Karnataka News Live September 7, 2024 : ಏರುಗತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ; ಪ್ರವಾಹ-ನೀರಿನ ಅಭಾವದ ನಡುವೆಯೂ ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ
Sep 07, 2024 10:43 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- ಕೋವಿಡ್ ನಂತರದ ಕಾಲದಲ್ಲಿ ಭಾರತದಲ್ಲಿ ಹಲವು ಉದ್ಯಮಗಳು ಕುಸಿತ ಕಂಡಿವೆ. ಇದೀಗ ಬಹುತೇಕ ಎಲ್ಲವೂ ಒಂದು ಹಂತಕ್ಕೆ ಬಂದಿವೆ. ಇದರಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಲಾಭವು ಬಾನೆತ್ತರಕ್ಕೆ ಸಾಗಿದೆ. ಬೆಂಗಳೂರಿನಲ್ಲೂ ಭೂಮಿ ಬೆಲೆ ಹೆಚ್ಚುತ್ತಿದ್ದು, ವಾಸದ ಮನೆಗಳಿಗೆ ಬೇಡಿಕೆ ದುಪ್ಪಟ್ಟಾಗಿದೆ. (ವರದಿ: ಎಚ್.ಮಾರುತಿ)
- ಬಿಸಿ ರೋಡ್ ಸಮೀಪದ ತಲಪಾಡಿ ಬಳಿ ನಡೆದ ಕಾರು ಅಪಘಾತದಲ್ಲಿ ಕಾರು ಅಪ್ಪಚ್ಚಿಯಾಗಿ ನವವಿವಾಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅತ್ತ ಪತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು.)
- ಡಾ.ಮೋಹನ ಆಳ್ವ ಬಳಿ ಒಂದು ಸೆಂಟಿ ಮೀಟರ್ ಗಾತ್ರದಿಂದ ಹಿಡಿದು ಐದು ಅಡಿ ಎತ್ತರದ ಗಣೇಶನ ವಿಗ್ರಹಗಳು ಇವೆ. ಒಂದಕ್ಕಿಂದ ಒಂದು ವಿಭಿನ್ನವಾಗಿರುವ ಗಣಪನ ಮೂರ್ತಿಗಳು ಅವರಲ್ಲಿವೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು.)
BMTC Double-Decker Bus; ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಪ್ರಯಾಣದ ಗತ ವೈಭವ ಮರಳುವುದೇ ಎಂಬ ಬೆಂಗಳೂರಿಗರ ನಿರೀಕ್ಷೆ ಸದ್ಯಕ್ಕೆ ಈಡೇರುವ ಲಕ್ಷಣ ಇಲ್ಲ. ಮರುಚಾಲನೆ ವಿಳಂಬಕ್ಕೇನು ಕಾರಣ, ಬಿಎಂಟಿಸಿಗೆ ಇರುವ ಸವಾಲುಗಳೇನು ಎಂಬುದರ ವಿವರ ಇಲ್ಲಿದೆ.
POCSO Case against Kolar teacher; ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪನ ಮೊಬೈಲ್‌ಗಳಲ್ಲಿ 5000ಕ್ಕೂ ಹೆಚ್ಚು ಹೆಣ್ಮಕ್ಕಳ ನಗ್ನಚಿತ್ರ, ನೂರಾರು ವಿಡಿಯೋ ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯ ಅಕ್ಷಮ್ಯವಾಗಿದ್ದು, ಕೇಸ್ ರದ್ದಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
Traffic Chaos at Hebbal Flyover; ಬೆಂಗಳೂರಲ್ಲಿ ಸಂಚಾರ ದಟ್ಟಣೆ ಕುಖ್ಯಾತಿ ಇರುವಂತಹ ಪ್ರದೇಶಗಳಲ್ಲಿ ಒಂದು ಈ ಹೆಬ್ಬಾಳ ಫ್ಲೈ ಓಔರ್. ಇಲ್ಲಿ ಸಂಚಾರವೇ ಒಂದು ಸಾಹಸ. ಹೀಗಿರುವಾಗ ಸಹಜವಾಗಿಯೇ ವಿಐಪಿ ಸಂಚಾರ ಕಿರಿಕಿರಿ ಉಂಟುಮಾಡುತ್ತದೆ. ಇದು ಜನಾಕ್ರೋಶಕ್ಕೂ ಕಾರಣವಾಗಿದೆ.
Bengaluru Traffic Police Call Center; ಬೆಂಗಳೂರಿನಲ್ಲಿ ಆಟೊ ಚಾಲಕರ ಉಪಟಳ ಹೆಚ್ಚಳವಾಗಿರುವ ಕಾರಣ ಸಂಚಾರ ಪೊಲೀಸರು ಈ ಸಂಬಂಧ ದೂರು ಸಲ್ಲಿಸಲು ಕಾಲ್ ಸೆಂಟರ್ ಆರಂಭಿಸಿದೆ. ಸಂಚಾರ ಪೊಲೀಸ್ ಸಹಾಯವಾಣಿ ಸಂಖ್ಯೆ ಮತ್ತು ಇತರೆ ವಿವರ ಇಲ್ಲಿದೆ.
Bengaluru News; ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ಇನ್ನೆರಡು ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರುತ್ತವೆ ಎಂದು ಹೇಳಿದೆ.
Chitradurga Renukaswamy murder case; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ದರ್ಶನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದು, ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಸೋಮವಾರ (ಸೆ.9) ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. (ವರದಿ - ಎಚ್. ಮಾರುತಿ, ಬೆಂಗಳೂರು)
Karnataka Weather September 7 2024; ಇಂದು ಗಣೇಶ ಹಬ್ಬ. ಕರ್ನಾಟಕದ ಉದ್ದಗಲಕ್ಕೂ ಗಣಪತಿ ಹಬ್ಬದ ಸಂಭ್ರಮ, ಸಡಗರದ ನಡುವೆ, ಬಹುತೇಕ ಕಡೆಗಳಲ್ಲಿ ಮಳೆಯಾಗಬಹುದು. ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆ ವರದಿಯಲ್ಲಿ ಎಚ್ಚರಿಸಿದೆ.