logo
ಕನ್ನಡ ಸುದ್ದಿ  /  Karnataka  /  Earthquake In Shikaripur: Karnataka Earthquake Shikaripur Taluk Shiralakoppa People Shocked By The Earthquake

Earthquake in Shikaripur: ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಕಂಪಕ್ಕೆ ಬೆಚ್ಚಿದ ಜನ

HT Kannada Desk HT Kannada

Oct 06, 2022 10:23 AM IST

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ನಸುಕಿನ 3.55ಕ್ಕೆ ಭೂಕಂಪ ಆಗಿದೆ. (ಫೋಟೋ-HT)

    • Earthquake in Karnataka: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ನಸುಕಿನ 3.55ಕ್ಕೆ ಭೂಕಂಪ (Earthquake in Shikaripur) ದ ಭಾರಿ ಸದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ. ವ್ಯಾಪ್ತಿಯಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ನಸುಕಿನ 3.55ಕ್ಕೆ ಭೂಕಂಪ ಆಗಿದೆ. (ಫೋಟೋ-HT)
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಗುರುವಾರ ನಸುಕಿನ 3.55ಕ್ಕೆ ಭೂಕಂಪ ಆಗಿದೆ. (ಫೋಟೋ-HT)

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಗುರುವಾರ ನಸುಕಿನ 3.55ಕ್ಕೆ ಭೂಕಂಪದ ಭಾರಿ ಸುದ್ದು ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕಂಪನದ ಸದ್ದು ಮತ್ತು ಭೂಮಿ ನಡುಗಿದ ಅನುಭವ, ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ. ವ್ಯಾಪ್ತಿಯ ಜನರಿಗೆ ಅನುಭವವಾಗಿದೆ. ಇದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ಗೂಗಲ್‌ ಮ್ಯಾಪ್‌ನ ಪ್ರಕಾರ 4.1 ತೀವ್ರತೆಯ ಭೂಕಂಪ ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

Breaking News: ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ, ಮಾಜಿ ಪ್ರಧಾನಿ ದೇವೇಗೌಡ ಆದೇಶ

Hassan Sex Scandal: ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಕುಮಾರಸ್ವಾಮಿ, ಪ್ರಜ್ವಲ್ ಜರ್ಮನಿಗೆ ಪರಾರಿ ಶಂಕೆ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು; ಪ್ರಮುಖ ಆರೋಪಿಗಳ ಕರೆದೊಯ್ದು ಮಹಜರು ನಡೆಸುತ್ತಿರುವ ಎನ್‌ಐಎ

ವಿ ಶ್ರೀನಿವಾಸ್ ಪ್ರಸಾದ್ ನಿಧನ; ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ ಸಂದೇಶ

ಮಿಕ್ಕ ಮಾಹಿತಿ ಇನ್ನಷ್ಟೆ ಬಹಿರಂಗವಾಗಬೇಕಾಗಿದೆ. ಕರ್ನಾಟಕದಲ್ಲಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಭೂಕಂಪದ ಅನುಭವ ಸಾಮಾನ್ಯವೆನಿಸಿದೆ. ಇದಕ್ಕೆ ಸಂಬಂಧಿಸಿದ ಕೆಲವು ವರದಿಗಳ ಸಾರಾಂಶಗಳು ಇಲ್ಲಿವೆ.

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಪದೇಪದೆ ಭೂಕಂಪ ಸಂಭವಿಸುತ್ತಿರುವುದೇಕೆ? ಈ ರೀತಿ ಆಗಿಯೇ ಹಿಂದೆ ಕೊಡಗಿನಲ್ಲಿ ಭೂಕುಸಿತ ಸಂಭವಿಸಿತ್ತು. ಇದು ಈ ಭಾಗದ ಜನರಲ್ಲಿ ಮೂಡಿರುವ ಆತಂಕ. ಭೂಕಂಪ ಯಾಕೆ ಸಂಭವಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ತಜ್ಞರ ತಂಡ ಜಿಲ್ಲೆಗಳಿಗೆ ಭೇಟಿ ನೀಡಿತ್ತು. - Earthquake: ದ.ಕ., ಕೊಡಗುಗಳಲ್ಲಿ ಏಕೆ ಪದೇಪದೆ ಭೂಕಂಪ- ಅಧ್ಯಯನಕ್ಕೆ ಬರ್ತಿದೆ ತಜ್ಞರ ತಂಡ

ಆಗಸ್ಟ್‌ ತಿಂಗಳಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಜನರು ಮತ್ತೆ ಆತಂಕ ಅನುಭವಿಸಿದ್ದರು. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಗುಡ್ಡ ಕುಸಿತ ಕಂಡಿದ್ದು, ಗುಡ್ಡದ ಬಳಿಯಿರುವ ಮನೆಯವರು ಆತಂಕದಲ್ಲಿದ್ದಾರೆ. ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿತ ಸಂಭವಿಸಿದೆ. Kodagu News: ಮಡಿಕೇರಿಯ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನ, ಹಲವೆಡೆ ಗುಡ್ಡ ಕುಸಿತ

ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿನ ಭೂಕಂಪದ ಅಧ್ಯಯನಕ್ಕೆ ಸೂಚನೆ ನೀಡಲಾಗಿದೆ. ಶೀಘ್ರವೇ ಅಂತಿಮ ವರದಿ ಸಲ್ಲಿಕೆ ಮಾಡುವಂತೆಯೂ ಹೇಳಲಾಗಿದೆ. ಅದೇ ರೀತಿ, ಕಡಲ್‌ ಕೊರೆತ, ಭೂಕುಸಿತ ತಡೆಗೆ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಜುಲೈ 13ರಂದು ಹೇಳಿದ್ದರು. Earthquake: ದ.ಕ. , ಕೊಡಗು ಭೂಕಂಪ ಅಧ್ಯಯನಕ್ಕೆ ಸೂಚನೆ, ಭೂಕುಸಿತ, ಕಡಲ್ಕೊರೆತ ತಡೆಗೆ ಕ್ರಮ

    ಹಂಚಿಕೊಳ್ಳಲು ಲೇಖನಗಳು