸುವಿರಿ. ಕುಟುಂಬಕ್ಕೆ ಸೆರಿಸಿದಂತೆ ನಿಮ್ಮ ಹೊಸ ಕಾರ್ಯ ಯೋಜನೆಗಳು ಯಶಸ್ವಿಯಾಗುತ್ತವೆ. ಮಕ್ಕಳ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಅವಿವಾಹಿತರಿಗೆ ಹೆಚ್ಚಿನ ಪ್ರಯತ್ನದಿಂದ ವಿವಾಹ ನಿಶ್ಚಯವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆಯವರಿಂದ ಹಣವನ್ನು ಪಡೆಯಬೇಕಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗಗಳು ಕಂಡುಬರುತ್ತವೆ.

ಮಿಥುನ ರಾಶಿ

ನಿಮ್ಮ ಕಾರ್ಯ ತತ್ಪರತೆ ಮೆಚ್ಚಿ ಮೇಲಧಿಕಾರಿಗಳ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಣಕಾಸಿನ ಅನುಕೂಲತೆ ಇದ್ದರೂ ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದಿಲ್ಲ. ಕುಟುಂಬದಲ್ಲಿ ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ವೃತ್ತಿಯಲ್ಲಿ ಸ್ಥಿರವಾದ ತೀರ್ಮಾನವನ್ನು ತೆಗೆದುಕೊಳ್ಳುವುವ ಕಾರಣ ತೊಂದರೆ ಇರುವುದಿಲ್ಲ. ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಯಾರಿಂದಲೂ ಹಣದ ಸಹಾಯ ಬಯಸುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ವಿಚಾರದಲ್ಲಿ ವಿವಾದ ಇರುತ್ತದೆ.

ಕಟಕ ರಾಶಿ

ಹಣಕಾಸಿನ ಕೊರತೆ ಕಡಿಮೆ ಆಗುವ ಕಾರಣ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಾಯಿಯವರ ಸಹಾಯ ದೊರೆಯುತ್ತದೆ. ಆತುರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ವಿವಾದಕ್ಕೆ ಸಿಲುಕುವಿರಿ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಿರಿ. ಆರೋಗ್ಯದ ಬಗ್ಗೆ ಯೋಚನೆ ಇರುತ್ತದೆ. ಮನೆಯ ಜವಾಬ್ದಾರಿಯನ್ನು ಸಂಗಾತಿಯ ಸಹಾಯದಿಂದ ನಿರ್ವಹಿಸುವಿರಿ. ಅತಿಯಾದ ಖರ್ಚು ವೆಚ್ಚದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಿರಿ. ಸಾಲದ ವ್ಯವಹಾರದಿಂದ ವಿವಾದ ಉಂಟಾಗುತ್ತದೆ.

ಸಿಂಹ ರಾಶಿ

ಯಾರೊಬ್ಬರ ಒತ್ತಾಯಕ್ಕೂ ಬೆದರುವುದಿಲ್ಲ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸುವುದಿಲ್ಲ. ಶೃಭ್ರವಾದ ಮನಸ್ಸಿನಿಂದ ಸ್ನೇಹಿತರೊಂದಿಗೆ ವರ್ತಿಸುವಿರಿ. ಹಠದ ಸ್ವಭಾವ ಕುಟುಂಬದಲ್ಲಿನ ಬೇಸರ ಉಂಟಾಗುತ್ತದೆ. ಬಾಳಸಂಗಾತಿಯ ಸಹಾಯದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಕೌಟುಂಬಿಕ ವಿವಾದವೊಂದು ಕಾನೂನಿನ ಮೂಲಕ ಪರಿಹಾರವಾಗಲಿದೆ. ಉದ್ಯೋಗದಲ್ಲಿ ಆಶಾದಾಯಕ ಬದಲಾವಣೆಗಳು ಉಂಟಾಗುತ್ತವೆ. ನಿಮ್ಮ ಅಧಿಕಾರಯುತ ವ್ಯಕ್ತಿತ್ವವು ಬೇಸರಕ್ಕೆ ಕಾರಣವಾಗುತ್ತದೆ. ಸಮಯಕ್ಕೆ ತಕ್ಕಂತೆ ಮನಸ್ಸನ್ನು ಪರಿವರ್ತಿಸಿ ಪರಿಸ್ಥಿತಿಯ ಲಾಭಪಡೆಯುವಿರಿ.

ಕನ್ಯಾ ರಾಶಿ

ಅತಿ ಮುಖ್ಯವಾದ ಕೆಲಸದಲ್ಲಿಯೂ ಸ್ಥಿರವಾದ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ನೆರೆಹೊರೆಯವರ ತಪ್ಪನು ಮನ್ನಿಸುಸುವ ಮನಸ್ಸು ಇರುವುದಿಲ್ಲ. ಆದಾಯವನ್ನು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾಗುವಿರಿ. ಉದ್ದೇಶಪೂರ್ವಕವಾಗಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವಿರಿ. ಅನಾವಶ್ಯಕವಾದ ವಾದ ವಿವಾದಗಳಿಂದ ದೂರ ಉಳಿಯುವಿರಿ. ದಿನಾಂತ್ಯಕ್ಕೆ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ. ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದ ಸದಸ್ಯರ ಸಹಾಯ ಸಹಕಾರ ದೊರೆಯುತ್ತದೆ.

ತುಲಾ ರಾಶಿ

ಬಯಸದೇ ಹೋದರೂ ಉದ್ಯೋಗವೊಂದು ಹುಡುಕಿ ಬರುತ್ತದೆ. ಸಹಪಾಠಿಗಳ ಸಹಕಾರದಿಂದ ಉನ್ನತ ಮಟ್ಟ ತಲುಪುತ್ತೀರಿ. ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಒಗ್ಗಟ್ಟಿನ ಬಲವಿರುತ್ತದೆ. ಅವಶ್ಯಕತೆಗೆ ತಕ್ಕಂತೆ ಹಣವನ್ನು ಸಂಪಾದಿಸಬಲ್ಲಿರಿ. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಸಮಾಜ ಸೇವೆ ಮಾಡುವಲ್ಲಿ ಆಸಕ್ತಿ ಮೂಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿನ ಆಂತರಿಕ ಮಾರ್ಪಾಡುಗಳು ಹೊಸ ಆಸೆಗೆ ಕಾರಣವಾಗಿವೆ. ಸೋದರಿಯ ಭೂವಿವಾದದಲ್ಲಿ ಮಾತುಕತೆಯಿಂದ ಗೆಲುವು ಸಾಧಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ.

ವೃಶ್ಚಿಕ ರಾಶಿ

ಆತ್ಮವಿಶ್ವಾಸದ ಹಠವೂ ಹೆಚ್ಚುತ್ತದೆ. ತಪ್ಪಿದ್ದರೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.ಉಧ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಸಮಾಜದ ಗಣ್ಯವ್ಯಕ್ತಿಯಾಗಿ ಬಾಳುವಿರಿ. ಧಾರ್ಮಿಕ ಗುರುವೊಬ್ಬರನ್ನು ಭೇಟಿ ಮಾಡುವಿರಿ. ರಾಜಕೀಯ ಜೀವನದಲ್ಲಿ ಮಹತ್ತರ ತಿರುವು ಉಂಟಾಗಲಿದೆ. ವಂಶದ ಭೂಮಿಯನ್ನು ಕಾಪಾಡಿಕೊಳ್ಳಲು ಕಾನೂನಾತ್ಮಕವಾಗಿ ಪ್ರಯತ್ನಿಸುವಿರಿ. ಮಕ್ಕಳ ವಿಚಾರದಲ್ಲಿ ವಿವಾದವೊಂದನ್ನು ಎದುರಾಗುತ್ತದೆ. ಧೈರ್ಯಾದ ಗುಣದಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಿರಿ. ಬೇಸಾಯದ ಬಗ್ಗೆ ಒಲವು ಮೂಡಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ ಉಂಟಾಗುತ್ತದೆ.

ಧನಸ್ಸು ರಾಶಿ

ಸುಲಭವಾಗಿ ಕುಟುಂಬದ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಹೆಚ್ಚಿನ ಪ್ರಯತ್ನದಿಂದ ಮನಸ್ಸಿಗೆ ಒಪ್ಪುವ ವಿಚಾರದಲ್ಲಿ ಗೆಲುವು ಸಾಧಿಸುವಿರಿ. ಸಮಾಜದಲ್ಲಿ ಗೌರವ ದೊರೆಯುವಂತಹ ಕೆಲಸವನ್ನು ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಉಂಟಾಗಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳಿಂದ ವಿಚಲಿತರಾಗುವಿರಿ. ಮಕ್ಕಳ ಮಾತುಕತೆಯು ಬೇಸರ ತರಿಸುತ್ತದೆ. ವಿವಾಹದ ವಿಚಾರದಲ್ಲಿ ವಿವಾದವೊಂದು ಎದುರಾಗುತ್ತದೆ. ಕೋಪ ಬಂದಷ್ಠೇ ಬೇಗ ಶಾಂತಿಗೆ ಒಳಗಾಗುವಿರಿ. ತಂದೆಯ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗುತ್ತವೆ.

ಮಕರ ರಾಶಿ

ನಿಮ್ಮಲ್ಲಿನ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರ ಮನ ಸೆಳೆಯುತ್ತದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ದುಡುಕತನವಿದ್ದರೂ ಕೆಲಸ ಕಾರ್ಯಗಳಲ್ಲಿ ಪರಿಪಕ್ವ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಮನಸ್ಸಿಲ್ಲದ ಕಾರಣ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಅತಿಯಾಗಿ ಮಾತನಾಡಿ ಬೇಸರ ಬರುವಂತೆ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಗಲಿಬಿಲಿ ಎದುರಾಗುತ್ತದೆ. ಮೇಲಧಿಕಾರಿಗಳ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಪರಿಚಯದವರು ಅಥವಾ ದೂರದ ಸಂಬಂಧಿಕರ ಜೊತೆಯಲ್ಲಿ ವಿವಾಹ ನಿಶ್ಚಯವಾಗುತ್ತದೆ.

ಕುಂಭ ರಾಶಿ

ಗುಟ್ಟಾಗಿ ಕುಟುಂಬದ ಕೆಲಸ ಕಾರ್ಯಗಳನ್ನು ಮಾಡಲಿಚ್ಚಿಸುವಿರಿ. ಅನಿವಾರ್ಯದ ಸಂದರ್ಭದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಹಿಂದೊಮ್ಮೆ ಆಡಿದ ಮಾತಿಗೆ ಕಟ್ಟುಬಿದ್ದು ಸ್ನೇಹಿತರಿಗೆ ಹಣದ ಸಹಾಯ ಮಾಡುವಿರಿ. ಜನಸಾಮಾನ್ಯರಿಗೆ ಮೆಚ್ಚುಗೆಯಾಗುವ ಕೆಲಸವನ್ನು ಮಾಡುವಿರಿ. ಕುಟುಂಬಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯವನ್ನು ನಡೆಸುವಿರಿ. ಯಶಸ್ಸಿಗಾಗಿ ಕಷ್ಟದ ಕೆಲಸವನ್ನು ಮಾಡಲು ಅನುವಾಗುವಿರಿ. ಪ್ರಭಾವಿ ವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಕ್ಕೆ ತಂದೆಯ ಸಹಾಯ ದೊರೆಯುತ್ತದೆ. ಸ್ವಂತ ಮನೆಗೆ ಅಡಿಪಾಯ ಹಾಕುವಿರಿ.

ಮೀನ ರಾಶಿ

ಧಾರ್ಮಿಕ ಆಚಾರ ವಿಚಾರಗಳಿಗೆ ಸಮಯವನ್ನು ಮೀಸಲಿಡುವಿರಿ. ಅನುಚಿತ ಮಾತುಕತೆಯಿಂದ ಕುಟುಂಬದಲ್ಲಿ ಅವಿಶ್ವಾಸ ಉಂಟಾಗುತ್ತದೆ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳು ಇರುತ್ತವೆ. ವಿನಾಕಾರಣ ಹಣವನ್ನು ಖರ್ಚು ಮಾಡುವುದಿಲ್ಲ. ಯಾವುದೇ ಸಮಸ್ಯೆಗಳು ಎದುರಾದರೂ ಬುದ್ಧಿವಂತಿಕೆಯಿಂದ ಜಯಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಮಧ್ಯವರ್ತಿಗಳಾಗದಿರಿ. ಭೂ ಸಂಬಂಧಿಸಿದ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುವಿರಿ. ಬಾಳ ಸಂಗಾತಿಯ ಸಹನೆ ಮತ್ತು ಸಹಕಾರ ಹೊಸ ಜೀವನಕ್ಕೆ ದಾರಿಯಾಗಲಿದೆ. ನಿಮ್ಮ ಸಹಯೋಗದಲ್ಲಿ ಕುಟುಂಬದಲ್ಲಿ ವಿವಾಹವೊಂದು ನಡೆಯಲಿದೆ. ಸಾಲದ ವ್ಯವಹಾರದಲ್ಲಿ ಶತೃತ್ವ ಉಂಟಾಗಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ