Karnataka News Live November 28, 2024 : ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಡಿಸೆಂಬರ್ 2ಕ್ಕೆ ಮುಂದೂಡಿಕೆ; ಖುದ್ದು ಹಾಜರಾತಿಗೆ ನೀಡಿದ್ದ ವಿನಾಯಿತಿ ಮುಂದುವರಿಕೆ
Nov 28, 2024 11:45 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- High School Students Trip: ನೀವು ಪ್ರೌಢಶಾಲೆ ವಿದ್ಯಾರ್ಥಿಗಳೆ. ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದೀರಾ, ಕರ್ನಾಟಕದ ಪ್ರಮುಖ ಹತ್ತು ಜಿಲ್ಲೆಗಳಲ್ಲಿ ತಪ್ಪಿಸಿಕೊಳ್ಳದೇಬಾರದ ತಾಣಗಳಿವೆ. ಅವುಗಳ ವಿವರ ಇಲ್ಲಿದೆ.
- Karnataka Shilpa Kala academy Awards: ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ನಾಡಿನ ಪ್ರತಿಭಾವಂತ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಿದ್ದು, ಪಟ್ಟಿಯನ್ನು ಪ್ರಕಟಿಸಿದೆ.
- Bangalore Terrorist Link: ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ತರಬೇತಿ ನೀಡಿದ ಪ್ರಕರಣ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಎಲ್‌ಇಟಿಯ ಉಗ್ರ ಸಲ್ಮಾನ್‌ನನ್ನು ಬಂಧಿಸಲಾಗಿದ್ದು. ಭಾರತಕ್ಕೆ ಕರೆ ತರಲಾಗುತ್ತಿದೆ.
- ವರದಿ:ಎಚ್.ಮಾರುತಿ.ಬೆಂಗಳೂರು
ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಸಾಂಸ್ಕೃತಿಕ ಕಲರವಕ್ಕೆ ವೇದಿಕೆಯಾಗಿರುವ ಬಿಎಲ್‌ಆರ್ ಹಬ್ಬ 2024 ನವೆಂಬರ್ 30ರಂದು ಚಾಲನೆಗೊಳ್ಳಲಿದೆ. ಈ ವರ್ಷ ಏನೇನು ಚಟುವಟಿಕೆ ಇವೆ.
Mysore Court News: ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಲೇ ಇದ್ದ ಮೈಸೂರು ಜಿಲ್ಲೆ ಸರಗೂರಿನ ವ್ಯಕ್ತಿ ಆಕೆ ಗರ್ಭಿಣಿಯಾಗಿದ್ದಾಗಲೇ ಭೀಕರವಾಗಿ ಕೊಲೆ ಮಾಡಿದ್ದೂ ಅಲ್ಲದೇ ತನ್ನಿಬ್ಬರು ಮಕ್ಕಳು, ತಾಯಿಯನ್ನೂ ಕೊಲೆ ಮಾಡಿದ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯಾಗಿದೆ.
- Karnataka IAS Posting: ಕರ್ನಾಟಕ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರನ್ನು ಹೊಸದಾಗಿ ಸೃಷ್ಟಿಸಿರುವ ಕರ್ನಾಟಕ ಹೂಡಿಕೆದಾರರ ವೇದಿಕೆ ಸಿಇಒ ಆಗಿ ನೇಮಿಸಿದೆ.
Bengaluru Airport Travel: ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. ಅಶೋಕ್ ಲೇಲ್ಯಾಂಡ್ ಇ ಬಸ್‌ಗಳನ್ನು ಒದಗಿಸಲಿದ್ದು, ಇದರ ಕಾರ್ಯಾಚರಣೇಗೆ ಬಿಎಂಟಿಸಿ ಸಿದ್ಧತೆ ನಡೆಸಿದೆ.
- Agriculture crop Details Upload: ಬೆಳೆ ವಿಮೆ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಕೃಷಿಕರು ತಾವು ಬೆಳೆದ ಬೆಳೆಗಳ ವಿವರಗಳನ್ನು ಬೆಳೆ ಬೆಳೆದರ್ಶಕ್ 2024 ಆ್ಯಪ್ ಮೂಲಕ ಒದಗಿಸುವಂತೆ ಕೋರಿದೆ.
Bengaluru City Growth: ಬೆಂಗಳೂರು ನಗರದ ಮೇಲೆ ಬೆಳವಣಿಗೆ ಒತ್ತಡ ಬಹಳ ಹೆಚ್ಚಿದೆ. ಈ ಬೆಳವಣಿಗೆಯ ಒತ್ತಡದ ಪ್ರಮಾಣ ಸೂಚಿಸುವುದಕ್ಕಾಗಿ, “ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ” ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಸಂಚಾರ ದಟ್ಟಣೆ ಕುರಿತು ಅವರೇನು ಹೇಳಿದ್ರು - ಇಲ್ಲಿದೆ ಆ ವಿವರ.
Dharmasthala Laksha Deepotsava: ಧರ್ಮಸ್ಥಳ ಲಕ್ಷದೀಪೋತ್ಸವವು ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ ಕಾರ್ಯಕ್ರಮವಾಗಿದ್ದು, ಈ ದಿನದ ಪ್ರಮುಖ ಕಾರ್ಯಕ್ರಮ ವಿವರ ಹೀಗಿದೆ.
ಬೆಡ್‌ಶೀಟ್ ಅಡ್ಡ ಇಟ್ಟು ಮೊಬೈಲ್ ಕಳ್ಳತನ ಮಾಡುತ್ತಿದ್ದ ಬಿಹಾರದ ಬೆಡ್ ಶೀಟ್ ಗ್ಯಾಂಗ್‌ನ 8 ಆರೋಪಿಗಳ ಬಂಧನವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಶಾಲಾ ಕಾಲೇಜು ಬ್ಯಾಂಕ್‌ಗಳಿಗೆ ಹುಸಿ ಬಾಂಬ್ ಕರೆ ಮುಂದುವರೆದಿದ್ದು, ವಿದ್ಯಾರ್ಥಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ಬೆದರಿದ್ದಾರೆ.
(ವರದಿ - ಎಚ್.ಮಾರುತಿ, ಬೆಂಗಳೂರು)
Bangalore Power Outage: ಬೆಂಗಳೂರಲ್ಲಿ ಸದ್ಯ ಪವರ್ ಕಟ್ ಸಮಸ್ಯೆ ಜನರನ್ನು ನಾನಾ ರೀತಿಯಲ್ಲಿ ಕಾಡತೊಡಗಿದೆ. ಇದೀಗ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಪವರ್ ಕಟ್ ಸಮಸ್ಯೆ ಕಾಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಇಂದು ಎಲ್ಲೆಲ್ಲಿ ಪವರ್ ಕಟ್- ಇಲ್ಲಿದೆ ವಿವರ.
Karnataka SSLC Exam Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಮಹತ್ವದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಸಭೆ ನಿನ್ನೆ (ನವೆಂಬರ್ 27) ನಡೆಯಿತು. ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಮತ್ತು ಪೂರಕ ವಿವರ ಇಲ್ಲಿದೆ.
Bengaluru Weather: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು ಕವಿದ, ಇಬ್ಬನಿ ಹನಿಯುವ ವಾತಾವರಣ ಇದ್ದು, ಸಂಜೆ ಚಳಿ ಮೈನಡುಕ ಹುಟ್ಟಿಸುವಂತೆ ಇದೆ. “ಏನ್ ಗುರೂ ಬೆಂಗಳೂರು ವೆದರ್ ಊಟಿ ವೆದರ್ ಥರಾ ಆಗಿ ಹೋಗಿದೆ. ಹೊಟ್ಟೆಯೊಳಗೆ ಶುರುವಾದ ಚಳಿಗೆ ಮೈ ನಡುಕ ಶುರುವಾಗಿದೆ” ಎನ್ನತೊಡಗಿದ್ದಾರೆ ಬೆಂಗಳೂರಿಗರು.
Weather forecast: ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತದ ಕಾರಣ ಕೋಲಾರ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಮತ್ತು ಚಳಿ ಇರಲಿದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ, ಕೆಲವು ಕಡೆ ಚಳಿ ಇರುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.